ಜಿಯೋದ 251ರೂ. ಪ್ಲ್ಯಾನಿನಲ್ಲಿ ಪ್ರತಿದಿನ 2GB ಡಾಟಾ!
ದೇಶದ ಟೆಲಿಕಾಂ ವಲಯದಲ್ಲಿ ಭಾರಿ ಸಂಚಲಯ ಸೃಷ್ಠಿಸಿರೊ ಜಿಯೋ ಸಂಸ್ಥೆಯು, ಇತ್ತೀಚಿಗಷ್ಟೆ ಹೊರ ಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ನಿಗದಿ ಮಾಡಿತು. ಹಾಗಂತ ಜಿಯೋ ಬಳಕೆದಾರರ ಸಂಖ್ಯೆಯಲ್ಲಿ ಏನು ಕಡಿಮೆ ಆಗಿಲ್ಲ. ಬದಲಿಗೆ ಚಂದಾದಾರರ ಸಂಖ್ಯೆ ಹೆಚ್ಚಳವಾಗಿಯೇ ಇದೆ. ಜಿಯೋದ ಇಂಟರ್ನೆಟ್ ವೇಗ ಉತ್ತಮವಾಗಿದೆ ಎನ್ನುವುದು ಬಹುತೇಕ ಬಳಕೆದಾರರ ಮಾತು. ಈ ನಿಟ್ಟಿನಲ್ಲಿ ಜಿಯೋ ಬೆಸ್ಟ್ ಡಾಟಾ ಪ್ಲ್ಯಾನ್ ಸಹ ಬಿಡುಗಡೆ ಮಾಡಿದೆ.

ಹೌದು, ರಿಲಾಯನ್ಸ್ ಜಿಯೋ ಸಂಸ್ಥೆಯು ತನ್ನ 251ರೂ.ಗಳ ಡಾಟಾ ಪ್ಲ್ಯಾನ್ ಅನ್ನು ಮೂಲೆಗುಂಪಾಗಿಸಿಲ್ಲ. ಈ ಪ್ಲ್ಯಾನ್ ಇನ್ನು ಗ್ರಾಹಕರಿಗೆ ಲಭ್ಯವಿದೆ. ಈ ಟಾಪ್‌ಅಪ್ ಪ್ಯಾನ್ ಹೆಚ್ಚಿನ ಡಾಟಾ ಬಳಕೆ ಮಾಡುವ ಚಂದಾದಾರಿಕೆ ಸೂಕ್ತವಾಗಿದೆ. ದರ ಏರಿಕೆಯ ನಂತರ ಜಿಯೋ ಈ ಡಾಟಾ ಪ್ಲ್ಯಾನ್ ಅನ್ನು ನಿಷ್ಕ್ರಿಯ ಮಾಡಿಲ್ಲ. ಈಗಲೂ ಜಾಲ್ತಿಯಲ್ಲಿ ಉಳಿಸಿಕೊಂಡಿದೆ. ಡಾಟಾ ಪ್ರಿಯ ಚಂದಾದಾರಿಗೆ ಆಕರ್ಷಕ ಅನಿಸಲಿದೆ. ಇನ್ನು ಜಿಯೋದ ಈ 251ರೂ. ಪ್ಲ್ಯಾನಿನ ಕುರಿತ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಜಿಯೋ 251.ರೂ ಪ್ಲ್ಯಾನ್
ಜಿಯೋ 251.ರೂ ಪ್ಲ್ಯಾನ್ ಇದೊಂದು ಡಾಟಾ ಪ್ಲ್ಯಾನ್ ಆಗಿದ್ದು, ಈಗಾಗಾಲೇ ಬಹುತೇಕ ಜಿಯೋ ಚಂದಾದಾರರು ಈ ಪ್ಲ್ಯಾನ್ ಬಳಕೆ ಮಾಡಿದ್ದಾರೆ. ಇನ್ನು ಈ ಪ್ಲ್ಯಾನಿನಲ್ಲಿ ಚಂದಾದಾರಿಗೆ ಪ್ರತಿದಿನ 2GB ಡಾಟಾ ಪ್ರಯೋಜನ ಲಭ್ಯವಾಗಲಿದ್ದು, ಒಟ್ಟು 51 ದಿನಗಳ ವ್ಯಾಲಿಡಿಟಿ ಅವಧಿ ಸಿಗಲಿದೆ. ಪ್ರತಿದಿನದ ಕೇವಲ 2.46ರೂ.ಗಳಿಗೆ ಡಾಟಾ ಸೌಲಭ್ಯ ಪಡೆದಂತೆ. ಇನ್ನು ಈ ಪ್ಲ್ಯಾನ್ ಯಾವುದೇ ಉಚಿತ ಕರೆ ಹಾಗೂ ಎಸ್‌ಎಮ್‌ಎಸ್ ಪ್ರಯೋಜನಗಳನ್ನು ಒಳಗೊಂಡಿರುವುದಿಲ್ಲ.

ಜಿಯೋ 399ರೂ. ಪ್ಲ್ಯಾನ್
ಡಿಸಂಬರ್ -2019 ರಲ್ಲಿ ಜಿಯೋ 399ರೂ. ಬೆಲೆಯ ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಪ್ಲ್ಯಾನ್‌ಗಳು ಜಿಯೋ ಟು ಜಿಯೋ ಕರೆ ಉಚಿತ ಹಾಗೂ ಇತರೆ ಟೆಲಿಕಾಂಗಳಿಗೆ 2000 ನಿಮಿಷಗಳ ಉಚಿತ ಕರೆ ಮಿತಿಯ ಸೌಲಭ್ಯ ಹೊಂದಿವೆ. ಹಾಗೂ ಪ್ರತಿದಿನ ಪ್ರತಿದಿನ 1.5GB ಡಾಟಾ ಸಿಗಲಿದೆ.

ಜಿಯೋ 444ರೂ. ಪ್ಲ್ಯಾನ್
ಡಿಸಂಬರ್ -2019 ರಲ್ಲಿ ಜಿಯೋ 444ರೂ. ಬೆಲೆಯ ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಪ್ಲ್ಯಾನ್‌ಗಳು ಜಿಯೋ ಟು ಜಿಯೋ ಕರೆ ಉಚಿತ ಹಾಗೂ ಇತರೆ ಟೆಲಿಕಾಂಗಳಿಗೆ 2000 ನಿಮಿಷಗಳ ಉಚಿತ ಕರೆ ಮಿತಿಯ ಸೌಲಭ್ಯ ಹೊಂದಿವೆ. ಹಾಗೂ 444ರೂ.ಪ್ಲ್ಯಾನ್ ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದಿದೆ.


Click it and Unblock the Notifications








