Home
ಸುದ್ದಿಜಾಲ

ರಿಲಯನ್ಸ್ ಇಂಡಸ್ಟ್ರೀಸ್ ತೆಕ್ಕೆಗೆ 'ಮೆಟ್ರೋ ಇಂಡಿಯಾ'!..2,850ರೂ. ಕೋಟಿಗೆ ಖರೀದಿ!

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (RRVL) ಗುರುವಾರದಂದು ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ('ಮೆಟ್ರೋ ಇಂಡಿಯಾ') ಶೇ 100ರಷ್ಟು ಈಕ್ವಿಟಿ ಪಾಲನ್ನು ಪಡೆಯಲು ನಿರ್ಣಾಯಕ ಒಪ್ಪಂದಗಳಿಗೆ ಸಹಿ ಹಾಕಿದೆ. ಮುಕ್ತಾಯದ ಹೊಂದಾಣಿಕೆಗಳಿಗೆ ಒಳಪಟ್ಟು 2,850ರೂ. ಕೋಟಿಗಳ ಒಟ್ಟು ನಗದು ಮೊತ್ತವನ್ನು ಪಾವತಿ ಮಾಡಲಿದೆ.

ಕ್ಯಾಶ್ ಅಂಡ್ ಕ್ಯಾರಿ

ಮೆಟ್ರೋ ಇಂಡಿಯಾ 2003ರಲ್ಲಿ ಭಾರತದಲ್ಲಿ ಕ್ಯಾಶ್ ಅಂಡ್ ಕ್ಯಾರಿ (ನಗದು ಪಾವತಿಸಿ ಸರಕು ಒಯ್ಯುವ) ವ್ಯವಹಾರ ಸ್ವರೂಪವನ್ನು ಪರಿಚಯಿಸುವ ಮೊದಲ ಕಂಪನಿಯಾಗಿ ಭಾರತದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಸದ್ಯಕ್ಕೆ 21 ನಗರಗಳಲ್ಲಿ ಸುಮಾರು 3,500 ಉದ್ಯೋಗಿಗಳೊಂದಿಗೆ 31 ದೊಡ್ಡ ಸ್ವರೂಪದ ಅಂಗಡಿಗಳನ್ನು ನಿರ್ವಹಿಸುತ್ತದೆ. ಬಹು-ಚಾನೆಲ್ ಬಿಜಿನೆಸ್ ಟು ಬಿಜಿನೆಸ್ (B2B) ಕ್ಯಾಶ್ ಅಂಡ್ ಕ್ಯಾರಿ ಸಗಟು ಮಾರಾಟಗಾರ ಆದ ಮೆಟ್ರೋ ಭಾರತದಲ್ಲಿ 3 ಮಿಲಿಯನ್ ಗ್ರಾಹಕರನ್ನು ತಲುಪಿದೆ. ಅದರಲ್ಲಿ 1 ಮಿಲಿಯನ್ ಜನರು ಅದರ ಸ್ಟೋರ್ ನೆಟ್‌ವರ್ಕ್ ಮತ್ತು eB2B ಅಪ್ಲಿಕೇಷನ್ ಮೂಲಕ ಆಗಾಗ ಖರೀದಿಸುತ್ತಿದ್ದಾರೆ.

ಸಣ್ಣ ವ್ಯಾಪಾರಗಳು

ಮಳಿಗೆಗಳು ಮತ್ತು ಇತರ ಸಣ್ಣ ವ್ಯಾಪಾರಗಳು ಹಾಗೂ ವ್ಯಾಪಾರಿಗಳಿಗೆ ವಿಶ್ವಾಸಾರ್ಹ ಪಾಲುದಾರನಾಗಿ ಮೆಟ್ರೋ ಇಂಡಿಯಾ ತನ್ನನ್ನು ಗುರುತಿಸಿಕೊಂಡಿದೆ. 2021/22 ಹಣಕಾಸು ವರ್ಷದಲ್ಲಿ (ಸೆಪ್ಟೆಂಬರ್ 2022ಕ್ಕೆ ಕೊನೆಗೊಂಡ ಹಣಕಾಸು ವರ್ಷ), ಮೆಟ್ರೋ ಇಂಡಿಯಾ ರೂ. 7700 ಕೋಟಿ (€ 926 ಮಿಲಿಯನ್) ಮಾರಾಟವನ್ನು ಮಾಡಿದೆ, ಇದು ಭಾರತಕ್ಕೆ ಮಾರುಕಟ್ಟೆ ಪ್ರವೇಶಿಸಿದಾಗಿನಿಂದ ಅದರ ಅತ್ಯುತ್ತಮ ಮಾರಾಟವಾಗಿದೆ.

ರಿಲಯನ್ಸ್

ಇದೀಗ ಈ ಸ್ವಾಧೀನದ ಮೂಲಕ ರಿಲಯನ್ಸ್ ರೀಟೇಲ್ ಪ್ರಮುಖ ನಗರಗಳಾದ್ಯಂತ ಪ್ರಮುಖ ಸ್ಥಳಗಳಲ್ಲಿ ನೆಲೆಗೊಂಡಿರುವ ಮೆಟ್ರೋ ಇಂಡಿಯಾ ಸ್ಟೋರ್‌ಗಳ ವ್ಯಾಪಕ ನೆಟ್‌ವರ್ಕ್‌ಗೆ ಪ್ರವೇಶ ಪಡೆಯುತ್ತದೆ. ನೋಂದಾಯಿತ ಮಳಿಗೆಗಳು ಮತ್ತು ಇತರ ಸಾಂಸ್ಥಿಕ ಗ್ರಾಹಕರು, ಬಲವಾದ ಪೂರೈಕೆದಾರ ನೆಟ್‌ವರ್ಕ್ ಮತ್ತು ಭಾರತದಲ್ಲಿ ಮೆಟ್ರೋ ಜಾರಿಗೊಳಿಸಿದ ಕೆಲವು ಜಾಗತಿಕ ಉತ್ತಮ ಪದ್ಧತಿಗಳಾಗಿವೆ.

ತಂತ್ರಜ್ಞಾನ

ಈ ಸ್ವಾಧೀನವು ರಿಲಯನ್ಸ್ ರೀಟೇಲ್‌ನ ಭೌತಿಕ ಅಂಗಡಿಯ ಹೆಜ್ಜೆಗುರುತು ಮತ್ತು ಪೂರೈಕೆ ಸರಪಳಿ ನೆಟ್‌ವರ್ಕ್‌ಗಳು, ತಂತ್ರಜ್ಞಾನ ಪ್ಲಾಟ್‌ಫಾರ್ಮ್‌ಗಳು ಮತ್ತು ಸೋರ್ಸಿಂಗ್ ಸಾಮರ್ಥ್ಯಗಳಾದ್ಯಂತ ಒಗ್ಗೂಡಿಸುವಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಉತ್ತಮ ಸೇವೆ ನೀಡುವ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುತ್ತದೆ. ರೀಟೇಲ್ ಪರಿಸರ ವ್ಯವಸ್ಥೆಯಲ್ಲಿನ ಎಲ್ಲ ಷೇರುದಾರರಿಗೆ ಹೆಚ್ಚಿನ ಮೌಲ್ಯ ಸೃಷ್ಟಿಸುತ್ತದೆ.

ರಿಲಯನ್ಸ್

ಈ ಹೂಡಿಕೆ ಬಗ್ಗೆ ಮಾತನಾಡಿರುವ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್‌ನ ನಿರ್ದೇಶಕಿ ಇಶಾ ಅಂಬಾನಿ, 'ಮೆಟ್ರೋ ಇಂಡಿಯಾದ ಸ್ವಾಧೀನವು ನಮ್ಮ ಹೊಸ ವಾಣಿಜ್ಯ ತಂತ್ರದೊಂದಿಗೆ ಹೊಂದಿಕೆ ಆಗುತ್ತದೆ. ಇದು ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಗಳೊಂದಿಗೆ ಸಕ್ರಿಯ ಸಹಯೋಗದ ಮೂಲಕ ಹಂಚಿಕೆಯ ಸಮೃದ್ಧಿಯ ವಿಶಿಷ್ಟ ಮಾದರಿಯನ್ನು ನಿರ್ಮಿಸುತ್ತದೆ. ಮೆಟ್ರೋ ಇಂಡಿಯಾ ಭಾರತೀಯ ಬಿಜಿನೆಸ್ ಟು ಬಿಜಿನೆಸ್ (B2B) ಮಾರುಕಟ್ಟೆಯಲ್ಲಿ ಪ್ರವರ್ತಕ ಮತ್ತು ಪ್ರಮುಖ ಕಂಪನಿ. ಇದರ ಜತೆಗೆ ಬಲವಾದ ಗ್ರಾಹಕ ಅನುಭವವನ್ನು ನೀಡುವ ಬಹು-ಚಾನೆಲ್ ಪ್ಲಾಟ್‌ಫಾರ್ಮ್ ಅನ್ನು ನಿರ್ಮಿಸಿದೆ. ಮೆಟ್ರೋ ಇಂಡಿಯಾದ ಆರೋಗ್ಯಕರ ಸ್ವತ್ತುಗಳು ಭಾರತೀಯ ವ್ಯಾಪಾರಿ/ಮಳಿಗೆಗಳ ಪರಿಸರ ವ್ಯವಸ್ಥೆಯ ಬಗ್ಗೆ ನಮ್ಮ ಆಳವಾದ ತಿಳಿವಳಿಕೆಯೊಂದಿಗೆ ಸೇರಿ ಭಾರತದಲ್ಲಿನ ಸಣ್ಣ ವ್ಯವಹಾರಗಳಿಗೆ ವಿಭಿನ್ನ ಮೌಲ್ಯದ ಪ್ರತಿಪಾದನೆಯನ್ನು ನೀಡಲು ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ,' ಎಂದಿದ್ದಾರೆ.

ಉದ್ಯಮಗಳು

ಮೆಟ್ರೋ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ರಿಲಯನ್ಸ್ ರೀಟೇಲ್ ಭಾರತೀಯ ಸಮಾಜದ ಸಂಪೂರ್ಣ ಶ್ರೇಣಿಯನ್ನು, ಅಂದರೆ ಮನೆಗಳು, ಮಳಿಗೆಗಳು ಮತ್ತು ವ್ಯಾಪಾರಿಗಳು, HoReCa (ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕ್ಯಾಟರಿಂಗ್) ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಸಂಸ್ಥೆಗಳಿಗೆ ಸೇವೆ ಸಲ್ಲಿಸಲು ದೇಶಾದ್ಯಂತ ತಲುಪಲು ಮುಂದುವರಿಯುತ್ತದೆ.

ವಹಿವಾಟು

ಅಂದ ಹಾಗೆ ಈ ವಹಿವಾಟು ಕೆಲವು ನಿಯಂತ್ರಕ ಮತ್ತು ಇತರ ಸಾಂಪ್ರದಾಯಿಕ ಮುಕ್ತಾಯದ ಷರತ್ತುಗಳಿಗೆ ಒಳಪಟ್ಟಿರುತ್ತದೆ ಹಾಗೂ 2023 ಮಾರ್ಚ್ ತಿಂಗಳಿನೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

Best Mobiles in India

English summary
Reliance Retail Ventures Limited (‘RRVL’) acquires METRO Cash & Carry India Private Limited (METRO India’).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+