ಅಕ್ಟೋಬರ್‌ನಿಂದ ರೋಮಿಂಗ್‌ ಇಲ್ಲ : ಕಪಿಲ್‌ ಸಿಬಲ್‌

By Ashwath
|

ಬಜೆಟ್‌ನಲ್ಲಿ ಮೊಬೈಲ್‌ ಹ್ಯಾಂಡ್‌ಸೆಟ್‌ ಮೇಲೆ ಹೆಚ್ಚುವರಿ ತೆರಿಗೆ ಹಾಕಿ ಗ್ರಾಹಕರಿಗೆ ಬಿಸಿ ಮುಟ್ಟಿಸಿರುವ ಕೇಂದ್ರ ಸರ್ಕಾರ ರೋಮಿಂಗ್‌ ವಿಷಯದಲ್ಲಿ ಗ್ರಾಹಕರಿಗೆ ಸಿಹಿ ನೀಡಿದೆ.
ಈ ವರ್ಷದ ಅಕ್ಟೋಬರ್‌ನಿಂದ ರೋಮಿಂಗ್‌ ದರವನ್ನು ಸಂಪೂರ್ಣ ತೆಗೆದು ಹಾಕಲಾಗುವುದು ಎಂದು ಕೇಂದ್ರ ಸರ್ಕಾರದ ಟೆಲಿಕಾಂ ಮಂತ್ರಿ ಕಪಿಲ್‌ ಸಿಬಲ್‌ ಚಂಡಿಘಡದಲ್ಲಿ ಘೋಷಿಸಿದ್ದಾರೆ.
ದೂರಸಂಪರ್ಕ ನೀತಿ-2012ರ ಪ್ರಕಾರ ಕ್ಯಾಬಿನೆಟ್‌ ಸಭೆಯಲ್ಲಿಚರ್ಚಿಸಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಿಬಲ್‌ ತಿಳಿಸಿದ್ದಾರೆ. ಈ ಮೂಲಕ ದೇಶದ ಯಾವುದೇ ರಾಜ್ಯಕ್ಕೆ ಹೋದರೂ ಗ್ರಾಹಕ ಸ್ಥಳೀಯ ದರದಲ್ಲೇ ಮಾತನಾಡಬಹುದಾಗಿದೆ.

ಅಕ್ಟೋಬರ್‌ನಿಂದ ರೋಮಿಂಗ್‌ ಇಲ್ಲ : ಕಪಿಲ್‌ ಸಿಬಲ್‌

2012ರ ದೂರಸಂಪರ್ಕ ನೀತಿಯ ಪ್ರಮುಖ ಅಂಶಗಳು :

*ಗ್ರಾಮೀಣ ಭಾಗದಲ್ಲಿ ದೂರ ಸಂಪರ್ಕ ಸಾಂದ್ರತೆಯನ್ನು 2017ರೊಳಗೆ ಶೇ 39 ರಿಂದ 70ಕ್ಕೆ ಏರಿಸುವುದು.
* ಒಂದೇ ತರಂಗಗುಚ್ಛದಲ್ಲಿದ್ದರೆ ಯಾವುದೇ ತಂತ್ರಜ್ಞಾನ, ಯಾವುದೇ ಸೇವೆ ಲಭ್ಯವಾಗುವಂತೆ ಮಾಡುವುದು.
* ಟೆಲಿಕಾಂ ಲೈಸನ್ಸ್, ಡೀಲಿಂಕಿಂಗ್ ಸ್ಪೆಕ್ಟಂ ಲೈಸನ್ಸ್, ಆನ್ ಲೈನ್ ಅರ್ಜಿ ಹಾಗೂ ನಿರ್ವಹಣೆ
* ಎಂಎನ್‌ಪಿ' ಸೌಲಭ್ಯ,'ಒಂದು ದೇಶ- ಒಂದು ಲೈಸೆನ್ಸ್', 'ಒಂದು ದೇಶ ಉಚಿತ ರೋಮಿಂಗ್' ಸೌಲಭ್ಯ.
* Voice over Internet Protocol.
* ಕ್ಲೌಡ್ ಕಂಪ್ಯೂಟಿಂಗ್, ಉನ್ನತ ತಂತ್ರಜ್ಞಾನ ಅಳವಡಿಕೆ, IPV6 ಜಾಲ ಬಳಕೆ. 2020 ಹೊತ್ತಿಗೆ ಶೇ 100ರಷ್ಟು ದೂರ ಸಂಪರ್ಕ ಜಾಲವನ್ನು ಗ್ರಾಮೀಣ ಭಾಗದಲ್ಲಿ ಹೊಂದುವುದು.
* ಮೊಬೈಲ್ ಫೋನ್ ಗಳನ್ನು ಆರ್ಥಿಕ, ಸಾಮಾಜಿಕ ಸಬಲೀಕರಣಕ್ಕೆ ಬಳಸುವುದು.
* ಎಲ್ಲರಿಗೂ ಬ್ರಾಡ್ ಬ್ಯಾಂಡ್ 2 ಎಂಬಿಪಿಎಸ್ ಕನಿಷ್ಠ ಡೌನ್‌ಲೋಡ್‌ ಮಿತಿ.

ಲಿಂಕ್‌ : 3ಜಿ ಸೇವೆಯಲ್ಲಿ ದರ ಸಮರ ಆರಂಭ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X