ಜಿಯೋಮನಿ ವ್ಯಾಲೆಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿಲ್ಲವೇ?
ಪ್ರಸ್ತುತ ರಿಲಾಯನ್ಸ್ ಜಿಯೋ ಭಾರತದಲ್ಲಿ ಸುದ್ದಿಯನ್ನು ಮಾಡುತ್ತಿರುವುದು ತನ್ನ 90 ದಿನಗಳ ಉಚಿತ ಇಂಟರ್ನೆಟ್ ಪ್ಯಾಕ್, ಎಸ್‌ಎಮ್ಎಸ್ ಮತ್ತು ಕರೆಗಳ ಯೋಜನೆಗಳಿಂದಾಗಿದೆ. ಸಿಮ್‌ನೊಂದಿಗೆ ಕಂಪೆನಿ ಮೈಜಿಯೋ ಪ್ಯಾಕೇಜ್ ಮೂಲಕ ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಪ್ರಸ್ತುತಪಡಿಸುತ್ತಿದೆ.
ಓದಿರಿ: ರಿಲಾಯನ್ಸ್ ಜಿಯೋ ಟ್ಯಾರಿಫ್ ಪ್ಲಾನ್ ಲೀಕ್: ರೂ. 50ಕ್ಕೆ 10GB 4G ನಿಜವೇ?
ಪ್ರಿವ್ಯೂ ಆಫರ್‌ನಲ್ಲಿಯೇ ಕಂಪೆನಿ ಉಚಿತ ಡೇಟಾ, ಕರೆಗಳು, ಎಸ್‌ಎಮ್‌ಎಸ್ ಯೋಜನೆಯನ್ನು ಒದಗಿಸುತ್ತಿದ್ದು ಈ ಅಪ್ಲಿಕೇಶನ್‌ಗಳಿಂದ ವಿಷಯ ಸೇವೆಗಳನ್ನು ಉಚಿತವಾಗಿ ಬಳಕೆದಾರರು ಪಡೆದುಕೊಳ್ಳಬಹುದಾಗಿದೆ. ಜಿಯೋ ಮನಿ ವ್ಯಾಲೆಟ್ ಐಓಎಸ್ ಮತ್ತು ಆಂಡ್ರಾಯ್ಡ್ ಇವೆರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ದೊರೆಯುತ್ತಿದ್ದು ಪ್ರತಿಯೊಂದೂ ಡಿಜಿಟಲ್ ಆಗುತ್ತಿರುವ ಈ ಯುಗದಲ್ಲಿ ಹಣವನ್ನು ತಮ್ಮ ಬಳಿ ಇರಿಸಿಕೊಳ್ಳುವುದು ಕೊಂಚ ಕಷ್ಟಕರವಾಗಿದೆ. ಆದ್ದರಿಂದಲೇ ವ್ಯಾಲೆಟ್ ಸರ್ವೀಸ್ ಹೆಚ್ಚು ಜನಪ್ರಿಯವಾಗುತ್ತಿದೆ.
ಜಿಯೋಮನಿ ವ್ಯಾಲೆಟ್ ಅಪ್ಲಿಕೇಶನ್ ನಿಮ್ಮ ಬಿಲ್‌ಗಳಿಗೆ ಪಾವತಿ ಮಾಡುವುದು, ನಿಮ್ಮ ಮೊಬೈಲ್ ರಿಚಾರ್ಜ್ ಅಥವಾ ಡಿಟಿಎಚ್ ಸಂಪರ್ಕಗಳು, ಆನ್‌ಲೈನ್ ಶಾಪಿಂಗ್, ಮನಿ ಕಳುಹಿಸುವುದು ಅಥವಾ ವಿನಂತಿಸುವುದು ಇವೇ ಮೊದಲಾದ ಕಾರ್ಯಗಳನ್ನು ಶೀಘ್ರವಾಗಿ ನಡೆಸಿಕೊಡಲಿದೆ. ನಿಮ್ಮ ವ್ಯಾಲೆಟ್‌ಗೆ ಹಣವನ್ನು ತುಂಬಿಸಿಕೊಳ್ಳಿ ಇದನ್ನು ನಿಮ್ಮ ಡೆಬಿಟ್, ಕ್ರೆಡಿಟ್ ಅಥವಾ ನೆಟ್ ಬ್ಯಾಂಕಿಂಗ್ ಸೇವೆಯ ಮೂಲಕ ಕೂಡ ನಡೆಸಬಹುದಾಗಿದೆ. ಈ ಹಂತವನ್ನು ಸಂಪೂರ್ಣಗೊಳಿಸಿದ ನಂತರ, ಜಿಯೋ ಮನಿ ವಾಲ್ಲೆಟ್ ಅಪ್ಲಿಕೇಶನ್ ಮೂಲಕ ಯಾವುದೇ ಟ್ರಾನ್ಸೇಕ್ಶನ್ ಅನ್ನು ನಡೆಸಿಕೊಳ್ಳಬಹುದಾಗಿದೆ. ಜಿಯೋಮನಿ ವ್ಯಾಲೆಟ್ ಅಪ್ಲಿಕೇಶನ್‌ನೊಂದಿಗೆ, ನೀವು ಹೆಚ್ಚಿನ ಡೀಲ್ಸ್ ಮತ್ತು ವಿನಾಯಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ಡಿವೈಸ್‌ಗೆ ಈ ಆಫರ್ ನೇರವಾಗಿ ಬರಲಿದೆ. ಆನ್‌ಲೈನ್ ಶಾಪಿಂಗ್‌ಗೆ ಇದನ್ನು ವಿನಿಯೋಗಿಸಿಕೊಳ್ಳಬಹುದಾಗಿದೆ ಆದರೆ ಈಗ ಕೆಲವು ಸೈಟ್‌ಗಳಿಗೆ ಇದನ್ನು ನಿರ್ಬಂಧಿಸಲಾಗಿದೆ. ಜಿಯೋಮನಿಯ ಅನನ್ಯ ಫೀಚರ್ ರಿಲಾಯನ್ಸ್ ಔಟ್‌ಲೆಟ್‌ಗಳಾದ ರಿಲಾಯನ್ಸ್ ರಿಟೈಲ್, ರಿಲಾಯನ್ಸ್ ಡಿಜಿಟಲ್, ರಿಲಾಯನ್ಸ್ ಫ್ರೆಶ್, ರಿಲಾಯನ್ಸ್ ಜ್ಯುವೆಲ್ಸ್‌ಗಳಲ್ಲಿ ಪಾವತಿಗಳನ್ನು ಮಾಡಲು ಅನುಕೂಲವನ್ನು ಒದಗಿಸಲಿದೆ. ನಿಮ್ಮ ಬ್ಯಾಂಕ್ ಖಾತೆಗೆ ಜಿಯೋ ಮನಿ ಬ್ಯಾಲೆನ್ಸ್ ಅನ್ನು ವರ್ಗಾಯಿಸಲು ಅಪ್ಲಿಕೇಶನ್ ಅನುಮತಿಸುತ್ತದೆ ಜಿಯೋಮನಿ ವ್ಯಾಲೆಟ್ ಅಪ್ಲಿಕೇಶನ್‌ನಲ್ಲಿ ಬಾರ್ ಕೋಡ್ ಸ್ಕ್ಯಾನಿಂಗ್ ಅನ್ನು ವೇಗದ ಪಾವತಿಗಳಿಗಾಗಿ ಒದಗಿಸಲಾಗಿದೆ. ಸ್ಟೋರ್‌ಗಳಲ್ಲಿ ನೀವು ತ್ವರಿತವಾಗಿ ಬಾರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಬಹುದಾಗಿದೆ.
ಈ ವ್ಯಾಲ್ಲೆಟ್‌ನಲ್ಲಿ ಎಲ್ಲಾ ವರ್ಗಾವಣೆಗಳು ಸಾಧ್ಯ

ಮನಿಯನ್ನು ವ್ಯಾಲ್ಲೆಟ್‌ನಲ್ಲಿ ತುಂಬಿಸಿಕೊಳ್ಳಿ

ಡೀಲ್ಸ್ ಮತ್ತು ಕ್ಯಾಶ್ ಬ್ಯಾಕ್ ಪಡೆದುಕೊಳ್ಳಿ

ಜಿಯೋಮನಿಯ ಅನನ್ಯ ಫೀಚರ್

ಬಾರ್ ಕೋಡ್ ಸ್ಕ್ಯಾನಿಂಗ್


Click it and Unblock the Notifications








