Subscribe to Gizbot

ರಿಲಾಯನ್ಸ್ ಜಿಯೋದಿಂದ 'Locate My Device' ಫೀಚರ್ ಪರಿಚಯ: ಎಲ್ಲಿದ್ದರೂ ಟ್ರ್ಯಾಕ್‌ ಮಾಡಿ

Written By:

ರಿಲಾಯನ್ಸ್ ಜಿಯೋ ಸೆಪ್ಟೆಂಬರ್ 5 ರಿಂದಲೂ ಸಹ ಒಂದಲ್ಲಾ ಒಂದು ರೀತಿಯ ಹೊಸ ಸೇವೆಗಳನ್ನು ನೀಡುತ್ತಲೇ ಇದೆ. ಇತ್ತಿಚೇಗಷ್ಟೆ ಹ್ಯಾಪಿ ನ್ಯೂ ಇಯರ್ ಆಫರ್ ನೀಡಿರುವ ರಿಲಾಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಈಗ ಇನ್ನೊಂದು ಹೊಸ ಸೇವೆ ನೀಡಲು ಹೊರಟಿದೆ.

ಹೌದು, ಜಿಯೋ "ಲೊಕೇಟ್ ಮೈ ಡಿವೈಸ್'(Locate My Device) ಹೆಸರಿನ ಹೊಸ ಫೀಚರ್ ಅನ್ನು ಪರಿಚಯಿಸಲಿದೆ ಎಂಬ ಮಾಹಿತಿ ಈಗ ಇಂಟರ್ನೆಟ್‌ನಲ್ಲಿ ಹರಿದಾಡತೊಡಗಿದೆ. ಈ ಫೀಚರ್ ಜಿಪಿಎಸ್‌ ಸಹಾಯದಿಂದ ತಮ್ಮ ಡಿವೈಸ್‌ಗಳನ್ನು ಲೋಕೇಟ್ ಮಾಡಲು ಸಹಾಯವಾಗಲಿದೆಯಂತೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ಓದಿ ತಿಳಿಯಿರಿ.

ಹೊಸ ಜಿಯೋ ಸಿಮ್'ನೊಂದಿಗೆ 'ಹ್ಯಾಪಿ ನ್ಯೂ ಇಯರ್' ಆಫರ್ ಪಡೆಯುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲೊಕೇಟ್ ಮೈ ಡಿವೈಸ್(Locate My Device)

ಲೊಕೇಟ್ ಮೈ ಡಿವೈಸ್(Locate My Device)

ಲೊಕೇಟ್ ಮೈ ಡಿವೈಸ್(Locate My Device) ಫೀಚರ್, ಜಿಯೋ ಸಬ್‌ಸ್ಕ್ರೈಬರ್‌ಗಳು ತಮ್ಮ ಡಿವೈಸ್‌ ಅನ್ನು ಲೊಕೇಟ್ ಮಾಡಲು ಜಿಪಿಎಸ್‌ ಬಳಸಿಕೊಂಡು ಸಹಾಯ ಮಾಡುತ್ತದೆ. ಈ ಫೀಚರ್ ಅನ್ನು ಜಿಯೋದ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಉಪಯೋಗ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೆಬ್‌ಸೈಟ್‌ನಿಂದ ಮೊಬೈಲ್ ಟ್ರ್ಯಾಕ್‌ ಮಾಡಿ

ವೆಬ್‌ಸೈಟ್‌ನಿಂದ ಮೊಬೈಲ್ ಟ್ರ್ಯಾಕ್‌ ಮಾಡಿ

ಅಂದಹಾಗೆ ಲೊಕೇಟ್ ಮೈ ಡಿವೈಸ್(Locate My Device) ಫೀಚರ್ ಇನ್ನೂ ಸಹ ಲೈವ್ ಆಗಿಲ್ಲ. ಒಮ್ಮೆ ಫೀಚರ್ ಲೈವ್ ಆದರೆ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ ಅನ್ನು ವೆಬ್‌ಸೈಟ್‌ ಮೂಲಕ ಟ್ರ್ಯಾಕ್‌ ಮಾಡಬಹುದು ಎಂದು ಅಧಿಕೃತ ವರದಿ ಮೂಲಕ ತಿಳಿಯಲಾಗಿದೆ.

ಫೀಚರ್‌ನಿಂದ ಮಾಹಿತಿ ಏನು?

ಫೀಚರ್‌ನಿಂದ ಮಾಹಿತಿ ಏನು?

ಲೊಕೇಟ್ ಮೈ ಡಿವೈಸ್(Locate My Device), ಫೀಚರ್ ಸ್ಮಾರ್ಟ್‌ಫೋನ್ ಇರುವ ಸ್ಥಳ ಮತ್ತು ಹಿಂದೆ ಇದ್ದ ಸ್ಥಳದ ಇತಿಹಾಸವನ್ನು ಒದಗಿಸುತ್ತದೆ. ಸ್ಮಾರ್ಟ್‌ಫೋನ್‌ ಅನ್ನು ದಿನಾಂಕ ಮತ್ತು ಸಮಯದ ಸಹಿತ ಮಾಹಿತಿ ಪಡೆದು ಟ್ರ್ಯಾಕ್‌ ಮಾಡಲು ಸಹಾಯಕವಾಗಿದೆ.

ಜಿಯೋ ಸೆಕ್ಯೂರಿಟಿ ಆಪ್‌

ಜಿಯೋ ಸೆಕ್ಯೂರಿಟಿ ಆಪ್‌

ಜಿಯೋದ 'ಜಿಯೋಸೆಕ್ಯೂರಿಟಿ' ಆಪ್‌ ಸಹ ಸ್ಮಾರ್ಟ್‌ಫೋನ್‌ ಕಳೆದು ಹೋದಲ್ಲಿ ರಿಮೋಟ್ಲಿ ನಿಯಂತ್ರಣ ಹೊಂದಲು ಅವಕಾಶ ನೀಡುತ್ತಿದೆ. ಈ ಆಪ್‌ ಸಹಾಯದಿಂದ, ಬಳಕೆದಾರರು ಸ್ಮಾರ್ಟ್‌ಫೋನ್‌'ನಲ್ಲಿನ ಡೇಟಾ ಡಿಲೀಟ್ ಮಾಡಬಹುದು ಅಥವಾ ಸ್ಮಾರ್ಟ್‌ಫೋನ್‌ ಅನ್ನು ಲಾಕ್ ಮಾಡಬಹುದು.

ಯಾವ ಫೋನ್‌ಗಳಲ್ಲಿ ಫೀಚರ್ ಕಾರ್ಯನಿರ್ವಹಣೆ?

ಯಾವ ಫೋನ್‌ಗಳಲ್ಲಿ ಫೀಚರ್ ಕಾರ್ಯನಿರ್ವಹಣೆ?

ಅಂದಹಾಗೆ ಟೆಲಿಕಾಂ ವರದಿ ಮಾಡಿರುವ ಪ್ರಕಾರ, ಈ ಫೀಚರ್ ಕೇವಲ ಲೈಫ್ ಸ್ಮಾರ್ಟ್‌ಫೋನ್‌ಗಳಲ್ಲಿ ವರ್ಕ್‌ ಆಗುತ್ತದೆಯೋ ಅಥವಾ ಇತರೆ ಡಿವೈಸ್‌ಗಳಲ್ಲಿಯೂ ವರ್ಕ್‌ ಆಗುತ್ತದೆಯೋ ಎಂಬುದನ್ನು ಖಚಿತ ಪಡಿಸಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Reliance Jio's 'Locate My Device’ service to allow users locate devices with GPS help. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot