ಜಿಯೋ VS ಬಿಎಸ್‌ಎನ್‌ಎಲ್‌ 199ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್: ಯಾವುದು ಬೆಸ್ಟ್‌?

|

ಪ್ರಸ್ತುತ ಟೆಲಿಕಾಂ ಕಂಪನಿಗಳು ಚಂದಾದಾರರ ಸಂಖ್ಯೆ ಹೆಚ್ಚಿಸಿಕೊಳ್ಳಲು ಆಕರ್ಷಕ ಪ್ರೀಪೇಯ್ಡ್‌ ಯೋಜನೆಗಳನ್ನು ನೀಡುತ್ತ ಸಾಗಿವೆ. ಹಾಗೆಯೇ ಪ್ರೀಪೇಯ್ಡ್‌ ಜೊತೆಗೆ ಪೋಸ್ಟ್‌ಪೇಯ್ಡ್‌ ಗ್ರಾಹಕರನ್ನು ಹೆಚ್ಚಿಸಲು ಅಗ್ಗದ ಪ್ರೈಸ್‌ನಲ್ಲಿ ಯೋಜನೆಗಳನ್ನು ಪರಿಚಯಿಸಿವೆ. ಆ ಪೈಕಿ ಜಿಯೋ ಹಾಗೂ ಬಿಎಸ್‌ಎನ್‌ಎಲ್‌ ಸಂಸ್ಥೆಗಳು ಜಸ್ಟ್‌ 199ರೂ.ಗೆ ಪೋಸ್ಟ್‌ಪೇಯ್ಡ್‌ ಯೋಜನೆಗಳು ಹೆಚ್ಚು ಗಮನ ಸೆಳೆದಿವೆ.

ರಿಲಾಯನ್ಸ್‌

ಹೌದು, ಸದ್ಯ ಲೀಡಿಂಗ್‌ನಲ್ಲಿರುವ ರಿಲಾಯನ್ಸ್‌ ಜಿಯೋ ಹಾಗೂ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಸಂಸ್ಥೆಗಳು 199ರೂ, ಬೆಲೆಯ ಪೋಸ್ಟ್‌ಪೇಯ್ಡ್‌ ಯೋಜನೆಯನ್ನು ಹೊಂದಿವೆ. ಆರಂಭಿಕ ಪೋಸ್ಟ್‌ಪೇಯ್ಡ್‌ ಯೋಜನೆ ಆಗಿದ್ದರೂ ಸಹ ಟೆಲಿಕಾಂಗಳು ಡೇಟಾ ಪ್ರಯೋಜನವನ್ನು ನೀಡಿವೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ಲಭ್ಯವಾಗಿಸಿವೆ. ಹಾಗಾದರೇ 199ರೂ. ದರದ ಪೋಸ್ಟ್‌ಪೇಯ್ಡ್‌ ಯೋಜನೆಗಳಲ್ಲಿ ಜಿಯೋದ ಉತ್ತಮವೇ ಇಲ್ಲ ಬಿಎಸ್‌ಎನ್‌ಎಲ್‌ ಯೋಜನೆ ಯೋಗ್ಯವೇ ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ಜಿಯೋ 199ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ಜಿಯೋ 199ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ರಿಲಯನ್ಸ್ ಜಿಯೋದ 199ರೂ. ಪೋಸ್ಟ್‌ಪೇಯ್ಡ್ ಯೋಜನೆ ಅನಿಯಮಿತ ಆನ್-ನೆಟ್ ವಾಯ್ಸ್ ಕಾಲಿಂಗ್ ಸೌಲಭ್ಯವನ್ನು ನೀಡುತ್ತದೆ. ಹಾಗೆಯೇ ಇತರೆ ನೆಟ್‌ವರ್ಕ್‌ಗಳಿಗೆ ವಾಯಿಸ್‌ ಕರೆಗಳನ್ನು ನಿಮಿಷಕ್ಕೆ ಆರು ಪೈಸೆಗಳಂತೆ ವಿಧಿಸಲಾಗುತ್ತದೆ. ಇದರೊಂದಿಗೆ ಈ ಯೋಜನೆಯು ಯಾವುದೇ ದೈನಂದಿನ ಡೇಟಾ ಮಿತಿಯಿಲ್ಲದೆ 25GB 4G ಡೇಟಾವನ್ನು ಒಳಗೊಂಡಿರುತ್ತದೆ ಆದರೆ ಡೇಟಾ ರೋಲ್‌ಓವರ್ ಸೌಲಭ್ಯ ಇಲ್ಲ. ಹೆಚ್ಚುವರಿಯಾಗಿ ಜಿಯೋ ಅಪ್ಲಿಕೇಶನ್‌ಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳು ಲಭ್ಯ.

ಬಿಎಸ್‌ಎನ್‌ಎಲ್‌ 199ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 199ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಟೆಲಿಕಾಂನ 199ರೂ. ಪೋಸ್ಟ್‌ಪೇಯ್ಡ್ ಯೋಜನೆಯು ಜಿಯೋದಂತೆ ಅನಿಯಮಿತ ಆನ್-ನೆಟ್ ವಾಯ್ಸ್ ಕಾಲಿಂಗ್ ಸೌಲಭ್ಯವನ್ನು ಪಡೆದಿದೆ. ಹಾಗೆಯೇ 25GB ಡೇಟಾ ಸೌಲಭ್ಯದೊಂದಿಗೆ, 75GB ವರೆಗೆ ಡೇಟಾ ರೋಲ್‌ಓವರ್‌ ಪ್ರಯೋಜನ ಸಿಗಲಿದೆ. ಇದರೊಂದಿಗೆ ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಸಹ ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋಗಿಂತ ಭಿನ್ನವಾಗಿ, ಬಿಎಸ್ಎನ್ಎಲ್ 300 ನಿಮಿಷಗಳ ಆಫ್-ನೆಟ್ ಕರೆಗಳನ್ನು ಸಹ ನೀಡುತ್ತಿದೆ.

ಯಾವುದು ಯೋಗ್ಯ?

ಯಾವುದು ಯೋಗ್ಯ?

ರಿಲಾಯನ್ಸ್‌ ಜಿಯೋ ಹಾಗೂ ಬಿಎಸ್‌ಎನ್‌ಎಲ್‌ ಎರಡು ಟೆಲಿಕಾಂಗಳು ಅಗ್ಗದ ಬೆಲೆಯಲ್ಲಿ ಆಕರ್ಷಕ ಪೋಸ್ಟ್‌ಪೇಯ್ಡ್‌ ಯೋಜನೆಯನ್ನು ಪರಿಚಯಿಸಿವೆ. ಎರಡು ಟೆಲಿಕಾಂಗಳು ಡೇಟಾ ಪ್ರಯೋಜನದ ಜೊತೆಗೆ ಎಸ್‌ಎಮ್‌ಎಸ್‌ ಸೌಲಭ್ಯ ಒದಗಿಸಿವೆ. ಬಿಎಸ್‌ಎನ್‌ಎಲ್‌ ಡೇಟಾ ರೋಲ್‌ಓವರ್ ಆಯ್ಕೆ ನೀಡಿದ್ದು, ಜಿಯೋದಲ್ಲಿ ಈ ಸೌಲಭ್ಯ ಇಲ್ಲ. ಹಾಗೆಯೇ ಜಿಯೋ ಇತರೆ ನೆಟವರ್ಕ್‌ಗಳಿಗೆ ಶುಲ್ಕ ವಿಧಿಸಿದ್ದು, ಆದ್ರೆ ಬಿಎಸ್‌ಎನ್‌ಎಲ್ ಒಟ್ಟಾರೆ ದಿನಕ್ಕೆ 300 ನಿಮಿಷಗಳ ಸೌಲಭ್ಯ ನೀಡಿದೆ. ಈ ಅಂಶಗಳ ಆಧಾರದ ಮೇಲೆ ಬಿಎಸ್‌ಎನ್‌ಎಲ್‌ ಯೋಗ್ಯ ಆದರೆ ನೆಟವರ್ಕ್ ಕವರೇಜ್ ಲಭ್ಯತೆಯ ದೃಷ್ಠಿಯಿಂದ ಜಿಯೋ ಉತ್ತಮ ಆಯ್ಕೆ ಅನಿಸಲಿದೆ.

Most Read Articles
Best Mobiles in India

English summary
Reliance Jio and BSNL telecom have Rs 199 Postpaid Plans. but Which One Better to recharge.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X