ನಿಮ್ಮ ಮದುವೆಗೆ ದುಬಾರಿ ಡಿಸೈನರ್ ಬಟ್ಟೆಗಳನ್ನು ಬಾಡಿಗೆಗೆ ನೀಡಲಿದೆ ಈ ವೆಬ್‌ಸೈಟ್..!
ಇಂದಿನ ದಿನದಲ್ಲಿ ಆನ್‌ಲೈನ್ ನಲ್ಲಿ ಇಂತಹ ಸೇವೆ ಲಭ್ಯವಿಲ್ಲ ಎನ್ನಲು ಸಾಧ್ಯವಿಲ್ಲ. ಇದೇ ಮಾದರಿಯಲ್ಲಿ ದೇಶದಲ್ಲಿ ಹೊಸದೊಂದು ವೆಬ್‌ಸೈಟ್ ಶುರುವಾಗಿದ್ದು, ದುಬಾರಿ ಬೆಲೆಯ ಡಿಸೈನರ್ ಡ್ರೆಸ್‌ಗಳನ್ನು ಆನ್‌ಲೈನಿನಲ್ಲಿ ಬಾಡಿಗೆ ನೀಡಲಿದೆ. ಅಲ್ಲದೇ ಆ ಬಟ್ಟೆಗಳನ್ನು ನಿಮ್ಮ ಅಳತೆಗೆ ಸರಿ ಹೋಗುವ ಮಾದರಿಯಲ್ಲಿ ನೀಡಲಿದೆ.

ಓದಿರಿ: ಜಿಯೋಗೆ ಮೂಗುದಾರ ಹಾಕುವರಿಲ್ಲ: ವೊಡಾಫೋನ್‌ಗೂ ಶಾಕ್ ಕೊಟ್ಟ BSNL..!!
ಮದುವೆ ಮತ್ತು ಶುಭಸಮಾರಂಭಗಳಿಗೆ ದುಬಾರಿ ಬೆಲೆಯನ್ನು ನೀಡಿ ಬಟ್ಟೆಯನ್ನು ಕೊಳ್ಳಲು ಸಾಧ್ಯವಾಗದಿರುವ ಸಂದರ್ಭಗಳಲ್ಲಿ ಈ ಸೇವೆಯ ಲಾಭ ಪಡೆಯಬಹುದಾಗಿದೆ. ಫ್ಲೋಬ್ರೋಬ್. ಕಾಮ್ ಎನ್ನುವ ವೆಬ್‌ಸೈಟ್ ದೇಶದ ಪ್ರಮುಖ ನಗರಗಳಲ್ಲಿ ತನ್ನ ಸೇವೆಯನ್ನು ಆರಂಭಿಸಿದ್ದು, ಕಡಿಮೆ ಬೆಲೆಗೆ ಬಟ್ಟೆಗಳನ್ನು ಬಾಡಿಗೆಗೆ ನೀಡಲಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿಯೂ ಲಭ್ಯ:
ಪಾರ್ಟಿಗಳಿಗೆ, ಫೋಟೋ ಶೂಟ್‌ಗಳಿಗೆ ದುಬಾರಿ ಬೆಲೆಯ ಬಟ್ಟೆಗಳ ಅಗತ್ಯವಿರುತ್ತದೆ. ಆದರೆ ಅದನ್ನು ಖರೀದಿಸುವ ಸಾಧ್ಯತೆ ಕಡಿಮೆ ಒಂದು ದಿನ ಮಾತ್ರವೇ ತೊಡುವುದಕ್ಕೆ ಹೆಚ್ಚಿನ ಹಣವನ್ನು ವ್ಯರ್ಥಮಾಡುವುದು ಸರಿಯಲ್ಲ. ಇದಕ್ಕಾಗಿ ಫ್ಲೋಬ್ರೋಬ್. ಕಾಮ್ ಮೂಲಕ ಡಿಸೈನರಿ ಬಟ್ಟೆಗಳನ್ನು ರೆಂಟ್‌ಗೆ ಪಡೆಯಬಹುದು.

ಫಿಟಿಂಗ್ ಸಹ ಲಭ್ಯ:
ಅಲ್ಲದೇ ನೀವು ಬಯಸುವ ಬಟ್ಟೆಗಳನ್ನು ನಿಮ್ಮ ಅಳತೆಗೆ ಸರಿಹೊಂದುವಂತೆ ಮಾಡಿಕೊಡುವ ವ್ಯವಸ್ಥೆಯೂ ಇಲ್ಲಿದೆ. ನಿಮ್ಮ ಅಳತೆಯನ್ನು ನೀಡಿದರೆ ಅದೇ ಅಳತೆಯ ಬಟ್ಟೆಗಳು ನಿಮ್ಮದಾಗಲಿದೆ. ಬಾಡಿಗೆಗೆ ದೊರೆಯಲಿದೆ.

ಪುರುಷ-ಮಹಿಳೆರಿಗೆ ಲಭ್ಯ:
ಇಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಬ್ಬರಿಗೂ ಸಹ ಸರಿ ಹೊಂದುವ ಡಿಸೈನರ್ ಬಟ್ಟೆಗಳು ದೊರೆಯಲಿದ್ದು, ಇದು ನಿಮ್ಮ ಅಂದವನ್ನು ಹೆಚ್ಚಿಸಲಿದ್ದು, ಬೆಲೆಗಳು ಸಹ ಅಷ್ಟೆನು ಹೆಚ್ಚಾಗಿಲ್ಲ ಎನ್ನಲಾಗಿದೆ. ಹೆಚ್ಚಿನ ಆಯ್ಕೆಗಳು ಇಲ್ಲಿ ಬಳಕೆದಾರರಿಗೆ ದೊರೆಯಲಿದೆ.


Click it and Unblock the Notifications