Just In
Don't Miss
- News
ಭಾರತದಲ್ಲಿ ಒಂದೇ ದಿನ 31 ಲಕ್ಷ ಮಂದಿಗೆ ಕೊರೊನಾವೈರಸ್ ಲಸಿಕೆ
- Finance
ಲಾಕ್ಡೌನ್ ಪರಿಹಾರವಲ್ಲ, ಹೆಚ್ಚಿನ ಕೋವಿಡ್-19 ಲಸಿಕೆ ಪರವಾನಗಿ ಪಡೆಯಬೇಕಿದೆ: ಚಂದ್ರಶೇಖರನ್
- Automobiles
ಹೊಸ ಇನ್ಪೋಟೈನ್ ಸಿಸ್ಟಂ ಸೌಲಭ್ಯ ಪಡೆದುಕೊಳ್ಳಲಿವೆ ಫೋಕ್ಸ್ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್!
- Sports
ಬ್ರಿಟನ್ನ ಕೆಂಪು ಪಟ್ಟಿಗೆ ಭಾರತ ಸೇರ್ಪಡೆ, WTC ಫೈನಲ್ಗೆ ತೊಡಕು?!
- Movies
ತಂದೆ-ತಾಯಿಯ ಮದುವೆ ರಹಸ್ಯ ಬಿಚ್ಚಿಟ್ಟ ನಟಿ ಕಂಗನಾ ರಣಾವತ್
- Lifestyle
ಮಂಗಳವಾರದ ಭವಿಷ್ಯ: ಇಂದು ಯಾವ ರಾಶಿಯವರಿಗೆ ಅದೃಷ್ಟದ ದಿನ
- Education
International Labour Day 2021: ಮೇ 1ರಂದು ಕಾರ್ಮಿಕರ ದಿನವನ್ನಾಗಿ ಏಕೆ ಆಚರಿಸಲಾಗುತ್ತೆ ?
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒಪ್ಪೋ A12 ಫೋನ್: ವೇಗದ ಕಾರ್ಯದಕ್ಷತೆ ಜೊತೆಗೆ ಗೇಮಿಂಗಿಗೂ ಜಬರ್ದಸ್ತ್ ಆಗಿದೆ!
ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳಿಲ್ಲಿ ಒಂದಾದ ಒಪ್ಪೋ ಸಂಸ್ಥೆಯು ಈಗಾಗಲೇ ಭಿನ್ನ ಶ್ರೇಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅವುಗಳಲ್ಲಿ ಬಜೆಟ್ ಬೆಲೆಯಿಂದ ದುಬಾರಿ ಬೆಲೆಯ ವರೆಗಿನ ಫೋನ್‌ಗಳಲ್ಲಿ ಉತ್ತಮ ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ ಫೀಚರ್ಸ್‌ಗಳನ್ನು ಅಳವಡಿಸಿ ಗ್ರಾಹಕರನ್ನು ಸೆಳೆದಿದೆ. ಅದೇ ಹಾದಿಯಲ್ಲಿ ಒಪ್ಪೊ ಇದೀಗ ಹೊಸದಾಗಿ ಒಪ್ಪೋ A12 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಸ್ಮಾರ್ಟ್‌ಫೋನ್ ಪ್ರಿಯರನ್ನು ಆಕರ್ಷಿಸಿದೆ.

ಈ ಸ್ಮಾರ್ಟ್‌ಫೋನ್ 3GB RAM + 32GB ಸ್ಟೋರೇಜ್ ಹಾಗೂ 4GB RAM + 64GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. ಇದರೊಂದಿಗೆ ಎಸ್‌ಡಿ ಕಾರ್ಡ್ ಮೂಲಕ 256GB ವರೆಗೂ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶವನ್ನು ಸಹ ಒದಗಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್ ಬ್ಯಾಟರಿ 4,230 mAh ಹೇವಿ ಇದ್ದು, ದೀರ್ಘಕಾಲದ ವರೆಗೂ ಬಾಳಿಕೆ ನೀಡುತ್ತದೆ. ಒಂದು ದಿನ ನಿರಾತಂಕವಾಗಿ ಬ್ಯಾಕ್‌ಅಪ್ ಒದಗಿಸುತ್ತದೆ. ಆಂಡ್ರಾಯ್ಡ್ ಸಪೋರ್ಟ್ ಸಹ ಉತ್ತಮವಾಗಿದೆ.

ಹಾಗೆಯೇ ಒಪ್ಪೊ A12 ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾ 13 ಎಂಪಿ ಮತ್ತು ಸೆಕೆಂಡರಿ ಕ್ಯಾಮೆರಾ 2 ಎಂಪಿ ಸಂವೇದಕವನ್ನು ಹೊಂದಿವೆ. ಇದರೊಂದಿಗೆ ಈ ಕ್ಯಾಮೆರಾ ರಚನೆ AI ಕೃತಕ ಬುದ್ಧಿಮತ್ತೆ ಒಳಗೊಂಡಿದೆ. ಇನ್ನು ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಎಐ ಫೇಸ್ ಅನ್ಲಾಕ್ ವಿಶೇಷತೆಗಳನ್ನು ಸಹ ಇದು ಪಡೆದಿರುವುದು ವಿಶೇಷ. ಈ ಫೋನಿನ ಎಲ್ಲ ಫೀಚರ್ಸ್‌ಗಳ ಬಗ್ಗೆ ವಿವರವಾಗಿ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಉತ್ತಮ ಸ್ಟೋರೇಜ್ ಸಫೋರ್ಟ್
ಒಪ್ಪೊ A12 ಸ್ಮಾರ್ಟ್‌ಫೋನ್ ಬಜೆಟ್ ಫೋನಾದರೂ ಉತ್ತಮ ಸ್ಟೋರೇಜ್ ಸಾಮರ್ಥ್ಯ ಪಡೆದಿದೆ. ಈ ಫೋನ್ನಲ್ಲಿ ಮೀಡಿಯಾ ಫೈಲ್‌ಗಳನ್ನು ಸಂಗ್ರಹಿಸುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಏಕೆಂದರೇ ಈ ಫೋನ್ 3GB RAM + 32GB ಸ್ಟೋರೇಜ್ ಹಾಗೂ 4GB RAM + 64GB ಸ್ಟೋರೇಜ್ ನ ಎರಡು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಹೆಚ್ಚುವರಿ ಬಾಹ್ಯ ಮೆಮೊರಿಗಾಗಿ ಸುಮಾರು 256GB ವರೆಗೆ ವಿಸ್ತರಿಸಲುವ ಅವಕಾಶ ಹೊಂದಿದೆ. ಗೇಮಿಂಗ್ ಅನುಭವವನ್ನು ಹೆಚ್ಚಿಸುವ ಮೂಲಕ ಮತ್ತು ಬಹು-ಕಾರ್ಯಗಳನ್ನು ಹೆಚ್ಚು ಸುಲಭಗೊಳಿಸುವ ಮೂಲಕ ಅಂತ್ಯವಿಲ್ಲದ ಸಾಧ್ಯತೆಗಳನ್ನು ಸೃಷ್ಟಿಸಲು ಒಪ್ಪೋ ಗ್ರಾಹಕರಿಗೆ ಅವಕಾಶ ನೀಡುತ್ತದೆ.

ಪವರ್‌ಫುಲ್ ಬ್ಯಾಟರಿ ಬಾಳಿಕೆ
ಒಪ್ಪೋ A12 ಸ್ಮಾರ್ಟ್‌ಫೋನ್ 4,230mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ದೀರ್ಘಾವಾಧಿ ಬ್ಯಾಕ್‌ಅಪ್ ಸಾಮರ್ಥ್ಯ ಪಡೆದಿದೆ. ಬಳಕೆದಾರರಿಗೆ 8 ಗಂಟೆಗಳ ವೀಡಿಯೊ ವಿಷಯವನ್ನು ವೀಖ್ಷಿಸಲು ಅನುವು ಮಾಡಿಕೊಡುತ್ತದೆ. ನಿಮ್ಮ ನೆಚ್ಚಿನ ಟಿವಿ ಸರಣಿಯಲ್ಲಿ ನಿರಾತಂಕವಾಗಿ ವೀಖ್ಷಿಸಬಹುದು. ಹೆಚ್ಚು ಡೇಟಾ ಕಬಳಿಸುವ ಗೇಮ್‌ಗಳನ್ನು ಸಹ ಸುಲಭವಾಗಿ ಆಡಬಹುದು. ಚಾರ್ಜಿಂಗ್ ಸಹ ಹೆಚ್ಚು ಪೂರಕವಾಗಿದ್ದು, ಮೀಡಿಯಾ ಟೆಕ್ ಪಿ 35 ಪ್ರೊಸೆಸರ್ ಬೆಂಬಲ ಸಹ ಇದೆ. ಒಂದು ದಿನ ಆರಾಮವಾಗಿ ಬ್ಯಾಕ್‌ಅಪ್ ನೀಡುತ್ತದೆ.
Add an abstract edge to your style! Introducing the #OPPOA12, equipped with a Dual Rear Camera, 4GB RAM & 64GB ROM, 4230mAh Battery and many more features for you to explore. Sale starts from 10th June.
— OPPO India (@oppomobileindia) June 8, 2020
Know more: https://t.co/zoFISXoIO8 pic.twitter.com/h3KCqyZKjO
ಸುರಕ್ಷತೆಗೆ ಆದ್ಯತೆ ಇದೆ
OPPO ಯಾವಾಗಲೂ ಬಳಕೆದಾರರ ಸುರಕ್ಷತೆಗೆ ಆದ್ಯತೆ ನೀಡುತ್ತಾ ಸಾಗಿ ಬಂದಿದ್ದು, ಈಗ ತನ್ನ ಹೊಸ OPPO A12 ಸ್ಮಾರ್ಟ್‌ಫೋನ್‌ನಲ್ಲಿಯೂ ಸಹ ಸುರಕ್ಷತೆಗೆ ಹೆಚ್ಚು ಒತ್ತು ನೀಡಿದೆ. ಒಪ್ಪೋ A12 ತನ್ನ ಗ್ರಾಹಕರಿಗೆ ಬಳಕೆದಾರರು ಫೋನ್ ಹಿಂಬದಿಯಲ್ಲಿ ಫಿಂಗರ್ಪ್ರಿಂಟ್ ಸೆನ್ಸಾರ್ ಅನ್ನು ನೀಡಿದೆ. ಹಾಗೆಯೇ AI ಫೇಸ್ ಅನ್ಲಾಕ್ ಸೌಲಭ್ಯವನ್ನು ಸಹ ಒಪ್ಪೋದ ಈ ಫೋನ್ ಹೊಂದಿದೆ. ಈ ಕಾರ್ಯವು ಹಲವಾರು ಸಂದರ್ಭಗಳಲ್ಲಿ ಸೂಕ್ತವಾಗಿ ಬರುತ್ತದೆ ಮತ್ತು ಬಳಕೆದಾರರಿಗೆ ಸುರಕ್ಷಿತ ಸ್ಮಾರ್ಟ್‌ಫೋನ್ ಅನುಭವವನ್ನು ಖಾತ್ರಿಗೊಳಿಸುತ್ತದೆ. ಸುರಕ್ಷತೆಯನ್ನು ಖಾತರಿಪಡಿಸುವ ಹಲವಾರು ಅನುಕರಣೀಯ ವೈಶಿಷ್ಟ್ಯಗಳನ್ನು ಹೊಂದಿರುವ ಬಜೆಟ್ ಫೋನ್ ಕನಸು ನನಸಾಗುವಂತಿದೆ.

AI ಆಧಾರಿತ ಕ್ಯಾಮೆರಾ
ಈ ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ. ಇದರೊಂದಿಗೆ ಕೃತಕ ಬುದ್ಧಿಮತ್ತೆಯ ಸೌಲಭ್ಯವನ್ನು ಹೊಂದಿದ್ದು, ಅತ್ಯುತ್ತಮ ಕ್ಯಾಮೆರಾ ಕ್ಯಾಮೆರಾ ಸೆಟಅಪ್ ಹೊಂದಿದೆ. ಮುಖ್ಯ ಕ್ಯಾಮೆರಾ 13 ಎಂಪಿ ಮತ್ತು ಸೆಕೆಂಡರಿ ಕ್ಯಾಮೆರಾ 2 ಎಂಪಿ ಸಂವೇದಕವನ್ನು ಹೊಂದಿವೆ. ಇದರೊಂದಿಗೆ ಈ ಕ್ಯಾಮೆರಾ ರಚನೆ AI ಕೃತಕ ಬುದ್ಧಿಮತ್ತೆ ಒಳಗೊಂಡಿದೆ. ಮುಖ್ಯ ಕ್ಯಾಮೆರಾ 13 ಎಂಪಿ ಮತ್ತು ಸೆಕೆಂಡರಿ ಕ್ಯಾಮೆರಾ 2 ಎಂಪಿ ಸಂವೇದಕವನ್ನು ಹೊಂದಿವೆ. ಇದರೊಂದಿಗೆ ಈ ಕ್ಯಾಮೆರಾ ರಚನೆ AI ಕೃತಕ ಬುದ್ಧಿಮತ್ತೆ ಒಳಗೊಂಡಿದೆ. ಎಐ-ಶಕ್ತಗೊಂಡ 13 ಎಂಪಿ ಮುಖ್ಯ ಕ್ಯಾಮೆರಾ ಸ್ಫಟಿಕ ಸ್ಪಷ್ಟ ವಿವರ ಮತ್ತು ಹೆಚ್ಚಿನ ರೆಸಲ್ಯೂಶನ್‌ನಲ್ಲಿ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ, 2 ಎಂಪಿ ಆಳದ ಕ್ಯಾಮೆರಾ ಪ್ರತಿ ಶಾಟ್ ಅನ್ನು ಡಿಎಸ್ಎಲ್ಆರ್ ಚಿತ್ರದಂತೆ ಕಾಣುವಂತೆ ಮಾಡುತ್ತದೆ. ಇದು ಹಾರ್ಡ್‌ವೇರ್-ಆಧಾರಿತ ಪೋರ್ಟ್ರೇಟ್ ಬೊಕೆ ಪರಿಣಾಮದೊಂದಿಗೆ ಜೋಡಿಯಾಗಿರುತ್ತದೆ ಮತ್ತು ಹಿನ್ನೆಲೆಯಲ್ಲಿ ವಿಷಯಗಳನ್ನು ಮಸುಕುಗೊಳಿಸುವಾಗ ಚಿತ್ರದಲ್ಲಿನ ವಿಷಯವನ್ನು ಪ್ರಧಾನ ಕೇಂದ್ರವಾಗಿ ಮಾಡುತ್ತದೆ.

ಆಕರ್ಷಕ ಡಿಸೈನ್
ಒಪ್ಪೋ ಎ 12 ಫೋನ್ ಆಕರ್ಷಕ ಡಿಸೈನ್‌ನಲ್ಲಿ ಗ್ರಾಹಕರನ್ನು ಸೆಳೆದಿದೆ. ಈ ಫೋನ್ ತೆಳುವಾದ ವಿನ್ಯಾಸವನ್ನು ಹೊಂದಿದ್ದು, ಒಂದು ಕೈಯಿಂದ ಕಂಫರ್ಟ್ ಆಗಿ ಬಳಕೆಯನ್ನು ಮಾಡಬಹುದಾಗಿದೆ. 8.3 ಎಂಎಂ ದಪ್ಪವಿರುವ ತೆಳುವಾದ ಬಾಗಿದ ದೇಹದೊಂದಿಗೆ ಬರುತ್ತದೆ ಮತ್ತು ಕೇವಲ 165 ಗ್ರಾಂ ತೂಗುತ್ತದೆ ಒಟ್ಟಾರೆ ಸೌಂದರ್ಯಕ್ಕೆ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ. ಈ ಫೋನ್ 6.22 "ವಾಟರ್‌ಡ್ರಾಪ್ ಐ ಪ್ರೊಟೆಕ್ಷನ್ ಸ್ಕ್ರೀನ್ ಅನ್ನು ಹೊಂದಿದೆ, ಇದು ನೀಲಿ ಬೆಳಕಿನ ಫಿಲ್ಟರ್‌ಗಳೊಂದಿಗೆ ಬಳಕೆದಾರರನ್ನು ಕಣ್ಣಿನ ಒತ್ತಡದಿಂದ ರಕ್ಷಿಸುತ್ತದೆ. ಹಿಂಭಾಗವು ಆಹ್ಲಾದಕರವಾದ 3D ಡೈಮಂಡ್ ಬ್ಲೇಜ್ ವಿನ್ಯಾಸವನ್ನು ಹೊಂದಿದೆ,

ಬೆಲೆ ಮತ್ತು ಲಭ್ಯತೆ
ಒಪ್ಪೋ A12 ಸ್ಮಾರ್ಟ್‌ಫೋನ್ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. 3GB RAM ಮತ್ತು 32GB ಸ್ಟೋರೇಜ್ ಫೋನ್ ಬೆಲೆಯು 9,990ರೂ. ಆಗಿದೆ. ಹಾಗೆಯೇ 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಬೆಲೆಯು 11,490ರೂ. ಆಗಿದೆ. ಇದೇ ಜೂನ್ 10ರಂದು ಆನ್‌ಲೈನ್ ಹಾಗೂ ಆಫ್‌ಲೈನ್ ಮಾರುಕಟ್ಟೆಯಲ್ಲಿ ಈ ಫೋನ್ ಖರೀದಿಗೆ ಲಭ್ಯವಾಗಲಿದೆ. ಈ ಫೋನ್ ನೀಲಿ ಮತ್ತು ಕಪ್ಪು ಬಣ್ಣಗಳ ಆಯ್ಕೆಗಳನ್ನು ಒಳಗೊಂಡಿದ್ದು, ಎಲ್ಲಾ ಆಫ್‌ಲೈನ್ ಮಳಿಗೆಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅತ್ಯಾಕರ್ಷಕ ಕೊಡುಗೆಗಳೊಂದಿಗೆ ಬರಲಿದೆ. ಇನ್ನು ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೇ EMIನೊಂದಿಗೆ 5 ಪ್ರತಿಶತ ಕ್ಯಾಶ್ಬ್ಯಾಕ್ ಲಭ್ಯವಾಗಲಿದೆ. ಮತ್ತು ಫೆಡರಲ್ ಬ್ಯಾಂಕ್ ಡೆಬಿಟ್ ಕಾರ್ಡ್ ಇಎಂಐನಲ್ಲಿ 5 ಪ್ರತಿಶತ ಕ್ಯಾಶ್ಬ್ಯಾಕ್ ಪಡೆಯಬಹುದು. ಕ್ರೆಡಿಟ್ ಕಾರ್ಡ್ ಇಎಂಐ ಮತ್ತು ಡೆಬಿಟ್ ಕಾರ್ಡ್ ಇಎಂಐ ವಹಿವಾಟಿನಲ್ಲಿ 6 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ ಇಎಂಐ ಅನ್ನು ಸಹ ಅವರು ಪಡೆಯಬಹುದು. ಗ್ರಾಹಕರಿಗೆ ಬಜಾಜ್ ಫಿನ್‌ಸರ್ವ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಹೋಮ್ ಕ್ರೆಡಿಟ್, ಎಚ್‌ಡಿಬಿ ಫೈನಾನ್ಷಿಯಲ್ ಸರ್ವೀಸಸ್ ಮತ್ತು ಐಸಿಐಸಿಐ ಬ್ಯಾಂಕ್‌ನಿಂದ ಆಕರ್ಷಕ ಇಎಂಐ ಆಯ್ಕೆಗಳು ಲಭ್ಯವಿದೆ.
ಒಪ್ಪೋ A12 ಕೀ ಫೀಚರ್ಸ್ ಲುಕ್
ತೂಕ | 165 ಗ್ರಾಂ |
ದಪ್ಪ | 8.3 ಮಿ.ಮೀ |
ಗಾತ್ರ | 15.59 x 7.55 x 0.83 ಸೆಂ |
ಡಿಸ್‌ಪ್ಲೇ | 6.22-ಇಂಚಿನ ವಾಟರ್‌ಡ್ರಾಪ್ |
ರೆಸಲ್ಯೂಶನ್ | 720 x 1520 (ಟಿಎಫ್‌ಟಿ-ಎಲ್‌ಸಿಡಿ) * 19: 9 |
ಆಕಾರ | 19: 9 |
ಅನುಪಾತ | 89% ಸ್ಕ್ರೀನ್-ಟು-ಬಾಡಿ ಅನುಪಾತ |
ಬಣ್ಣ | ಕಪ್ಪು ಮತ್ತು ನೀಲಿ |
ಡ್ಯುಯಲ್ ರಿಯರ್ ಕ್ಯಾಮೆರಾ | 13 ಎಂಪಿ ಮುಖ್ಯ ಕ್ಯಾಮೆರಾ + 2 ಎಂಪಿ ಆಳ ಕ್ಯಾಮೆರಾ |
ಮುಂಭಾಗದ ಕ್ಯಾಮೆರಾ | 5 ಎಂಪಿ |
ಬ್ಯಾಟರಿ | 4230 mAh |
ಓಎಸ್ | ಆಂಡ್ರಾಯ್ಡ್ 9 |
ಪ್ರೊಸೆಸರ್ | ಆಕ್ಟಾ-ಕೋರ್ ಪ್ರೊಸೆಸರ್ ಪಿ 35 |
ಸಂಪರ್ಕ | WLAN 802.11a/b/g/n/ac WLAN 2.4G, WLAN 5.1G, WLAN 5.8G |
ಬ್ಲೂಟೂತ್ | 5.0 |
ಇತರೆ | 3D ಹಿಂಬದಿ |
ಹಿಂಬದಿ | ಫಿಂಗರ್‌ಪ್ರಿಂಟ್ ನೆನ್ಸಾರ್, ಎಐ ಫೇಸ್ ಅನ್‌ಲಾಕ್ |
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999