Jio: ಜಿಯೋದಿಂದ ಗುಡ್ ನ್ಯೂಸ್! 5G ರೀಚಾರ್ಜ್ ಪ್ಲ್ಯಾನ್ ದರ ಹೆಚ್ಚಳದ ಬಗ್ಗೆ ಹೇಳಿದ್ದೇನು?
ಟೆಲಿಕಾಂ ವಲಯದಲ್ಲಿ (Telecom sector) ಅಗ್ರಸ್ಥಾನಲ್ಲಿರುವ ರಿಲಯನ್ಸ್ ಜಿಯೋ (Reliance Jio) ಕಡಿಮೆ ದರದಲ್ಲಿ ಅತ್ಯುತ್ತಮ ಪ್ರಯೋಜನಗಳನ್ನು ನೀಡುವ ಮೂಲಕ ಸಾಕಷ್ಟು ಗ್ರಾಹಕರನ್ನು ಈಕ್ಷಣಕ್ಕೂ ಪಡೆದುಕೊಳ್ಳುತ್ತಿದೆ.ಈ ಬೆಳವಣಿಗೆ ನಡುವೆ ಜಿಯೋ ಗ್ರಾಹಕರು ಸಂತಸಪಡುವ ಸುದ್ದಿಯೊಂದನ್ನು ನೀಡಿದೆ.
ಹೌದು, ಜಿಯೋ ಸಾಮಾನ್ಯವಾಗಿ ತನ್ನ ಗ್ರಾಹಕರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತದೆ. ಈ ಕಾರಣಕ್ಕೆ ಕಂಪನಿಯು ಕೈಗೆಟುಕುವ ಬೆಲೆಯಲ್ಲಿ ರೀಚಾರ್ಜ್ ಪ್ಲ್ಯಾನ್‌ಗಳನ್ನು ನೀಡುತ್ತದೆ. ಇದೀಗ ಜಿಯೋ ತನ್ನ 44 ಕೋಟಿಗೂ ಅಧಿಕ ಬಳಕೆದಾರರಿಗೆ ದೊಡ್ಡ ಗುಡ್ ನ್ಯೂಸ್ ನೀಡಿದೆ. ಅಂದರೆ ಇತರೆ ಟೆಲಿಕಾಂಗಳಂತೆ ಜಿಯೋ ಸುಂಕದ ಯೋಜನೆಗಳ ಬೆಲೆಗಳನ್ನು ಹೆಚ್ಚಿಸುವುದಿಲ್ಲ ಎಂದು ತಿಳಿಸಿದೆ. ಹಾಗಿದ್ರೆ ಏನಿದು ಗುಡ್ ನ್ಯೂಸ್?. ಜಿಯೋ ಯಾಕೆ ಈ ನಿರ್ಧಾರ ಮಾಡಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ರೀಚಾರ್ಜ್ ಪ್ಲ್ಯಾನ್ ದರ ಹೆಚ್ಚಳ ಇಲ್ಲ: ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್‌ನಂತಹ (Vodafone Idea and Airtel) ಇತರ ಟೆಲಿಕಾಂ ಕಂಪನಿಗಳು ಬೆಲೆಗಳನ್ನು ಹೆಚ್ಚಿಸಲು ಯೋಜಿಸುತ್ತಿದ್ದರೂ ಸಹ 5G ಯೋಜನೆಗಳ ಸುಂಕವನ್ನು ಹೆಚ್ಚಿಸುವುದಿಲ್ಲ ಎಂದು ಮುಖೇಶ್ ಅಂಬಾನಿ ನೇತೃತ್ವದ ಕಂಪನಿ ಮಾಹಿತಿ ನೀಡಿದೆ.
ಜಿಯೋ 5G ಸೇವೆಗಳ ಪರಿಚಯದೊಂದಿಗೆ ಸ್ಪರ್ಧಾತ್ಮಕ ಬೆಲೆಯನ್ನು ಕಾಯ್ದುಕೊಳ್ಳುವ ತನ್ನ ಉದ್ದೇಶವನ್ನು ಈ ವೇಳೆ ಪ್ರಕಟಿಸಿದೆ. ಇನ್ನೂ 2G ನೆಟ್‌ವರ್ಕ್‌ನಲ್ಲಿರುವ ಏರ್‌ಟೆಲ್, ವಿ ಟೆಲಿಕಾಂ, ಬಿಎಸ್‌ಎನ್‌ಎಲ್ ನಿಂದ 240 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಒಳಗೊಂಡಿರುವ ವಿಶಾಲವಾದ ಬಳಕೆದಾರರಿಗೆ ಕೈಗೆಟುಕುವ ಪ್ರವೇಶವನ್ನು ಒದಗಿಸುವುದು ಜಿಯೋದ ಪ್ರಾಥಮಿಕ ಗುರಿಯಾಗಿದೆ.

ಅಂದರೆ ಜಿಯೋ ತನ್ನ ದರಗಳನ್ನು ಗಣನೀಯವಾಗಿ ಹೆಚ್ಚಿಸುವುದಿಲ್ಲ. ಬದಲಾಗಿ, ಜನರು ಡೇಟಾ-ಇಂಟೆನ್ಸಿವ್ ಇಂಟರ್ನೆಟ್ ಯೋಜನೆಗಳಿಗೆ ಪರಿವರ್ತನೆಯಾಗುತ್ತಿದ್ದಂತೆ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಸಜ್ಜಾಗುತ್ತಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಜಿಯೋ ಅಧ್ಯಕ್ಷರಾದ ಮ್ಯಾಥ್ಯೂ ಉಮ್ಮನ್ ಅವರು ಪ್ರತಿಕ್ರಿಯೆ ನೀಡಿದ್ದು, ಈ ತಂತ್ರವು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಅವರ ದೃಷ್ಟಿಗೆ ಹೊಂದಿಕೆಯಾಗುತ್ತದೆ ಎಂದು ಹೇಳಿದ್ದಾರೆ.
ಬೆಲೆ ಏರಿಕೆಯತ್ತ ನಮ್ಮ ಗಮನವಿಲ್ಲ..:
ಕಂಪನಿಯು ಯಾವಾಗಲೂ ತನ್ನ ಗ್ರಾಹಕರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತದೆ ಎಂದು ಜಿಯೋ ಅಧ್ಯಕ್ಷ ಮ್ಯಾಥ್ಯೂ ಉಮ್ಮನ್ ಹೇಳಿದ್ದು, ಟ್ಯಾರಿಫ್ ಪ್ಲಾನ್‌ಗಳ ಬೆಲೆಯನ್ನು ಹೆಚ್ಚಿಸುವ ಬದಲಾಗಿ ನಮ್ಮ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ನಾವು ಕೆಲಸ ಮಾಡುತ್ತೇವೆ. ಅಷ್ಟೇ ಅಲ್ಲದೆ ನಾವು ಈ ಬಗ್ಗೆ ಮಾತ್ರ ಗಮನಹರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಬಳಕೆದಾರರು ಕೈಗೆಟುಕುವ ಬೆಲೆಯಲ್ಲಿ ಹೆಚ್ಚಿನ ಡೇಟಾವನ್ನು ನೀಡುತ್ತಿರುವ ರೀಚಾರ್ಜ್ ಪ್ಯಾಕ್‌ಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಆದ್ದರಿಂದ, ಭವಿಷ್ಯದಲ್ಲಿ 5G ಯೋಜನೆಗಳನ್ನು ಪರಿಚಯಿಸಿದ ನಂತರ ರೀಚಾರ್ಜ್ ಪ್ಯಾಕ್‌ಗಳ ಬೆಲೆಗಳನ್ನು ಹೆಚ್ಚಿಸಲಾಗುವುದಿಲ್ಲ. ಪ್ರಸ್ತುತ ಇಡೀ ದೇಶದಲ್ಲಿ ಸುಮಾರು 20 ಮಿಲಿಯನ್ ಮೊಬೈಲ್ ಬಳಕೆದಾರರಿದ್ದು, ಸರಿಯಾದ 2G ಸೇವೆಯನ್ನು ಸಹ ಪಡೆಯುತ್ತಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ.

ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾದಂತಹ ಕಂಪನಿಗಳು ಗ್ರಾಹಕರಿಗೆ ವಿಧಿಸುವ ಬೆಲೆಯನ್ನು ಹೆಚ್ಚಿಗೆ ಮಾಡುತ್ತಿವೆ. ಟೆಲಿಕಾಂ ಉದ್ಯಮವು ತಮ್ಮ 5G ನೆಟ್‌ವರ್ಕ್‌ಗಳನ್ನು ವಿಸ್ತರಿಸುವಂತಹ ವಿಷಯಗಳಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಹಣದ ಅಗತ್ಯವಿರುವುದರಿಂದ ಇದು ಅವಶ್ಯಕವಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಏರ್‌ಟೆಲ್‌ನ ಸಿಇಒ ಗೋಪಾಲ್ ವಿಟ್ಟಲ್ ಅವರು ಟೆಲಿಕಾಂ ಉದ್ಯಮವು ಆರ್ಥಿಕವಾಗಿ ಆರೋಗ್ಯಕರವಾಗಿರಲು ARPU 300ರೂ.ಗೆ ತಲುಪಬೇಕೆಂದು ತಿಳಿಸಿದ್ದಾರೆ.
ಅದಾಗ್ಯೂ ಏರ್‌ಟೆಲ್ ಪ್ರಸ್ತುತ ಪ್ರತಿ ಬಳಕೆದಾರರು ಸುಮಾರು 200ರೂ.ಗಳನ್ನು ಖರ್ಚು ಮಾಡುವಂತೆ ಮಾಡಿದೆ. ಇದು ಜಿಯೋಗಿಂತ ಹೆಚ್ಚಾಗಿದೆ. ಆದರೆ, ಈ ವಿಷಯದಲ್ಲಿ ವೊಡಾಫೋನ್ ಐಡಿಯಾ ಹೆಣಗಾಡುತ್ತಿದೆ ಯಾಕೆಂದರೆ ಅದು ಪ್ರತಿ ಬಳಕೆದಾರರಿಂದ ಕೇವಲ 142ರೂ. ಗಳನ್ನು ಪಡೆಯುತ್ತಿದೆ. ಈ ಕಾರಣಕ್ಕೆ ತಮ್ಮ ಪ್ರತಿಸ್ಪರ್ಧಿಗಳ ಹಿಂದೆ ಬಿದ್ದಿದೆ. ಆದರೂ ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಪ್ಲ್ಯಾನ್ ಪರಿಚಯಿಸುವ ಮೂಲಕ ಉತ್ತಮ ಬೆಳವಣಿಗೆ ಕಾಣುತ್ತಿದೆ.


Click it and Unblock the Notifications








