Home
ಸುದ್ದಿಜಾಲ

ಹೊಸ ಹೋಮ್ ಥಿಯೇಟರ್ ಟಿವಿಗಳನ್ನು ಲಾಂಚ್‌ ಮಾಡಿದ ರಿಲಯನ್ಸ್!..ವಾವ್‌ ಎನಿಸುವ ಫೀಚರ್ಸ್‌!

ದೈತ್ಯ ಸಂಸ್ಥೆ ಎಂದೇ ಬಿಂಬಿತವಾಗಿರುವ ರಿಲಯನ್ಸ್ ರಿಟೇಲ್ ಲಿಮಿಟೆಡ್‌, ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಹೋಮ್ ಥಿಯೇಟರ್ ( Home Theatre TVs ) LED ಟಿವಿಗಳನ್ನು ಆಡಿಯೋ ಪಾರ್ಟ್ನರ್ ಹರ್ಮಾನ್ (HARMAN) ಜೊತೆ ಸೇರಿ ಲಾಂಚ್ ಮಾಡಿದ್ದು, ಮಾರುಕಟ್ಟೆಯ ಗಮನ ಸೆಳದಿದೆ. ಅಂದಹಾಗೆ ಬಿಪಿಎಲ್ ( BPL ) ಬ್ರ್ಯಾಂಡ್ ಅಡಿಯಲ್ಲಿ ಈ ನೂತನ ಟಿವಿಗಳನ್ನು ಪರಿಚಯ ಮಾಡಲಾಗಿದೆ.

ಹೌದು, ರಿಲಯನ್ಸ್‌ ಸಂಸ್ಥೆಯು ಹೋಮ್ ಥಿಯೇಟರ್ ( Home Theatre TVs ) LED ಟಿವಿಗಳನ್ನು ಆಡಿಯೋ ಪಾರ್ಟ್ನರ್ ಹರ್ಮಾನ್ (HARMAN) ಜೊತೆಗೂಡಿ ಪರಿಚಯಿಸಿದೆ. ಸ್ಪಷ್ಟ ಧ್ವನಿ, ಅತ್ಯುತ್ತಮ ದೃಶ್ಯದ ಗುಣಮಟ್ಟದ ಮೂಲಕ ಥಿಯೇಟರ್‌ನಲ್ಲಿ ಸಿನಿಮಾ ನೋಡುವ ರೀತಿಯ ಅನುಭವವನ್ನು ಈ ಹೊಸ ಟಿವಿಗಳು ಕಟ್ಟಿಕೊಡಲಿವೆ.

ಹೊಸ ಹೋಮ್ ಥಿಯೇಟರ್ ಟಿವಿಗಳನ್ನು ಲಾಂಚ್‌ ಮಾಡಿದ ರಿಲಯನ್ಸ್!..ವಾವ್‌ ಎನಿಸುವ ಫೀಚರ್

ಮಾರುಕಟ್ಟೆಯಲ್ಲಿ ಉತ್ತಮ - ಗುಣಮಟ್ಟದ, ಹೈ-ಡೆಫಿನಿಷನ್ ಡಿಜಿಟಲ್ ವಿಷಯದ ತ್ವರಿತ ಪ್ರಸರಣದೊಂದಿಗೆ, ಗ್ರಾಹಕರು ದೋಷರಹಿತ ಆಡಿಯೊ ಔಟ್ಪುಟ್ ಮತ್ತು ಇಮ್ಮರ್ಸಿವ್ ಪಿಕ್ಚರ್ ಗುಣಮಟ್ಟದ ಮೂಲಕ ಸಮಗ್ರ ಮನರಂಜನಾ ಅನುಭವವನ್ನು ಒದಗಿಸುವ ಟಿವಿಗಳನ್ನು ಸರ್ಚ್ ಮಾಡುತ್ತಿದ್ದಾರೆ.

ಈ ಅಂಶವನ್ನು ಗಮನದಲ್ಲಿ ಇರಿಸಿಕೊಂಡು, ರಿಲಯನ್ಸ್ ರೀಟೇಲ್ ತನ್ನ ಮಾಲೀಕತ್ವದ ಆಡಿಯೊ ಇಎಫ್ಎಕ್ಸ್ ( AudioEFX ) ಟ್ಯೂನಿಂಗ್ ಸಾಫ್ಟ್ವೇರ್ ಮೂಲಕ ಹೊಸ ಬಿಪಿಎಲ್ ಹೋಮ್ ಥಿಯೇಟರ್ ಟಿವಿ ಶ್ರೇಣಿಯನ್ನು ಪ್ರಾರಂಭ ಮಾಡಿದೆ.

ರಿಲಯನ್ಸ್ ರೀಟೇಲ್ ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತು ಕೈಗೆಟುಕುವ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಜೊತೆಗೆ LED ಟಿವಿ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ರೆಡಿಯಾಗಿದೆ. ಸ್ವಾವಲಂಬನೆ ಮತ್ತು ನಾವೀನ್ಯತೆಯತ್ತ ಭಾರತದ ಪ್ರಯಾಣವನ್ನು ಸಪೋರ್ಟ ಮಾಡುವ ಬದ್ಧತೆಗೆ ಅನುಗುಣವಾಗಿ, ಈ ನೂತನ ಹೋಮ್ ಥಿಯೇಟರ್ ಟಿವಿಗಳು ಹೆಮ್ಮೆಯಿಂದ 'ಮೇಡ್ ಇನ್ ಇಂಡಿಯಾ' ಆಗಿವೆ.

ಈ ಉಪಕ್ರಮದ ಮೂಲಕ, ರಿಲಯನ್ಸ್ ರೀಟೇಲ್ ಸ್ಥಳೀಯ ಉತ್ಪಾದನಾ ಪರಿಸರ ವ್ಯವಸ್ಥೆಯಲ್ಲಿ ಬೆಳವಣಿಗೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುತ್ತದೆ. ಅಲ್ಲದೇ ಜಾಗತಿಕ ಉತ್ಪಾದನಾ ಶಕ್ತಿ ಕೇಂದ್ರವಾಗಿ ಭಾರತದ ಹೊರಹೊಮ್ಮುವಿಕೆಗೆ ಅತ್ಯುತ್ತಮ ಕೊಡುಗೆ ನೀಡುತ್ತದೆ.

ಬಿಪಿಎಲ್ (BPL) ಹೋಮ್ ಥಿಯೇಟರ್, LED ಟಿವಿಗಳು ಈಗ ದೇಶಾದ್ಯಂತ ಎಲ್ಲಾ ಎಲೆಕ್ಟ್ರಾನಿಕ್ ಸ್ಟೋರ್‌ಗಳು, ದೊಡ್ಡ ಮಾದರಿಯ ಸ್ಟೋರ್‌ಗಳು, ಆಧುನಿಕ ರೀಟೇಲ್‌ ಸ್ಟೋರ್‌ಗಳಲ್ಲಿ ಲಭ್ಯ ಇದೆ. ಹಾಗೆಯೇ jiomart.com ಹಾಗೂ reliancedigital.in ನಂತಹ ಇ - ಕಾಮರ್ಸ್ ಮಾರುಕಟ್ಟೆಗಳಲ್ಲಿಯೂ ಸಹ ಖರೀದಿಗೆ ಲಭ್ಯ ಇದೆ. ತನ್ನ ವ್ಯಾಪಕ ಸೇವಾ ಟಚ್ ಪಾಯಿಂಟ್ ಗಳ ನೆಟ್‌ವರ್ಕ್ ಜೊತೆಗೆ, ರಿಲಯನ್ಸ್ ರೀಟೇಲ್ ತನ್ನ ಗ್ರಾಹಕರಿಗೆ ದಿನದ 24 ಗಂಟೆಯೂ ಲಭ್ಯವಿರುವ ಉತ್ಪನ್ನ ಬೆಂಬಲ ಮತ್ತು ಸೇವೆಯ ನಿರಂತರ ಭರವಸೆ ಅನ್ನು ನೀಡುತ್ತದೆ.

Best Mobiles in India

English summary
Reliance Retail Introduces New Home Theatre TVs, Bringing the Cinema to Home. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+