Home
ಸುದ್ದಿಜಾಲ

foldable phones: ಇನ್ಮುಂದೆ ಕಡಿಮೆ ಬೆಲೆಯಲ್ಲೂ ಸಿಗಲಿವೆ ಫೋಲ್ಡಬಲ್ ಸ್ಮಾರ್ಟ್‌ಫೋನ್‌! ಯಾವ ಬ್ರ್ಯಾಂಡ್‌ನಲ್ಲಿ ಲಭ್ಯ?

ಸ್ಮಾರ್ಟ್‌ಫೋಗಳ ವಿಭಾಗದಲ್ಲಿ ಫೋಲ್ಡಬಲ್ ಫೋನ್‌ಗಳು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಆರ್ಭಟಿಸುತ್ತಿವೆ. ಅದರಲ್ಲೂ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಪ್ರಮುಖ OEM ಬ್ರ್ಯಾಂಡ್ ಆಗಿ ಸ್ಯಾಮ್‌ಸಂಗ್ ಗುರುತಿಸಿಕೊಂಡಿದೆ. ಗ್ಯಾಲಕ್ಸಿ Z ಫೋಲ್ಡ್‌ ಫ್ಲ್ಯಾಗ್‌ಶಿಪ್‌ಗಳ ಐದು ವೇರಿಯಂಟ್ ಅನ್ನು ಲಾಂಚ್ ಮಾಡಿರುವ ಸ್ಯಾಮ್‌ಸಂಗ್‌ ಫೋಲ್ಡಬಲ್‌ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಈ ನಡುವೆ ಕೈಗೆಟುಕುವ ಬೆಲೆಯೊಂದಿಗೆ ಈ ಫೋನ್‌ಗಳು ಲಭ್ಯ ಆಗಲಿವೆ.

ಹೌದು, ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಹೊಸ ಹಸ ಅನ್ವೇಷಣೆ ಮಾಡಿಕೊಂಡು ಬರುತ್ತಲೇ ಇದೆ. ಈ ನಡುವೆ ಫೋಲ್ಡಬಲ್‌ ಹಾಗೂ ಫ್ಲಿಪ್‌ಮಾದರಿಯ ಫೋನ್‌ಗಳನ್ನು ಪರಿಚಯಿಸಿದ್ದು, ಈ ಕಂಪೆನಿಯ ಜೊತೆಗೆ ಮತ್ತೊಂದು ಕಂಪೆನಿಯೂ ಸಹ ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಫೋಲ್ಡಬಲ್ ಫೋನ್‌ಗಳನ್ನು (foldable phones) ಲಾಂಚ್‌ ಮಾಡಲಿವೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಕೈಗೆಟಕುವ ದರದಲ್ಲಿ ಯಾವ ಬ್ರ್ಯಾಂಡ್‌ನ ಫೋನ್‌ಗಳು ಲಭ್ಯ? ಬೆಲೆ ಎಷ್ಟಿರಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ.

ಇನ್ಮುಂದೆ ಕಡಿಮೆ ಬೆಲೆಯಲ್ಲೂ ಸಿಗಲಿವೆ ಫೋಲ್ಡಬಲ್ ಸ್ಮಾರ್ಟ್‌ಫೋನ್‌!

ಕೈಗೆಟಕುವ ದರದಲ್ಲಿ ಫೋಲ್ಡಬಲ್‌ ಫೋನ್‌ಗಳು: ಸ್ಯಾಮ್‌ಸಂಗ್ ಹಾಗೂ ಹುವಾವೇ ಮುಂದಿನ ವರ್ಷ ಸ್ಪರ್ಧಾತ್ಮಕ ಬೆಲೆಯಲ್ಲಿ ಫೋಲ್ಡಬಲ್ ಫೋನ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ. ಇತರ ಆಂಡ್ರಾಯ್ಡ್ ಫೋನ್ ತಯಾರಕರು ಸಹ ಇದನ್ನೇ ಅನುಸರಿಸುವ ನಿರೀಕ್ಷೆಯಿದೆ. ಜೊತೆಗೆ ಟ್ರಿಪಲ್ ಫೋಲ್ಡಬಲ್ ಸ್ಕ್ರೀನ್ ಫೋನ್‌ಗಳನ್ನು ಸಹ ಮುಂದಿನ ವರ್ಷ ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಟ್ರೆಂಡ್‌ಪೋರ್ಸ್‌ ವರದಿಯ ಪ್ರಕಾರ, ಸ್ಯಾಮ್‌ಸಂಗ್‌ ಮತ್ತು ಹುವಾವೇ ಕಡಿಮೆ ಬೆಲೆಯ ಫೋಲ್ಡಬಲ್‌ ಫೋನ್‌ಗಳನ್ನು ಅನಾವರಣ ಮಾಡಲಿವೆ. ಈ ಫೋನ್‌ಗಳು ಮುಂದಿನ ವರ್ಷ ಲಾಂಚ್‌ ಆಗಲಿವೆ ಎಂದು ಉಲ್ಲೇಖಿಸಿದೆ. ಹಾಗೆಯೇ ಹುವಾವೇ ಟ್ರಿಪಲ್-ಫೋಲ್ಡಬಲ್ ಸ್ಕ್ರೀನ್ ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. ಜೊತೆಗೆ ಇದು ಮುಂದಿನ ವರ್ಷ ಮಾರ್ಚ್‌ನ ಮೊದಲು ಅಧಿಕೃತವಾಗಬಹುದು ಎಂದು ತಿಳಿದುಬಂದಿದೆ.

ಇದರೊಂದಿಗೆ ಇತರೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ತಯಾರಕರು ಸಹ ಕೆಲವು ತಿಂಗಳ ಹಿಂದೆ ಹೊಸ ಫೋಲ್ಡಬಲ್ ಫೋನ್‌ಗಳನ್ನು ಲಾಂಚ್‌ ಮಾಡಿ ನಾವೇನು ಕಮ್ಮಿ ಇಲ್ಲ ಎನ್ನುವುದನ್ನು ತೋರಿಸುತ್ತಿದ್ದಾರೆ. ಅದರಲ್ಲೂ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್ 5, ಗ್ಯಾಲಕ್ಸಿ Z ಫ್ಲಿಪ್‌ 5, ಒನ್‌ಪ್ಲಸ್ ಒಪನ್‌, ಒಪ್ಪೋ ಫೈಂಡ್‌ N3 ಮತ್ತು ಹುವಾವೇ ಮೇಟ್ X5 ಸೇರಿದಂತೆ ಕೇವಲ ಮೂರು ತಿಂಗಳಲ್ಲಿ 13 ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಲಾಗಿದೆ.

ಇನ್ಮುಂದೆ ಕಡಿಮೆ ಬೆಲೆಯಲ್ಲೂ ಸಿಗಲಿವೆ ಫೋಲ್ಡಬಲ್ ಸ್ಮಾರ್ಟ್‌ಫೋನ್‌!

ಕೆಲವು ಪ್ರಮುಖ ವರದಿಗಳ ಪ್ರಕಾರ, ಫೋಲ್ಡಬಲ್ ಫೋನ್‌ಗಳ ಬೆಲೆ 41,811 ರೂ. ಬೆಲೆ ವರೆಗೂ ಇಳಿಯುತ್ತದೆ ಎನ್ನಲಾಗಿದೆ. ಈ ಮೂಲಕ 2024 ರಲ್ಲಿ ಹೆಚ್ಚಿನ ಬ್ರಾಂಡ್‌ಗಳು ಹೆಚ್ಚಿನ ಮೌಲ್ಯದ ಫೋಲ್ಡಬಲ್ ಫೋನ್ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಇದು ಸಾಧ್ಯವಾಗುತ್ತದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ 2023 ರ ಅಂತ್ಯದ ವೇಳೆಗೆ ಫೋಲ್ಡಬಲ್‌ ಫೋನ್‌ಗಳ ಸಾಗಣೆಯು 18.3 ಮಿಲಿಯನ್ ಯುನಿಟ್‌ಗಳಿಗೆ ಹೆಚ್ಚಾಗುವ ನಿರೀಕ್ಷೆಯಿದೆ.

ಈ ಮೂಲಕ ವರ್ಷದಿಂದ ವರ್ಷಕ್ಕೆ 43 ಪ್ರತಿಶತದಷ್ಟು ಹೆಚ್ಚಳವನ್ನು ಪ್ರತಿನಿಧಿಸುತ್ತದೆ. 2027 ರ ಹೊತ್ತಿಗೆ ಸಾಗಣೆಗಳು 70 ಮಿಲಿಯನ್ ಘಟಕಗಳನ್ನು ಮುಟ್ಟಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬರೋಬ್ಬರಿ ಐದು ಪ್ರತಿಶತವನ್ನು ಈ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳು ವಶಪಡಿಸಿಕೊಂಡಿವೆ. ಈ ನಡುವೆ
ಮುಂದಿನ ವರ್ಷದಿಂದ ಫೋಲ್ಡಬಲ್ ಫೋನ್‌ಗಳ ಫ್ಯಾನ್ ಆವೃತ್ತಿಯನ್ನು ಬಿಡುಗಡೆ ಮಾಡಲು ಸ್ಯಾಮ್‌ಸಂಗ್ ಯೋಜಿಸುತ್ತಿದೆ ಎನ್ನಲಾಗಿದೆ.

ಇನ್ಮುಂದೆ ಕಡಿಮೆ ಬೆಲೆಯಲ್ಲೂ ಸಿಗಲಿವೆ ಫೋಲ್ಡಬಲ್ ಸ್ಮಾರ್ಟ್‌ಫೋನ್‌!

ಮುಂದಿನ ವರ್ಷ ಗ್ಯಾಲಕ್ಸಿ Z ಫೋಲ್ಡ್ 6 ಮತ್ತು ಗ್ಯಾಲಕ್ಸಿ Z ಫ್ಲಿಪ್‌ 6 ಸ್ಮಾರ್ಟ್‌ಫೋನ್‌ ನಂತರ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z FE ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಲಾಗುವುದು ಎಂದು ತಿಳಿದುಬಂದಿದೆ. ಈ ಮೂಲಕ ಸ್ಯಾಮ್‌ಸಂಗ್ ಹೊಸ ಹೊಸ ವಿಷಯಗಳಿಗೆ ನಾಂದಿಯಾಡಲಿದೆ. ಹಾಗೆಯೇ ಕೈಗೆಟಕುವ ದರದಲ್ಲಿ ಲಭ್ಯ ಆಗುತ್ತಿರುವುದರಿಂದ ಯಾರೆಲ್ಲಾ ಫೋಲ್ಡಬಲ್‌ ಫೋನ್‌ ಖರೀದಿ ಮಾಡಲು ಇಚ್ಚಿಸಿದ್ದಾರೋ ಅವರಿಗೆ ಸಂತೋಷ ಆಗಲಿದೆ.

Best Mobiles in India

English summary
Samsung and Huawei are reportedly preparing to launch competitively priced foldable phones next year. Other Android phone makers are expected to follow suit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+