YouTube: ಯೂಟ್ಯೂಬ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಡ್ ಬ್ಲಾಕರ್ ವಿರುದ್ಧ ಸಮರ
ಯೂಟ್ಯೂಬ್ (YouTube) ಅತ್ಯಂತ ಯಶಸ್ವಿ ವಿಡಿಯೋ ಪ್ಲಾಟ್‌ಫಾರ್ಮ್ ಆಗಿದ್ದು, ಎಲ್ಲಾ ರೀತಿಯ ಮಾಹಿತಿ ಹಾಗೂ ಮನರಂಜನೆ ಕ್ಷಣ ಮಾತ್ರದಲ್ಲಿ ಲಭ್ಯವಾಗಲಿದೆ. ಈ ನಡುವೆ ಯೂಟ್ಯೂಬ್ ಸಂಬಂಧ ಪ್ರಮುಖ ವಿಷಯವೊಂದು ಹೊರಬಿದ್ದಿದೆ.
ಹೌದು, ಸಾಕಷ್ಟು ಯೂಟ್ಯೂಬ್ ಬಳಕೆದಾರರು ಜಾಹೀರಾತಿನಿಂದ ಬೇಸರ ವ್ಯಕ್ತಪಡಿಸುವುದು ಸಾಮಾನ್ಯ. ಇದಕ್ಕೆ ಕೆಲವರು ಪ್ರೀಮಿಯಂ ಚಂದಾದಾರಿಕೆ (Premium subscription) ಪಡೆದುಕೊಂಡರೆ ಇನ್ನೂ ಕೆಲವರು ಆಡ್ ಬ್ಲಾಕರ್ ಸೌಲಭ್ಯ (Ad blocker facility) ಪಡೆಯುತ್ತಾರೆ. ಆದರೆ, ಈಗ ಮೊಬೈಲ್‌ಗಳಲ್ಲಿ ಹೆಚ್ಚಾಗಿ ಬಳಸುವ ಥರ್ಡ್ ಪಾರ್ಟಿ ಆಡ್ ಬ್ಲಾಕರ್‌ಗಳ ಮೇಲೆ ಯೂಟ್ಯೂಬ್ ತನ್ನ ಶಿಸ್ತು ಕ್ರಮವನ್ನು ಪ್ರಾರಂಭಿಸಿದೆ. ಹಾಗಿದ್ರೆ, ಏನಿದು ಹೊಸ ವಿಚಾರ?, ಯಾವೆಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಥರ್ಡ್ ಪಾರ್ಟಿ ಆಡ್ ಬ್ಲಾಕರ್ ವಿರುದ್ಧ ಸಮರ: ಯೂಟ್ಯೂಬ್ 2022 ರಿಂದ ಡೆಸ್ಕ್‌ಟಾಪ್‌ನಲ್ಲಿ ಆಡ್ ಬ್ಲಾಕರ್ ಗಳ ವಿರುದ್ಧ ಸಮರ ಸಾರಲು ಮುಂದಾಗಿದೆ. ಅದರಂತೆ ಜಾಹೀರಾತುಗಳನ್ನು ಸ್ಕಿಪ್ ಮಾಡಲು ಆಡ್ ಬ್ಲಾಕರ್‌ಗಳನ್ನು ಬಳಸುವವರಿಗೆ ಯೂಟ್ಯೂಬ್ ಕಂಟೆಂಟ್‌ಗೆ ಪ್ರವೇಶವನ್ನು ನಿರ್ಬಂಧಿಸುವ ಮೂಲಕ ಕಂಪನಿಯು ಥರ್ಡ್ ಪಾರ್ಟಿ ಆಡ್ ಬ್ಲಾಕರ್‌ಗಳ ಮೇಲೆ ತನ್ನ ಶಿಸ್ತುಕ್ರಮವನ್ನು ಹೆಚ್ಚು ಮಾಡಿದೆ.
ಪ್ಲಾಟ್‌ಫಾರ್ಮ್‌ನ ಸೇವಾ ನಿಯಮಗಳನ್ನು ಉಲ್ಲಂಘಿಸುವ ಥರ್ಡ್ ಪಾರ್ಟಿ ಆಡ್ ಆಪ್‌ಗಳಲ್ಲಿ (Third party ad app) ಅದರ ಜಾರಿಯನ್ನು ಬಲಪಡಿಸುತ್ತಿದೆ. ನಿರ್ದಿಷ್ಟವಾಗಿ ಜಾಹೀರಾತು ನಿರ್ಬಂಧಿಸುವ ಆಪ್‌ಗಳಿಗೆ ಇದು ಸಂಬಂಧಿಸಿದೆ ಎಂದು ಯೂಟ್ಯೂಬ್ ಮಾಹಿತಿ ನೀಡಿದೆ. ಹೆಚ್ಚುವರಿಯಾಗಿ, ಥರ್ಡ್ ಪಾರ್ಟಿ ಆಡ್ ಬ್ಲಾಕರ್‌ಗಳನ್ನು ಬಳಸುವ ವೀಕ್ಷಕರು ಬಫರಿಂಗ್ ಸಮಸ್ಯೆಗಳನ್ನು ಅನುಭವಿಸಬಹುದು ಅಥವಾ ವಿಡಿಯೋವನ್ನು ಪ್ಲೇ ಮಾಡಲು ಮುಂದಾದಾಗ ಈ ಆಪ್‌ನಲ್ಲಿಈ ಕೆಳಗಿನ ಕಂಟೆಂಟ್ ಲಭ್ಯವಿಲ್ಲ ಎಂಬ ದೋಷವನ್ನು ಎದುರಿಸಬಹುದು.

ಇನ್ನು ಮೊಬೈಲ್‌ನಲ್ಲಿ ಹೆಚ್ಚಾಗಿ ಬಳಸಲಾಗುವ ಥರ್ಡ್ ಪಾರ್ಟಿ ಆಡ್ ಬ್ಲಾಕರ್‌ಗಳು ತಮ್ಮ ಪ್ರಾಥಮಿಕ ಉದ್ದೇಶವನ್ನು ಪೂರೈಸಲು ಸಾಧ್ಯವಾಗುವುದಿಲ್ಲವಾದರೂ ಪ್ಲಾಟ್‌ಫಾರ್ಮ್‌ನಲ್ಲಿ ಜಾಹೀರಾತುಗಳನ್ನು ಸ್ಕಿಪ್ ಮಾಡುವುದನ್ನು ಇದು ಖಚಿತಪಡಿಸುತ್ತದೆ. ಆದರೆ, ನಮ್ಮ ನಿಯಮಗಳು ಥರ್ಡ್ ಪಾರ್ಟಿ ಆಪ್ ಆಪ್‌ಗಳಿಗೆ ಜಾಹೀರಾತುಗಳನ್ನು ಆಫ್ ಮಾಡಲು ಅನುಮತಿಸುವುದಿಲ್ಲ ಎಂದು ನಾವು ಒತ್ತಿಹೇಳಲು ಬಯಸುತ್ತೇವೆ. ಏಕೆಂದರೆ ಅದು ಕ್ರಿಯೇಟರ್ಸ್‌ಗೆ ಹಾಗೂ ವೀಕ್ಷಕರಿಗಾಗಿ ಆದಾಯ ನೀಡುವುದನ್ನು ತಡೆಯುತ್ತದೆ ಎಂದು ಯೂಟ್ಯೂಬ್ ತನ್ನ ಪೋಸ್ಟ್‌ನಲ್ಲಿ ಉಲ್ಲೇಖ ಮಾಡಿದೆ.
ಇದರ ಬದಲಾಗಿ ಅಂದರೆ ಆಡ್ ಬ್ಲಾಕರ್‌ಗಳನ್ನು ಬಳಕೆ ಮಾಡುವ ಬದಲು ಜಾಹೀರಾತು-ಮುಕ್ತ ಅನುಭವ ಪಡೆಯಲು ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಗಳನ್ನು ಖರೀದಿಸಲು ಬಳಕೆದಾರರನ್ನು ಯೂಟ್ಯೂಬ್ ಪ್ರೋತ್ಸಾಹಿಸಿದೆ. ಯೂಟ್ಯೂಬ್‌ನ ಎಪಿಐ ಸೇವೆಗಳ ಸೇವಾ ನಿಯಮಗಳನ್ನು ಅನುಸರಿಸಿದಾಗ ಮಾತ್ರ ಥರ್ಡ್ ಪಾರ್ಟಿ ಆಪ್‌ಗಳು ತಮ್ಮ ಎಪಿಐ ಅನ್ನು ಬಳಸಲು ಅನುಮತಿಸುತ್ತದೆ ಎಂದು ಯೂಟ್ಯೂಬ್ ಹೇಳಿಕೊಂಡಿದೆ.
ಇದರಿಂದ ಏನೆಲ್ಲಾ ಸಮಸ್ಯೆ ಆಗಲಿದೆ?: ಆಡ್ ಬ್ಲಾಕರ್‌ಗಳನ್ನು ಬಳಕೆ ಮಾಡುವುದರಿಂದ ಕ್ರಿಯೇಟರ್ಸ್ ಮತ್ತು ಸೇವೆ ಎರಡಕ್ಕೂ ಯೂಟ್ಯೂಬ್ನ ಹಣಗಳಿಕೆಯ ಕಾರ್ಯತಂತ್ರದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಜಾಹೀರಾತು ಮುಕ್ತ ಕಂಟೆಂಟ್ ಅನ್ನು ವೀಕ್ಷಿಸುವ ಇಂತಹ ಅನೈತಿಕ ವಿಧಾನಗಳನ್ನು ನಿರ್ಬಂಧಿಸುವುದರಿಂದ ಯೂಟ್ಯೂಬ್ ಪ್ರೀಮಿಯಂ ಗಾಗಿ ಉತ್ತಮ ಪ್ರಮಾಣದ ಹೊಸ ಚಂದಾದಾರರನ್ನು ಆಕರ್ಷಿಸಲು ಯೂಟ್ಯೂಬ್‌ಗೆ ಅವಕಾಶ ನೀಡಲಾಗುತ್ತದೆ ಮತ್ತು ಅದೇ ಸಮಯದಲ್ಲಿ, ಬಳಕೆದಾರರು ಬಯಸದಿದ್ದರೆ ಜಾಹೀರಾತುಗಳೊಂದಿಗೆ ಕಂಟೆಂಟ್ ಅನ್ನು ವೀಕ್ಷಿಸಲು ಒತ್ತಾಯಿಸುತ್ತದೆ.

ಯೂಟ್ಯೂಬ್ ಪ್ರೀಮಿಯಂ ಸೌಲಭ್ಯ ಪಡೆಯುವುದು ಹೇಗೆ? ಮೊದಲು ಆಪ್ ಅನ್ನು ಓಪನ್ ಮಾಡಿ. ನಂತರ ನೀವು ಚಂದಾದಾರಿಕೆಗಾಗಿ ಬಳಸಲು ಬಯಸುವ ಗೂಗಲ್ ಖಾತೆಗೆ ಸೈನ್ ಇನ್ ಮಾಡಿ. ನಂತರದಲ್ಲಿ ಮೇಲಿನ ಬಲ ಮೂಲೆಯಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ. ಅಲ್ಲಿ ಯೂಟ್ಯೂಬ್ ಪ್ರೀಮಿಯಂ ಪಡೆಯಿರಿ ಅಥವಾ ನಿಮ್ಮ ಪ್ರಯೋಗವನ್ನು ಪ್ರಾರಂಭಿಸಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
ವೆಬ್‌ಸೈಟ್‌ನಲ್ಲಿ ಈ ಸೌಲಭ್ಯ ಪಡೆಯುವುದು ಹೇಗೆ?: ನಿಮ್ಮ ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ youtube.com/premium ಗೆ ಹೋಗಿ. ನಿಮ್ಮ ಸ್ಥಳ ಮತ್ತು ಪ್ರಸ್ತುತ ಕೊಡುಗೆಗಳನ್ನು ಅವಲಂಬಿಸಿ ಉಚಿತವಾಗಿ ಪ್ರಯತ್ನಿಸಿ ಅಥವಾ ಸಮಾನವಾದ ಆಯ್ಕೆಯನ್ನು ಕ್ಲಿಕ್ ಮಾಡಿ ಎಂಬ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಜಾಹೀರಾತು-ಮುಕ್ತ ಅನುಭವದ ಜೊತೆಗೆ, ಯೂಟ್ಯೂಬ್ ಪ್ರೀಮಿಯಂ ಆಫ್‌ಲೈನ್ ವೀಕ್ಷಣೆಗಾಗಿ ವಿಡಿಯೋಗಳನ್ನು ಡೌನ್‌ಲೋಡ್ ಮಾಡುವ ಸಾಮರ್ಥ್ಯ, ನಿಮ್ಮ ಫೋನ್‌ನಲ್ಲಿ ಹಿನ್ನೆಲೆಯಲ್ಲಿ ವಿಡಿಯೋಗಳನ್ನು ಪ್ಲೇ ಮಾಡುವುದು ಮತ್ತು ವಿಶೇಷವಾದ ಯೂಟ್ಯೂಬ್ ಒರಿಜಿನಲ್ಸ್ ಕಂಟೆಂಟ್ ಅನ್ನು ಪ್ರವೇಶಿಸುವಂತಹ ಪ್ರಯೋಜನಗಳನ್ನು ಇದರಲ್ಲಿ ನೀಡಲಾಗುತ್ತದೆ.


Click it and Unblock the Notifications








