ಎರಡು ಫೋನ್ ಇದ್ರೆ ಸಾಕು ನೀವೇ ಫೋಲ್ಡಬಲ್ ಫೋನ್ ಮಾಡಿಕೊಳ್ಳಬಹುದು! ಅದೇಗೆ ಅಂತೀರಾ?
ಇತ್ತೀಚಿನ ದಿನಗಳಲ್ಲಿ ಫೋಲ್ಡಬಲ್ ಫೋನ್‌ಗಳಿಗೆ ಬಹು ಬೇಡಿಕೆ ಇದೆ. ಈ ನಡುವೆ ಕೆಲವು ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳು ಹೊಸ ಹೊಸ ಫೋಲ್ಡಬಲ್ ಫೋನ್‌ಗಳನ್ನು ಲಾಂಚ್ ಮಾಡಿದ್ದು, ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ. ಈ ಮೂಲಕ ಹಲವರಿಗೆ ಈ ಫೋಲ್ಡಬಲ್ ಫೋನ್ ಖರೀದಿ ಮಾಡಲು ಸಾಧ್ಯ ಇರದಿರಬಹುದು. ಆದರೆ, ಅವರು ಈ ರೀತಿ ಮಾಡುವ ಮೂಲಕ ಫೋಲ್ಡಬಲ್ ಫೋನ್ ಅನುಭವ ಪಡೆಯಬಹುದು.
ಹೌದು, ಸ್ಯಾಮ್‌ಸಂಗ್ ಫೋನ್‌ಗಳಲ್ಲಿ ಈಗ ಫೋಲ್ಡಬಲ್ ಫೋನ್‌ಗಳು ಬಹಳ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಈ ನಡುವೆ ಸ್ಯಾಮ್‌ಸಂಗ್ ಆಪಲ್ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ್ದು, ನಕಲಿ ಗ್ಯಾಲಕ್ಸಿ ಫೋಲ್ಡ್ ರಚಿಸಲು ಅನುಮತಿಸುತ್ತದೆ. ಇದರಿಂದ ಫೋಲ್ಡಬಲ್ ಫೋನ್‌ಗಳಲ್ಲಿ ಯಾವ ಅನುಭವ ಲಭ್ಯ ಆಗಲಿದೆಯೋ ಅದೇ ಅನುಭವ ಇದರಲ್ಲೂ ಸಿಗಲಿದೆ. ಆದರೆ, ಈ ಫೋನ್‌ಗಳು ಜಂಟಿ ಆಗಿರುವುದಿಲ್ಲ ಅಷ್ಟೇ. ಹಾಗಿದ್ರೆ, ಇದನ್ನು ಹೇಗೆ ಮಾಡುವುದು ಎಂದು ತಿಳಿಯೋಣ ಬನ್ನಿ.

ಸ್ಯಾಮ್‌ಸಂಗ್ ಆಪಲ್‌ನೊಂದಿಗಿನ ತನ್ನ ತಮಾಷೆಯ ಪೈಪೋಟಿಗೆ ಎಂದಿಗೂ ಹೆಸರುವಾಸಿ. ಕಂಪೆನಿಯು ತನ್ನ ಪ್ರತಿಸ್ಪರ್ಧಿಯನ್ನು ಅಪಹಾಸ್ಯ ಮಾಡುವ ಅವಕಾಶವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಇದರಲ್ಲಿ ಗ್ಯಾಲಕ್ಸಿ S23 ಅಲ್ಟ್ರಾದ 100x ಜೂಮ್ ಆಗಿರಬಹುದು ಅಥವಾ ಅದರ ಫ್ಲಿಪ್ ಮತ್ತು ಫೋಲ್ಡಬಲ್ ಫೋನ್ ಆಗಿರಬಹುದು. ಇವುಗಳಲ್ಲಿ ಸುಧಾರಿತ ಫೀಚರ್ಸ್ ಆಯ್ಕೆ ನೀಡುವ ಮೂಲಕ ಸ್ಯಾಮ್‌ಸಂಗ್ ಯಾವಾಗಲೂ ಆಪಲ್‌ನ ನಾವೀನ್ಯತೆಯ ಕೊರತೆಯನ್ನು ಎತ್ತಿಹಿಡಿಯುತ್ತಲೇ ಇರುತ್ತದೆ.
ಸ್ಯಾಮ್‌ಸಂಗ್ ಇತ್ತೀಚೆಗೆ ತನ್ನ ಹೊಸ ತಲೆಮಾರಿನ ಫ್ಲಿಪ್ ಮತ್ತು ಫೋಲ್ಡಬಲ್ ಫೋನ್‌ಗಳಾದ ಗ್ಯಾಲಕ್ಸಿ Z ಫ್ಲಿಪ್ 5 ಮತ್ತು ಫೋಲ್ಡ್ 5 ಅನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಆಪಲ್ ತನ್ನ ಬಳಕೆದಾರರನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಕೀಟಲೆ ಮಾಡಲು ಪ್ರಾರಂಭಿಸಿದೆ. ಈ ಮೂಲಕ ಬಳಕೆದಾರರಿಗೆ ಉಚಿತ ಪ್ರಯೋಗವನ್ನು ನೀಡಿದ್ದು, ತನ್ನ ಟ್ರೈ ಗ್ಯಾಲಕ್ಸಿ (Try Galaxy) ಆಪ್ ಮೂಲಕ ಐಫೋನ್‌ಗಳಲ್ಲಿ ಗ್ಯಾಲಕ್ಸಿ ಯುಐ ನಿಂದ ವರ್ಚುವಲ್ ಟ್ರೈ ಔಟ್ ಅನ್ನು ನೀಡಲಿದೆ.
ಸ್ಯಾಮ್‌ಸಂಗ್‌ನ ಟ್ರೈ ಗ್ಯಾಲಕ್ಸಿ ಆಪ್ ಬಳಕೆ ಮಾಡಿಕೊಂಡು ಐಫೋನ್ ಬಳಕೆದಾರರು ಗ್ಯಾಲಕ್ಸಿ ಫೋನ್ ನ ಸಾಮರ್ಥ್ಯ ಏನು, ಈ ಫೋನ್‌ಗಳಲ್ಲಿ ಏನೆಲ್ಲಾ ಲಭ್ಯ ಎಂಬುದನ್ನು ನೋಡಬಹುದಾಗಿದೆ. ಈ ಆಪ್ ಅನ್ನು ಅನ್ನು ಮೂಲತಃ 2020 ರಲ್ಲಿ ಲಾಂಚ್ ಮಾಡಲಾಗಿದ್ದು, ಈಗ ನಕಲಿ ಗ್ಯಾಲಕ್ಸಿ ಫೋಲ್ಡ್ ಅನ್ನು ರಚಿಸಲು ಐಫೋನ್ ಬಳಕೆದಾರರಿಗೆ ಅನುವು ಮಾಡಿಕೊಟ್ಟಿದೆ. ಈ ಮೂಲಕ ಸ್ಯಾಮ್‌ಸಂಗ್‌ನ ಹೊಸ ಫೋಲ್ಡಬಲ್ ಫೋನ್ ಅನುಭವವನ್ನು ಆಪಲ್‌ನಲ್ಲೇ ಪಡೆಯಬಹುದಾಗಿದೆ.
ಇನ್ನು ಸಿಮ್ಯುಲೇಶನ್‌ನಲ್ಲಿ ಈ ಆಪ್ ಅನ್ನು ತೆರೆಯಬಹುದು ಮತ್ತು ಕ್ಲೋಸ್ ಮಾಡಬಹುದು. ಜೊತೆಗೆ ಸ್ಯಾಮ್‌ಸಂಗ್‌ನ ಯುಐ ಒಳಗೆ ಮೊದಲೇ ಇನ್‌ಸ್ಟಾಲ್ ಮಾಡಲಾದ ಆಪ್‌ಗಳನ್ನು ಸಹ ನೀವು ಬಳಸಿಕೊಳ್ಳಬಹುದು. ಇದರೊಂದಿಗೆ ಕೊರಿಯನ್, ಜೆಕ್, ಹಂಗೇರಿಯನ್, ಲ್ಯಾಟಿನ್ ಅಮೇರಿಕನ್ ಸ್ಪ್ಯಾನಿಷ್ ಮತ್ತು ರಷ್ಯನ್ ಅನ್ನು ಒಳಗೊಂಡಿರುವ 20 ಭಾಷೆಗಳಿಗೆ ಈ ಆಪ್ ಬೆಂಬಲ ನೀಡಲಿದೆ.
ಈ ಆಪ್ ಅನ್ನು ಬಳಕೆ ಮಾಡುವುದು ಹೇಗೆ ?:
- ನೀವು ಸ್ಯಾಮ್‌ಸಂಗ್ ಗ್ಯಾಲಕ್ಸಿ Try Galaxy ಆಪ್ ಅನ್ನು ಬಳಕೆ ಮಾಡಲು trygalaxy.com/ಯ ಅಧಿಕೃತ ಸೈಟ್‌ಗೆ ಭೇಟಿ ನೀಡಿ.
- ಇದಾದ ಬಳಿಕ ನಿಮ್ಮ ಐಫೋನ್‌ನ ಮೇಜ್ ಪೇಜ್ ಗೆ ಹೋಗಿ ಅಲ್ಲಿ ಇನ್‌ಸ್ಟಾಲ್ ಆಗಿದೆಯಾ ಎಂದು ಗಮನಿಸಿ.
- ನಂತರದಲ್ಲಿ ಆಪ್ ಅನ್ನು ಅನ್ನು ಪ್ರಾರಂಭಿಸಿ ಮತ್ತು 'ಟ್ರೈ ಫೋಲ್ಡ್' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ.
- ಬಳಿಕ ನಿಮ್ಮ ಎರಡನೇ ಐಫೋನ್‌ನಲ್ಲಿ ಅದೇ ಪ್ರಕ್ರಿಯೆಯನ್ನು ಏಕಕಾಲದಲ್ಲಿ ನಡೆಸಿ. ನಂತರದಲ್ಲಿ ಆಪ್‌ನಲ್ಲಿನ ಕೋಡ್ ಬಳಸಿ ಎರಡು ಐಫೋನ್‌ಗಳು ಸಂಪರ್ಕಿತಗೊಳ್ಳುತ್ತವೆ.
- ಈ ಎರಡೂ ಐಫೋನ್‌ಗಳು ಒಂದೇ ಡಿಸ್‌ಪ್ಲೇಯಂತೆ ಸಂಯೋಜಿಸಲ್ಪಡಲಿದ್ದು ,ಈ ಮೂಲಕ ನೀವು ಸ್ಯಾಮ್‌ಸಂಗ್ ಫೋಲ್ಡಬಲ್ ಫೋನ್ ಅನುಭವ ಪಡೆಯಬಹುದು.

ಇಷ್ಟು ಮಾತ್ರವಲ್ಲದೆ ಫೋನ್‌ನ ಗಾತ್ರ ಮತ್ತು ಆಕಾರ ಅನುಪಾತವನ್ನು ಪಡೆಯಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಈ ಆಪ್ ಅನ್ನು ಬಳಕೆ ಮಾಡುವಾಗ UI 5.1.1 ಅನ್ನು ಸಹ ಪ್ರದರ್ಶಿಸುತ್ತದೆ, ಇದು iOS ಬಳಕೆದಾರರಿಗೆ ಗ್ಯಾಲಕ್ಸಿಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆಯುವಂತೆ ಮಾಡಲಿದೆ. ಇದು ಕ್ವಿಕ್ ಶೇರ್ ಮತ್ತು ಸ್ಯಾಮ್‌ಸಂಗ್ ಹೆಲ್ತ್‌ನ ಫಿಟ್‌ನೆಸ್ ಸೂಟ್‌ನಂತಹ ಫೀಚರ್ಸ್ ಆಯ್ಕೆಯನ್ನೂ ಹೊಂದಿದೆ.


Click it and Unblock the Notifications








