ಎಚ್ಚರ... ಈ ನಕಲಿ ಆಪ್ WhatsApp ಸೇರಿದಂತೆ ಎಲ್ಲಾ ಇತರೆ ಆಪ್‌ಗಳಿಂದ ಮಾಹಿತಿ ಕದಿಯುತ್ತೆ! ಅನ್‌ಇನ್‌ಸ್ಟಾಲ್ ಮಾಡಿ
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ (Android smartphone) ಬಳಕೆದಾರರು ಆಗಾಗ್ಗೆ ತಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಭದ್ರತಾ ಸಮಸ್ಯೆಗಳಿಗೆ ಸಿಲುಕುತ್ತಲೇ ಇರುತ್ತಾರೆ. ಅದರಲ್ಲೂ ಟೆಕ್ಸ್ಟ್ ಮೆಸೆಜ್‌ಗಳ ಮೂಲಕ ಆಂಡ್ರಾಯ್ಡ್ ಫೋನ್ ಬಳಕೆದಾರರ ಸ್ಥಳ ಟ್ರ್ಯಾಕ್ ಮಾಡಬಹುದು ಎಂಬ ವರದಿಯ ಬೆನ್ನಲ್ಲೇ ಈಗ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ.
ಹೌದು, ಆಂಡ್ರಾಯ್ಡ್ ಬಳಕೆದಾರರು ಈಗ ಮತ್ತೊಂದು ಸಂಕಷ್ಟ ಎದುರಿಸಬೇಕಿದೆ. ಏನೆಂದರೆ ಹ್ಯಾಕರ್‌ಗಳು ವಾಟ್ಸಾಪ್ (Whatsapp) ಬಳಕೆದಾರರ ಡೇಟಾವನ್ನು ಕದಿಯಲು 'ಸೇಫ್‌ಚಾಟ್' (Safechat) ಎಂಬ ನಕಲಿ ಆಂಡ್ರಾಯ್ಡ್ ಆಪ್ ಅನ್ನು ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಆಪ್ ಸ್ಪೈವೇರ್ 'ಕವರ್ಲ್ಮ್' ನ ರೂಪಾಂತರವಾಗಿದೆ ಎಂದು ಶಂಕಿಸಲಾಗಿದೆ. ಹಾಗಿದ್ರೆ, ಏನಿದು ಹೊಸ ಸ್ಕ್ಯಾಮ್?, ಫೋನ್ ಬಳಕೆದಾರರು ಹೇಗೆ ಎಚ್ಚರಿಕೆ ವಹಿಸಬೇಕು ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ವಾಟ್ಸಾಪ್ ಬಳಕೆದಾರರೇ ಎಚ್ಚರ: ಇನ್ನು ಪ್ರಮುಖ ಮೆಸೆಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್ ಅನ್ನು ಎಲ್ಲಾ ಕಡೆ ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ. ಅದರಲ್ಲೂ ಭಾರತದಲ್ಲಿ ಮೆಟಾ-ಮಾಲೀಕತ್ವದ ಈ ಪ್ಲಾಟ್‌ಫಾರ್ಮ್ ಲಕ್ಷಾಂತರ ಬಳಕೆದಾರರನ್ನು ಹೊಂದಿದ್ದು, ಸೈಬರ್ ಅಪರಾದಿಗಳಿಗೆ ಯಾವಾಗಲು ಮೊದಲ ಟಾರ್ಗೆಟ್ ಆಗಿರಲಿದೆ. ಈ ನಡುವೆ ಮತ್ತೊಂದು ಮಾರ್ಗದ ಮೂಲಕ ಸ್ಕ್ಯಾಮರ್‌ಗಳು ವಾಟ್ಸಾಪ್ ಅನ್ನು ಕೇಂದ್ರೀಕರಿಸಿಕೊಂಡಿದ್ದಾರೆ.
ಸ್ಪೈವೇರ್ ಮಾಲ್‌ವೇರ್‌ನೊಂದಿಗೆ ಡಿವೈಸ್‌ಗಳಿಗೆ ಸೋಂಕು ತಗುಲಿಸಲು ಸೇಫ್‌ಚಾಟ್ ಎಂಬ ನಕಲಿ ಆಂಡ್ರಾಯ್ಡ್ ಆಪ್ ಅನ್ನು ಅನ್ನು ಹ್ಯಾಕರ್‌ಗಳು ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ದುರುದ್ದೇಶಪೂರಿತ ಸಾಫ್ಟ್‌ವೇರ್ ವಾಟ್ಸಾಪ್ ಬಳಕೆದಾರರ ಡೇಟಾವನ್ನು ಕದಿಯುವುದು ಮಾತ್ರವಲ್ಲದೆ ಅವರ ಫೋನ್‌ಗಳಿಂದ ಕರೆ ಲಾಗ್‌ಗಳು, ಟೆಕ್ಸ್ಟ್ ಮೆಸೆಜ್ ಮತ್ತು ಜಿಪಿಎಸ್ ಸೇರಿದಂತೆ ಇತರ ಸೂಕ್ಷ್ಮ ಮಾಹಿತಿಯನ್ನು ಕಲೆ ಹಾಕಲಿದೆ.
ಅದರಲ್ಲೂಆಂಡ್ರಾಯ್ಡ್ ಫೋನ್‌ನಲ್ಲಿ ಬಳಕೆ ಮಾಡಲಾಗುವ ಟೆಲಿಗ್ರಾಮ್,ಸಿಗ್ನಲ್, ವಾಟ್ಸಾಪ್, ವೈಬರ್ ಮತ್ತು ಫೇಸ್‌ಬುಕ್ ಮೆಸೆಂಜರ್‌ನಂತಹ ಮೆಸೆಜಿಂಗ್ ಆಪ್‌ಗಳನ್ನು ಗುರಿಯಾಗಿಸುವ ಸ್ಪೈವೇರ್ ಕವರ್ಲ್ಮ್ ನ (Coverlm) ರೂಪಾಂತರ ಇದಾಗಿದೆ ಎಂದು ಶಂಕಿಸಲಾಗಿದ್ದು, CYFIRMA ದ ಸಂಶೋಧಕರ ಪ್ರಕಾರ ಬಹಮುಟ್ (Bahamut) ಎಂಬ ಭಾರತೀಯ APT ಹ್ಯಾಕಿಂಗ್ ಗ್ರೂಪ್ ಈ ಮಾಲ್‌ವೇರ್‌ಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚಿನ ದಾಳಿಗಳನ್ನು ಮುಖ್ಯವಾಗಿ ವಾಟ್ಸಾಪ್‌ನಲ್ಲಿ ಸ್ಪಿಯರ್-ಫಿಶಿಂಗ್ ಮೆಸೆಜ್‌ಗಳ ಮೂಲಕ ನಡೆಸಲಾಗುತ್ತಿದೆ. ಇದು ದುರುದ್ದೇಶಪೂರಿತ ಪೇಲೋಡ್‌ಗಳನ್ನು ನೇರವಾಗಿ ಬಳಕೆದಾರರಿಗೆ ನೀಡುತ್ತಿದ್ದು. ಬಹಮುಟ್ ಭಾರತದಾದ್ಯಂತ ಹಾಗೂ ದಕ್ಷಿಣ ಏಷ್ಯಾದ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ ಎಂದು ವರದಿಯಿಂದ ತಿಳಿದುಬಂದಿದೆ.
ಈ ಸೇಫ್ ಚಾಟ್‌ನ ಪ್ರಮುಖ ವಂಚನೆಗಳಿವು: ಈ ಆಪ್‌ನ ಇಂಟರ್‌ಫೇಸ್ ಬಳಕೆದಾರರನ್ನು ನಂಬುವಂತೆ ಯಶಸ್ವಿಯಾಗಿ ಮೋಸಗೊಳಿಸುತ್ತದೆ. ಇದರೊಂದಿಗೆ ಮೋಸಗಾರರು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಹೊರತೆಗೆಯಲು ಅನುವು ಮಾಡಿಕೊಡುತ್ತದೆ. ಅದರಲ್ಲೂ ಈ ಆಪ್ ನಕಲಿ ಎಂದು ಅರಿತುಕೊಳ್ಳುವ ಮೊದಲೇ ಮಾಲ್‌ವೇರ್ ಅನುಮಾನಾಸ್ಪದ ಆಂಡ್ರಾಯ್ಡ್ ಲೈಬ್ರರಿಗಳನ್ನು ಜಾಣತನದಿಂದ ಕದ್ದಿರುತ್ತದೆ ಎಂದು ವರದಿಯಿಂದ ತಿಳಿದುಬಂದಿದೆ.
ಇನ್ನು ಈ ಆಪ್ ಒಮ್ಮೆ ಇನ್‌ಸ್ಟಾಲ್ ಮಾಡಿದ ನಂತರ ಹಲವಾರು ಅನುಮತಿಗಳನ್ನು ಇದು ಕೇಳುವುದಿಲ್ಲ. ಬದಲಾಗಿ ಅದರಲ್ಲಿ ಸಂಪರ್ಕಗಳ ಪಟ್ಟಿ, ಎಸ್‌ಎಮ್‌ಎಸ್, ಕರೆ ಲಾಗ್‌ಗಳು, ಬಾಹ್ಯ ಡಿವೈಸ್ ಸ್ಟೋರೇಜ್ ಮತ್ತು ಜಿಪಿಎಸ್ ಸ್ಥಳ ಡೇಟಾಗೆ ಪ್ರವೇಶದಂತಹ ಹೆಚ್ಚಿನ ಅನುಮತಿಗಳನ್ನು ಆಟೋಮ್ಯಾಟಿಕ್ ಆಗಿ ಆನ್ ಮಾಡಿಕೊಳ್ಳುತ್ತದೆ. ಇಷ್ಟು ಮಾತ್ರವಲ್ಲದೆ ಹಿನ್ನೆಲೆಯಲ್ಲಿ ತನ್ನದೇ ಆದ ಕುತಂತ್ರ ಬುದ್ದಿ ತೋರಿಸಲು ಆರಂಭಿಸುತ್ತದೆ.

ಅಂದರೆ ಈ ಆಪ್ ಈಗಾಗಲೇ ಡಿವೈಸ್‌ನಲ್ಲಿ ಇನ್‌ಸ್ಟಾಲ್ ಆಗಿರುವ ಇತರ ಚಾಟ್ ಆಪ್‌ಗಳೊಂದಿಗೆ ಸಂವಹನ ನಡೆಸುತ್ತದೆ. ಚಾಟ್ ಮೆಸೆಜ್‌ಗಳು ಮತ್ತು ಮಾಧ್ಯಮ ಫೈಲ್‌ಗಳಂತಹ ಆಪ್‌ಗಳಿಂದ ಡೇಟಾವನ್ನು ಕದಿಯಲು ಆರಂಭಿಸುತ್ತದೆ. ಕದ್ದ ಡೇಟಾವನ್ನು ನಂತರ ಎನ್‌ಕ್ರಿಪ್ಟ್ ಮಾಡಲಾಗುತ್ತದೆ ಮತ್ತು ಆಕ್ರಮಣಕಾರರ C2 ಸರ್ವರ್‌ಗೆ ಕಳುಹಿಸಲಾಗುತ್ತದೆ
ಇದರಿಂದ ಸುರಕ್ಷಿತವಾಗಿರಲು ಏನು ಮಾಡಬೇಕು?: ಸೈಬರ್ ದಾಳಿಗಳು ಇಂದು ನಿನ್ನೆಯದಲ್ಲ. ಅಂತಹ ಘಟನೆಗಳ ಬಗ್ಗೆ ಯಾವಾಗಲೂ ಜಾಗರೂಕರಾಗಿರಲು ಮತ್ತು ಸುರಕ್ಷಿತವಾಗಿರಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ. ಸೇಫ್‌ಚಾಟ್ ಮತ್ತು ಇತರ ಮಾಲ್‌ವೇರ್‌ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ನಿಮ್ಮ ಸ್ಮಾರ್ಟ್‌ಫೋನ್ ನಲ್ಲಿ ಈ ಕೆಲಸಗಳನ್ನು ಮಾಡಿ.
ವಿಶ್ವಾಸಾರ್ಹ ಮೂಲಗಳಿಂದ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿ : ಗೂಗಲ್ ಪ್ಲೇ ಸ್ಟೋರ್ ನಂತಹ ಅಧಿಕೃತ ಆಪ್ ಸ್ಟೋರ್‌ಗಳಿಂದ ಮಾತ್ರ ಆಪ್‌ಗಳನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ. ಬದಲಾಗಿ ಯಾವುದೇ ಅನಧಿಕೃತ ಮೂಲಗಳಿಂದ ಆಪ್‌ಗಳನ್ನು ಸೈಡ್‌ಲೋಡ್ ಮಾಡುವುದನ್ನು ತಪ್ಪಿಸಿ. ಏಕೆಂದರೆ ಅವುಗಳು ಮಾಲ್‌ವೇರ್ ಅನ್ನು ಹೊಂದಿರಬಹುದು.
ಅಪ್ಲಿಕೇಶನ್ ಅನುಮತಿಗಳನ್ನು ಪರಿಶೀಲಿಸಿ: ಅನಗತ್ಯ ಅನುಮತಿಗಳನ್ನು ವಿನಂತಿಸುವ ಆಪ್‌ಗಳ ಬಗ್ಗೆ ನೀವು ಹೆಚ್ಚಾಗಿ ಜಾಗರೂಕರಾಗಿರಿ. ಸೂಕ್ಷ್ಮ ಡೇಟಾ ಅಥವಾ ಅದರ ಕಾರ್ಯಚಟುವಟಿಕೆಗೆ ಸಂಬಂಧವಿಲ್ಲದಂತೆ ತೋರುವ ಸೌಲಭ್ಯಗಳಿಗೆ ಪ್ರವೇಶವನ್ನು ಕೇಳಿದರೆ, ಅದನ್ನು ಯಾವುದೇ ಕಾರಣಕ್ಕೆ ಇನ್‌ಸ್ಟಾಲ್ ಮಾಡಬೇಡಿ. ಬಳಿಕ ಎಲ್ಲಾ ಮೂಲಗಳಿಂದ ಅದನ್ನು ಅಳಿಸಿ ಹಾಕಿ.
ನಿಮ್ಮ ಡಿವೈಸ್ ಅಪ್‌ಡೇಟ್ ಮಾಡಿ: ಇತ್ತೀಚಿನ ಸಾಫ್ಟ್‌ವೇರ್ ಮತ್ತು ಭದ್ರತಾ ಪ್ಯಾಚ್‌ಗಳೊಂದಿಗೆ ನಿಮ್ಮ ಆಂಡ್ರಾಯ್ಡ್ ಡಿವೈಸ್‌ಗಳನ್ನು ನಿಯಮಿತವಾಗಿ ನವೀಕರಿಸಿ. ದೋಷಗಳನ್ನು ಸರಿಪಡಿಸಲು ಮತ್ತು ಡಿವೈಸ್‌ನ ಸುರಕ್ಷತೆಯನ್ನು ಬಲಪಡಿಸಲು ಸ್ಮಾರ್ಟ್‌ಫೋನ್ ತಯಾರಕರು ಆಗಾಗ್ಗೆ ನವೀಕರಣಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ.
ಭದ್ರತಾ ಆಪ್‌ಗಳನ್ನು ಬಳಕೆ ಮಾಡಿದೆ: ಇದೆಲ್ಲದರ ಜೊತೆಗೆ ಮಾಲ್‌ವೇರ್ ಮತ್ತು ಸಂಭಾವ್ಯ ಬೆದರಿಕೆಗಳಿಂದ ನಿಮ್ಮ ಡಿವೈಸ್ ಅನ್ನು ರಕ್ಷಣೆ ಮಾಡಲು ನೀವು ನಿಯಮಿತವಾಗಿ ಸ್ಕ್ಯಾನ್ ಮಾಡುವುದನ್ನು ಮರೆಯಬೇಡಿ. ಇದಕ್ಕಾಗಿ ವಿಶ್ವಾಸಾರ್ಹ ಪೂರೈಕೆದಾರರಿಂದ ಪ್ರತಿಷ್ಠಿತ ಆಂಟಿವೈರಸ್ ಅಥವಾ ಭದ್ರತಾ ಆಪ್‌ಗಳನ್ನು ಫೋನ್‌ನಲ್ಲಿ ಇರಿಸಿಕೊಳ್ಳಿ.


Click it and Unblock the Notifications








