Home
ಸುದ್ದಿಜಾಲ

ಶಾಕಿಂಗ್‌... ಗ್ರಾಮೀಣ ಭಾರತದ ಬಹುಪಾಲು ಹೆಣ್ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಬಗ್ಗೆ ಈ ವಿಷಯವೇ ಗೊತ್ತಿಲ್ಲವಂತೆ!

ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ (smartphones, Laptop) ಹಾಗೂ ಇನ್ನಿತರೆ ಡಿವೈಸ್‌ಗಳು ಬಳಕೆದಾರರಿಗೆ ಭಿನ್ನ ಅನುಭವ ನೀಡುತ್ತವೆ. ಅದರಲ್ಲೂ ಶೈಕ್ಷಣಿಕವಾಗಿ ಇದು ಬಹಳಷ್ಟು ಪ್ರಯೋಜನಕಾರಿಯಾಗಿದ್ದು, ಕೆಲವು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡರೆ ಇನ್ನೂ ಕೆಲವರು ದುರ್ಬಳಕೆ ಮಾಡಿಕೊಳ್ಳುವುದನ್ನು ನಾವು ಗಮನಿಸಬಹುದು. ಈ ಎಲ್ಲಾ ಬೆಳವಣಿಗೆ ನಡುವೆ ಗ್ರಾಮೀಣ ಭಾರತದ ಯುವಕ-ಯುವತಿಯರಿಗೆ ಸಂಬಂಧಿಸಿದಂತೆ ಶಾಕಿಂಗ್ ಮಾಹಿತಿ ಹೊರಬಿದ್ದಿದೆ.

ಹೌದು, ಸ್ಮಾರ್ಟ್‌ಫೋನ್‌ಗಳು ಅಥವಾ ಇನ್ನಿತರೆ ಡಿವೈಸ್‌ಗಳನ್ನು ಎಲ್ಲಾ ವಯೋಮಾನದವರು ಸಹ ಬಳಕೆ ಮಾಡುತ್ತಾರೆ. ಅಷ್ಟೇ ಯಾಕೆ ಎಳೆ ಮಕ್ಕಳು ಸಹ ಸ್ಮಾರ್ಟ್‌ಫೋನ್‌ ಕೈನಲ್ಲಿ ಇದ್ದರಷ್ಟೇ ಊಟ ಮಾಡುತ್ತೇವೆ ಅನ್ನೋ ಹಠಕ್ಕೆ ಬೀಳುತ್ತಿದ್ದಾರೆ. ಆದರೂ ಸಹ ASER 2023 ಶಂಶೋಧನೆ ಪ್ರಕಾರ ಗ್ರಾಮೀಣ ಭಾರತದಲ್ಲಿ ಯುವತಿಯರು ಸ್ಮಾರ್ಟ್‌ಫೋನ್‌ ವಿಷಯಕ್ಕೆ ಸಂಬಂಧಿಸಿದಂತೆ ತೀರಾ ಹಿಂದುಳಿದಿದ್ದಾರಂತೆ. ಹಾಗಿದ್ರೆ ಗ್ರಾಮೀಣ ಭಾರತದ ಯುವಕ-ಯುವತಿಯರಿಗೆ ಎಷ್ಟೆಲ್ಲಾ ಸ್ಮಾರ್ಟ್‌ಫೋನ್‌ ಅರಿವು ಇದೆ?, ಇವುಗಳನ್ನು ಯಾವುದಕ್ಕೆಲ್ಲಾ ಬಳಕೆ ಮಾಡುತ್ತಾರೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಗ್ರಾಮೀಣ ಭಾರತದ ಹೆಣ್ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಬಗ್ಗೆ ಈ ವಿಷಯವೇ ಗೊತ್ತಿಲ್ಲವಂತೆ

ಬಹುಪಾಲು ಗ್ರಾಮೀಣ ಯುವತಿಯರಿಗೆ ಸ್ಮಾರ್ಟ್‌ಫೋನ್‌ ಬಗ್ಗೆ ಗೊತ್ತೇ ಇಲ್ವಂತೆ: ಈ ವಿಷಯ ಕೇಳಿದ್ರೆ ನಿಮಗೆ ಅಚ್ಚರಿ ಎನಿಸಿಬಹುದು. ಯಾಕೆಂದರೆ ಈಗಂತೂ ಎಲ್ಲಾ ಕಡೆ ಸ್ಮಾರ್ಟ್‌ಫೋನ್‌ಗಳಿವೆ. ಅವುಗಳನ್ನು ಬಳಕೆ ಮಾಡಿಕೊಂಡು ಯುವಕ ಯುವತಿಯರು ರೀಲ್ಸ್‌ ಮಾಡುತ್ತಾರೆ, ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿರುತ್ತಾರೆ ಅನ್ನೋದು ತಿಳಿದ ವಿಚಾರ. ಆದರೆ ಗ್ರಾಮೀಣ ಭಾರತದ ವಿಷಯಕ್ಕೆ ಬಂದರೆ ಇದು ಸುಳ್ಳು. ಗ್ರಾಮೀಣ ಭಾಗದಲ್ಲಿ ಸ್ವಂತ ಸ್ಮಾರ್ಟ್‌ಫೋನ್ ಹೊಂದಿದವರಲ್ಲಿ ಹುಡುಗಿಯರಿಗಿಂತ ಹುಡುಗರೇ ಹೆಚ್ಚಾಗಿದ್ದಾರಂತೆ ಅದೂ ಸಹ ಎರಡು ಪಟ್ಟು.

14-18 ವರ್ಷ ವಯಸ್ಸಿನ ಭಾರತೀಯ ಯುವಕರಲ್ಲಿ ಸುಮಾರು 90 ಪ್ರತಿಶತದಷ್ಟು ಯುವಕರ ಮನೆಯಲ್ಲಿ ಸ್ಮಾರ್ಟ್‌ಫೋನ್ ಇದ್ದು, ಅದನ್ನು ಹೇಗೆ ಬಳಸಬೇಕೆಂದು ಅವರು ತಿಳಿದುಕೊಂಡಿದ್ದಾರೆ. ಆದರೆ ಡಿಜಿಟಲ್ ಸಾಕ್ಷರತೆಯಲ್ಲಿ ಗಮನಾರ್ಹ ಲಿಂಗ ಅಂತರವನ್ನು ಇಲ್ಲಿ ಕಂಡುಕೊಳ್ಳಲಾಗಿದೆ. ರಾಷ್ಟ್ರವ್ಯಾಪಿ ಗೃಹ ಸಮೀಕ್ಷೆಯ ವಾರ್ಷಿಕ ಸ್ಥಿತಿಯ ಶಿಕ್ಷಣ ವರದಿ (ASER) ಪ್ರಕಾರ, ಹುಡುಗಿಯರು ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ಅನ್ನು ಹೇಗೆ ಬಳಕೆ ಮಾಡಬೇಕು ಅಥವಾ ಫೋನ್ ಅನ್ನು ಹೊಂದುವುದು ಹೇಗೆ ಅನ್ನೋ ವಿಚಾರದಲ್ಲಿ ತೀರಾ ಹಿಂದುಳಿದಿದ್ದಾರಂತೆ.

ಗ್ರಾಮೀಣ ಭಾರತದ ಹೆಣ್ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಬಗ್ಗೆ ಈ ವಿಷಯವೇ ಗೊತ್ತಿಲ್ಲವಂತೆ

ಎಲ್ಲೆಲ್ಲಿ ಈ ಸಮೀಕ್ಷೆ ನಡೆಸಲಾಗಿದೆ?: ಜನವರಿ 17, 2024 ರಂದು ಬಿಡುಗಡೆ ಮಾಡಲಾಗಿದ್ದು, ASER 2023 ಬಿಯಾಂಡ್ ಬೇಸಿಕ್ಸ್ ಸಮೀಕ್ಷೆಯನ್ನು ದೇಶದ 26 ರಾಜ್ಯಗಳಾದ್ಯಂತ 28 ಜಿಲ್ಲೆಗಳಲ್ಲಿ ನಡೆಸಲಾಗಿದೆ. ಇದರಲ್ಲಿ 14-18 ವರ್ಷ ವಯಸ್ಸಿನ ಒಟ್ಟು 34,745 ಯುವಕ ಯುವತಿಯನ್ನು ಪ್ರಶ್ನೆ ಮಾಡಲಾಗಿದ್ದು, ಪ್ರತಿ ಪ್ರಮುಖ ರಾಜ್ಯವು ಒಂದು ಗ್ರಾಮಾಂತರ ಜಿಲ್ಲೆಯನ್ನು ಈ ವೇಳೆ ಸಮೀಕ್ಷೆಗೆ ಒಳಪಡಿಸಿದೆ.

ಈ ಸಮೀಕ್ಷೆ ಉದ್ದೇಶ ಏನು?: ಡಿಜಿಟಲ್ ಸಂಪರ್ಕ ಮತ್ತು ಕೌಶಲ್ಯ ಸೇರಿದಂತೆ ಗ್ರಾಮೀಣ ಭಾರತದಲ್ಲಿ ಮಕ್ಕಳ ಶಿಕ್ಷಣ ಮತ್ತು ಕಲಿಕೆಯ ಸ್ಥಿತಿಯ ಅವಲೋಕನವನ್ನು ಸಮೀಕ್ಷೆಯು ಒದಗಿಸುತ್ತದೆ. ಇದು ಲಿಂಗಗಳ ನಡುವೆ ಗಮನಾರ್ಹ ಡಿಜಿಟಲ್ ಸಾಕ್ಷರತೆಯ ವಿಭಜನೆಯನ್ನು ಕಂಡುಕೊಂಡಿದೆ. ಉದಾಹರಣೆಗೆ, ಹುಡುಗರಿಗೆ ಹೋಲಿಸಿದರೆ ಹುಡುಗಿಯರು ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ಅನ್ನು ಹೇಗೆ ಬಳಸಬೇಕೆಂದು ತಿಳಿದಿರುವ ಸಾಧ್ಯತೆ ಕಡಿಮೆ ಎಂದು ಕಂಡುಬಂದಿದೆ.

ಅದರಲ್ಲೂ ಯುವತಿಯರು ಶೇ 19.8 ರಷ್ಟು ಈ ಬಗ್ಗೆ ಅರಿವು ಅಥವಾ ಸ್ಮಾರ್ಟ್‌ಫೋನ್‌ ಹೊಂದಿದ್ದರೆ, ಯುವಕರು ಇದರ ಎರಡುಪಟ್ಟು ಅಂದರೆ ಶೇ 43.7 ರಷ್ಟು ಸ್ಮಾರ್ಟ್‌ಫೋನ್‌ ಹಾಗೂ ಸ್ಮಾರ್ಟ್‌ಫೋನ್‌ ಬಗ್ಗೆ ಅರಿವು ಹೊಂದಿದ್ದಾರೆ ಎಂದು ಈ ಸಮೀಕ್ಷೆಯಲ್ಲಿ ಕಂಡುಕೊಳ್ಳಲಾಗಿದೆ. ಇನ್ನು ಡಿಜಿಟಲ್ ಸಾಕ್ಷರತೆಯಲ್ಲಿನ ಲಿಂಗ ಅಂತರವು ಆನ್‌ಲೈನ್ ಸುರಕ್ಷತೆಯನ್ನು ವಿಸ್ತರಣೆ ಮಾಡುವಂತಾಗಿದೆ ಎಂದು ತಿಳಿಸಲಾಗಿದೆ.

ಗ್ರಾಮೀಣ ಭಾರತದ ಹೆಣ್ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಬಗ್ಗೆ ಈ ವಿಷಯವೇ ಗೊತ್ತಿಲ್ಲವಂತೆ

ಈ ಸಮೀಕ್ಷೆಯಲ್ಲಿ ಈ ಯುವ ಪೀಳಿಗೆ (90.5 %) ಸಾಮಾಜಿಕ ಮಾಧ್ಯಮವನ್ನು ಬಳಕೆ ಮಾಡುತ್ತಾರೆ ಎಂದು ತಿಳಿದುಬಂದಿದ್ದು, ಹುಡುಗರು ಇದರಲ್ಲಿ ಶೇ. 93.4 % ಬಳಕೆ ಮಾಡಿದ್ರೆ ಯುವತಿಯರು 87.8 % ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಕೇವಲ ಅರ್ಧದಷ್ಟು ಯುವಕ ಯುವತಿಯರು ಮಾತ್ರ ಆನ್‌ಲೈನ್ ಸುರಕ್ಷತಾ ಸೆಟ್ಟಿಂಗ್‌ಗಳೊಂದಿಗೆ ಅದನ್ನು ಬಳಕೆ ಮಡುತ್ತಿದ್ದಾರೆ ಎಂದು ವರದಿಯಾಗಿದೆ.

ಇನ್ನು ಯುಟ್ಯೂಬ್‌ನಲ್ಲಿ ನಿರ್ದಿಷ್ಟ ವಿಡಿಯೋಗಳನ್ನು ಸರ್ಚ್‌ ಮಾಡುವುದು, ವಿಡಿಯೋವನ್ನು ಸ್ನೇಹಿತರೊಂದಿಗೆ ಶೇರ್‌ ಮಾಡಿಕೊಳ್ಳುವುದು, ಉತ್ತರಗಳಿಗಾಗಿ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡುವುದು, ನಿರ್ದಿಷ್ಟ ಸಮಯಕ್ಕೆ ಅಲಾರಂ ಹೊಂದಿಸುವುದು ಮತ್ತು ಸಂಚಾರ ಸಮಯವನ್ನು ಲೆಕ್ಕಹಾಕಲು ಗೂಗಲ್ ಮ್ಯಾಪ್ಸ್‌ ಬಳಕೆ ಬಳಸುವುದು ಸೇರಿದಂತೆ ಮುಂತಾದ ಡಿಜಿಟಲ್ ಕಾರ್ಯಗಳನ್ನು ಮಾಡುವಲ್ಲಿ ಯುವಕರು ಮುಂದಿದ್ದಾರೆ. ಈ ಮೂಲಕ ಈ ಎಲ್ಲಾ ಕಾರ್ಯಗಳಲ್ಲಿ, ಹುಡುಗರು ಹುಡುಗಿಯರನ್ನು ಮೀರಿಸಿದ್ದಾರೆ.

ಸುಮಾರು ಮೂರನೇ ಎರಡರಷ್ಟು ಯುವಕರು ಶೈಕ್ಷಣಿಕ ಉದ್ದೇಶಗಳಿಗಾಗಿ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಾರೆ ಎಂದು ಈ ಸಮೀಕ್ಷೆಯಿಂದ ತಿಳಿದುಬಂದಿದೆ. ಉದಾಹರಣೆಗೆ ಅಧ್ಯಯನಕ್ಕೆ ಸಂಬಂಧಿಸಿದ ಆನ್‌ಲೈನ್ ವಿಡಿಯೋಗಳನ್ನು ವೀಕ್ಷಿಸುವುದು, ಅನುಮಾನಗಳನ್ನು ಪರಿಹರಿಸುವುದು ಅಥವಾ ಟಿಪ್ಪಣಿಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ಫೋನ್‌ ಅನ್ನು ಬಳಕೆ ಮಾಡಲಾಗಿದೆ.

Best Mobiles in India

English summary
smartphones or other devices are also used by people of all ages. But most of the young women in rural areas do not know how to use a smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+