ಜಿಯೋಗೆ ಮೂಗುದಾರ ಹಾಕುವರಿಲ್ಲ: ವೊಡಾಫೋನ್‌ಗೂ ಶಾಕ್ ಕೊಟ್ಟ BSNL..!!

|

ಟೆಲಿಕಾಂ ನಿಯಂತ್ರಣ ಮಂಡಲಿ ಟ್ರಾಯ್ ಸೆಪ್ಟೆಂಬರ್ ತಿಂಗಳ ವರದಿಯನ್ನು ಪ್ರಕಟಿಸಿದ್ದು, ಈ ವರದಿ ಅನುಸಾರ ಜಿಯೋ ಬೆಳವಣಿಗೆಯ ದರಕ್ಕೆ ಮೂಗುದಾರ ಹಾಕುವವರು ಯಾರು ಇಲ್ಲ ಎನ್ನಲಾಗಿದೆ. ಇದೇ ಮಾದರಿಯಲ್ಲಿ ನೂತನ ಬಳಕೆದಾರರನ್ನು ಸೆಳೆಯುವಲ್ಲಿ ಸರ್ಕಾರಿ ಸ್ವಾಮ್ಯದ BSNL ಯಶಸ್ವಿಯಾಗಿದ್ದು, ಈ ಕಾರ್ಯದಲ್ಲಿ ಟೆಲಿಕಾಂ ದೈತ್ಯ ವೊಡಾಪೋನ್‌ಗೆ ಸರಿಯಾದ ಶಾಕ್ ನೀಡಿದ ಎನ್ನಲಾಗಿದೆ.

ಜಿಯೋಗೆ ಮೂಗುದಾರ ಹಾಕುವರಿಲ್ಲ: ವೊಡಾಫೋನ್‌ಗೂ ಶಾಕ್ ಕೊಟ್ಟ BSNL..!!

ಓದಿರಿ: ಒನ್‌ಪ್ಲಸ್ 5T ಕೊಳ್ಳಲು ಕ್ಯೂನಲ್ಲಿ ನಿಂತಿದ್ದವರಿಗೆ ಸಿಹಿಸುದ್ದಿ..! ಇಂದು ಫ್ಲಾಷ್ ಸೇಲ್..!!

ಟೆಲಿಕಾಂ ವಲಯದಲ್ಲಿ ಕಳೆದ ಅತೀ ಹೆಚ್ಚು ಬೆಳವಣಿಗೆಯನ್ನು ಸಾಧಿಸಿದ್ದು ಜಿಯೋ ಮಾತ್ರವೇ ಎನ್ನಲಾಗದೆ. ಏರ್‌ಟೆಲ್ ಎರಡನೇ ಸ್ಥಾನದಲ್ಲಿರೇ, ಮೂರನೇ ಸ್ಥಾನದಲ್ಲಿ BSNL ಕಾಣಿಸಿಕೊಂಡಿದೆ. ಆದರೆ ಉಳಿದ ಎಲ್ಲಾ ಟೆಲಿಕಾಂ ಕಂಪನಿಗಳು ಚಂದದಾರರನ್ನು ಸೆಳೆಯುವಲ್ಲಿ ವಿಫಲವಾಗಿರುವುದಲ್ಲದೇ ಹೆಚ್ಚು ಪ್ರಮಾಣದ ಜನರನ್ನು ಕಳೆದುಕೊಂಡಿವೆ ಎಂಬ ಅಂಶವನ್ನು ಈ ವರದಿಯೂ ಎತ್ತಿ ಹಿಡಿದಿದೆ.

ಜಿಯೋ ಕುಟುಂಬ ಇನ್ನು ದೊಡ್ಡದಾಗಿ:

ಜಿಯೋ ಕುಟುಂಬ ಇನ್ನು ದೊಡ್ಡದಾಗಿ:

ಜಿಯೋ ಸೆಪ್ಟಂಬರ್‌ನಲ್ಲಿ 5.9 ಮಿಲಿಯನ್ ಚಂದದಾರರನ್ನು ತನ್ನ ಕುಟುಂಬಕ್ಕೆ ಹೊಸದಾಗಿ ಸೇರಿಕೊಂಡಿದ್ದು, ಈ ಹಿನ್ನಲೆಯಲ್ಲಿ ಜಿಯೋ ಕುಟುಂಬ ತೀರಾ ದೊಡ್ಡದಾಗಿದೆ. 138.6 ಮಿಲಿಯನ್ ಮಂದಿ ಜಿಯೋವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ತಿಂಗಳಿಂದ ತಿಂಗಳಿಗೆ ಜಿಯೋ ಕುಟುಂಬ ದೊಡ್ಡದಾಗುತ್ತಿದೆ.

ಏರ್‌ಟೆಲ್-BSNL ಏರುಗತಿಯಲ್ಲಿ:

ಏರ್‌ಟೆಲ್-BSNL ಏರುಗತಿಯಲ್ಲಿ:

ಇದೇ ಮಾದರಿಯಲ್ಲಿ ಟೆಲಿಕಾಂ ದಿಗ್ಗಜ ಏರ್‌ಟೆಲ್ ಒಂದು ಮಿಲಿಯನ್ ಮಂದಿಯನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದ್ದು, ಇದೇ ಮಾದರಿಯಲ್ಲಿ BSNL ಸಹ ತನ್ನ ಕುಟುಂಬಕ್ಕೆ 5 ಲಕ್ಷ ಜನರನ್ನು ಹೊಸದಾಗಿ ಸೇರಿಸಿಕೊಂಡಿದೆ. ಆದರೆ ಇತರೆ ಟೆಲಕಾಂ ಕಂಪನಿಗಳು ಹಿಂದಿನಂತೆ ಚಂದಾದರರನ್ನು ಕಳೆದುಕೊಳ್ಳುತ್ತಿದೆ ಎನ್ನಲಾಗಿದೆ.

ವೊಡಾಫೋನ್-ಐಡಿಯಾ ಇಳಿಕೆ ಹಾದಿಯಲ್ಲಿ:

ವೊಡಾಫೋನ್-ಐಡಿಯಾ ಇಳಿಕೆ ಹಾದಿಯಲ್ಲಿ:

ಇದೇ ಮಾದರಿಯಲ್ಲಿ ವೊಡಾಫೋನ್ ಮತ್ತು ಐಡಿಯಾ ಬಳಕೆದಾರರನ್ನು ಕಳೆದುಕೊಂಡಿವೆ ಎನ್ನಲಾಗಿದೆ. ವೊಡಾಫೋನ್ 7 ಮಂದಿಯನ್ನು ಕಳೆದುಕೊಂಡರೆ ಹಾಗೆ ಐಡಿಯಾ ಸಹ 9 ಮಂದಿಯನ್ನು ಕಳೆದುಕೊಂಡಿದೆ. ಅಲ್ಲದೇ ಏರ್‌ಸೆಲ್ ಮತ್ತು ಟೆಲಿನಾರ್ ಕ್ರಮವಾಗಿ 3 ಮತ್ತು 9 ಲಕ್ಷ ಚಂದದಾರನ್ನು ಕಳೆದುಕೊಂಡಿವೆ.

MNP ಸಹ ಹೆಚ್ಚಾಗುತ್ತಿದೆ:

MNP ಸಹ ಹೆಚ್ಚಾಗುತ್ತಿದೆ:

ಇದೇ ಮಾದರಿಯಲ್ಲಿ MNP ಬಳಕೆದಾರರ ಸಂಖ್ಯೆಯೂ ಹೆಚ್ಚಾಗುತ್ತಿದೆ. ದಿನೇ ದಿನೇ MNP ಬಳಕೆ ಮಾಡಿಕೊಳ್ಳುತ್ತಿರುವರ ಸಂಖ್ಯೆಯೂ ಅಧಿಕವಾಗುತ್ತಿದೆ. ಜನರಿಗೆ ಎಲ್ಲಾ ಕಂಪನಿಗಳು ಹೆಚ್ಚು ಆಫರ್ ನೀಡುತ್ತಿರುವ ಹಿನ್ನಲೆಯಲ್ಲಿ MNP ಸೇವೆಯನ್ನು ಬಳಸುತ್ತಿರುವ ಸಂಖ್ಯೆಯೂ ಅಧಿಕವಾಗುತ್ತಿದೆ.

Best Mobiles in India

English summary
Reliance Jio Added 5.9 Million Subscribers in September. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X