Subscribe to Gizbot

100 ವರ್ಷಗಳಲ್ಲಿ ಮನುಕುಲ ಅಂತ್ಯ; ಸ್ಟೀಫನ್‌ ಹಾಕಿಂಗ್‌

Written By:

'ಸ್ಟೀಫನ್‌ ವಿಲಿಯಂ ಹಾಕಿಂಗ್‌' ರವರು ಇಂಗ್ಲೀಷ್ ಸೈದ್ಧಾಂತಿಕ ಭೌತಶಾಸ್ತ್ರಜ್ಞರಾಗಿದ್ದು, ಕೇಂಬ್ರಿಡ್ಜ್‌ ವಿಶ್ವವಿದ್ಯಾನಿಲಯದ ಸೈದ್ಧಾಂತಿಕ ವಿಶ್ವವಿಜ್ಞಾನ ಸಂಶೋಧನಾ ಕೇಂದ್ರದ ನಿರ್ದೇಶಕರು ಹೌದು.

ಸ್ಟೀಫನ್‌ ವಿಲಿಯಂ ಹಾಕಿಂಗ್'ರವರು ಯಾವುದೇ ವಿಷಯ ಎಷ್ಟೇ ಭಯಾನಕವಾಗಿದ್ದರು ಸಹ ಅವರು ಸತ್ಯವನ್ನೇ ಹೇಳುತ್ತಾರೆ. ಅವರ ಪ್ರಕಾರ ಮನುಕುಲಕ್ಕೆ ಮೂರು ಸಂಭವನೀಯ ಬೆದರಿಕೆಗಳು ಇವೆ.

ಕೇವಲ ಇನ್ನೂ 100 ವರ್ಷಗಳಲ್ಲಿ ಮನುಕುಲದ ಮನೆಬಾಗಿಲಿಗೆ ಪ್ರಳಯವನ್ನು ತರುವಷ್ಟು ಸಾಮರ್ಥ್ಯವನ್ನು ರೋಬೋಟ್‌ಗಳು, ಏಲಿಯನ್‌ಗಳು ಹಾಗೂ ನ್ಯೂಕ್ಲಿಯಾರ್‌ ಯುದ್ಧ ಹೊಂದಿದ್ದು, ಮಾನವ ಸಂಕುಲ ಕೊನೆಗೊಳ್ಳಲಿದೆ ಎಂದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಏಲಿಯನ್ ಅನ್ವೇಷಣೆಗಾಗಿ ಬಹುದೊಡ್ಡ ಯೋಜನೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಟೀಫನ್ ಹಾಕಿಂಗ್

1

ಕೃತಕ ಬುದ್ಧಿವಂತಿಕೆಯಿಂದ ಸ್ಟೀಫನ್‌ ಹಾಕಿಂಗ್‌ ಈಗಾಗಲೇ ರೆಡ್‌ ಫ್ಲಾಗ್‌ ಅನ್ನು ಎತ್ತಿಹಿಡಿದಿದ್ದು, ಹೊಸ ತಂತ್ರಜ್ಞಾನಗಳು ಹೇಗೆ ಮಾನವ ಸಂಕುಲಗಳನ್ನು ಕೊನೆಗೊಳಿಸಲಿವೆ ಎಂದು ಹೇಳಿದ್ದಾರೆ. ಅಲ್ಲದೇ ಅವುಗಳನ್ನು ನಾವು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲದಿರುವ ಬಗ್ಗೆಯು ಸಹ ಹೇಳಿದ್ದಾರೆ.

ಕೃತಕ ಬುದ್ಧಿವಂತಿಕೆ

2

ಕೃತಕ ಬುದ್ಧಿವಂತಿಕೆ ಪ್ರಕಾರ ಸಹಜವಾದ ಕೆಡಕು ಉಂಟಾಗುವುದಿಲ್ಲ ಎಂದರೂ ಸಹ ಸಾಮರ್ಥ್ಯವು ಹೆಚ್ಚಾಗೆ ಇದೆ ಎನ್ನಲಾಗಿದೆ.

ಕೃತಕ ಮಷಿನ್‌ಗಳು

3

ಕೃತಕ ಮಷಿನ್‌ಗಳು (ಸಾದೃಶ್ಯ ಮಷಿನ್‌ಗಳ ಚಿತ್ರ ನೋಡಿರಿ) ನಮಗಿಂತ ಹೆಚ್ಚು ಬುದ್ಧಿವಂತರಾದಲ್ಲಿ, ಇಂಟೆಲಿಜೆನ್ಸ್‌ ಸ್ಫೋಟವನ್ನು ಎದುರಿಸಬೇಕಾಗುತ್ತದೆ. ಕೃತಕ ಮಷಿನ್‌ಗಳನ್ನು ಅಭಿವೃದ್ದಿ ಮಾಡುವ ಅತಿ ಬುದ್ಧಿವಂತ ಇಂಜಿನಿಯರ್‌ಗಳು ಅವರನ್ನು ಮೀರಿಸುವ ಮಷಿನ್‌ಗಳನ್ನು ಅಭಿವೃದ್ದಿ ಪಡಿಸುವುದೇ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಸ್ಟೀಫನ್‌ ಹಾಕಿಂಗ್‌'ರವರು ಅನಾಲಜಿ ಸಾದೃಶ್ಯ ಮಷಿನ್‌ಗಳ ರೆಫೆರೆನ್ಸ್ ಸಹಿತ ಹೇಳಿದ್ದಾರೆ.

ಏಲಿಯನ್‌ಗಳ ಅಸ್ತಿತ್ವ ಕುರಿತು ಹೀಗೆ ಹೇಳಿದ್ದಾರೆ

4

ಸರ್ಕಾರವು ಏಲಿಯನ್‌ಗಳ ಬುದ್ಧಿವಂತಿಕೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಲ್ಲಿ, ಏಲಿಯನ್‌ಗಳಿಗಿಂತ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರ್ಥ. ನಂತರ ಏನಾದರೂ ಮಾಡಬಹುದು.

ನ್ಯೂಕ್ಲಿಯಾರ್‌ ವೆಪನ್‌ಗಳು

5

ನ್ಯೂಕ್ಲಿಯಾರ್ ವೆಪನ್‌ಗಳು ಎಂದಿಗೂ ಸೂಕ್ತವಲ್ಲ. ರೋಬೋಟ್‌ಗಳು ಮತ್ತು ಏಲಿಯನ್‌ಗಳು ಏನಾದರೂ ಟ್ರಿಕ್ ಅನ್ನು ನಿರ್ವಹಿಸದಿದ್ದಲ್ಲಿ, ಮಾನವರು ನ್ಯೂಕ್ಲಿಯಾರ್ ಯುದ್ಧ ಮಾಡುವುದರಲ್ಲಿ ತೊಡಗುತ್ತಾರೆ ಎಂದು ಸ್ಟೀಫನ್‌ ವಿವರಿಸಿದ್ದಾರೆ.

ಆಕ್ರಮಣ

6

ಮಾನವರು ಬೇಕಾದರೆ ತಮ್ಮ ಬುದ್ಧಿಶಕ್ತಿ ಬಳಸಿ ಆಕ್ರಮಣಶೀಲತೆಯನ್ನು ನಿಯಂತ್ರಿಸಬಹುದು, ಆದರೆ ಅಂತಹ ಯಾವುದೇ ಸೂಚನೆಗಳು ಕಾಣುತ್ತಿಲ್ಲ ಎಂದಿದ್ದಾರೆ ಸ್ಟೀಫನ್‌ ಹಾಕಿಂಗ್.

ನಿಯಂತ್ರಣ

7

ರೋಬೋಟ್‌ಗಳ ಅಭಿವೃದ್ದಿ, ಏಲಿಯನ್‌ ಮತ್ತು ನ್ಯೂಕ್ಲಿಯಾರ್‌ ಯುದ್ಧದ ಬಗೆಗೆ ಹೆಚ್ಚು ನಿಯಂತ್ರಣ ಹೊಂದಿ ನಮ್ಮನ್ನು ನಾವು ಉಳಿಸಿಕೊಳ್ಳಬೇಕಾಗಿದೆ.

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಜೀವನದ 10 ರೋಚಕ ಅಂಶಗಳು

ಮನುಷ್ಯನ ನಾಶಕ್ಕೆ ತಂತ್ರಜ್ಞಾನವೇ ಕಾರಣ :ಸ್ಟೀಫನ್‌ ಹಾಕಿಂಗ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Robots, Aliens And Nuclear Wars Will End Humanity In Less Than 100 Years, Warns Stephen Hawking! Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot