ಏಲಿಯನ್ ಅನ್ವೇಷಣೆಗಾಗಿ ಬಹುದೊಡ್ಡ ಯೋಜನೆ

By Shwetha
|

ಏಲಿಯನ್‌ಗಳ ಶೋಧಕ್ಕಾಗಿ ನಿರಂತರ ಕಾರ್ಯಾಚರಣೆಗಳು ನಡೆಯುತ್ತಲೇ ಇದ್ದು ಬ್ರಿಟಿಷ್ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಹೊಸದಾದ $100 ಮಿಲಿಯನ್ ಪ್ರಾಜೆಕ್ಟ್ ಅನ್ನು ಲಾಂಚ್ ಮಾಡಿದ್ದಾರೆ. ಈ ಕಾರ್ಯಕ್ರಮದ ಆರಂಭಕ್ಕೆ ಯುಎಸ್ ಮೂಲದ ಬಿಲಿಯನೇರ್‌ಗಳು ಹೂಡಿಕೆ ಮಾಡಿದ್ದು ಸಿಲಿಕಾನ್ ವಾಲಿ ಟೆಕ್ನಾಲಜಿ ಹೂಡಿಕೆದಾರರು ಭೌತಶಾಸ್ತ್ರಜ್ಞ ಯೂರಿ ಮಿಲ್ನರ್ ಯೋಜನೆಗೆ ಬೆಂಬಲವಾಗಿದ್ದು ಇದನ್ನು ಅತಿದೊಡ್ಡ ಹುಡುಕಾಟ ಅಂತೆಯೇ ಅನ್ವೇಷಣೆ ಎಂಬುದಾಗಿ ಕರೆಯಲಾಗಿದೆ.

ಭೂಮಿಯ ಮೇಲೆ ಮಾನವ ಜೀವನ ಸ್ವಾಭಾವಿಕವಾದುದು. ಅಂತೆಯೇ ಅನಂತ ಬ್ರಹ್ಮಾಂಡಲ್ಲಿ ಜೀವನದ ಇನ್ನೊಂದು ಭಾಗದ ಪ್ರಸ್ತುತಿ ಇದ್ದೇ ಇರುತ್ತದೆ. ಬ್ರಹ್ಮಾಂಡಲ್ಲಿ ಎಲ್ಲೋ ಬುದ್ಧಿವಂತ ಜೀವನ ನಮ್ಮ ಈ ಜೀವನವನ್ನು ವೀಕ್ಷಿಸುತ್ತಿರಬಹುದು, ನಮ್ಮ ಈ ಜೀವನದ ಅರ್ಥವನ್ನು ಅವರುಗಳು ಕಂಡುಕೊಂಡಿರಬಹುದು ಎಂಬುದಾಗಿ 73 ರ ಹರೆಯದ ಗಾಲಿಕುರ್ಚಿಯಲ್ಲೇ ವಿಜ್ಞಾನಕ್ಕಾಗಿ ಜೀವನ ಸಮರ್ಪಿಸಿದ ವಿಜ್ಞಾನಿ ತಿಳಿಸಿದ್ದಾರೆ. ಬನ್ನಿ ಈ ಕುರಿತಾಗಿ ಸ್ಟೀಫನ್ ಹಾಕಿಂಗ್ ಇನ್ನಷ್ಟು ವಿಷಯಗಳನ್ನು ಹೇಳಿದ್ದು ಅದೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿದುಕೊಳ್ಳೋಣ.

#1

#1

ಜೀವರಹಿತ ಬ್ರಹ್ಮಾಂಡವನ್ನು ನಾವು ಪತ್ತೆಮಾಡಿದ್ದೇವೆ ಇಲ್ಲಿ ಕಾಣದೇ ಇರುವ ಸಂಕೇತಗಳು ಕಂಡುಬಂದಿದ್ದು ಬಂಡೆಗಳನ್ನು ಕಂಡುಕೊಳ್ಳುವ ಮೂಲಕ ಅವುಗಳ ಅಸ್ತಿತ್ವವನ್ನು ನಾವು ಅನ್ವೇಷಿಸಿದ್ದೇವೆ.

#2

#2

ಭೂಮಿಯ ನಂತರವಿರುವ ಹುಡುಕಾಟಕ್ಕೆ ಉತ್ತರವನ್ನು ಕಂಡುಕೊಳ್ಳುವ ಸಮಯ ಒದಗಿ ಬಂದಿದೆ. ನಮಗೆ ಜೀವವಿದ್ದು ನಾವು ಬುದ್ಧಿವಂತರು ಎಂದೆನಿಸಿಕೊಂಡಿದ್ದೇವೆ ಆದ್ದರಿಂದ ನಮಗಿದು ತಿಳಿದಿರಲೇಬೇಕು ಎಂಬುದಾಗಿ ಸ್ಟೀಫನ್ ನುಡಿದಿದ್ದಾರೆ.

#3

#3

ಲಾರ್ಡ್ ಮಾರ್ಟಿನ್ ಹೇಳುವಂತೆ, 21 ನೇ ಶತಮಾನದಲ್ಲಿ ಭೂಮ್ಯಾತೀತ ಜೀವನದ ಅನ್ವೇಷಣೆಯು ಹೆಚ್ಚು ರೋಚಕವಾದ ಸಂಶೋಧನೆ ಎಂದೆನಿಸಿತ್ತು. ಇದೇ ಮಾದರಿಯಲ್ಲಿ ಏಲಿಯನ್‌ಗಳ ಬಗೆಗೆ ಹುಡುಕಾಟವನ್ನು ನಡೆಸಿ ವಿಜ್ಞಾನದ ಬಹು ದೊಡ್ಡ ಕೌತುಕಕ್ಕೆ ಪೂರ್ಣವಿರಾಮವನ್ನು ಹಾಕಬೇಕಾಗಿದೆ.

#4

#4

ಈ ಯೋಜನೆಗಾಗಿ ಹೆಚ್ಚಿನ ಬಿಲಿಯನೇರ್‌ಗಳು ಹೂಡಿಕೆ ಮಾಡಿದ್ದು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹಾರುವ ತಟ್ಟೆಗಳೆಂಬ ಅಗೋಚರ ಜೀವಿಗಳ ಕುರಿತಾದ ಅಧ್ಯಯನವನ್ನು ನಡೆಸುವ ಗುರಿಯನ್ನು ಸ್ಟೀಫನ್‌ರೊಂದಿಗೆ ಇತರೆ ವಿಜ್ಞಾನಿಗಳು ಹಮ್ಮಿಕೊಂಡಿದ್ದಾರೆ.

#5

#5

ಈ ಹಿಂದಿನ ಯೋಜನೆಗಳಿಗಿಂತ 10 ಪಟ್ಟು ಸಾಮರ್ಥ್ಯವಿರುವ ಈ ಯೋಜನೆಯು ರೇಡಿಯೊ ಸ್ಪೆಕ್ಟ್ರಮ್‌ಗಿಂತ 5 ಪಟ್ಟು ಹೆಚ್ಚು ಸ್ಕ್ಯಾನ್ ಮಾಡುತ್ತದೆ ಮತ್ತು 100 ಪಟ್ಟು ವೇಗವಾಗಿದೆ.

#6

#6

'ಬ್ರೇಕ್ ತ್ರೂ ಲಿಸನ್' ಈ ಯೋಜನೆಯಡಿಯಲ್ಲಿ ಎರಡು ಹೆಚ್ಚು ಶಕ್ತಿಶಾಲಿ ಟೆಲಿಸ್ಕೋಪ್‌ಗಳನ್ನು ಬಳಸಿಕೊಂಡು ಸಿಗ್ನಲ್‌ಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ. ವೆಸ್ಟ್ ವರ್ಜಿನಿಯಾದಲ್ಲಿ ಗ್ರೀನ್ ಬ್ಯಾಂಕ್ ಟೆಲಿಸ್ಕೋಪ್ ಮತ್ತು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ಪಾರ್ಕ್ಸ್ ಟೆಲಿಸ್ಕೋಪ್ ಅನ್ನು ಇರಿಸುವ ಯೋಜನೆ ರೂಪುಗೊಂಡಿದೆ.

#7

#7

ಭೂಮಿಗೆ ಹತ್ತಿರವಿರುವ 1,000,000 ನಕ್ಷತ್ರಗಳು ಮತ್ತು ಮಿಲ್ಕಿ ವೇ ಆಚೆಗೂ ಈ ಸಮೀಕ್ಷೆ ನಡೆಯಲಿದ್ದು, 100 ಸಮೀಪ ಗ್ಯಾಲಕ್ಸಿಗಳಿಂದ ಸಂದೇಶಗಳಿಗಾಗಿ ಇದು ಆಲಿಸುತ್ತದೆ.

#8

#8

ಬ್ರೇಕ್ ತ್ರೂ ಲಿಸನ್‌ನೊಂದಿಗೆ ಭೂಮಿಯಲ್ಲಿರುವ ಬುದ್ಧಿವಂತ ಜೀವನಕ್ಕಾಗಿ ಹುಡುಕಾಟವನ್ನು ಸಿಲಿಕಾನ್ ವಾಲ್ಲಿಯನ್ನು ಸಂಧಿಸುವ ಮೂಲಕ ನಾವು ತರುವ ಯೋಜನೆಗೆ ಬದ್ಧರಾಗಿದ್ದೇವೆ. ನಾವು ಸಂಧಿಸುವ ಡಾಟಾ ತೆರೆಯಲಾಗುತ್ತದೆ ಮತ್ತು ಸಾಮಾಜಿಕ ನೆಟ್‌ವರ್ಕ್‌ಗಳ ಸಮಸ್ಯೆ ಹೋಗಲಾಡಿಸುವಿಕೆ ಶಕ್ತಿಯ ಪ್ರಯೋಜನವನ್ನು ನಾವು ಪಡೆಯಲಿದ್ದೇವೆ ಎಂಬುದಾಗಿ ಮಿಲ್ನರ್ ವಿವರಿಸಿದ್ದಾರೆ.

#9

#9

ಭೂಮ್ಯಾತೀತ ಗುಪ್ತಚರ ಅಥವಾ SETI@ಹೋಮ್ ಪ್ರಾಜೆಕ್ಟ್‌ಗಾಗಿ ಹುಡುಕಾಟದ ಮೂಲಕ ಇನ್ನೊಂದು ಲೋಕದ ಸಿಗ್ನಲ್ ಹುಡುಕುವ ಪ್ರಯತ್ನದಲ್ಲಿ ಸಾರ್ವಜನಿಕರನ್ನು ಭಾಗವಹಿಸಲು ಆಮಂತ್ರಿಸಲಾಗಿದೆ.

#10

#10

ಬ್ರೇಕ್‌ತ್ರು ಮೆಸೇಜ್ ಕಾರ್ಯಕ್ರಮವು ಒಂದು ಅಂತರಾಷ್ಟ್ರೀಯ ಸ್ಪರ್ಧೆಯಾಗಲಿದ್ದು ಮಾನವೀಯತೆ ಮತ್ತು ಭೂಮಿಯನ್ನು ಪ್ರತಿನಿಧಿಸುವ ಸಂದೇಶಗಳನ್ನು ರಚಿಸುವ ಕಾರ್ಯಕ್ರಮಕ್ಕೆ ಹೂಡಿಕೆಯಾಗಿದೆ

#11

#11

ಒಂದು ದಿನ ಇನ್ನೊಂದು ನಾಗರೀಕತೆಗಳಿಗೆ ಕಳುಹಿಸುವ ಸಂದೇಶವಾಗಿ ರೂಪಿತವಾಗಲಿದೆ. ಈ ಪಾರಿತೋಷಕದ ಬೆಲೆಯು ಯುಎಸ್‌ಡಿ 1,000,000 ಆಗಿದ್ದು ಮುಂಬರುವ ತಿಂಗಳಲ್ಲಿ ಹೆಚ್ಚಿನ ವಿವರಗಳನ್ನು ನೀಡಲಾಗುವುದು.

Best Mobiles in India

English summary
The Stephen Hawking funded Breakthrough Initiatives programme is characterised as the 'biggest scientific search ever undertaken for signs of intelligent life beyond Earth.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X