ನಿಮ್ಮ ಫೋನ್ ಬ್ಯಾಟರಿ ಮಾಡಲಿದೆ ಪತ್ತೇದಾರಿ ಕೆಲಸ

Written By:

ಇಂಟರ್ನೆಟ್ ಬಳಕೆದಾರರ ಬ್ಯಾಟರಿಯನ್ನು ವಶಪಡಿಸಿಕೊಳ್ಳುವುದರ ಮೂಲಕ ಮಾಹಿತಿ ಕದಿಯಲು ಸಾಧ್ಯ ಎಂಬುದನ್ನು ಫ್ರೆಂಚ್ ಸಂಶೋಧಕರು ಪತ್ತೆಮಾಡಿದ್ದಾರೆ. ಎಚ್‌ಟಿಎಮ್‌ಎಲ್ 5 ಸ್ಪೆಸಿಫಿಕೇಶನ್ ವೆಬ್ ಬ್ರೌಸರ್‌ನಲ್ಲಿ ಚಾಲನೆಯಾಗುತ್ತಿದ್ದು ಇದು ಯಾವುದೇ ಇಂಟರ್ನೆಟ್ ಬಳಕೆದಾರರನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ಓದಿರಿ: ಫೋನ್ ಬ್ಯಾಟರಿ ಖಾಲಿಯಾಗುತ್ತಿದೆಯೇ? ಏನಿರಬಹುದು ಕಾರಣ

ಬ್ಯಾಟರಿ ಸಾಮರ್ಥ್ಯ, ಇದರ ಹಂತ, ಫಿಂಗರ್ ಪ್ರಿಂಟೇಬಲ್ ಸರ್ಫೇಸ್ ವೆಬ್ ಬಳಕೆದಾರರನ್ನು ಟ್ರ್ಯಾಕ್ ಮಾಡಲು ಬಳಸಲಾಗುತ್ತದೆ. ಹಳೆಯ ಮತ್ತು ಬಳಸಿದ ಬ್ಯಾಟರಿಗಳಲ್ಲಿ ಈ ಅಪಾಯ ಕಡಿಮೆ ಇರುತ್ತದೆ. ಬ್ಯಾಟರಿ ಸಾಮರ್ಥ್ಯವನ್ನು ಆಧರಿಸಿ ಇದನ್ನು ಟ್ರ್ಯಾಕಿಂಗ್ ಐಡೆಂಟಿಫೈಯರ್ ಆಗಿ ಬಳಸಲಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವರ್ಲ್ಡ್ ವೈಡ್ ವೆಬ್ ಕನ್ಸೋರ್ಟಿಯಮ್

ವರ್ಲ್ಡ್ ವೈಡ್ ವೆಬ್ ಕನ್ಸೋರ್ಟಿಯಮ್

ವರ್ಲ್ಡ್ ವೈಡ್ ವೆಬ್ ಕನ್ಸೋರ್ಟಿಯಮ್ ಅಥವಾ ಡಬ್ಲ್ಯೂ3ಸಿ, ಸಂಸ್ಥೆಯು ವೆಬ್ ಪ್ರಮಾಣಗಳ ಅಭಿವೃದ್ಧಿಗಳ ಮೇಲೆ ಕಣ್ಣಿಡುತ್ತದೆ. 2012 ರಲ್ಲಿ ಡಬ್ಲ್ಯೂ3ಸಿ ಬ್ಯಾಟರಿ ಸ್ಟೇಟಸ್ ಎಪಿಐ ಹೆಸರಿನ ಸ್ಪೆಸಿಫಿಕೇಶನ್ ಅನ್ನು ಅನುಮೋದಿಸಿದ್ದು ಇದು ಡಿವೈಸ್‌ಗಳಲ್ಲಿ ಎಷ್ಟು ಬ್ಯಾಟರಿ ಉಳಿದಿದೆ ಎಂಬುದನ್ನು ಕಂಡುಹಿಡಿಯಲು ವೆಬ್ ಡೆವಲಪರ್‌ಗಳಿಗೆ ಸಹಾಯ ಮಾಡುತ್ತದೆ.

ಡಬ್ಲ್ಯೂ3ಸಿ

ಡಬ್ಲ್ಯೂ3ಸಿ

ಎಪಿಐಯನ್ನು ಕ್ರೋಮ್, ಫೈರ್‌ಪಾಕ್ಸ್, ಒಪೇರಾ ಬ್ರೌಸರ್ ಬೆಂಬಲಿಸುತ್ತಿದ್ದು, ಡಬ್ಲ್ಯೂ3ಸಿ ಇದನ್ನು ಶಿಫಾರಸು ಮಾಡಿ ಅನುಮೋದಿಸಿದೆ. ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಬಳಕೆದಾರರ ಅನುಭವವನ್ನು ಸುಧಾರಿಸುತ್ತದೆ.

ಬ್ಯಾಟರಿ ಕಡಿಮೆ

ಬ್ಯಾಟರಿ ಕಡಿಮೆ

ಬ್ಯಾಟರಿ ಕಡಿಮೆಯಾದಲ್ಲಿ, ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಈ ಫೀಚರ್‌ಗಳನ್ನು ತೆಗೆದಹಾಕಿ ಬ್ಯಾಟರಿಯನ್ನು ಮತ್ತು ಡಿವೈಸ್‌ನ ಜೀವನವನ್ನು ಉಳಿಸುತ್ತದೆ.

ಎಪಿಐ

ಎಪಿಐ

ಬ್ರೌಸರ್‌ಗಳಲ್ಲಿ ಈ ಎಪಿಐ ಅನ್ನು ಚಾಲನೆ ಮಾಡಲು ವೆಬ್ ಡೆವಲಪರ್‌ಗಳಿಗೆ ಬಳಕೆದಾರರ ಅನುಮತಿ ಬೇಕಾಗಿಲ್ಲ.

ಆರ್ಥಿಕ ಮಾಹಿತಿ

ಆರ್ಥಿಕ ಮಾಹಿತಿ

ಈ ಎಪಿಐ ಮೂಲಕ ಒದಗಿಸಲಾದ ಡೇಟಾವು ಆರ್ಥಿಕ ಮಾಹಿತಿಯನ್ನು ಒಳಗೊಂಡಿದ್ದು ಬ್ಯಾಟರಿ ಶಟ್‌ಡೌನ್ ಆಗಲು ಸಮಯ ಬೇಕಾಗಿದ್ದು ಪ್ರಸ್ತುತ ಬ್ಯಾಟರಿ ಸ್ಥಿತಿಯು ಶೇಕಡಾವಾರು ಪಾಯಿಂಟ್‌ಗಳಲ್ಲಿ ದೊರೆಯುತ್ತದೆ.

ಯುನೀಕ್ ಐಡಿ

ಯುನೀಕ್ ಐಡಿ

ಎರಡು ಸಂಖ್ಯೆಗಳನ್ನು ಸಂಶೋಧಕರು ಬಳಸಿದ್ದು, 14 ಬಿಲಿಯನ್ ಸಾಧ್ಯ ಸಮ್ಮಿಶ್ರಗಳೊಂದಿಗೆ ಇದನ್ನು ಯುನೀಕ್ ಐಡಿಯನ್ನಾಗಿಸಿದ್ದಾರೆ.

ಅನ್ವೇಷಿಸಲು

ಅನ್ವೇಷಿಸಲು

ಲ್ಯಾಪ್‌ಟಾಪ್/ಸ್ಮಾರ್ಟ್‌ಫೋನ್ ಬೆರಳಚ್ಚನ್ನು ಬ್ರೌಸಿಂಗ್ ಅಭ್ಯಾಸಗಳು ಮತ್ತು ಡಿವೈಸ್ ಮಾಹಿತಿ ಹಾಗೂ ಇನ್ನಷ್ಟನ್ನು ಅನ್ವೇಷಿಸಲು ಬಳಸಲಾಗುತ್ತದೆ.

ಅಪ್‌ಡೇಟ್

ಅಪ್‌ಡೇಟ್

ಬ್ಯಾಟರಿ ದೀರ್ಘತೆಯ ಮಾಹಿತಿ ಪ್ರತೀ 30 ಸೆಕೆಂಡ್‌ಗಳಿಗೆ ಅಪ್‌ಡೇಟ್ ಆಗುತ್ತಿರುತ್ತದೆ. ಇಂಟರ್ನೆಟ್ ಬಳಕೆದಾರರ ಮೇಲೆ ಯಾವುದೇ ಹ್ಯಾಕರ್ ಸ್ಪೈ ಮಾಡಿದಲ್ಲಿ ಬ್ಯಾಟರಿ ಸ್ಟೇಟಸ್ ಎಪಿಐ ಪ್ರತಿ ಅರ್ಧ ನಿಮಿಷಕ್ಕೊಮ್ಮೆ ಪರಿಶೀಲಿಸುತ್ತಿರುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
French researchers have found out a new way to invade any Internet user’s privacy, and the source is their battery.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot