Subscribe to Gizbot

ಜಿಯೋಯಿಂದ ಮಾರ್ಚ್‌ಗೆ "ಜಿಯೋ ಕ್ಯಾಬ್" ಸೇವೆ!. ಕಿ.ಮಿಗೆ ಕೇವಲ 5 ರೂ!!

Written By:

ಮುಖೇಶ್ ಅಂಬಾನಿ ಒಂದೇ ಸಾರಿ ದೇಶದಲ್ಲಿನ ಎಲ್ಲಾ ಬ್ಯಸಿನೆಸ್‌ಗಳನ್ನು ಕೈ ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ.! ಹೌದು ಜಿಯೋ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ದೂಳೆಬ್ಬಿಸಿದ ಅಂಬಾನಿ ಏಪ್ರಿಲ್‌ನಲ್ಲಿ ಡಿಟಿಹೆಚ್‌ ಸೇವೆಯನ್ನು ನೀಡಲು ಮುಂದಾಗಿದ್ದರು.! ಇದೀಗ ಬಂದಿರುವ ಮಾಹಿತಿಯಂತೆ ಅಂಬಾನಿ ಜಿಯೋ ಕ್ಯಾಬ್ ಸೇವೆಯನ್ನು ಹೊರ ತರಲು ನಿರ್ಧರಿದ್ದಾರೆ.!!

ದೇಶದಾಧ್ಯಂತ ಕ್ಯಾಬ್‌ ಸೇವೆಯನ್ನು ನೀಡುತ್ತಿರುವ ಓಲಾ ಮತ್ತು ಉಬರ್‌ಕಂಪೆನಿಗಳಿಗೆ ಎದುರಾಗಿ ಕ್ಯಾಬ್ ಸೇವೆ ನೀಡಲು ಜಿಯೋ ಚಿಂತಿಸಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಜಿಯೋ ಕ್ಯಾಬ್‌ ಡ್ರೈವರ್‌ಗಳನ್ನು ಸಂಪರ್ಕಿಸಿ ಮಾತನಾಡಿದ್ದು ಮಾರ್ಚ್ ವೇಳೆಗೆ ಮುಖೇಶ ಅಂಬಾನಿ "ಜಿಯೋ ಕ್ಯಾಬ್" ಸೇವೆಯನ್ನು ಹೊರತರಲಿದೆ ಎನ್ನಲಾಗಿದೆ.

ಜಿಯೋಯಿಂದ ಮಾರ್ಚ್‌ಗೆ

ಮೊಬೈಲ್‌ನಲ್ಲಿಯೇ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ? ಫುಲ್ ಡೀಟೆಲ್ಸ್!!

ಬೆಂಗಳೂರು, ದೆಹಲಿ, ಮುಂಬೈ, ಕೊಲ್ಕತ್ತಾ, ಮತ್ತು ಹೈದರಾಬಾದ್ ಸೇರಿದಂತೆ ದೇಶದ 10 ನಗರಗಳಲ್ಲಿ ಜಿಯೋ ಕ್ಯಾಬ್ ಸೇವೆ ತೆರೆಯಲಿದ್ದು, ಕೊಲ್ಕತ್ತಾದಲ್ಲಿ ಈಗಾಗಲೇ 2000 ಟಯೋಟಾ ಇಟಿಯೋಸ್ ಕಾರ್‌ಗಳನ್ನು ಜಿಯೋ ಬುಕ್ ಮಾಡಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಬೆಂಗಳೂರಿನಲ್ಲಿಯೂ ಸಹ ಜಿಯೋ ಕ್ಯಾಬ್‌ ಡ್ರೈವರ್‌ಗಳನ್ನು ಮಾತನಾಡಿಸಿದ್ದು, ಈ ಬಗ್ಗೆ ಟ್ಯಾಕ್ಸಿ ಚಾಲಕ ಸುನೀಲ್ ಎಂಬುವವರು ಮಾಹಿತಿ ನೀಡಿದ್ದಾರೆ.

ಜಿಯೋಯಿಂದ ಮಾರ್ಚ್‌ಗೆ

ಇನ್ನು ಜಿಯೋ ಕ್ಯಾಬ್‌ ಸೇವೆಯ ದರಪಟ್ಟಿಯೂ ಬಿಡುಗಡೆಯಾಗಿದ್ದು, ಡಿಸೆಲ್ ಕಾರಿನಲ್ಲಿ ಪ್ರತಿ ಕಿಲೋಮೀಟರ್‌ಗೆ ಕೇವಲ 5 ರೂಪಾಯಿಗಳು ಚಾರ್ಜ್ ಮಾಡಲಾಗುತ್ತದೆ ಎನ್ನಲಾಗಿದೆ. ಕಡಿಮೆ ಮಿತಿ ದರವನ್ನು ಕೇವಲ 50 ರೂಪಾಯಿಗಳಿಗೆ ನಿಗಧಿ ಮಾಡಿದ್ದು, ಉಬರ್ ಮತ್ತು ಒಲಾಗಳಿಗಿಂತ ಬಹುತೇಕ 50% ಕಡಿಮೆ ದರದಲ್ಲಿ ಜಿಯೋ ಕ್ಯಾಬ್‌ಗಳು ಭಾರತದ ರೋಡ್‌ಗಳಿಗೆ ಇಳಿಯಲಿವೆ.!!

Read more about:
English summary
Reliance appears to be entering into private taxi service business to compete with Uber and Ola using CNG-fitted cars to keep its costs down. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot