ಬರೋಬ್ಬರಿ 405 ಕೋಟಿ ಸಂಬಳ ನಿರಾಕರಿಸಿದ 'ಸುಂದರ್ ಪಿಚೈ'!
ಗೂಗಲ್ ಸಿಇಓ ಹಾಗೂ ಭಾರತದ ಸಂಜಾತ 'ಸುಂದರ್ ಪಿಚೈ' ಅವರು 405 ಕೋಟಿಯಷ್ಟು ಹಣವನ್ನು ತಿರಸ್ಕರಿಸಿ ವಿಶ್ವ ಟೆಕ್ ಪ್ರಪಂಚದಲ್ಲಿ ಕೋಲಾಹಲ ಎಬ್ಬಿಸಿದ್ದಾರೆ. ವಿಶ್ವದಲ್ಲೇ ಅತಿ ದೊಡ್ಡ ಲಾಭದಾಯಕ ಕಂಪೆನಿಗಳಲ್ಲಿ ಒಂದಾಗಿರುವ ಗೂಗಲ್ ನೀಡುತ್ತಿದ್ದ ಷೇರನ್ನು ನಿರಾಕರಿಸಿರುವ ಪಿಚೈ, ನನಗೀಗಾಲೇ ನೀಡುತ್ತಿರುವ ಸಂಬಳ ಸಾಕಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಹೌದು, 2018ರಲ್ಲಿ ಸಾಕಷ್ಟು ವೇತನ, ಭತ್ಯೆ ಬರುತ್ತಿದೆ. ಹಾಗಾಗಿ ಅದಕ್ಕಿಂತ ಹೆಚ್ಚಿನದನ್ನು ನಾನು ಪಡೆದುಕೊಳ್ಳುತ್ತಿಲ್ಲ. ಈಗ ದೊರೆಯುತ್ತಿರುವುದೇ ಹೆಚ್ಚಾಗಿದೆ ಎಂದು ಹೇಳುವ ಮೂಲಕ ತಮ್ಮ ಪಾಲಿಗೆ ಬಂದ 405 ಕೋಟಿ ಹಣವನ್ನು ತಿರಸ್ಕರಿಸಿದ್ದಾರೆ. ಅಂದರೆ, ಅವರು ಕಳೆದ ಎರಡು ವರ್ಷಗಳಲ್ಲಿ ಗೂಗಲ್‌ನಿಂದ ಬರಬೇಕಿದ್ದ ಯಾವುದೇ ಷೇರುಗಳನ್ನು ಪಡೆದುಕೊಂಡಿಲ್ಲ.!

ಪಿಚೈ ಅವರಿಗೆ ಸಿಗುವ ಈಕ್ವಿಟಿ ಮೊತ್ತವು ಸ್ಪಷ್ಟವಾಗಿಲ್ಲ ಹಾಗೂ ಅವರು ತಿರಸ್ಕರಿಸಿದ ನಿಖರವಾದ ಮೊತ್ತವು ಸ್ಪಷ್ಟವಾಗಿಲ್ಲ. ಆದರೆ, ಅವರು ಸುಮಾರು $ 58 ಮಿಲಿಯನ್ ಹಣವನ್ನು ತಿರಸ್ಕರಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಅಂದರೆ, ಭಾರತದ ರೂಪಾಯಿಗಳಿಗೆ ಹೋಲಿಸಿದರೆ ಪಿಚೈ ಅವರು 405 ಕೋಟಿಗೂ ಹೆಚ್ಚು ಹಣವನ್ನು ಗೂಗಲ್‌ಗೆ ವಾಪಸ್ ಮಾಡಿದ್ದಾರೆ.
2015ರಲ್ಲಿ ಸುಂದರ್ ಪಿಚೈ ಅವರು ಗೂಗಲ್ ಸಿಇಓ ಆದ ನಂತರ ಅವರಿಗೆ 100 ದಶಲಕ್ಷ ಡಾಲರ್‌ನಷ್ಟು ಹಣವನ್ನು ಪಾವತಿಸಲಾಗುತ್ತಿತ್ತು. ಇದು 2016ರಲ್ಲಿ $ 200 ದಶಲಕ್ಷಕ್ಕೆ ಏರಿತು. ಇದೀಗ ಸುಂದರ್ ಪಿಚೈ ಅವರಿಗೆ 650,000$ (450 ಕೋಟಿಗೂ ಹೆಚ್ಚು) ವಾರ್ಷಿಕ ಸಂಬಳ ಮತ್ತು ಸಿಇಓಗಾಗಿ ವೈಯಕ್ತಿಕ ಭದ್ರತೆ ಹಾಗೂ ಷೇರುಗಳನ್ನು ವೆಚ್ಚವೆಂದು ಪಾವತಿಸಲಾಗುತ್ತಿದೆ.
ಭಾರತೀಯ ಮೂಲದ ಪಿಚೈ ಅವರು ತಮ್ಮ ಬಾಲ್ಯಮತ್ತು ಬಡತನ ಸೇರಿದಂತೆ ಚೆನ್ನೈನಲ್ಲಿನ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದರು. ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ್ದ ಸಂದರ್ಶನ ಒಂದರಲ್ಲಿ ನಾನು ಬೆಳೆಯುವಾಗ ಮನೆಯಲ್ಲಿ ಬಡತನವಿತ್ತು. ನಮ್ಮದು ಸಾಧಾರಣ ಬಾಡಿಗೆ ಮನೆ. ಎಲ್ಲರೂ ನೆಲದ ಮೇಲೆಯೇ ಮಲಗುತ್ತಿದ್ದೆವು ಎಂದು ತಿಳಿಸಿದ್ದನ್ನು ನೀವು ನೋಡಬಹುದು.

ಅಂದು ಮತ್ತು ಇಂದಿಗೆ ಹೋಲಿಕೆ ಮಾಡಿದ್ದ ಅವರು, ಆಗ ನಮ್ಮ ಮನೆಯಲ್ಲಿ ರೆಫ್ರಿಜಿರೇಟರ್ ಇರಲಿಲ್ಲ. ನೆರೆಹೊರೆಯವರಲ್ಲಿ ಕೆಲವರ ಮನೆಯಲ್ಲಿ ರೆಫ್ರಿಜಿರೇಟರ್‌ಗಳು ಇದ್ದವು. ಅಂತೂ ಒಂದು ದಿನ ನಾವೂ ಖರೀದಿಸಿ ತಂದೆವು. ಅದೊಂದು ದೊಡ್ಡ ಸಾಹಸವೇ ಆಗಿತ್ತು. ಐಐಟಿ ಓದುವಾಗ ಇದ್ದ ಕಂಪ್ಯೂಟರ್ ಬಳಸುವುದೇ ದೊಡ್ಡ ಸಾಧನೆ ಅನಿಸಿತ್ತು ಎಂದು ಹೇಳಿಕೊಂಡಿದ್ದರು.
ಓದಿರಿ: ಶಿಯೋಮಿ, ಒಪ್ಪೊ ಬಿಟ್ಟು 'ಹುವಾವೇ' ಮಾತ್ರ ಬ್ಯಾನ್ ಆಗಲು ಶಾಕಿಂಗ್ ಕಾರಣವಿದೆ!!


Click it and Unblock the Notifications








