ಕಿವಿ ಕೇಳದೇ ಇರುವವರಿರೂ ಸಿಹಿಸುದ್ದಿ ನೀಡಿದ ಬೆಂಗಳೂರಿನ ವಿಜ್ಞಾನ ಸಂಸ್ಥೆ!!

|

ಕಿವಿ ಕೇಳದೇ ಇರುವವರಿಗೆ ಕಿವಿಗೆ ಹಾಕಿಕೊಳ್ಳುವ ಶ್ರವಣ ಡಿವೈಸ್ ಹಾಕುವುದು ಅಪಮಾನ ಎಂದು ಹಲವರು ತಿಳಿಯುತ್ತಾರೆ. ಆದರೆ, ಕಿವುಡುತನ ಇರುವವರಿಗೆ ಈ ಅವಮಾನಕ್ಕಿಂತಲೂ ಹೆಚ್ಚು ಕಷ್ಟ ಎಂದರೆ ಆ ಡಿವೈಸ್ ಅನ್ನು ಖರೀದಿಸುವುದು. ಏಕೆಂದರೆ, ಶ್ರವಣ ಸಾಧನಗಳ ವೆಚ್ಚವು ಸುಮಾರು 15,000 ರೂಪಾಯಿಗಳಿಂದ 2,50,000 ರೂಪಾಯಿಗಳವರೆಗೆ ಇದ್ದು, ಈ ಸಾಧನಗಳಿಗೆ ಹಾಗೂ ಪದೇ ಪದೇ ಚಿಕಿತ್ಸಕರ ಭೇಟಿಗೆ ನಿರಂತರವಾಗಿ ಹಣ ಖರ್ಚು ಮಾಡಬೇಕಾಗುತ್ತದೆ. ಇದು ಕಿವಿಡುತನದ ಜೊತೆಗೆ ಹಣದ ಕುರುಡುತನನವನ್ನು ತರುತ್ತದೆ.!

ಆದರೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಂಶೋಧಕರು ಕಿವಿ ಕೇಳದೇ ಇರುವವರಿರೂ ಕೂಡ ಕೇಳಿಸಿಕೊಳ್ಳಲು ಸಾಧ್ಯವಾಗುವಂತಹ ಸಂತಸದ ಸುದ್ದಿಯೊಂದನ್ನು ನೀಡಿದ್ದಾರೆ. ಕೇವಲ 5,000 ರೂಪಾಯಿಗಳಿಗೆ ಸಂಯೋಜಿತ ಶ್ರವಣ ಸಾಧನವನ್ನು ಒಳಗೊಂಡ ಸರಳವಾದ ಸ್ಮಾರ್ಟ್‌ಪೋನ್ ಅಪ್ಲಿಕೇಶನ್ ಒಂದನ್ನು ವಿನ್ಯಾಸಗೊಳಿಸಿದ್ದಾರೆ. ಈ ಸಾಧನವು ಕೈಗೆಟುಕುವ ದರ, ಅಂದರೆ, ಕೇವಲ 5,000 ರೂ. ಬೆಲೆಯಲ್ಲಿ ಮಾರುಕಟ್ಟೆಗೆ ಬರಲಿದ್ದು, ಭಾರತೀಯ ಸನ್ನಿವೇಶದಲ್ಲಿ ವಿಶೇಷವಾಗಿ ಉಪಯುಕ್ತ ಸಾಧನವಾಗಿದೆ.

ಕಿವಿ ಕೇಳದೇ ಇರುವವರಿರೂ ಸಿಹಿಸುದ್ದಿ ನೀಡಿದ ಬೆಂಗಳೂರಿನ ವಿಜ್ಞಾನ ಸಂಸ್ಥೆ!!

ಹೊಸದಾಗಿ ಅಭಿವೃದ್ಧಿಪಡಿಸಲಾದ ಈ ಸಾಧನವನ್ನು ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗೆ ಸಂಪರ್ಕಿಸಬಹುದಾಗಿದೆ. ಈ ಅಪ್ಲಿಕೇಶನ್, ಬಹುಭಾಷಾ ಚಾತುರ್ಯ ಹೊಂದಿದ್ದು, ಪ್ರಸ್ತುತ ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ನೆರವು ಒದಗಿಸುತ್ತದೆ. ಈ ಅಪ್ಲಿಕೇಶನ್ ಎರಡು ಮೋಡ್ ಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಮಗುವಿನ ಪೋಷಕರೇ ಅಥವಾ ಆರೈಕೆ ಮಾಡುವವರು ಚಿಕಿತ್ಸೆಯನ್ನು ನಡೆಸಬಹುದು ಎಂದು ಅಧ್ಯಯನದ ಪ್ರಮುಖ ಸಂಶೋಧಕ ಡಾ. ಮನೀಶ್ ಅರೋರಾ ಅವರು ತಿಳಿಸಿದ್ದಾರೆ.

ಸಾಧನದಲ್ಲಿ 'ಶ್ರವಣ ಸಾಧನ' ಮೋಡ್ ಮತ್ತು 'ಚಿಕಿತ್ಸೆಮೋಡ್' ಎಂಬ ಎರಡು ಆಯ್ಕೆಗಳಿದ್ದು, 'ಶ್ರವಣ ಸಾಧನ' ಮೋಡ್ ಆಯ್ಕೆ ಮಾಡಿದರೆ, ಮಗುವಿನ ಸುತ್ತಲಿನ ವಾತಾವರಣದಲ್ಲಿನ ಧ್ವನಿಗಳನ್ನು ವರ್ಧಿಸುತ್ತದೆ ಮತ್ತು ಸಂಸ್ಕರಿಸುತ್ತದೆ ಹಾಗೂ ಇದರ ಮೂಲಕ ಮಗುವು ಸ್ಪಷ್ಟವಾಗಿ ಕೇಳಲು ಸಾಧ್ಯವಾಗುತ್ತದೆ. ಹಾಗೆಯೇ ಚಿಕಿತ್ಸೆ ಮೋಡ್ ಆಯ್ಕೆ ಮಾಡಿದರೆ ಪೂರ್ವ ನಿಯೋಜಿತ ಆಡಿಯೋ ಕ್ಲಿಪ್‌ಗಳು ಲಭ್ಯವಿರುತ್ತವೆ ಹಾಗೂ ಅವುಗಳನ್ನು ಬಳಸಿ ಮಗುವಿನ ಪೋಷಕರು ಅಥವಾ ಆರೈಕೆ ಮಾಡುವವರು ಚಿಕಿತ್ಸೆಯನ್ನು ನಡೆಸಬಹುದು.

ಕಿವಿ ಕೇಳದೇ ಇರುವವರಿರೂ ಸಿಹಿಸುದ್ದಿ ನೀಡಿದ ಬೆಂಗಳೂರಿನ ವಿಜ್ಞಾನ ಸಂಸ್ಥೆ!!

ಜಾಗತಿಕವಾಗಿ ಹುಟ್ಟಿದ ನಂತರ ಕಿವುಡುತನದ ಪರೀಕ್ಷೆಗೆ ಒಳಪಡುವ ಪ್ರತಿ 1000 ಹಸುಗೂಸುಗಳಲ್ಲಿ 6 ಮಕ್ಕಳು ಕಿವುಡುತನದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇವರಲ್ಲಿ ಬಡತನದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿರುತ್ತದೆ. ಹಾಗಾಗಿ, ಆರೋಗ್ಯ ಸೇವೆಗಳು ಅವರಿಗೆ ಅಷ್ಟು ಸುಲಭವಾಗಿ ಲಭ್ಯವಿರುವುದಿಲ್ಲ. ಇಂತಹ ಸಮಯದಲ್ಲಿ ಭಾರತೀಯ ವಿಜ್ಞಾನಿಗಳು ಕಂಡು ಹಿಡಿದಿರುವ ಈ ಡಿವೈಸ್ ಕಿವುಡುತನಕ್ಕೆ ಪರಿಹಾರವಾಗಬಲ್ಲದು. ಸಂಶೋಧಕರು ಈ ಆಪ್‌ ಮತ್ತಷ್ಟು ಅಭಿವೃದ್ಧಿಗಾಗಿ ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಬೆಂಬಲವನ್ನು ಕೋರಿದ್ದಾರೆ.

ಮೂಲ ಮಾಹಿತಿ

ಓದಿರಿ: ಬರೋಬ್ಬರಿ 405 ಕೋಟಿ ಸಂಬಳ ನಿರಾಕರಿಸಿದ 'ಸುಂದರ್ ಪಿಚೈ'!

Best Mobiles in India

English summary
The newly developed hearing aid can be connected to a smartphone application, via Bluetooth. The application is multilingual and currently supports English and Kannada languages. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X