Subscribe to Gizbot

ಆನ್‌ಲೈನ್‌ಲ್ಲಿ ದನ ಮಾರಾಟ!

Posted By:

ಆನ್‌ಲೈನ್‌ಲ್ಲಿ ಎಲೆಕ್ಟ್ರನಿಕ್ಸ್‌ ವಸ್ತು,ಮನೆ,ವಾಹನಗಳನ್ನು ಮಾರಾಟ ಮಾಡುವುದು ನೀವು ಕೇಳಿರಬಹುದು. ಆದರೆ ಭಾರತದಲ್ಲಿ ಈಗ ದನಗಳನ್ನು ಆನ್‌ಲೈನ್‌ ಶಾಪಿಂಗ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ.

ಹೌದು .ಆನ್‌ಲೈನ್‌ ತಾಣಗಳಾದ olx.in. ಮತ್ತು quikrನಲ್ಲಿ ರೈತರು ತಮ್ಮ ದನಗಳನ್ನು ಮಾರಾಟ ಮಾಡಲು ಆರಂಭಿಸಿದ್ದಾರೆ. ಪಶ್ಚಿಮ ಬಂಗಾಲ, ತಮಿಳುನಾಡು,ಕರ್ನಾ‌ಟಕ, ಮಹಾರಾಷ್ಟ್ರ,ಒರಿಸ್ಸಾ,ಅಸ್ಸಾಂ ಮತ್ತು ಉತ್ತರ ಪ್ರದೇಶದ ಜನ ದನಗಳನ್ನು ಆನ್‌ಲೈನ್‌ ತಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಆನ್‌ಲೈನ್‌ಲ್ಲಿ ದನ ಮಾರಾಟ!!


ಹಿಂದೆ ಆನ್‌ಲೈನ್‌ಲ್ಲಿ ಕೇವಲ.ಆಸ್ತಿ ಮತ್ತು ವಾಹನಗಳನ್ನು ಮಾರಾಟ ಹೆಚ್ಚು ನಡೆಯುತಿತ್ತು. ಆದರೆ ಈಗ ತಮ್ಮ ಸಾಕು ಪ್ರಾಣಿಗಳನ್ನು ಮಾರಾಟ ಮಾಡಲು ಜನರು ಆರಂಭಿಸಿದ್ದಾರೆ ಎಂದು ಪಿಟಿಐಗೆ ನೀಡಿದ ಸಂದರ್ಶ‌ನದಲ್ಲಿ ಈ ಎರಡು ಆನ್‌ಲೈನ್‌ ತಾಣದ ಅಧಿಕಾರಿಗಳು ಹೇಳಿದ್ದಾರೆ.

ಹಿಂದೆ ಮಹಾನಗರಗಳ ಜನರು ಹೆಚ್ಚಾಗಿ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿದ್ದರು. ಆದರೆ ಈಗ ಗ್ರಾಮೀಣ ಭಾಗದಿಂದಲೂ ವೆಬ್‌ಸೈಟ್‌ ವೀಕ್ಷಿಸಿಲು ಜನರು ಬರುತ್ತಿದ್ದಾರೆ. ವೆಬ್‌ಸೈಟ್‌ನಲ್ಲಿ ಸಾಕು ಪ್ರಾಣಿಗಳ ಫೋಟೋಗಳೊಂದಿಗೆ ವಾರಸುದಾರರ ಸಂಪರ್ಕಿಸುವ ನಂಬರ್‌ ಮತ್ತು ವಿಳಾಸ ನೀಡುವುದರಿಂದ ರೈತರಿಗೆ ಖರೀದಿಸಲು ಸಹಾಯವಾಗುತ್ತಿದೆ ಎಂದು ಅಧಿಕಾರಿಗಳು ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ : ಈ ಸೆಕೆಂಡ್‌ ಹ್ಯಾಂಡ್‌ ವಸ್ತುಗಳನ್ನು ಆನ್‌ಲೈನ್‌ಲ್ಲಿ ಖರೀದಿಸಿ
ಇದನ್ನೂ ಓದಿ: ಈ ಸೆಕೆಂಡ್‌ಹ್ಯಾಂಡ್‌ ವಸ್ತುಗಳನ್ನು ಆನ್‌ಲೈನ್‌ಲ್ಲಿ ಖರೀದಿಸದಿರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot