Subscribe to Gizbot

ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ ರಿಲಯನ್ಸ್ LYF ಸ್ಮಾರ್ಟ್‌ಫೋನ್: ಸ್ಯಾಮ್‌ಸಂಗ್‌ ಅನ್ನು ಹಿಂದಿಕ್ಕಿದೆ..!

Posted By: -

ಮಾರುಕಟ್ಟೆಯಲ್ಲಿ ಇಷ್ಟು ದಿನ ಸೈಲೆಂಟಾಗಿದ್ದ ರಿಲಯನ್ಸ್ ಮಾಲೀಕತ್ವದ LYF ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಹಂಗಾಮ ಶುರು ಮಾಡಿವೆ. 2018ರ ಜನವರಿಯಿಂದ ಇಲ್ಲಿಯವರೆಗೂ ಮಾರುಕಟ್ಟೆಯಲ್ಲಿ LYF ಸ್ಮಾರ್ಟ್ ಫೋನ್ ಶೇ.27ರಷ್ಟು ಪಾಲು ಪಡೆದುಕೊಂಡು ಟಾಪ್ ಕಂಪನಿಗಳನ್ನು ಹಿಂದಕ್ಕೆ ಹಾಕಿದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.

ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ ರಿಲಯನ್ಸ್ LYF ಸ್ಮಾರ್ಟ್‌ಫೋನ್:

LYF ಸ್ಮಾರ್ಟ್ ಫೋನ್ ಶೇ27ರಷ್ಟು ಮಾರುಕಟ್ಟೆಯ ಪಾಲು ಪಡೆದುಕೊಂಡರೆ, ಸ್ಯಾಮ್ ಸಂಗ್ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ಶೇ.12ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ. ಮೂರನೇ ಸ್ಥಾನದಲ್ಲಿ ಶೇ.8ರಷ್ಟು ಪಾಲು ಹೊಂದಿರುವ ಇಂಟೆಲ್ ಕಾಣಿಸಿಕೊಂಡಿದೆ.

2017ರ ಕೊನೆಯ ತ್ರೈ ಮಾಸಿಕದಿಂದ ಲೈಫ್ ಸ್ಮಾರ್ಟ್ ಫೋನ್ ಗಳ ಮಾರಾಟವೂ ಅಧಿಕವಾಗಿದ್ದು, ಇದು 2018ರ ಮೊದಲ ತ್ರೈ ಮಾಸಿಕದಲ್ಲಿಯೂ ಮುಂದುವರೆದಿದೆ ಎನ್ನಲಾಗಿದೆ. ಈಗಾಗಲೇ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಫೋನ್ ಗಳನ್ನು LYF ಸ್ಮಾರ್ಟ್ ಫೋನ್ ಬ್ರಾಂಡ್ ನೀಡುತ್ತಿರುವುದು ಇದಕ್ಕೆ ಕಾರಣ ಎನ್ನಬಹುದು.

ಓದಿರಿ: ಏರ್‌ಟೆಲ್‌-ಜಿಯೋಗೆ ಸೆಡ್ಡು: ಜೂನ್ 30ರವರೆಗೂ ಉಚಿತ ಸೇವೆ ನೀಡಿದ ವೊಡಾಫೋನ್..!

ಇದಲ್ಲದೇ ಕಳೆದ ವರ್ಷದಲ್ಲಿ ಹಿನ್ನಡೆ ಅನುಭವಿಸಿದ್ದ ಸ್ಯಾಮ್ ಸಂಗ್, ಈ ಬಾರಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಮುಂದಿನ ದಿನದಲ್ಲಿ ಸ್ಯಾಮ್ ಸಂಗ್ ಇನಷ್ಟು ಬಜೆಟ್ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುವ ಯೋಜನೆಯನ್ನು ರೂಪಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಮತ್ತೊಮ್ಮೆ ಟಾಪ್ ಸ್ಥಾನವನ್ನು ಅಲಂಕರಿಸುವ ಸಾಧ್ಯತೆ ಇದೆ.

ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ ರಿಲಯನ್ಸ್ LYF ಸ್ಮಾರ್ಟ್‌ಫೋನ್:

ದಿನ ಕಳೆದಂತೆ ಸ್ಮಾರ್ಟ್ ಫೋನ್ ಮಾರುಕಟ್ಟೆಯೂ ವಿಸ್ತಾರವಾಗುತ್ತಿರುವುದು ಇದಕ್ಕೆ ಕಾರಣವಾಗಿದೆ, ಅಲ್ಲದೇ ಜನರು ಕಡಿಮೆ ಬೆಲೆಗೆ ಹೆಚ್ಚಿನ ಆಯ್ಕೆಗಳನ್ನು ನೀರಿಕ್ಷಿಸುತ್ತಿರುವ ಕಾರಣದಿಂದ ಬಜೆಟ್ ಸ್ಮಾರ್ಟ್ ಫೋನ್ ಗಳ ಬೇಡಿಕೆಯೂ ಅಧಿಕವಾಗುತ್ತಾ ಸಾಗಿದೆ.

How to create two accounts in one Telegram app (KANNADA)
ಈ ವರ್ಷದ ಆರಂಭದಲ್ಲಿ ಚೀನಾ ಮೂಲದ ಸ್ಮಾರ್ಟ್ ಪೋನ್ ತಯಾರಕ ಕಂಪನಿಗಳ ಹಾವಳಿಯೂ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಅತ್ಯಧಿಕವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಸಧ್ಯ ಭಾರತೀಯ ಕಂಪನಿಗಳು ಮೈಲುಗೈ ಸಾಧಿಸಿವೆ ಎನ್ನಬಹುದಾಗಿದೆ.

English summary
Reliance LYF tops India's handset market in January: CMR. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot