Subscribe to Gizbot

ಫ್ಲಿಪ್‌ಕಾರ್ಟ್‌ನಲ್ಲಿ TV- ಸ್ಮಾರ್ಟ್‌ಫೋನ್ ಸುಗ್ಗಿ: ಟಾಪ್‌ ಫೋನ್‌ಗಳು ಬಜೆಟ್ ಬೆಲೆಯಲ್ಲಿ..!

Written By:

ಅಮೆಜಾನ್ ಗ್ರೇಟ್ ಇಂಡಿಯಾ ಸೇಲ್ ಆಯೋಜನೆ ಮಾಡಿರುವ ಹಿನ್ನಲೆಯಲ್ಲಿ ಫ್ಲಿಪ್‌ಕಾರ್ಟ್‌ ಸಹ ತನ್ನ ಬಳಕೆದಾರರಿಗೆ ರಿಪಬ್ಲಿಕ್ ಡೇ ಸೇಲ್ ಆಯೋಜನೆ ಮಾಡಿದ್ದು, ಈ ಮೂಲಕ ಅಮೆಜಾನ್‌ಗೆ ಸ್ಪರ್ಧೆ ನೀಡುವುದರೊಂದಿಗೆ ತನ್ನ ಬಳಕೆದಾರರಿಗೆ ಹೆಚ್ಚಿನ ಕೊಡುಗೆಯನ್ನು ನೀಡಲು ಮುಂದಾಗಿದೆ. ಇಂದಿನಿಂದ ಫ್ಲಿಕ್‌ಕಾರ್ಟ್‌ ಇಂದಿನಿಂದ ಸೇಲ್ ಆರಂಭವಾಗಲಿದ್ದು, ಜನವರಿ 23ರ ವರೆಗೆ ಈ ಸೇಲ್ ನಡೆಯಲಿದೆ ಎನ್ನಲಾಗಿದೆ.

ಫ್ಲಿಪ್‌ಕಾರ್ಟ್‌ನಲ್ಲಿ TV- ಸ್ಮಾರ್ಟ್‌ಫೋನ್ ಸುಗ್ಗಿ: ಫೋನ್‌ಗಳು ಬಜೆಟ್ ಬೆಲೆಯಲ್ಲಿ

ಅಮೆಜಾನ್ ಮಾದರಿಯಲ್ಲಿ ಫ್ಲಿಪ್‌ಕಾರ್ಟ್‌ ಸಹ ಬಳಕೆದಾರರಿಗೆ ಹೊಸ-ಹೊಸ ಆಫರ್ ನೀಡುತ್ತಿದೆ. ಎಕ್ಸ್‌ಕ್ಲೂಸಿವ್ ಸ್ಮಾರ್ಟ್‌ಫೋನ್‌ಗಳನ್ನು ಸೇಲ್‌ ಮಾಡುತ್ತಿದೆ. ಇದರೊಂದಿಗೆ ನೋ ಕಾಸ್ಟ್ EMI, ಎಕ್ಸ್‌ಚೇಂಜ್ ಆಫರ್ ಮತ್ತು ಕ್ಯಾಷ್ ಬ್ಯಾಕ್ ಆಫರ್ ಅನ್ನು ಸಹ ನೀಡುತ್ತಿದೆ. ಒಟ್ಟಿನಲ್ಲಿ ಖರೀದಿ ಮಾಡುವ ಗ್ರಾಹಕರಿಗೆ ಒಳ್ಳೆಯ ಆಫರ್ ಗಳನ್ನು ಫ್ಲಿಪ್‌ ಕಾರ್ಟ್‌ ನೀಡಲು ಮುಂದಾಗಿದೆ.

ಓದಿರಿ: ಬಜೆಟ್ ಬೆಲೆಯಲ್ಲಿ ಶಿಯೋಮಿ Mi TV 4A ಆಂಡ್ರಾಯ್ಡ್ ಟಿವಿ ಲಾಂಚ್: ಬೆಲೆ ಕೇಳಿ ಬೆಚ್ಚಿಬಿದ್ದ ಮಾರುಕಟ್ಟೆ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್:

ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್:

ಸ್ಮಾರ್ಟ್‌ಫೋನ್‌ ಕೊಳ್ಳುವವರಿಗೆ ಭಾರೀ ಆಫರ್ ಕಾಣಬಹುದಾಗಿದೆ. ಎಕ್ಸ್‌ಚೇಂಜ್ ಮೇಲೆ ರೂ.18000ದವರೆಗೂ ಕಡಿತವನ್ನು ಘೋಷಣೆ ಮಾಡಿದ್ದು, ಇದಲ್ಲದೇ ಡ್ಯಾಮೆಜ್ ಪ್ರೋಟೆಷನ್ ಪ್ಲಾನ್‌ಗಳನ್ನು ನೀಡುತ್ತಿದೆ. ಇದಲ್ಲದೇ ವ್ಯಾರೆಂಟಿಯನ್ನು ಹೆಚ್ಚು ಮಾಡಿಕೊಡುತ್ತಿದೆ. ಇದಲ್ಲದೇ ಬೈಬ್ಯಾಕ್ ಆಫರ್ ಸಹ ಇದೆ. ಇದಲ್ಲದೇ HDFC ಕಾರ್ಡ್‌ ಬಳಕೆದಾರರಿಗೂ ಹೆಚ್ಚಿನ ಲಾಭಗಳಿದೆ.

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
ಹಾನರ್ 9 ಲೈಟ್ ಸ್ಮಾರ್ಟ್‌ಫೋನ್‌:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್‌:

ಇದಲ್ಲದೇ ಈ ಸೇಲ್‌ನಲ್ಲಿ ಎಕ್ಸ್ ಕ್ಲೂಸಿವ್‌ಆಗಿ ಹಾನರ್ ಬಿಡುಗಡೆ ಮಾಡಿರುವ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಸೇಲ್ ಆಗಲಿದ್ದು, ಇದೇ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಇದು ಸಹ ಒಂದು ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಸ್ಮಾರ್ಟ್‌ಫೋನ್ ಆಫರ್‌ಗಳು:

ಸ್ಮಾರ್ಟ್‌ಫೋನ್ ಆಫರ್‌ಗಳು:

ಇದಲ್ಲದೇ ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್ ಗಳನ್ನು ನೀಡುತ್ತಿದೆ. ಟಾಪ್‌ ಎಂಡ್ ಸ್ಮಾರ್ಟ್‌ಫೋನ್‌ನಿಂದ ಹಿಡಿದು ಬಜೆಟ್ ಸ್ಮಾರ್ಟ್‌ಫೋನ್‌ ವರೆಗೂ ದರ ಕಡಿತವನ್ನು ಕಾಣಬಹುದಾಗಿದ್ದು, ಸ್ಮಾರ್ಟ್‌ಫೋನ್‌ ಖರೀದಿದಾರರಿಗೆ ಹಬ್ಬವಾಗಿದೆ.

ಟಿವಿ, ಲ್ಯಾಪ್‌ಟಾಪ್:

ಟಿವಿ, ಲ್ಯಾಪ್‌ಟಾಪ್:

ಇದಲ್ಲದೇ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಫ್ಲಿಪ್‌ಕಾರ್ಟ್‌ ಬಳಕೆದಾರರಿಗೆ ಟಿವಿ ಮತ್ತು ಲ್ಯಾಪ್‌ಟಾಪ್‌ಗಳ ಮೇಲೆ ಸಾಕಷ್ಟು ಆಫರ್ ಗಳನ್ನು ಲಾಂಚ್ ಮಾಡಿದ್ದು, ಹೊಸ ಹೊಸ ಲ್ಯಾಪ್‌ಟಾಪ್‌ಗಳನ್ನು ಮಾರಾಟ ಮಾಡುತ್ತಿದೆ. ಇದಲ್ಲದೇ ಟಿವಿಗಳ ಖರೀದಿಗೆ ಹೆಚ್ಚಿನ ಅವಕಾಶವು ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Republic Day Sale: Offers on Mobile Phones, TVs. to know more visit kannada.gzbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot