Home
ಸುದ್ದಿಜಾಲ

ರಿಲಯನ್ಸ್‌ ಸಂಸ್ಥೆಯಿಂದ ಹೊಸ ಹೆಜ್ಜೆ; ಮೊದಲ ಸ್ವದೇಶ್ ಸ್ಟೋರ್‌ಗೆ ಚಾಲನೆ!

ರಿಲಯನ್ಸ್ ರೀಟೇಲ್ ನ ಮೊದಲ ಸ್ವದೇಶ್ ಸ್ಟೋರ್ ಇಂದು (ನ. 8) ಹೈದರಾಬಾದ್ ನಲ್ಲಿ ಚಾಲನೆ ನೀಡಲಾಯಿತು. ತೆಲಂಗಾಣದ ಹೈದರಾಬಾದ್ ನಲ್ಲಿ ರಿಲಯನ್ಸ್ ಫೌಂಡೇಷನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಅವರು ‌ ಉದ್ಘಾಟಿಸಿದರು. ಇದರೊಂದಿಗೆ ಭಾರತೀಯ ಕಲೆ ಮತ್ತು ಕರಕುಶಲ ಕಲೆಗೆ ಅತ್ಯುತ್ತಮವಾದ ವೇದಿಕೆ ದೊರೆತಂತೆ ಆಯಿತು.

ಸಾಂಪ್ರದಾಯಿಕ ಕಲಾವಿದರು ಮತ್ತು ಕುಶಲಕರ್ಮಿಗಳನ್ನು ಉತ್ತೇಜನ ನೀಡುವುದಕ್ಕೆ ರಿಲಯನ್ಸ್ ಫೌಂಡೇಷನ್ ದೀರ್ಘಕಾಲದಿಂದ ಬದ್ಧವಾಗಿದೆ. ಆ ಕಲಾವಿದರ ಪ್ರತಿಭೆ ಮತ್ತು ಕೌಶಲವನ್ನು ಅಪಾರ ಸಂಖ್ಯೆಯ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ವೇದಿಕೆ ಒದಗಿಸಬೇಕು ಎಂಬ ನೀತಾ ಅಂಬಾನಿ ಅವರ ದೃಷ್ಟಿಕೋನದಿಂದ ಹುಟ್ಟಿಕೊಂಡಿದ್ದೇ ಈ "ಸ್ವದೇಶ್". ಇದು ಭಾರತದ ಪ್ರಾಚೀನ ಕಲೆ ಮತ್ತು ಕರಕುಶಲತೆಯನ್ನು ಜಾಗತಿಕವಾಗಿ ಗ್ರಹಿಸುವ ರೀತಿಯಲ್ಲಿ ತಲುಪಿಸುವ ಗುರಿ ಹೊಂದಿದೆ.

ರಿಲಯನ್ಸ್‌ ಸಂಸ್ಥೆಯಿಂದ ಹೊಸ ಹೆಜ್ಜೆ; ಮೊದಲ ಸ್ವದೇಶ್ ಸ್ಟೋರ್‌ಗೆ ಚಾಲನೆ!

ರಿಲಯನ್ಸ್ ರೀಟೇಲ್‌ನ ಸ್ವದೇಶ್ ಸ್ಟೋರ್‌ಗಳು ಭಾರತವನ್ನು ತನ್ನ ಶತಮಾನಗಳಷ್ಟು ಹಳೆಯ ಕಲಾ ಪ್ರಕಾರಗಳು ಮತ್ತು ಸೃಜನಾತ್ಮಕ ಅಭಿವ್ಯಕ್ತಿಗಳ ಮೂಲಕ ಜಗತ್ತಿನ ಮುಂದಿಡುತ್ತದೆ. ಇದರ ಜತೆಗೆ ಕುಶಲಕರ್ಮಿಗಳು ಮತ್ತು ಕರಕುಶಲ ವಸ್ತುಗಳನ್ನು ತಯಾರು ಮಾಡುವರಿಗೆ ತಮ್ಮ ಕೆಲಸವು ವೇಗವಾಗಿ ಬದಲಾಗುತ್ತಿರುವ ಈ ಜಗತ್ತಿಗೆ ಅಮೂಲ್ಯವಾದದ್ದು ಎಂದು ಖಚಿತಪಡಿಸಿಕೊಳ್ಳಲು ಮುಕ್ತ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ತೆರೆದಿಡುತ್ತದೆ.

ನವೀನ ಮತ್ತು ಸುಸ್ಥಿರ ಪರಿಹಾರಗಳ ಮೂಲಕ ಭಾರತದ ಅಭಿವೃದ್ಧಿ ಸವಾಲುಗಳನ್ನು ಎದುರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ದಾನ ದತ್ತಿ ಕಾರ್ಯಗಳ ಅಂಗವಾದ ರಿಲಯನ್ಸ್ ಫೌಂಡೇಷನ್‌ನ ಉದ್ದೇಶಕ್ಕೆ ಇದು ಅನುಗುಣವಾಗಿದೆ.

ರಿಲಯನ್ಸ್‌ ಸಂಸ್ಥೆಯಿಂದ ಹೊಸ ಹೆಜ್ಜೆ; ಮೊದಲ ಸ್ವದೇಶ್ ಸ್ಟೋರ್‌ಗೆ ಚಾಲನೆ!

ಹೈದರಾಬಾದ್‌ನಲ್ಲಿ ಮೊದಲ ಸ್ವದೇಶ್ ಸ್ಟೋರ್‌ನ ಪ್ರಾರಂಭದ ವೇಳೆ ಮಾತನಾಡಿದ ನೀತಾ ಅಂಬಾನಿ, 'ಭಾರತದ ಸಾಂಪ್ರದಾಯಿಕ ಕಲೆ ಮತ್ತು ಕುಶಲಕರ್ಮಿಗಳಿಗೆ ಸ್ವದೇಶ್ ಒಂದು ಗೌರವವಾಗಿದೆ. ಇದು 'ಮೇಕ್ ಇನ್ ಇಂಡಿಯಾ'ದ ಉದ್ದೇಶವನ್ನು ಎತ್ತಿ ತೋರಿಸುತ್ತದೆ ಮತ್ತು ನಮ್ಮ ನುರಿತ ಕುಶಲಕರ್ಮಿಗಳು ಹಾಗೂ ಕರಕುಶಲ ಕಲಾವಿದರಿಗೆ ಗೌರವ ಮತ್ತು ಉತ್ತೇಜನ ನೀಡುತ್ತದೆ. ಅವರು ನಿಜವಾಗಿಯೂ ನಮ್ಮ ದೇಶದ ಹೆಮ್ಮೆ. ಮತ್ತು ಸ್ವದೇಶ್ ಮೂಲಕ ಅವರಿಗೆ ಅರ್ಹವಾದ ಜಾಗತಿಕ ಮನ್ನಣೆಯನ್ನು ನೀಡಲು ನಾವು ಬಯಸುತ್ತೇವೆ. ಅದಕ್ಕಾಗಿಯೇ ನಾವು ಸ್ವದೇಶ್ ಅನ್ನು ಭಾರತದಾದ್ಯಂತ ಮಾತ್ರವಲ್ಲದೆ, ಅಮೆರಿಕ ಮತ್ತು ಯುರೋಪ್ ನಲ್ಲಿ ಹೀಗೆ ಅಂತಾರಾಷ್ಟ್ರೀಯವಾಗಿಯೂ ವಿಸ್ತರಿಸಲು ಉತ್ಸುಕರಾಗಿದ್ದೇವೆ ಎಂದರು.

ರಿಲಯನ್ಸ್ ಫೌಂಡೇಷನ್‌ನ ನಿರಂತರವಾದ ಪ್ರಯತ್ನಗಳಿಗೆ ಸಾಕ್ಷಿಯಾಗಿ, ಮುಂಬೈನಲ್ಲಿರುವ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ (ಎನ್‌ಎಂಎಸಿಸಿ) ಇತ್ತೀಚೆಗೆ ಪ್ರಾರಂಭಿಸಲಾದ ಕಲೆ ಮತ್ತು ಸಂಸ್ಕೃತಿಯ ಸ್ವದೇಶ್ ಅನುಭವ ವಲಯದಲ್ಲಿ ಭಾರತೀಯ ಕುಶಲಕರ್ಮಿಗಳು ಇತ್ತೀಚೆಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಅತಿಥಿಗಳಿಂದ ಅಗಾಧ ಮೆಚ್ಚುಗೆಯನ್ನು ಪಡೆದರು. ಸಂದರ್ಶಕರು ಇಲ್ಲಿ ಭೇಟಿ ನೀಡಿ, ಕುಶಲಕರ್ಮಿಗಳೊಂದಿಗೆ ವೀಕ್ಷಿಸಲು ಮತ್ತು ಸಂವಾದಿಸಲು ಮಾತ್ರವಲ್ಲದೆ ಅವರು ತಯಾರಿಸಿದ್ದನ್ನು ಖರೀದಿಸಬಹುದು.

ಆರಂಭದಲ್ಲಿ ಮೂರು ದಿನಗಳಿಗೆ ಈ ಪ್ರದರ್ಶನ ನಿಗದಿ ಆಗಿತ್ತು. ಆ ನಂತರ ಸಾರ್ವಜನಿಕರ ಬೇಡಿಕೆ ಅನುಸಾರ ಮೇ ತಿಂಗಳಲ್ಲಿ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಸ್ವದೇಶ್ ಪ್ರದರ್ಶನವನ್ನು ವಿಸ್ತರಿಸಲಾಯಿತು. ಪ್ರತಿ ನಿತ್ಯ ಉತ್ತಮ ಪ್ರಮಾಣದ ಆರ್ಡರ್ ಗಳು ಬಂದವು ಮತ್ತು ‌‌‌ಅದರ ಸಂಪೂರ್ಣ ಆದಾಯವು ಕುಶಲಕರ್ಮಿಗಳಿಗೆ ಸೇರಿತು. ಜೊತೆಗೆ, ಸ್ವದೇಶ್ ಉಪಕ್ರಮದ ಭಾಗವಾಗಿ, ತಳಮಟ್ಟದಲ್ಲಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರಾದೇಶಿಕ ಕುಶಲಕರ್ಮಿ ಸಮುದಾಯಗಳು ಮತ್ತು ಕಲಾ ಪ್ರಕಾರಗಳನ್ನು ಉಳಿಸಿಕೊಳ್ಳುವಲ್ಲಿ 18 ರಿಲಯನ್ಸ್ ಫೌಂಡೇಷನ್ ಕುಶಲಕರ್ಮಿಗಳ ಕೌಶಲ ವರ್ಧನೆ (RAISE) ಕೇಂದ್ರಗಳು ಕೊಡುಗೆ ನೀಡಲು ಭಾರತದಾದ್ಯಂತ ಸ್ಥಾಪಿಸುವ ಪ್ರಕ್ರಿಯೆಯಲ್ಲಿವೆ. ಇದು 600ಕ್ಕೂ ಹೆಚ್ಚು ಕರಕುಶಲ ರೂಪಗಳ ಸೋರ್ಸಿಂಗ್ ಅನ್ನು ಸಕ್ರಿಯಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹೈದರಾಬಾದ್ ನ ಜುಬಿಲಿ ಹಿಲ್ಸ್‌ನಲ್ಲಿರುವ ಮೊದಲ ಸ್ವದೇಶ್ ಅಂಗಡಿಯು 20,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಇಲ್ಲಿಗೆ ಭೇಟಿ ನೀಡುವವರು ಅಂಗಡಿಯೊಳಗಿನ ವಿವಿಧ ವಲಯಗಳಲ್ಲಿ ಆಹಾರ ಉತ್ಪನ್ನಗಳು ಮತ್ತು ಬಟ್ಟೆಗಳಿಂದ ಹಿಡಿದು ಜವಳಿ ಮತ್ತು ಕರಕುಶಲಗಳವರೆಗಿನ ಉತ್ಪನ್ನಗಳ ಸಮಗ್ರ ಪೋರ್ಟ್‌ಫೋಲಿಯೊವನ್ನು ನೋಡುವುದಕ್ಕೆ ಸಾಧ್ಯವಾಗುತ್ತದೆ ಮತ್ತು ಭಾರತದ ಸಾಂಪ್ರದಾಯಿಕ ಸೃಜನಶೀಲ ಅಭಿವ್ಯಕ್ತಿಗಳನ್ನು ಸವಿಯಲು ಸಾಧ್ಯವಾಗುತ್ತದೆ. "ಸ್ಕ್ಯಾನ್ ಮತ್ತು ನೋ" ತಂತ್ರಜ್ಞಾನ ವೈಶಿಷ್ಟ್ಯದ ಮೂಲಕ ಪ್ರತಿ ಉತ್ಪನ್ನದ ಹಿಂದಿನ ಕಥೆ ಮತ್ತು ಅದರ ತಯಾರಕರನ್ನು ತಿಳಿಯಬಹುದು.

Best Mobiles in India

English summary
Reliance Retail: Swadesh unveils a new space for Indian art and craft. details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+