ಜಿಯೋ ಸಿಮ್ ನಿಮ್ಮ ಮನೆಬಾಗಿಲಿಗೆ!! ರಿಜಿಸ್ಟರ್ ಮಾಡುವುದು ಹೇಗೆ?

Written By: Bhaskar N J

ಉಚಿತ ಡಾಟಾ ಆಫರ್ ನೀಡಿದ ಜಿಯೋ ಸಿಮ್ ಪಡೆಯಲು ಮೋಬೈಲ್‌ ಅಂಗಡಿಳ ಮುಂದೆ ರಾತ್ರಿ ಹಗಲು ನಿಂತು ಕಾದು ಸಿಮ್ ಕೊಂಡವರಿಗೆ ಈ ಸುದ್ದಿ ಸ್ವಲ್ಪ ಬೇಸರ ಮೂಡಿಸುತ್ತದೆ. ಯಾಕೆಂದರೆ, ಇನ್ನು ಜಿಯೋ ಸಿಮ್‌ಗಾಗಿ ಕ್ಯೂ ನಿಲ್ಲುವ ಅವಶ್ಯಕತೆ ಇಲ್ಲ. ಮೊದಲಿನಂತೆ ಸಿಮ್ ಆಕ್ಟಿವೇಷನ್ ಮಾಡಲು ಪ್ರಾಬ್ಲಮ್ ಇಲ್ಲ. ಕೇವಲ ನೀವು ರಿಜಿಸ್ಟರ್ ಮಾಡಿದರೆ ಸಾಕು ಜಿಯೋ ನಿಮ್ಮ ಮನೆ ಬಾಗಿಲಿಗೆ ಬಂದು ಬೀಳಲಿದೆ.

 ಜಿಯೋ ಸಿಮ್ ನಿಮ್ಮ ಮನೆಬಾಗಿಲಿಗೆ!! ರಿಜಿಸ್ಟರ್ ಮಾಡುವುದು ಹೇಗೆ?

15 ನಿಮಿಷಗಳಲ್ಲಿ ಜಿಯೋ ಸಿಮ್ ವೆರಿಫಿಕೇಷನ್ ಮಾಡಿ: ಆಧಾರ್ ಇಲ್ಲದೆ!

ಕೆಲ ದಿವಸಗಳಿಂದ ಹಬ್ಬಿದ್ದ, ಮನೆಗೆ ಜಿಯೋ ಸಿಮ್ ಉಚಿತ ಡೆಲಿವರಿ ನೀಡುವ ಗಾಳಿಸುದ್ದಿ ಇಂದು ನಿಜವಾದ ಸುದ್ದಿಯಾಗಿ ಬದಲಾಗಿದೆ. 12 ಮೆಟ್ರೋಪಾಲಿಟಿನ್ ನಗರಗಳಲ್ಲಿ ಉಚಿತ ಜಿಯೋ ಸಿಮ್‌ ಅನ್ನು ಮನೆಗೆ ಡೆಲಿವರಿ ನೀಡುವುದಾಗಿ ಜಿಯೋ ತನ್ನ ಅಫಿಶಿಯಲ್ ಫೇಸ್‌ಬುಕ್‌ ಪೇಜ್‌ನಲ್ಲಿ ಹೇಳಿಕೊಂಡಿದೆ. ಹಾಗಾಗಿ ನೀವು ರಿಜಿಸ್ಟರ್ ಮಾಡಿ ಜಿಯೋ ಸಿಮ್ ತೆಗೆದುಕೊಳ್ಳಬಹುದು. ಜಿಯೋ ಸಿಮ್ ರಿಜಿಸ್ಟರ್ ಮಾಡಿ ತೆಗೆದುಕೊಳ್ಳುವುದೇಗೆ ಗೊತ್ತಾ? ಈ ಕೆಳಗಿನ ಸ್ಟೆಪ್ಸ್ ಫಾಲೋಮಾಡಿ ಮನೆ ಬಾಗಿಲಿಗೆ ಜಿಯೋ ಸಿಮ್ ಡೆಲಿವರಿ ತೆಗೆದುಕೊಳ್ಳಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಫೇಸ್‌ಬುಕ್‌ ಪೇಜ್‌ಗೆ ಭೇಟಿ ನೀಡಿ

ಜಿಯೋ ಫೇಸ್‌ಬುಕ್‌ ಪೇಜ್‌ಗೆ ಭೇಟಿ ನೀಡಿ

ಅಂದರೆ ನಿಮ್ಮ ಫೇಸ್‌ಬುಕ್‌ ಖಾತೆಗೆ ಲಾಗಿನ್ ಆಗಿ ಜಿಯೋ ಫೇಸ್‌ಬುಕ್‌ ಪೇಜ್‌ ತೆರೆಯಿರಿ. ನಂತರ "Get Your Jio SIM Home Delivered" ಎಂದು ಕಾಣುತ್ತದೆ ಅದನ್ನು ಆಯ್ಕೆ ಮಾಡಿ

 ಜಿಯೋಗೆ

ಜಿಯೋಗೆ "Sign Up" ಆಗಿರಿ

"Get Your Jio SIM Home Delivered" ಆಯ್ಕೆ ಮಾಡಿದ ನಂತರ Sign Up ಆಗಿ ಎಂದು ಐಕಾನ್ ತೆರೆದುಕೊಳ್ಳುತ್ತದೆ. ನಂತರ ನಿಮ್ಮ ಮಾಹಿತಿಹಳನ್ನು ನೀಡಿ ಸೈನ್‌ಅಪ್ ಆಗಿ

ಹೊಸ ಸ್ಮಾರ್ಟ್‌ವಾಚ್ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಮ್‌ ತೆಗೆದುಕೊಳ್ಳಲು ಬೇಕಾದ ಎಲ್ಲಾ ಮಾಹಿತಿ ನೀಡಿ

ಸಿಮ್‌ ತೆಗೆದುಕೊಳ್ಳಲು ಬೇಕಾದ ಎಲ್ಲಾ ಮಾಹಿತಿ ನೀಡಿ

ಜಿಯೋ ಸಿಮ್‌ ತೆಗೆದುಕೊಳ್ಳಲು ನಿಮ್ಮೆಲ್ಲಾ ಮಾಹಿತಿಗಳನ್ನು ನೀವು ಅಲ್ಲಿ ನೀಡಬೇಕಾಗುತ್ತದೆ. ನಿಮ್ಮ ಹೆಸರು, ವಿಳಾಸ , ಇ- ಮೇಲ್ ಐಡಿ ಎಲ್ಲವನ್ನು ನೀವು ನಮೂದಿಸಿ. ನಂತರ ಜಿಯೋ ನೀಡಿರುವ 12 ನಗರಗಳಲ್ಲಿ ಒಂದನ್ನು ಸೆಲೆಕ್ಟ್ ಮಾಡಿ .

ನಿಮಗೆ ಸಿಮ್‌ ಡೆಲಿವರಿ ಬೇಕಿರುವ ಸಮಯವನ್ನು ನಮೂದಿಸಿ

ನಿಮಗೆ ಸಿಮ್‌ ಡೆಲಿವರಿ ಬೇಕಿರುವ ಸಮಯವನ್ನು ನಮೂದಿಸಿ

ನಿಮ್ಮೆಲ್ಲಾ ದಾಖಲೆಗಳನ್ನು ಸರಿಯಾದ ನೀಡಿದ ನಂತರ ಜಿಯೋ ಪೇಜ್‌ನ ತಳಬಾಗದಲ್ಲಿ Schedule SIM delivery ಕಂಡುಬರುತ್ತದೆ. ಅದನ್ನು ಆಯ್ಕೆ ಮಾಡಿ ನಿಮಗೆ ಸಿಮ್ ತಲುಪಬೇಕಾಗಿರುವ ಸಮಯವನ್ನು ನಮೂದಿಸಿ.

ಇದು ನಿಮಗೆ ನೆನಪಿರಲಿ

ಇದು ನಿಮಗೆ ನೆನಪಿರಲಿ

ಸಿಮ್‌ ತೆಗೆದುಕೊಳ್ಳಲು ರಿಜಿಸ್ಟರ್ ಮಾಡಿಸಿರುವ ಆಧಾರ್ ಕಾರ್ಡನ್ನು ಸಿಮ್ ಡೆಲಿವರಿ ತೆಗೆದುಕೊಳ್ಳುವಾಗ ತೋರಿಸಬೇಕಾಗುತ್ತದೆ. ಮತ್ತು ನೀವು ನಮೂದಿಸಿರುವ ಸ್ಥಳದಲ್ಲಿಯೇ ಸಿಮ್ ಪಡೆದುಕೊಳ್ಳಬೇಕು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
No more standing in queues and facing the hassle of verifying documents to get your Jio SIM. Here's how you can get your Reliance Jio SIM card delivered at your doorstep. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot