Home
ಸುದ್ದಿಜಾಲ

ಎಮ್‌ ಎಸ್‌ ಧೋನಿ ಈಗ ಜಿಯೋಮಾರ್ಟ್‌ನ ಬ್ರಾಂಡ್ ಅಂಬಾಸಿಡರ್!

ರಿಲಯನ್ಸ್ ರಿಟೇಲ್‌ನ ಜಿಯೋಮಾರ್ಟ್ ದೇಶದ ಪ್ರಮುಖ ಇ-ಮಾರ್ಕೆಟ್‌ ಪ್ಲೇಸ್‌ಗಳಲ್ಲಿ ಪ್ರಮುಖ ಸ್ಥಾನದಲ್ಲಿದೆ. ಇದೀಗ ಸಂಸ್ಥೆಯು ಭಾರತೀಯ ಕ್ರಿಕೆಟ್ ಐಕಾನ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ. ಹಾಗೆಯೇ ಇದರ ಜೊತೆಗೆ, ತನ್ನ ಹಬ್ಬದ ಕ್ಯಾಂಪೇನ್ ಅನ್ನು ಜಿಯೋ ಉತ್ಸವ, ಸೆಲೆಬ್ರೇಶನ್‌ ಆಫ್‌ ಇಂಡಿಯಾ ಎಂದು ಮರುನಾಮಕರಣ ಮಾಡಿದ್ದು, 2023 ಅಕ್ಟೋಬರ್ 08 ರಿಂದ ಲೈವ್ ಆಗಲಿದೆ.

ದೇಶಕ್ಕೆ ಸಂಭ್ರಮಿಸುವ ಹಲವು ಅವಕಾಶಗಳನ್ನು ಎಮ್‌ ಎಸ್‌ ಧೋನಿ ನೀಡಿದ್ದಾರೆ. ಆದರೆ, ಆ ಸಂಭ್ರಮದಲ್ಲೇ ಒಂದು ಭಾಗವಾಗಿರಲಿಲ್ಲ ಎಂಬುದು ಜಿಯೋ ಉತ್ಸವದ ಅಭಿಯಾನವಾಗಿದೆ. ಹೀಗಾಗಿ, ಹೊಸ ಹುಮ್ಮಸ್ಸನ್ನು ಹೊಂದಿರುವ ಅವರು ಖುಷಿ, ಹಬ್ಬಗಳು ಮತ್ತು ವಿಶೇಷ ಸನ್ನಿವೇಶಗಳ ಎಲ್ಲ ಕ್ಷಣಗಳನ್ನೂ ಸಂಭ್ರಮಿಸಲು ಸಿದ್ಧವಾಗಿದ್ದಾರೆ. ಎಮ್‌ ಎಸ್‌ ಧೋನಿ 45 ಸೆಕೆಂಡ್ ಫಿಲಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಎಮ್‌ ಎಸ್‌ ಧೋನಿ ಈಗ ಜಿಯೋಮಾರ್ಟ್‌ನ ಬ್ರಾಂಡ್ ಅಂಬಾಸಿಡರ್!

ಜಿಯೋಮಾರ್ಟ್ ಸಿಇಒ ಸಂದೀಪ್ ವರಗಂಟಿ ಹೇಳುವಂತೆ 'ನಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ಎಂಎಸ್ ಧೋನಿ ಅತ್ಯಂತ ಉತ್ತಮವಾಗಿ ಹೊಂದಿಕೆಯಾಗುತ್ತಾರೆ. ಅವರ ವ್ಯಕ್ತಿತ್ವವು ಜಿಯೋಮಾರ್ಟ್ ನ ಹಾಗೆಯೇ ವಿಶ್ವಾಸ, ನಂಬಿಕೆ ಮತ್ತು ಖಾತರಿಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಪ್ರೀತಿ ಪಾತ್ರರ ಜೊತೆಗೆ ವಿಶೇಷ ಕ್ಷಣಗಳನ್ನು ಕಳೆಯುವುದಕ್ಕೆ ನಮ್ಮ ಹೊಸ ಅಭಿಯಾನವು ಅನುವು ಮಾಡುತ್ತದೆ.

ಇದರಲ್ಲಿ ಶಾಪಿಂಗ್ ಎಂಬುದು ಒಂದು ಅವಿಭಾಜ್ಯ ಅಂಗ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ. ಮೆಟ್ರೋ ಹೊರತಾದ ಪ್ರದೇಶಗಳು ಒಟ್ಟಾರೆ ಸೇಲ್ ನಲ್ಲಿ ಸುಮಾರು 60% ಪಾಲು ಹೊಂದಿದೆ. ಇದು ದೇಶದ ರಿಟೇಲ್ ವಲಯ ವಿಕೇಂದ್ರೀಕರಣಗೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.'

ಪ್ರಾದೇಶಿಕ ಕಲಾಕಾರರನ್ನು ಪ್ರೋತ್ಸಾಹಿಸುವ ಕೆಲಸವನ್ನು ಜಿಯೋಮಾರ್ಟ್ ಎಂದಿಗೂ ಮಾಡುತ್ತಿದೆ. ಪ್ಲಾಟ್‌ಫಾರಂ ಪ್ರಸ್ತುತ 1000 ಕ್ಕೂ ಹೆಚ್ಚು ಕಲಾಕಾರರ ಜೊತೆಗೆ ಕೆಲಸ ಮಾಡುತ್ತಿದ್ದು, 1.5 ಲಕ್ಷ ವಿಶಿಷ್ಟ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಅಷ್ಟಕ್ಕೂ, ಕ್ಯಾಂಪೇನ್ ಶೂಟಿಂಗ್‌ನ ಭಾಗವಾಗಿ, ಬಿಹಾರದ ಪ್ರಶಸ್ತಿ ಪುರಸ್ಕ್ರತ ಕಲಾವಿದೆ ಅಂಬಿಕಾ ದೇವಿಯವರ ಮಧುಬನಿ ಪೇಂಟಿಂಗ್ ಅನ್ನು ಧೋನಿಯವರಿಗೆ ವರಗಂಟಿ ಪ್ರದಾನ ಮಾಡಿದ್ದಾರೆ.

ಗ್ರಾಹಕರಿಗೆ ಉತ್ತಮ ಉತ್ಪನ್ನಗಳು ಮತ್ತು ಉತ್ತಮ ಅನುಭವವನ್ನು ಒದಗಿಸುವುದಷ್ಟೇ ಅಲ್ಲ, ಸರಾಗವಾಗಿ ಉದ್ಯಮವನ್ನು ನಡೆಸಲು ಲಕ್ಷಾಂತರ ಕಲಾಕಾರರು ಮತ್ತು ಎಸ್‌ಎಂಬಿಗಳಿಗೆ ಅನುವು ಮಾಡಿಕೊಡುತ್ತಿದೆ.

ಮಹೇಂದ್ರ ಸಿಂಗ್ ಧೋನಿ ಹೇಳುವಂತೆ 'ಜಿಯೋಮಾರ್ಟ್ ನ ಮೌಲ್ಯ ಮತ್ತು ಗುರುತಿಗೂ ನನಗೂ ಹೊಂದಿಕೆಯಾಗುತ್ತದೆ. ದೇಶೀಯ ಇ-ಕಾಮರ್ಸ್ ಬ್ರಾಂಡ್ ಆಗಿರುವ ಇದು ಭಾರತದಲ್ಲಿ ಡಿಜಿಟಲ್ ರಿಟೇಲ್ ಕ್ರಾಂತಿಯನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಭಾರತದು ವೈವಿಧ್ಯಮ ಸಂಸ್ಕೃತಿ ಜನರು ಮತ್ತು ಹಬ್ಬಗಳಿಗೆ ಹೆಸರಾಗಿದೆ.

ಭಾರತ ಮತ್ತು ಭಾರತೀಯರ ಸಂಭ್ರಮಕ್ಕೆ ಜಿಯೋಮಾರ್ಟ್ನ ಜಿಯೋ ಉತ್ಸವವು ಹೊಸ ಆಯಾಮವನ್ನು ನೀಡಿದೆ. ಜಿಯೋಮಾರ್ಟ್ ಜೊತೆಗೆ ಗುರುತಿಸಿಕೊಳ್ಳಲು ಮತ್ತು ಲಕ್ಷಾಂತರ ಭಾರತೀಯರ ಶಾಪಿಂಗ್ ಪಯಣದ ಭಾಗವಾಗುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ.'

ಜಿಯೋಮಾರ್ಟ್ ನ ವಿಭಿನ್ನ ವಿಭಾಗೀಯ ಪರಿಣಿತಿ, ಹಬ್ಬದ ಉತ್ಸಾಹ ಮತ್ತು ಅದ್ಭುತ ಶಾಪಿಂಗ್ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಹೈಲೈಟ್ ಮಾಡುವಂತೆ ಫಿಲಂ ಅನ್ನು ರೂಪಿಸಲಾಗಿದೆ.

ಕಳೆದ ವರ್ಷ ಜಿಯೋಮಾರ್ಟ್ ವಿವಿಧ ವಿಭಾಗಗಳಲ್ಲಿ ಲಭ್ಯವಿರುವ ಉತ್ಪನ್ನಗಳನ್ನು ಪ್ರಚಾರ ಮಾಡುವ ವಿಧಾನವನ್ನು ಅಳವಡಿಸಿಕೊಂಡಿತ್ತು. ಎಲೆಕ್ಟಾನಿಕ್ಸ್, ಫ್ಯಾಷನ್, ಬ್ಯೂಟಿ, ಮನೆ ಅಲಂಕಾರ ಸೇರಿದಂತೆ ವಿವಿಧ ವಿಭಾಗಗಳಲ್ಲಿ ರಿಲಯನ್ಸ್ ಮಾಲೀಕತ್ವದ ಬ್ರಾಂಡ್‌ಗಳನ್ನು ಜಿಯೋಮಾರ್ಟ್ ಸೇರಿಸಿಕೊಂಡಿದೆ. ಇದರಲ್ಲಿ ಅರ್ಬನ್ ಲ್ಯಾಡರ್, ರಿಲಯನ್ಸ್ ಟ್ರೆಂಡ್ಸ್, ರಿಲಯನ್ಸ್ ಜ್ಯೂವೆಲ್ಸ್, ಹ್ಯಾಮ್ಲೇಸ್ ಸೇರಿದಂತೆ ಇತರೆ ಇವೆ. ಭಾರತದ ಅತಿದೊಡ್ಡ ದೇಶೀಯ ಇ-ಮಾರ್ಕೆಟ್‌ಪ್ಲೇಸ್ ಆಗುವ ಜಿಯೋಮಾರ್ಟ್ ನ ಧ್ಯೇಯಕ್ಕೆ ಅನುಗುಣವಾಗಿ ಈ ತ್ವರಿತ ವಿಸ್ತರಣೆ ನಡೆಯುತ್ತಿದೆ.

Best Mobiles in India

English summary
reliance: jiomart welcomes M S Dhoni as its brand ambassador. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+