ಕೋವಿಡ್-19 ಸೋಂಕಿತರಿಗೆ ಆಹಾರ ಔಷಧಿ ತಲುಪಿಸುತ್ತೆ ಈ ರೋಬೋಟ್!
ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ವೇಗವಾಗಿ ಮುನ್ನುಗ್ಗುತ್ತಿದೆ. ಈ ಸಾಂಕ್ರಾಮಿಕ ವ್ಯಾಪಕವಾಗಿ ಹರಡದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ವೈದ್ಯರು ಸುರಕ್ಷಾ ಸೂಟ್ ಹಾಗೂ ಮಾಸ್ಕ್ ಧರಿಸಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅದಾಗ್ಯೂ ಸೋಂಕು ತಗಲುವ ಅಪಾಯದಲ್ಲೆ ಅವರು ಚಿಕಿತ್ಸೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ನೆರವಾಗಲು ರೋಬೋಟ್ ಅಭಿವೃದ್ಧಿಪಡಿಸಲಾಗಿದೆ.

ಹೌದು, ಕೊರೊನಾ ಸೋಂಕಿತರಿಗೆ ಆರೈಕೆ ಮಾಡಲು ಕೋ-ಬೋಟ್ ಹೆಸರಿನ ರೋಬೋಟ್ ಅಭಿವೃದ್ಧಿಪಡಿಸಲಾಗಿದೆ. ಈ ರೋಬೋಟ್ ಅನ್ನು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭಮ್ ಜಿಲ್ಲೆಯ ಚಾಯ್ಬಾಸಾದಲ್ಲಿ, ಜಿಲ್ಲಾ ಅಭಿವೃದ್ಧಿ ಉಪ ಆಯುಕ್ತ ಆದಿತ್ಯ ರಂಜನ್ ಅವರ ಮೇಲ್ವಿಚಾರಣೆಯಲ್ಲಿ ಈ ರೋಬೋಟ್ ಅಭಿವೃದ್ಧಿಪಡಿಸಲಾಗಿದೆ. ಈ ರೋಬೋಟ್ ಕೊರೊನಾ ಸೋಂಕಿತರ ಬೇಡ್‌ಗೆ ಊಟ, ನೀರು ಹಾಗೂ ಔಷಧಿಯನ್ನ ತಲುಪಿಸುತ್ತದೆ.

ಯಾರ ಸಹಾಯದ ಹಸ್ತಕ್ಷೇಪವಿಲ್ಲದೇ ಸೋಂಕಿತರ ಬಳಿ ತೆರಳಿ ಅವರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವಲ್ಲಿ ಕೋ-ಬೋಟ್ ಹೆಸರಿನ ಈ ರೋಬೋಟ್ ನೆರವಾಗಲಿದೆ. ಹೀಗಾಗಿ ವೈದ್ಯಕೀಯ ಸಿಬ್ಬಂದಿಗಳು ಸೋಂಕಿತರ ಬಳಿ ಹೋಗಿ ಊಟ, ನೀರು ನೀಡುವ ಸಂದರ್ಭಗಳು ಕಡಿಮೆ ಆಗಲಿದ್ದು, ಇದರಿಂದ ಸೋಂಕು ತಗಲುವ ಅಪಾಯ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.

ಇನ್ನು ಈ ರೋಬೋಟ್ ಅನ್ನು ಸುಲಭವಾಗಿ ಆಪರೇಟ್ ಮಾಬಹುದಾಗಿದ್ದು, ಸ್ಮಾರ್ಟ್ಫೋನ್ನಲ್ಲಿ ಇರುವ ಕ್ಯಾಮರಾ ಮೂಲಕ ಈ ರೋಬೋಟ್ ಚಲನವಲನಗಳನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ ವೈದ್ಯರು ಹಾಗೂ ರೋಗಿಗಳು ಮಾತಾಡಲು ಅನುಕೂಲವಾಗಲೆಂದು ಸ್ಪೀಕರ್ ವ್ಯವಸ್ಥೆ ಕೂಡ ಈ ರೋಬೋಟ್‌ನಲ್ಲಿ ಅಳವಡಿಸಲಾಗಿದೆ.


Click it and Unblock the Notifications