Jio Glass: ಟೆಕ್ ವಲಯಯವನ್ನೇ ಮಂತ್ರಮುಗ್ಧಗೊಳಿಸಿದ ಜಿಯೋ ಗ್ಲಾಸ್! 100 ಇಂಚಿನ ಡಿಸ್‌ಪ್ಲೇ ಅನುಭವ
ಜಿಯೋ (Jio) ಕೇವಲ ಟೆಲಿಕಾಂ ಸೇವೆಯನ್ನಷ್ಟೇ ನೀಡದೆ ಇತರೆ ವಿಭಾಗದಲ್ಲೂ ಮುಂಚೂಣಿಯಲ್ಲಿದೆ ಎಂಬುದು ನಿಮಗೆ ತಿಳಿದಿರುವ ವಿಚಾರ. ಈ ನಡುವೆ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡು ಬರುವ ಫೀಚರ್ಸ್ ಅನ್ನೇ ಫೀಚರ್ ಫೋನ್‌ಗಳಿಗೂ ನೀಡಿದ ಕೀರ್ತಿ ಸಹ ಜಿಯೋಗೆ ಸಲ್ಲುತ್ತದೆ. ಈ ಎಲ್ಲಾ ಬೆಳವಣಿಗೆ ನಡುವೆ ಜಿಯೋ ಬಳಕೆದಾರರಿಗೆ ಮಾಂತ್ರಿಕ ಕನ್ನಡಕವನ್ನು ಪರಿಚಯಿಸಿದೆ.
ಹೌದು, ಜಿಯೋ ಇದೀಗ ತನ್ನ ಬಳಕೆದಾರರಿಗೆ ಮಾಂತ್ರಿಕ ಕನ್ನಡಕವನ್ನು (Jio Glass) ಪರಿಚಯಿಸಿದೆ. ಇದರ ಪ್ರಮುಖ ವಿಶೇಷತೆ ಏನೆಂದರೆ ಈ ಚಿಕ್ಕ ಕನ್ನಡಕ ನಿಮಗೆ 100 ಇಂಚಿನ ಡಿಸ್‌ಪ್ಲೇ ಅನುಭವವನ್ನು ನೀಡಲಿದೆ. ಕಳೆದ ವರ್ಷ MWC (MWC 2022) ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಿಯೋ ಗ್ಲಾಸ್ ಧರಿಸಿ ಹೊಸ ಅನ್ವೇಷಣೆಗೆ ಸಹಕಾರ ನೀಡಿದ್ದರು. ಹಾಗಿದ್ರೆ, ಈ ಕನ್ನಡಕ ಹೇಗೆ ಕೆಲಸ ಮಾಡಲಿದೆ?, ಯಾವಾಗ ಲಭ್ಯ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಜಿಯೋ ಗ್ಲಾಸ್: ರಿಲಯನ್ಸ್ ಜಿಯೋ ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC 2023) ನಲ್ಲಿ ತನ್ನ ಎಮ್‌ಆರ್ ಗ್ಲಾಸ್‌ಗಳನ್ನು ಪ್ರದರ್ಶಿಸಿತ್ತು. ಇದಕ್ಕೂ ಮೊದಲು ಕಂಪನಿಯು 2020 ರಲ್ಲಿ ತನ್ನ 43 ನೇ AGM (ವಾರ್ಷಿಕ ಸಾಮಾನ್ಯ ಸಭೆ) ನಲ್ಲಿ ಜಿಯೋ ಗ್ಲಾಸ್ ಬಗ್ಗೆ ಘೋಷಣೆ ಮಾಡಿತ್ತು. ಅದರಲ್ಲೂ ಕಳೆದ ವರ್ಷ MWC (MWC 2022) ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಧರಿಸುವ ಮೂಲಕ ಬಹಳ ಸುದ್ದಿಯಲ್ಲಿದ್ದರು.
ಜಿಯೋ ಗ್ಲಾಸ್ ಎಂದರೇನು?: ಜಿಯೋ ಗ್ಲಾಸ್ ಮಿಶ್ರ ರಿಯಲಿಟಿ (MR), ಆಗ್ಮೆಂಟೆಡ್ ರಿಯಾಲಿಟಿ (AR) ಮತ್ತು ವರ್ಚುವಲ್ ರಿಯಾಲಿಟಿ (VR) ನಲ್ಲಿ ಕಾರ್ಯನಿರ್ವಹಿಸುತ್ತದೆ. MR ಗ್ಲಾಸ್‌ಗಳು ಡಿಜಿಟಲ್ ಕಂಟೆಂಟ್ ಅನ್ನು ನೈಜ-ಜಗತ್ತು ಮತ್ತು ವರ್ಚುವಲ್ ಆಬ್ಜೆಕ್ಟ್‌ಗಳೊಂದಿಗೆ ಪರಸ್ಪರ ಕ್ರಿಯೆಯನ್ನು ಸಕ್ರಿಯಗೊಳಿಸುವ ರೀತಿಯಲ್ಲಿ ಸಂಯೋಜಿಸುತ್ತವೆ. ವರ್ಚುವಲ್ ರಿಯಾಲಿಟಿ (VR) ಗಿಂತ ಭಿನ್ನವಾಗಿ ಇದು ಕೆಲಸ ಮಾಡುತ್ತದೆ. ಹಾಗೆಯೇ ಬಳಕೆದಾರರನ್ನು ಡಿಜಿಟಲ್ ಪರಿಸರದಲ್ಲಿ ಸಂಪೂರ್ಣವಾಗಿ ಮುಳುಗಿಸಲಿದೆ ಎಂಬುದು ಕಂಪೆನಿಯ ಮಾತು. ಇದರೊಂದಿಗೆ ಆಗ್ಮೆಂಟೆಡ್ ರಿಯಾಲಿಟಿ (AR) ಇದು ಭೌತಿಕ ಪರಿಸರದ ಮೇಲೆ ಡಿಜಿಟಲ್ ಕಂಟೆಂಟ್ ಅನ್ನು ಲೇಯರ್ ಮಾಡುತ್ತದೆ.

ಪ್ರಮುಖವಾಗಿ ಈ ಜಿಯೋ ಗ್ಲಾಸ್ ಬಳಕೆದಾರರ ಫೋನ್ ಸ್ಕ್ರೀನ್‌ಗಳನ್ನು 100 ಇಂಚುಗಳಷ್ಟು ದೊಡ್ಡದಾಗಿ ಕಾಣಿಸುವಂತೆ ಮಾಡಲಿದೆ ಈ ಮೂಲಕ ಸಿನಿಮಾ ಅನುಭವವನ್ನೇ ಈ ಚಿಕ್ಕ ಗ್ಲಾಸ್ ಮೂಲಕ ಪಡೆದುಕೊಳ್ಳಬಹುದು ಎಂಬುದು ವಿಶೇಷವಾದ ಸಂಗತಿಯಾಗಿದೆ. ಇದರೊಂದಿಗೆ ಬಳಕೆದಾರರು ಫೋನ್‌ಗಳಲ್ಲಿ ಜಿಯೋಇಮ್ಮರ್ಸ್ ಎಕ್ಸ್ ಆರ್ ಸ್ಟೋರ್‌ನಿಂದ ಎಕ್ಸ್ ಆರ್ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡು ಇದರ ಸೇವೆ ಪಡೆದುಕೊಳ್ಳಬಹುದಾಗಿದೆ.
ಜಿಯೋ ಗ್ಲಾಸ್ ಭಾರತದಲ್ಲಿ ನಿರ್ಮಾಣ: ಜಿಯೋ ಗ್ಲಾಸ್ ಅನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಎಂಬುದು ಸಹ ವಿಶೇಷವಾದ ವಿಷಯ. ಎಮ್‌ಆರ್ ಕನ್ನಡಕವನ್ನು ಟೆಸ್ಸೆರಾಕ್ಟ್ ಅಭಿವೃದ್ಧಿಪಡಿಸಿದೆ. ಇದು ಎಕ್ಸ್‌ಆರ್ ಅನುಭವಗಳು ಮತ್ತು ಹಾರ್ಡ್‌ವೇರ್ ಅನ್ನು ರಚಿಸುವಲ್ಲಿ ಮಾಸ್ಟರ್ ಎಂದು ಪರಿಗಣಿಸಲಾಗಿದೆ. ಟೆಸೆರಾಕ್ಟ್ ಮೂಲತಃ ಎಮ್‌ಐಟಿಯ ಮೀಡಿಯಾ ಲ್ಯಾಬ್‌ನಿಂದ ಹೊರಬಂದಿದೆ. ಕಂಪನಿಯನ್ನು ಆಗಸ್ಟ್ 2019 ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಸ್ವಾಧೀನಪಡಿಸಿಕೊಂಡಿದೆ.
ಜಿಯೋ ಗ್ಲಾಸ್‌ನ ಇತರೆ ಫೀಚರ್ಸ್: ಜಿಯೋ ಗ್ಲಾಸ್ ಉತ್ತಮ ವಿನ್ಯಾಸದೊಂದಿಗೆ ಬರಲಿದ್ದು, ಇದು ಎರಡು ಮಸೂರಗಳೊಂದಿಗೆ ಲೋಹದ ಚೌಕಟ್ಟನ್ನು ಹೊಂದಿದೆ. ಯುಎಸ್‌ಬಿ-ಸಿ ಕೇಬಲ್ ಮೂಲಕ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗೆ ಜಿಯೋ ಗ್ಲಾಸ್ ಅನ್ನು ಸಂಪರ್ಕಿಸಬಹುದು. ಹಾಗೆಯೇ ಇದು ವೈರ್‌ಲೆಸ್ ಬೆಂಬಲವನ್ನು ಪಡೆಯುವ ನಿರೀಕ್ಷೆಯಿದೆ.
ಜಿಯೋ ಗ್ಲಾಸ್ ಬಳಕೆದಾರರ ಫೋನ್ ಸ್ಕ್ರೀನ್‌ಗಳನ್ನು 100 ಇಂಚುಗಳಷ್ಟು ದೊಡ್ಡದಾಗಿ ಕಾಣಿಸುವಂತೆ ಮಾಡುವ ಇದು 69 ಗ್ರಾಂ ತೂಗುತ್ತದೆ. ಈ ಮೂಲಕ ಇದನ್ನು ನೀವು ಸುಲಭವಾಗಿ ಧರಿಸಬಹುದು.ಅದರಲ್ಲೂ ಇದು ಪ್ರತಿ ಕಣ್ಣಿಗೆ 1080p ಡಿಸ್‌ಪ್ಲೇ ಅನುಭವವನ್ನು ನೀಡುತ್ತದೆ. ಜಿಯೋ ಗ್ಲಾಸ್‌ನ ಎರಡೂ ಬದಿಗಳಲ್ಲಿ ಎರಡು ಸ್ಪೀಕರ್ ಆಯ್ಕೆ ನೀಡಲಾಗಿದೆ. ಸಂಪರ್ಕಿತ ಸ್ಮಾರ್ಟ್‌ಫೋನ್ ಅನ್ನು ವರ್ಚುವಲ್ ಕಂಟ್ರೋಲ್ ಆಗಿ ಬಳಕೆ ಮಾಡಬಹುದಾಗಿದೆ.
ಇದರೊಂದಿಗೆ ವಾಯ್ಸ್ ಕರೆಗಳಿಗೆ ಅನುಮತಿ ನೀಡಲು ಆಯ್ಕೆ ನೀಡಲಾಗಿದೆ. ಅಂದರೆ ಇದಕ್ಕಾಗಿ ಒಂದು ಮೈಕ್ರೊಫೋನ್ ಆಯ್ಕೆಯನ್ನೂ ಸಹ ನೀಡಲಾಗಿದೆ. ಉಳಿದಂತೆ ಜಿಯೋ ಗ್ಲಾಸ್ ನೊಂದಿಗೆ ಬಳಕೆದಾರರು ಮೂರು ಗಂಟೆಗಳ ರನ್‌ಟೈಮ್ ಅನ್ನು ಪಡೆದುಕೊಳ್ಳಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇದಕ್ಕಾಗಿ 4,000mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದೆ ಎಂದು ಹೇಳಲಾಗಿದೆ.

ಜಿಯೋ ಗ್ಲಾಸ್ ಬೆಲೆ ಹಾಗೂ ಲಭ್ಯತೆ : ಭಾರತದಲ್ಲಿ ಜಿಯೋ ಗ್ಲಾಸ್‌ನ ಬೆಲೆಗೆ ಸಂಬಂಧಿಸಿದಂತೆ ಸಾಕಷ್ಟು ಊಹಾಪೋಹಗಳಿವೆ. ಆದಾಗ್ಯೂ, ಕಂಪನಿಯು ಡಿವೈಸ್‌ನ ಬೆಲೆಯ ಬಗ್ಗೆ ಇನ್ನೂ ಏನನ್ನೂ ಹೇಳಿಲ್ಲ. ಜಿಯೋ ಗ್ಲಾಸ್ ಇನ್ನೂ ಪರೀಕ್ಷಾ ಹಂತದಲ್ಲಿದ್ದು, ಅದರ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಟೈಮ್‌ಲೈನ್ ಅನ್ನು ಸಹ ಬಹಿರಂಗಪಡಿಸಲಾಗಿಲ್ಲ.


Click it and Unblock the Notifications








