ಟೆಲಿಕಾಂ ಸಂಸ್ಥೆಗಳ 1699ರೂ.ಪ್ಲ್ಯಾನಲ್ಲಿ ಏನುಂಟು, ಏನಿಲ್ಲ!..ಕಂಪ್ಲೀಟ್ ಮಾಹಿತಿ!
ಭಾರತೀಯ ಟೆಲಿಕಾಂ ವಲಯದಲ್ಲಿ ಇತ್ತೀಚಿಗೆ ಭಾರೀ ಬದಲಾವಣೆಯ ಪರ್ವಗಳು ಕಂಡುಬರುತ್ತಿದ್ದು, ಜನಪ್ರಿಯ ಟೆಲಿಕಾಂ ಕಂಪನಿಗಳು ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸಿವೆ. ಈ ನಿಟ್ಟಿನಲ್ಲಿ ಟೆಲಿಕಾಂ ಸಂಸ್ಥೆಗಳು ವಿಶೇಷ ಪ್ರೀಪೇಡ್ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಿದ್ದು, ಉಚಿತ ಕರೆಗಳೊಂದಿಗೆ ಹೆಚ್ಚಿನ ಡೇಟಾ ಮತ್ತು ಬಿಗ್ ವ್ಯಾಲಿಡಿಟಿ ಪ್ಲ್ಯಾನ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುವ ಸ್ಟ್ರಾಟರ್ಜಿ ಮಾಡಿಕೊಂಡಿವೆ.

ಹೌದು, ಸದ್ಯ ಟೆಲಿಕಾಂ ಕ್ಷೇತ್ರದಲ್ಲಿ ಪೈಪೋಟಿ ಜೋರಾಗಿದ್ದು, ಏರ್‌ಟೆಲ್, ಜಿಯೋ, ವೊಡಾಪೋನ್ ಖಾಸಗಿ ಸಂಸ್ಥೆಗಳೊಂದಿಗೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಹ ದೀರ್ಘಾವಧಿಯ ಪ್ರೀಪೇಡ್ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿವೆ. ಈ ಪೈಕಿ ಕಂಪನಿಗಳ ವಾರ್ಷಿಕ ವ್ಯಾಲಿಡಿಟಿಯ ಪ್ಲ್ಯಾನ್‌ನಲ್ಲಿಯೇ ಉಚಿತ ಕರೆಗಳು, ಎಸ್‌ಎಮ್ಎಸ್, ಹಾಗೂ ಹೆಚ್ಚಿನ ಡೇಟಾ ಪ್ರಯೋಜನಗಳನ್ನು ನೀಡುತ್ತಿವೆ.

ಈ ನಾಲ್ಕು ಟೆಲಿಕಾಂ ಸಂಸ್ಥೆಗಳ ಬಹುತೇಕ ಪ್ಲ್ಯಾನ್‌ಗಳ ಸಾಮ್ಯತೆ ಹೊಂದಿದ್ದು, ಅವುಗಳಲ್ಲಿ ನಾಲ್ಕು ಕಂಪನಿಗಳು 1699ರೂ.ಗಳ ಬಿಗ್ ವ್ಯಾಲಿಡಿಟಿ ಪ್ರೀಪೇಡ್ ಪ್ಲ್ಯಾನ್ ಹೊಂದಿವೆ. ಈ ದೀರ್ಘಾವಧಿಯ ಪ್ಲ್ಯಾನ್‌ನಲ್ಲಿಯೂ ಅತ್ಯುತ್ತಮ ಪ್ರಯೋಜನಗಳನ್ನು ನೀಡಿದ್ದು, ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸಿವೆ. ಹಾಗಾದರೇ ಈ ನಾಲ್ಕು ಕಂಪನಿಗಳು 1699ರೂ.ಗಳ ಪ್ರೀಪೇಡ್ ಪ್ಲ್ಯಾನ್‌ನಲ್ಲಿ ಯಾವೆಲ್ಲಾ ಸೌಲಭ್ಯಗಳನ್ನು ನೀಡುತ್ತಿವೆ ಎಂಬುದನ್ನು ನೋಡೋಣ ಬನ್ನಿರಿ.

ಏರ್‌ಟೆಲ್ 1699ರೂ.ಪ್ಲ್ಯಾನ್
ಜನಪ್ರಿಯ ಭಾರ್ತಿ ಏರ್‌ಟೆಲ್ ಸಂಸ್ಥೆಯು 1699ರೂ.ಗಳ ಪ್ರೀಪೇಡ್ ಪ್ಲ್ಯಾನಿನಲ್ಲಿ ಗ್ರಾಹಕರಿಗೆ 365 ದಿನಗಳ ವ್ಯಾಲಿಡಿಟಿಯನ್ನು ನೀಡಿದೆ. ಇದರೊಂದಿಗೆ ಉಚಿತ ರೋಮಿಂಗ್ ಕರೆಗಳು ಮತ್ತು ಅನಿಯಮಿತ ಉಚಿತ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಜೊತೆಗೆ ಪ್ರತಿದಿನ 1.4GB ಉಚಿತ ಡೇಟಾ ಸೌಲಭ್ಯದ ಪ್ರಯೋಜನಗಳನ್ನು ಒದಗಿಸಿದೆ. ಹಾಗೆಯೇ ಗ್ರಾಹಕರಿಗೆ Wynk ಮ್ಯೂಸಿಕ್ ಮತ್ತು ಏರ್‌ಟೆಲ್ ಟಿವಿ ಆಕ್ಸೆಸ್ ಲಭ್ಯವಾಗಲಿದೆ. ಏರ್ಟೆಲ್ ಆಪ್ ಮೂಲಕ ರೀಚಾರ್ಜ್ ಮಾಡಿದರೇ ಕ್ಯಾಶ್‌ಬ್ಯಾಕ್ ಸೀಗುವ ಸಾಧ್ಯತೆಗಳಿವೆ.

ವೊಡಾಫೋನ್ 1699ರೂ.ಪ್ಲ್ಯಾನ್
ವೊಡಾಫೋನಿನ 1699ರೂ.ಗಳ ದೀರ್ಘಾವಧಿ ಪ್ರೀಪೇಡ್ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಜೊತೆಗೆ ಅನಿಯಮಿತ ಉಚಿಯ ಕರೆಗಳು, ಉಚಿತ ರೋಮಿಂಗ್ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಹಾಗೂ ಪ್ರತಿದಿನ 1.5GB ಉಚಿತ ಡೇಟಾ ಸೌಲಭ್ಯದ ಪ್ರಯೋಜನಗಳನ್ನು ನೀಡಲಿದೆ. ಲೈವ್ ಟಿವಿ ಆಕ್ಸಸ್ ಆಯ್ಕೆ ಸಹ ಇದೆ. ವೊಡಾಫೋನ್ ಆಪ್ ಮೂಲಕ ರೀಚಾರ್ಜ್ ಮಾಡಿದರೇ ಇನ್ನು ಹೆಚ್ಚಿನ ಸೌಲಭ್ಯಗಳು ಲಭ್ಯ.

ಬಿಎಸ್‌ಎನ್‌ಎಲ್ 1699ರೂ.ಪ್ಲ್ಯಾನ್
ಬಿಎಸ್‌ಎನ್‌ಎಲ್ ಸಂಸ್ಥೆಯ 1699ರೂ ಪ್ಲ್ಯಾನ್ ವಾರ್ಷಿಕ ಪ್ರೀಪೇಡ್ ರೀಚಾರ್ಜ್ ಪ್ಲ್ಯಾನ್ ಆಗಿದ್ದು, 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಸ್ಥಳಿಯ ಮತ್ತು ರಾಷ್ಟ್ರಿಯ ವಾಯಿಸ್ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಹಾಗೂ ಪ್ರತಿದಿನ 2GB ಉಚಿತ ಡೇಟಾ ಪ್ರಯೋಜನಗಳು ಗ್ರಾಹಕರಿಗೆ ದೊರೆಯಲಿವೆ. ಡೇಟಾ ಮತ್ತು ವ್ಯಾಲಿಡಿಟಿ ಪ್ರಿಯ ಗ್ರಾಹಕರಿಗೆ ಬೆಸ್ಟ್ ಎನಿಸಲಿದೆ.

ಜಿಯೋ 1699ರೂ.ಪ್ಲ್ಯಾನ್
ರಿಲಾಯನ್ಸ್ ಜಿಯೋ ಸಹ 365ದಿನಗಳ ವ್ಯಾಲಿಡಿಟಿ ಅವಧಿಯ 1699ರೂ.ಗಳ ದೀರ್ಘಾವಧಿ ಪ್ರೀಪೇಡ್ ಪ್ಲ್ಯಾನ್ ಹೊಂದಿದೆ. ಈ ಪ್ಲ್ಯಾನ್‌ನಲ್ಲಿ ಅನಿಯಮಿತ ಉಚಿಯ ಕರೆಗಳು, ಉಚಿತ ರೋಮಿಂಗ್ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಹಾಗೂ ಪ್ರತಿದಿನ 1.5GB ಉಚಿತ ಡೇಟಾ ಸೌಲಭ್ಯದ ಪ್ರಯೋಜನಗಳು ಲಭ್ಯವಾಗಲಿದ್ದು, ಇದರೊಂದಿಗೆ ಗ್ರಾಹಕರು ಜಿಯೋ ಸಾವನ್, ಜಿಯೋಸಿನಿಮಾ ಮತ್ತು ಜಿಯೋಟಿವಿ ಆಕ್ಸಸ್ ಮಾಡಬಹುದಾಗಿದೆ.


Click it and Unblock the Notifications








