ರಿಲಾಯನ್ಸ್ ಹೈಸ್ಪೀಡ್ ಇಂಟರ್ನೆಟ್ ಪ್ರೊ3

Written By:

ರಿಲಾಯನ್ಸ್ ಕಮ್ಯೂನಿಕೇಶನ್ಸ್ ಗುರುವಾರ ತನ್ನ ಪ್ರೊ 3, ಹೆಚ್ಚು ವೇಗದ ಡೇಟಾ ನೆಟ್‌ವರ್ಕ್ ಅನ್ನು ಸ್ಥಾಪಿಸಿದೆ. ಯಾವುದೇ ವಿಳಂಬ ಬಫರಿಂಗ್ ಇಲ್ಲದೇ ಡೇಟಾ ಬಳಕೆದಾರರಿಗೆ ಇದು 14.7 ಎಮ್‌ಬಿಪಿಎಸ್ ವರೆಗೆ ಡೇಟಾ ಸ್ಟ್ರೀಮಿಂಗ್ ಅನ್ನ ಒದಗಿಸಲಿದೆ. ಇನ್ನು ಮೊದಲ ಹಂತದಲ್ಲಿ, ರಿಲಾಯನ್ಸ್ ಪ್ರೊ3 ಅನ್ನು ಚೆನ್ನೈ, ಬೆಂಗಳೂರು,ಹೈದ್ರಾಬಾದ್ ಮತ್ತು ಪುಣೆಯಲ್ಲಿ ಲಾಂಚ್ ಮಾಡಿದ್ದು ಉಳಿದ ನಗರಗಳಿಗೆ ತನ್ನ ಯೋಜನೆಯನ್ನು ವಿಸ್ತರಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.

ಇದನ್ನೂ ಓದಿ: ಮಾರುಕಟ್ಟೆಯತ್ತ ಮುಖ ಮಾಡಿರುವ ಮೈಕ್ರೋಮ್ಯಾಕ್ಸ್ 'ಯು'

ಈ ನಾಲ್ಕು ನಗರಗಳಲ್ಲಿ ನಮ್ಮ ಗ್ರಾಹಕರಿಗೆ ಪ್ರೊ3 ಸೌಲಭ್ಯವನ್ನು ಒದಗಿಸಲು ನಾವು ಹೆಚ್ಚು ಉತ್ಸುಕರಾಗಿದ್ದು ದೆಹಲಿ ಮತ್ತು ಮುಂಬೈನಲ್ಲೂ ಸ್ವಲ್ಪ ಸಮಯದಲ್ಲಿ ಈ ಯೋಜನೆಯನ್ನು ನಾವು ಲಾಂಚ್ ಮಾಡಲಿದ್ದೇವೆ ರಿಲಾಯನ್ಸ್ ಕಮ್ಯುನಿಕೇಶನ್‌ನ ಗ್ರಾಹಕ ವಿಭಾಗದ ಮುಖ್ಯಸ್ಥರಾದ ಗುರುದೀಪ್ ಸಿಂಗ್ ತಿಳಿಸಿದ್ದಾರೆ.

ರಿಲಾಯನ್ಸ್‌ನಿಂದ ಹೈಸ್ಪೀಡ್ ಇಂಟರ್ನೆಟ್ ಪ್ರೊ3

ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ಸ್ ಮತ್ತು ಲ್ಯಾಪ್‌ಟಾಪ್ ಬಳಕೆದಾರರಿಗೆ ಪ್ರೊ3 ಹೆಚ್ಚು ಉಪಯೋಗಕಾರಿಯಾಗಿದ್ದು ಹೆಚ್ಚು ಪ್ರಮಾಣದ ಡೇಟಾವನ್ನು ಹೈ ಸ್ಪೀಡ್‌ನಲ್ಲಿ ಬಯಸುವ ಬಳಕೆದಾರರಿಗೆ ಇದು ಹೇಳಿಮಾಡಿಸಿದ ಯೋಜನೆಯಾಗಿದೆ ಇದರ ಬೆಲೆ ರೂ 999 ಆಗಿದ್ದು "ಟ್ರು ಅನ್‌ಲಿಮಿಟೆಡ್ ಪ್ಲೇನ್‌ನೊಂದಿಗೆ ಈ ಆಫರ್ ಬಂದಿದೆ ಎಂದು ಕಂಪೆನಿ ತಿಳಿಸಿದೆ.

ಕಂಪೆನಿಯು ಡೇಟಾ ಯೋಜನೆಯನ್ನು 30 ಮಿಲಿಯನ್ ಗ್ರಾಹಕರಿಗೆ ಒದಗಿಸಿದ್ದು ಮತ್ತು ಪ್ರೊ3 ಸೇವೆಗಳನ್ನು ಒದಗಿಸುವ ಮೂಲಕ ಹೂ ಸ್ಪೀಡ್ ಡೇಟಾವನ್ನು ಒದಗಿಸುವ ಯೋಜನೆಗೆ ಚಾಲನೆ ನೀಡಿದೆ.

English summary
This article tells about Reliance Communications (RCom) on Thursday launched its Pro 3, ultra-fast data network, a company statement said here.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot