Home
ಸುದ್ದಿಜಾಲ

ತಪ್ಪೊಪ್ಪಿಕೊಂಡ ಆಪಲ್‌... ಈ ಹಳೇ ಐಫೋನ್‌ಗಳನ್ನು ಹೊಂದಿರುವವರಿಗೆ 5000ರೂ. ಪರಿಹಾರ!

ಆಪಲ್‌ ಸ್ಮಾರ್ಟ್‌ ಡಿವೈಸ್‌ಗಳೆಂದರೆ ಉತ್ತಮ ಕಾರ್ಯಕ್ಷಮತೆ ಹಾಗೂ ದೀರ್ಘ ಬಾಳಿಕೆ ಜೊತೆಗೆ ಅತ್ಯಂತ ಹೆಚ್ಚಿನ ಭದ್ರತಾ ಫೀಚರ್ಸ್‌ ಹೊಂದುವ ಮೂಲಕ ಬಳಕೆದಾರರಿಗೆ ಹಿತ ಎನಿಸುವ ಅನುಭವ ನೀಡುತ್ತವೆ ಎಂದು. ಅದರಲ್ಲೂ ಐಫೋನ್‌ಗಳಂತೂ ಬಳಕೆದಾರರಿಗೆ ಅಚ್ಚು ಮೆಚ್ಚು. ಆದರೆ, ಈಗ ಆಪಲ್‌ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಈ ಐಫೋನ್‌ ಬಳಕೆದಾರರಿಗೆ 5,000ರೂ.ಗಳನ್ನು ನೀಡಲು ಮುಂದಾಗಿದೆ.

ಹೌದು, ಆಪಲ್‌ನ ಡಿವೈಸ್‌ಗಳ ಕಾರ್ಯಕ್ಷಮತೆ ನಿಧಾನ ಆಗಿದ್ದಕ್ಕಾಗಿ ಪರಿಹಾರವಾಗಿ ಈ ಎಲ್ಲಾ ಐಫೋನ್ ಬಳಕೆದಾರರಿಗೆ ಹಣ ನೀಡಲು ಮುಂದಾಗಿದೆ. ಇನ್ನು ಅಕ್ಟೋಬರ್ 6, 2020 ರ ಮೊದಲು ತಮ್ಮ ಕುಂದುಕೊರತೆಗಳನ್ನು ನೋಂದಾಯಿಸದಿದ್ದರೆ ಇನ್ಮುಂದೆ ಯಾವುದೇ ಪರಿಹಾರಕ್ಕೆ ಅರ್ಹರಾಗಿರುವುದಿಲ್ಲ ಎಂದೂ ಸಹ ತಿಳಿಸಲಾಗಿದೆ. ಹಾಗಿದ್ರೆ, ಏನಿದು ಆಪಲ್‌ನ ಹೊಸ ನಿರ್ಧಾರ, ಫೋನ್ ನಿಧಾನವಾದರೆ ಹಣ ಯಾಕೆ ನೀಡಬೇಕು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ತಪ್ಪೊಪ್ಪಿಕೊಂಡ ಆಪಲ್‌... ಈ ಹಳೇ ಐಫೋನ್‌ಗಳನ್ನು ಹೊಂದಿರುವವರಿಗೆ 5000ರೂ. ಪರಿಹಾರ

ಈ ಐಫೋನ್‌ ಬಳಕೆದಾರರಿಗೆ ಪರಿಹಾರ: ತಮ್ಮ ಡಿವೈಸ್‌ಗಳನ್ನು ಉದ್ದೇಶಪೂರ್ವಕವಾಗಿ ನಿಧಾನಗೊಳಿಸುವುದಕ್ಕಾಗಿ ಐಫೋನ್‌ 6, 7, ಮತ್ತು SE ಸರಣಿಯ ಬಳಕೆದಾರರಿಗೆ ಪರಿಹಾರವನ್ನು ಪಾವತಿಸಲು ಆಪಲ್‌ ಒಪ್ಪಿಕೊಂಡಿದೆ, ಕಂಪನಿಯ ವಿರುದ್ಧದ ಕ್ಲಾಸ್-ಆಕ್ಷನ್ ಮೊಕದ್ದಮೆ ಹಿನ್ನೆಲೆ ಈ ನಿರ್ಧಾರ ಮಾಡಲಾಗಿದೆ. ಪರಿಣಾಮ ಈಗ ಈ ಎಲ್ಲಾ ಐಫೋನ್‌ ಬಳಕೆದಾರರು ಪರಿಹಾರ ಹಣ ಪಡೆಯಬಹುದು.

ಪ್ರತಿ ವ್ಯಕ್ತಿಗೆ ಸುಮಾರು ಸುಮಾರು 5,000 ರೂ.ಲಭ್ಯ : ಈ ಪರಿಹಾರಕ್ಕೆ ಅರ್ಹರಾಗಲು ಬಳಕೆದಾರರು ತಮ್ಮ ಸರಣಿ ಸಂಖ್ಯೆಯೊಂದಿಗೆ ಅಕ್ಟೋಬರ್ 6, 2020 ರ ಮೊದಲು ಮೀಸಲಾದ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕಿದೆ ಎಂದು ಕಂಪೆನಿ ಮಾಹಿತಿ ನೀಡಿದೆ. ಈ ರೀತಿ ಯಾರೆಲ್ಲಾ ಮಾಡಿದ್ದಾರೋ ಅವರು ತಮ್ಮ ಖಾತೆಗೆ 5,000 ರೂ. ಹಣವನ್ನು ಪಡೆದುಕೊಳ್ಳಬಹುದಾಗಿದೆ.

ದೂರಿದ್ದು, ಯಾರು?, ಯಾಕೆ? : ಈ ವಿಷಯ ತಿಳಿದುಕೊಳ್ಳಬೇಕು ಎಂದರೆ ನಾವು ಐದು ವರ್ಷಗಳ ಹಿಂದಕ್ಕೆ ಹೋಗಬೇಕು. ಐಫೋನ್ ಬಳಕೆದಾರರು ತಮ್ಮ ಐಫೋನ್ 6, ಐಫೋನ್ 7 ಮತ್ತು ಐಫೋನ್ SE ಗಳನ್ನು ಉದ್ದೇಶಪೂರ್ವಕವಾಗಿ ನಿಧಾನಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಟೆಕ್ ದೈತ್ಯ ಆಪಲ್‌ನೊಂದಿಗೆ ತೀವ್ರ ಜಗಳಕ್ಕೆ ಇಳಿದಿದ್ದರು. ಇದಾದ ನಂತರದಲ್ಲಿ ಸಂಸ್ಥೆಯು ತನ್ನ ತಪ್ಪನ್ನು ಒಪ್ಪಿಕೊಂಡಿದೆ.

ಈ ಬಗ್ಗೆ ಮಾಹಿತಿ ನೀಡಿದ್ದ ಆಪಲ್, 2016 ರಲ್ಲಿ ಈ ರೀತಿ ಮಾಡಿದ್ದರ ಹಿಂದೆ ಯಾವುದೇ ಕೆಟ್ಟ ಉದ್ದೇಶವಿಲ್ಲ. ಆದರೆ ಫೋನ್‌ಗಳು ಇದ್ದಕ್ಕಿದ್ದಂತೆ ಆಫ್ ಆಗುವುದನ್ನು ತಡೆಯಲು ಇದನ್ನು ಮಾಡಲಾಗಿತ್ತು ಎಂದು ತನ್ನ ಅಭಿಪ್ರಾಯ ತಿಳಿಸಿದೆ ಎಂದು ದಿ ವರ್ಜ್ ವರದಿ ಮಾಡಿದೆ. ಆದಾಗ್ಯೂ, ರಾಯಿಟರ್ಸ್ ವರದಿ ಮಾಡಿದಂತೆ ಸಂಭಾವ್ಯ ದುಬಾರಿ ಕಾನೂನು ಮುಖಾಮುಖಿಯನ್ನು ತಪ್ಪಿಸುವ ಮಾರ್ಗವಾಗಿ ಒಟ್ಟಾರೆ $ 500 ಮಿಲಿಯನ್ ವರೆಗೆ ಪಾವತಿ ಮಾಡುತ್ತೇವೆ ಎಂದು ಈ ಸಮಸ್ಯೆಗೆ ತಿಲಾಂಜಲಿ ಇಡಲು ಆಪಲ್‌ ಮುಂದಾಗಿದೆ ಎಂದು ತಿಳಿಸಿದೆ.

ತಪ್ಪೊಪ್ಪಿಕೊಂಡ ಆಪಲ್‌... ಈ ಹಳೇ ಐಫೋನ್‌ಗಳನ್ನು ಹೊಂದಿರುವವರಿಗೆ 5000ರೂ. ಪರಿಹಾರ

ಪರಿಹಾರಕ್ಕೆ ಯಾರೆಲ್ಲಾ ಅರ್ಹರು?: ನೀವು ಐಫೋನ್ 6, 7, ಅಥವಾ ಮೊದಲ SE ಮಾದರಿಯನ್ನು ಹೊಂದಿದ್ದರೆ ನೀವು ಪರಿಹಾರದ ಭಾಗವಾಗಿ ಹಣವನ್ನು ಪಡೆಯಬಹುದಾಗಿದೆ. ಆದರೆ ಯಾರೆಲ್ಲಾ ಅಕ್ಟೋಬರ್ 6, 2020 ರ ಮೊದಲು ಈ ವಿಷಯದ ವರದಿ ಮಾಡಿಲ್ಲವೋ ಅವರು ಈ ಪರಿಹಾರಕ್ಕೆ ಅರ್ಹರಲ್ಲ. ಇನ್ನು ಉಳಿದವರು ಐಫೋನ್‌ನ ಕಾರ್ಯಕ್ಷಮತೆಯೊಂದಿಗೆ ಸಮಸ್ಯೆಗಳನ್ನು ಎದುರಿಸಿದ ಕುಂದುಕೊರತೆಗಳನ್ನು ಲಾಗ್ ಇನ್ ಮಾಡಲು ಕಂಪನಿಯು ರಚಿಸಿದ ವೆಬ್‌ಸೈಟ್‌ನಲ್ಲಿ ನಿಮ್ಮ ಸರಣಿ ಸಂಖ್ಯೆಯೊಂದಿಗೆ ನೀವು ನೋಂದಾಯಿಸಿಕೊಳ್ಳಬೇಕು.

ಯಾವೆಲ್ಲಾ ಫೋನ್‌ಗಳು ಈ ಸಮಸ್ಯೆಗೆ ಸಿಲುಕಿದ್ದವು?: ಆಪಲ್‌ನ ಐಫೋನ್ 6, ಐಫೋನ್ 6 ಪ್ಲಸ್, ಐಫೋನ್ 6s, ಐಫೋನ್ 6s ಪ್ಲಸ್‌, ಐಫೋನ್ SE, ಐಫೋನ್‌ 7, ಐಫೋನ್‌ 7 ಪ್ಲಸ್‌ ಫೋನ್‌ಗಳು ಆಪಲ್‌‌ ಕೃತಕವಾಗಿ ಸೃಷ್ಟಿಸಿದ್ದ ಸಮಸ್ಯೆಗಳಿಗೆ ಸಿಲುಕಿದ್ದವು. ಈ ಫೋನ್‌ಗಳನ್ನು ಇಂದಿಗೂ ಸಹ ಹಲವಾರು ಜನರು ಬಳಕೆ ಮಾಡುತ್ತಿದ್ದಾರೆ.

Best Mobiles in India

English summary
Apple has agreed to pay compensation to users for intentionally slowing down the iPhone 6, 7, and SE series iPhones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+