Home
ಸುದ್ದಿಜಾಲ

ಜಿಯೋ ಈ ನಿರ್ಧಾರಕ್ಕೆ ಬರುತ್ತೆ ಅಂತಾ ಯಾರೂ ಊಹಿಸಿರಲಿಲ್ಲ!

ಭಾರತೀಯ ಟೆಲಿಕಾಂ ವಲಯದಲ್ಲಿ ಭಾರೀ ಸದ್ದು ಮಾಡಿರುವ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಟೆಲಿಕಾಂ ಅಗ್ಗದ ಬೆಲೆಗೆ ಡೇಟಾ ಪ್ಲ್ಯಾನ್ ಪರಿಚಯಿಸಿ ಬಹುತೇಕ ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿದೆ. ಆದರೆ ಜಿಯೋ ಇದೀಗ ತನ್ನ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದನ್ನು ಹೊರಹಾಕಿದ್ದು, 1GB ಡೇಟಾಗೆ ಕನಿಷ್ಠ 20ರೂ ನಿಗದಿ ಮಾಡಬೇಕೆಂದು ಟ್ರಾಯ್‌ಗೆ ಮನವಿ ಮಾಡಿಕೊಂಡಿದೆ.

ಟೆಲಿಕಾಂ ಸಂಸ್ಥೆ

ಹೌದು, ಸದ್ಯ ದೇಶಿಯ ಟೆಲಿಕಾಂ ಸಂಸ್ಥೆಗಳು AGR (ಹೊಂದಾಣಿಕೆ ಮಾಡಿದ ಒಟ್ಟು ವರಮಾನ) ಬಾಕಿಯಿಂದ ತತ್ತರಿಸಿದ್ದು, ಟೆಲಿಕಾಂ ಸಂಸ್ಥೆಗಳು ಆರ್ಥಿಕ ಸಂಕಷ್ಟದಲ್ಲಿರುವ ಹಿನ್ನಲೆಯಲ್ಲಿ ಜಿಯೋ ಟೆಲಿಕಾಂ ಡೇಟಾಗೆ ಕನಿಷ್ಠ ಶುಲ್ಕ ನಿಗದಿ ಮಾಡಲು ಮನವಿ ಮಾಡಿದೆ. ಡೇಟಾ ದರವನ್ನು ಮೊದಲು 15ರೂ.ಗೆ ಏರಿಕೆ ಮಾಡಬೇಕು ಮತ್ತು ಆನಂತರ ಮುಂದಿನ 6 ರಿಂದ 9 ತಿಂಗಳ ಅವಧಿಗೆ ಕನಿಷ್ಠ ಡೇಟಾ ದರವನ್ನು 20ರೂ. ನಿಗದಿ ಮಾಡಬೇಕೆಂದು ಬೇಡಿಕೆ ಇಟ್ಟಿದೆ.

1GB ಡೇಟಾ ಬೆಲೆ 20ರೂ

1GB ಡೇಟಾ ಬೆಲೆ 20ರೂ

ಜಿಯೋ ಟೆಲಿಕಾಂ ಡೇಟಾ ಟಾರೀಫ್ ಬೆಲೆ ಹೆಚ್ಚಳಕ್ಕೆ ಮುಂದಾಗಿದ್ದು, 1GB ಡೇಟಾ ಬೆಲೆ 20ರೂ. ಶುಲ್ಕ ನಿಗದಿ ಮಾಡುವಂತೆ ಟ್ರಾಯ್ ಗೆ ಮನವಿ ಮಾಡಿದೆ. ಒಂದು ವೇಳೆ ಟ್ರಾಯ್ ಜಿಯೋದ ಬೇಡಿಕೆಯನ್ನು ಈಡೇರಿಸಲು ಸಿದ್ಧವಾದರೆ, ಗ್ರಾಹಕರಿಗೆ ಹೊರೆಯಾಗಲಿದೆ. ಟ್ರಾಯ್ ಪ್ರತಿ ಜಿಬಿಗೆ ಕನಿಷ್ಠ ಶುಲ್ಕ ನಿಗದಿ ಮಾಡಿದ್ದೇ ಆದರೆ, ಗ್ರಾಹಕರು 1GB ಡೇಟಾಗೆ 20ರೂ. ತೆರೆಬೇಕಾಗುತ್ತದೆ.

ವೊಡಾಫೋನ್ ಬೇಡಿಕೆ

ವೊಡಾಫೋನ್ ಬೇಡಿಕೆ

ಅವನತಿಯತ್ತ ಮುಖ ಮಾಡಿದ್ದ ವೊಡಾಫೋನ್ ಸಹ ಇತ್ತೀಚಿಗಷ್ಟೆ 1GB ಡೇಟಾಗೆ ಕನಿಷ್ಠ 35ರೂ ನಿಗದಿ ಮಾಡುವಂತೆ ಟ್ರಾಯ್‌ಗೆ ಮನವಿ ಮಾಡಿತ್ತು. ವೊಡಾಫೋನ್ AGR ಬಾಕಿ ಹಣ ಪಾವತಿಸಲು ಕಾಲಾವಕಾಶ ಕೇಳಿತ್ತು ಹಾಗೂ ಪ್ರಸ್ತುತ ಇರುವ ಡೇಟಾ ಬೆಲೆಯನ್ನು ಸುಮಾರು 7 ರಿಂದ 8 ಪಟ್ಟು ಹೆಚ್ಚಳ ಮಾಡಬೇಕು ಎಂದು ಹೇಳಿತ್ತು. ಈ ನಿಟ್ಟಿನಲ್ಲಿ 1GB ಡೇಟಾಗೆ ಕನಿಷ್ಠ 35ರೂ ದರ ನಿಗದಿ ಮಾಡಬೇಕೆಂದಿತ್ತು.

ಅಗ್ಗದ ಡೇಟಾ

ಅಗ್ಗದ ಡೇಟಾ

ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಸದ್ಯ ಭಾರತದಲ್ಲಿಯೇ ಅಗ್ಗದ ಡೇಟಾ ಲಭ್ಯವಿರುವುದು. ಪ್ರಸ್ತುತ ಪ್ರತಿ 1GB ಡೇಟಾ ಬೆಲೆಯು ಸುಮಾರು 6-9 ರೂ ಅಂತರದಲ್ಲಿಯೇ ಇದೆ ಎನ್ನಲಾಗಿದೆ. ಆದರೆ ಟೆಲಿಕಾಂ ಸಂಸ್ಥೆಗಳು ಆರ್ಥಿಕವಾಗಿ ಮುಗ್ಗರಿಸಿರುವುದರಿಂದ ಜಿಯೋ ಮತ್ತು ವೊಡಾಫೋನ್ ಡೇಟಾಗೆ ಕನಿಷ್ಠ ಶುಲ್ಕ ನಿಗದಿ ಮಾಡುವಂತೆ ಟ್ರಾಯ್‌ಗೆ ಮನವಿ ಮಾಡಿಕೊಂಡಿವೆ. ಮುಂದೆನಾಗುತ್ತದೆ ಎಂದು ಕಾದುನೋಡಬೇಕು.

ಜಿಯೋದಿಂದ ಮತ್ತೆ ದೀರ್ಘಾವಧಿ ಪ್ಲ್ಯಾನ್: ಒಟ್ಟು 350GB ಡೇಟಾ!

ಜಿಯೋದಿಂದ ಮತ್ತೆ ದೀರ್ಘಾವಧಿ ಪ್ಲ್ಯಾನ್: ಒಟ್ಟು 350GB ಡೇಟಾ!

ಭಾರತೀಯ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ರಿಲಾಯನ್ಸ್ ಜಿಯೋ ಟೆಲಿಕಾಂ ಈಗಾಗಲೇ ಹಲವು ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಮೂಲಕ ಗ್ರಾಹಕರನ್ನು ಮೆಚ್ಚಿಸಿದೆ. ಇತ್ತೀಚಿಗೆ 2121ರೂ. ಬೆಲೆಯ ವಾರ್ಷಿಕ ಪ್ರೀಪೇಯ್ಡ್‌ ಪ್ಲ್ಯಾನ್‌ ಬಿಡುಗಡೆ ಮಾಡಿದೆ. ಅದರ ಬೆನ್ನಲ್ಲೇ ಈಗ ಮತ್ತೊಂದು ದೀರ್ಘಾವಧಿಯ ಪ್ರೀಪೇಯ್ಡ್‌ ಪ್ಲ್ಯಾನ್‌ವೊಂದನ್ನು ಲಾಂಚ್ ಮಾಡಿದ್ದು, ಟೆಲಿಕಾಂ ಮಾರುಕಟ್ಟೆಯಲ್ಲಿ ಗಮನ ಸೆಳೆದಿದೆ.

ಜಿಯೋ ಟೆಲಿಕಾಂ

ಹೌದು, ಜಿಯೋ ಟೆಲಿಕಾಂ ಈಗ 4,999ರೂ. ಬೆಲೆಯ ಪ್ರೀಪೇಯ್ಡ್ ಪ್ಲ್ಯಾನ್‌ ಅನ್ನು ಮತ್ತೆ ಬಿಡುಗಡೆ ಮಾಡಿದೆ. ಈ ಹಿಂದೆ ಗ್ರಾಹಕರನ್ನು ಸೆಳೆದಿದ್ದ ಈ ದೀರ್ಘಾವಧಿ ಪ್ರೀಪೇಯ್ಡ್ ಪ್ಲ್ಯಾನ್ ಈಗ ಮತ್ತೆ ಡೇಟಾ, ವ್ಯಾಲಿಡಿ ಮತ್ತು ವಾಯಿಸ್‌ ಕಾಲಿಂಗ್ ಸೌಲಭ್ಯದೊಂದಿಗೆ ಎಂಟ್ರಿ ಕೊಟ್ಟಿದೆ. ಅಂದಹಾಗೆ ಜಿಯೋದ ಈ ಹೊಸ ಯೋಜನೆಯು ಒಟ್ಟು 350GB ಡೇಟಾ ಪ್ರಯೋಜನ ಹೊಂದಿದೆ. ಹಾಗಾದರೇ ಜಿಯೋದ ಈ ಪ್ಲ್ಯಾನ್ ಇತರೆ ಸೌಲಭ್ಯಗಳೆನು ಎನ್ನುವ ಬಗ್ಗೆ ಮುಂದೆ ತಿಳಿಯೋಣ.

ವ್ಯಾಲಿಡಿಟಿ ಮತ್ತು ಡೇಟಾ ಎಷ್ಟು

ವ್ಯಾಲಿಡಿಟಿ ಮತ್ತು ಡೇಟಾ ಎಷ್ಟು

ಜಿಯೋದ 4,999ರೂ ಪ್ರೀಪೇಯ್ಡ್ ಯೋಜನೆಯು ಒಟ್ಟು 360GB ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ ಪ್ರತ್ಯೇಕ ಡೇಟಾ ಸೌಲಭ್ಯವಿಲ್ಲ, ಆದರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 350GB ಡೇಟಾ ಪ್ರಯೋಜನವನ್ನು ಒದಗಿಸಲಿದೆ. ಗ್ರಾಹಕರು ಪ್ರತಿದಿನ 1GB ಮಿತಿ ಇಲ್ಲದೇ ಡೇಟಾ ಬಳಕೆ ಮಾಡಬಹುದು.

ವಾಯಿಸ್‌ ಕರೆ ಮತ್ತು SMS ಸೌಲಭ್ಯ

ವಾಯಿಸ್‌ ಕರೆ ಮತ್ತು SMS ಸೌಲಭ್ಯ

ಜಿಯೋದ 4,999ರೂ ಪ್ರೀಪೇಯ್ಡ್ ಯೋಜನೆಯು ಜಿಯೋ ಟು ಜಿಯೋ ಅನಿಯಮಿತ ಉಚಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಪಡೆದಿದೆ. ಜಿಯೋ ಹೊರತುಪಡಿಸಿ ಇತರೆ ನೆಟವರ್ಕ್ ಕರೆಗಳಿಗೆ ಒಟ್ಟು 12,000 ನಿಮಿಷಗಳ ಮಿತಿ ಹೇರಲಾಗಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಗಳ ಪ್ರಯೋಜನ ಸಹ ದೊರೆಯಲಿದೆ.

ಇತರೆ ಜಿಯೋ ದೀರ್ಘಾವಧಿ ಪ್ಲ್ಯಾನ್

ಇತರೆ ಜಿಯೋ ದೀರ್ಘಾವಧಿ ಪ್ಲ್ಯಾನ್

ಜಿಯೋದ ಈ 4,999ರೂ ಪ್ರೀಪೇಯ್ಡ್ ಪ್ಲ್ಯಾನ್ ದೀರ್ಘಾವಧಿಯ ಯೋಜನೆ ಆಗಿದೆ ಆದ್ರೆ ದುಬಾರಿ ಅನಿಸಲಿದೆ. ಹಾಗೇ ಜಿಯೋದ 2121ರೂ. ಪ್ರೀಪೇಯ್ಡ್‌ ಯೋಜನೆಯು ಸಹ ದೀರ್ಘಾವಧಿ ಯೋಜನೆ ಆಗಿದ್ದು, ಒಟ್ಟು 336 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಸೌಲಭ್ಯ ಒದಗಿಸುತ್ತದೆ. ಜಿಯೋ ಟು ಜಿಯೋ ಅನಿಯಮಿತ ಕರೆ ಹಾಗೂ ಇತರೆ ನೆಟವರ್ಕ್ ಗೆ 12,000 ನಿಮಿಷಗಳ ಮಿತಿ.

Best Mobiles in India

English summary
Jio has proposed to TRAI that wireless data prices are gradually increased to Rs 20 per GB from Rs 15 per GB currently.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+