Just In
- 14 hrs ago 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- 15 hrs ago vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- 16 hrs ago ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- 18 hrs ago Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
Don't Miss
- Lifestyle ಕಲ್ಲಂಗಡಿ ಹಣ್ಣು ಹಾಕಿ ಮಾಡಿದ ಚಿಕನ್ ಬಿರಿಯಾನಿ: ರೆಸಿಪಿ ವೀಡಿಯೋ ತುಂಬಾನೇ ವೈರಲ್
- Sports DC vs SRH IPL 2024: ಸನ್ ರೈಸರ್ಸ್ ಹೈದರಾಬಾದ್ ಆರ್ಭಟಕ್ಕೆ ದಂಗಾದ ಡೆಲ್ಲಿ ಕ್ಯಾಪಿಟಲ್ಸ್; ; ಇಲ್ಲಿದೆ ಪಂದ್ಯದ ವಿವರ
- News ಗಡಿಜಿಲ್ಲೆಯ ಹಲವೆಡೆ ವರ್ಷದ ಮೊದಲ ಮಳೆ, ಈ ಭಾಗಗಳಲ್ಲಿ ಕಾಡ್ಗಿಚ್ಚಿನ ಆತಂಕ ದೂರ
- Movies Mahanati: ಚಿತ್ರದುರ್ಗದ ಗಗನಾ ಸಖತ್ ಫೇಮಸ್; ಟೀ ಲೋಟ ತೊಳೆಯಲು ಮೇಕಪ್ ಮಾಡಿಕೊಂಡು ಹೋದ ಗಗನಾ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾರ್ಗ ಮಧ್ಯೆಯೇ ಕೆಟ್ಟುನಿಂತಿತು ಗಗನಯಾತ್ರಿಗಳನ್ನು ಹೊತ್ತಿದ್ದ 'ರಾಕೆಟ್'!!
ಗಗನಯಾತ್ರಿಗಳನ್ನು ಹೊತ್ತು ನಭಕ್ಕೆ ಚಿಮ್ಮಿದ ರಾಕೆಟ್ ಒಂದು ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ಮಾರ್ಗ ಮಧ್ಯೆಯೇ ಕೆಟ್ಟು ನಿಂತಿದ್ದ ಆತಂಕದ ಘಟನೆ ಇಂದು ನಡೆದಿದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ಸ್ಪೇಸ್ ಏಜೆನ್ಸಿಗೆ ಸೇರಿದ ರಾಕೆಟ್ ಮಾರ್ಗ ಮಧ್ಯೆಯೇ ತಾಂತ್ರಿಕ ದೋಷಕ್ಕೆ ತುತ್ತಾಗಿದೆ.
ಗಗನಯಾತ್ರಿಗಳನ್ನು ಹೊತ್ತು ರಷ್ಯಾದ 'ಬೈಕೊನುರ್ ಕಾಸ್ಮೋಡ್ರೋಮ್' ಅಂತರಿಕ್ಷ ನೌಕಾ ನೆಲೆಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ಐಎಸ್ಎಸ್) ಇಂದು (ಗುರುವಾರ)( ಉಡಾವಣೆಗೊಂಡಿದ್ದ ರಾಕೆಟ್ ಮಾರ್ಗ ಮಧ್ಯೆ ವಿಫಲಗೊಂಡು ತುರ್ತು ಭೂ ಸ್ಪರ್ಶ ಮಾಡಿದೆ. ರಾಕೆಟ್‌ನಲ್ಲಿದ್ದ ಇಬ್ಬರೂ ಗಗನಯಾತ್ರಿಗಳು ಸುರಕ್ಷಿತವಾಗಿರುವುದು ತಿಳಿದುಬಂದಿದೆ.
ತಾಂತ್ರಿಕ ದೋಷದಿಂದ ಮಾರ್ಗ ಮಧ್ಯೆಯೇ ರಾಕೆಟ್ ಕೆಟ್ಟು ನಿಂತರೂ, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೊರಟಿದ್ದ ನಾಸಾದ ನಿಕ್ ಹಾಗ್ಯೂ ಮತ್ತು ಅಲೆಸ್ಕಿ ಓವಿಶಿನಿನ್ ಗಗನಯಾತ್ರಿಗಳು ಸುರಕ್ಷತವಾಗಿರುವ ಬಗ್ಗೆ ನಾಸಾ ಟ್ವಿಟ್ಟಿಸಿರುವ ಟ್ವಿಟ್ ಮೂಲಕ ತಿಳಿದುಬಂದಿದೆ.ಬಾಹ್ಯಾಕಾಶ ಕ್ಷೇತ್ರವನ್ನು ಕೆಲಹೊತ್ತು ಆತಂಕಕ್ಕೆ ತಳ್ಳಿದ ಘಟನೆ ಈಗ ಸುಖಾಂತ್ಯವಾಗಿದೆ.
ತಾಂತ್ರಿಕ ದೋಷ ಕಾಣಿಸಿಕೊಂಡ ಕೆಲವೇ ಕ್ಷಣಗಳಲ್ಲಿ ರಾಕೆಟ್ ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸಿದೆ. ಇದರಿಂದ ಕೆಲಕಾಲ ವಿಚಲಿತರಾದ ಗಗನಯಾತ್ರಿಗಳು, ಎಮರ್ಜೆನ್ಸಿ ಲ್ಯಾಂಡಿಂಗ್ ಆಯ್ಕೆ ಬಳಸಿ ಸುರಕ್ಷಿತವಾಗ ಭೂಮಿಗೆ ವಾಪಸಾಗಿದ್ದಾರೆ. ರಾಕೆಟ್ ವಿಫಲವಾದಾಗ ವ್ಯೂಮನೌಕೆಯ ಒಳಗೆ ಗಗನಯಾತ್ರಿಗಳು ಪರದಾಡಿದ ದೃಶ್ಯ ಕೂಡ ವಿಡಿಯೋದಲ್ಲಿ ದಾಖಲಾಗಿದೆ.
ಯಶಸ್ವಿಯಾಗಿ ಉಡಾವಣೆಗೊಂಡ ರಾಕೆಟ್ ಆರಂಭದಲ್ಲಿ ನಿರೀಕ್ಷೆಯಂತೆ ಪಥದಲ್ಲಿ ಚಲಿಸಿತಾದರೂ, ಮಾರ್ಗ ಮಧ್ಯೆ 'ಬೂಸ್ಟರ್ ರಾಕೆಟ್' ಚಾಲನೆ ವಿಫಲವಾಯಿತು ಎನ್ನಲಾಗಿದೆ. ಕೂಡಲೇ ರಾಕೆಟ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದ ಗಗನಯಾತ್ರಿಗಳು, ರಾಕೆಟ್ ಅನ್ನು ಸುರಕ್ಷಿತವಾಗಿ ಕಜಾಕಿಸ್ತಾನದಲ್ಲಿ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಓದಿರಿ: ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಮಿಂಚುಹರಿಸಿದ 'ಶಿಯೋಮಿ ಮಿ8'!..ಸೇಲ್ ಆಗಿದ್ದು ಎಷ್ಟು ಗೊತ್ತಾ?
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999