Samsung Galaxy Unpacked Event 2024: ಗ್ಯಾಲಕ್ಸಿ ಎಐನಿಂದ ಗ್ಯಾಲಕ್ಸಿ ರಿಂಗ್ ವರೆಗೆ, ಇಲ್ಲಿದೆ ಹುಬ್ಬೇರಿಸುವ ವಿಷಯ!
ಸ್ಯಾಮ್‌ಸಂಗ್ (Samsung) ಕೊನೆಗೂ ಗ್ರಾಹಕರಲ್ಲಿ ಇದ್ದ ಕುತೂಹಲಕ್ಕೆ ತೆರೆ ಎಳೆದಿದೆ. ಅಂದರೆ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ 2024 (Samsung Galaxy Unpacked Event 2024) ನಲ್ಲಿ ವಿವಿಧ ಡಿವೈಸ್‌ಗಳನ್ನು ಅನಾವರಣ ಮಾಡಲಾಗಿದೆ. ಈ ಡಿವೈಸ್‌ಗಳು ಇನ್ಮುಂದೆ ಸ್ಮಾರ್ಟ್ ಫೋನ್ ಹಾಗೂ ಇನ್ನಿತರೆ ವಿಭಾಗದ ಮಾರುಕಟ್ಟೆಯಲ್ಲಿ ಭರ್ಜರಿ ಸೌಂಡ್ ಮಾಡಲಿವೆ.
ಹೌದು, ಇದೀಗ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿ (Samsung Galaxy S24 series) ಫೋನ್‌ಗಳಿಂದ ಹಿಡಿದು ಸ್ಮಾರ್ಟ್‌ರಿಂಗ್ (Smartring) ವರೆಗೆ ವಿವಿಧ ಡಿವೈಸ್‌ಗಳನ್ನು ಘೋಷಣೆ ಮಾಡಿದೆ. ಅದರಲ್ಲೂ ಗ್ಯಾಲಕ್ಸಿ S24, S24 ಪ್ಲಸ್ ಮತ್ತುS24 ಅಲ್ಟ್ರಾವನ್ನು ಹೊಂದಿರುವ ಗ್ಯಾಲಕ್ಸಿ S24 ಸರಣಿ ಬಗ್ಗೆ ಗ್ರಾಹಕರಿಗೆ ಬಹಳ ಕುತೂಹಲ ಇತ್ತು. ಈ ಫೋನ್‌ಗಳು ಯಾವಾಗ ಲಾಂಚ್ ಆಗುತ್ತವೆ ಎಂದು ಕಾದು ಕುಳಿತಿದ್ದರು. ಈ ಫೋನ್‌ಗಳ ಜೊತೆಗೆ ಸ್ಯಾಮ್‌ಸಂಗ್ ಇತರೆ ಡಿವೈಸ್‌ಗಳ ಬಗ್ಗೆಯೂ ಮಾಹಿತಿ ನೀಡಿದ್ದು, ಅವುಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ 2024: ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿ ಫೋನ್‌ಗಳ ಬಗ್ಗೆ ಈಗಾಗಲೇ ಎಲ್ಲರಿಗೂ ಬಹುಪಾಲು ಮಾಹಿತಿ ತಿಳಿದಿದೆ. ಇದರ ಹೊರತಾಗಿ ಈಗ ಹೆಚ್ಚು ಸದ್ದು ಮಾಡುತ್ತಿರುವ ವಿಷಯ ಏನೆಂದರೆ ಗ್ಯಾಲಕ್ಸಿ ಎಐ. ಗ್ಯಾಲಕ್ಸಿ ಎಐ (Galaxy AI) ಅನ್ನು ಈ ಸಮಾರಂಭದಲ್ಲಿ ಅನಾವರಣ ಮಾಡಲಾಗಿದ್ದು, ಎಲ್ಲರ ಹುಬ್ಬೇರುವಂತೆ ಮಾಡಲಾಗಿದೆ. ಯಾಕೆಂದರೆ ಗ್ಯಾಲಕ್ಸಿ S24 ಸರಣಿಯಲ್ಲಿ ಗ್ಯಾಲಕ್ಸಿ ಎಐ ಅನ್ನು ಪರಿಚಯಿಸಿದ್ದು, ಇದು ಸಂವಹನ ಸಾಮರ್ಥ್ಯಗಳನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಹಾಗಿದ್ರೆ ಈ ಎಐ ಏನೆಲ್ಲಾ ಮಾಡಲಿದೆ ಅನ್ನೋದನ್ನು ಗಮನಿಸಿ.
ನೇರ ಅನುವಾದ: ನೈಜ-ಸಮಯದ ವಾಯ್ಸ್ ಮತ್ತು ಟೆಕ್ಟ್ಸ್ ಅನುವಾದವನ್ನು (Direct translation) ಎರಡೂ ಕಡೆಯಿಂದಲೂ ಮಾಡುವ ಸಾಮರ್ಥ್ಯ ಇದಕ್ಕಿದೆ. ಥರ್ಡ್ ಪಾರ್ಟಿ ಆಪ್‌ಗಳ ಅಗತ್ಯವಿಲ್ಲದೇ ಭಾಷಾ ಅಡೆತಡೆಗಳನ್ನು ಒಡೆಯುವ ಕೆಲಸ ಇದರಿಂದ ಆಗಲಿದ್ದು, ಈ ಮೂಲಕ ತಮಗೆ ಯಾವ ಭಾಷೆ ಬರುತ್ತದೋ ಅದೇ ಭಾಷೆಯನ್ನು ಬಳಕೆ ಮಾಡಿಕೊಂಡು ಇತರೆ ವ್ಯಕ್ತಿಗಳ ಜೊತೆಗೆ ಸುಲಭವಾಗಿ ಸಂವಹನ ನಡೆಸಬಹುದಾಗಿದೆ.

ಇಂಟರ್ಪ್ರಿಟರ್: ಸಾಮಾನ್ಯವಾಗಿ ಈ ಸೇವೆ (Interpreter) ಪಡೆಯಲು ಡೇಟಾ ಬೇಕು ಎಂದು ನೀವು ಅಂದುಕೊಂಡಿರಬಹುದು. ಆದರೆ ಸೆಲ್ಯುಲಾರ್ ಡೇಟಾ ಅಥವಾ ವೈ-ಫೈ ಅಗತ್ಯವಿಲ್ಲದೇ ಸಂವಹನವನ್ನು ಸುಲಭಗೊಳಿಸುವ, ಸ್ಪ್ಲಿಟ್-ಸ್ಕ್ರೀನ್ ವೀಕ್ಷಣೆಯಲ್ಲಿ ಲೈವ್ ಸಂಭಾಷಣೆಗಳನ್ನು ತಕ್ಷಣ ಅನುವಾದಿಸುವ ಕೆಲಸವನ್ನು ಇದು ಮಾಡುತ್ತದೆ.
ಚಾಟ್ ಅಸಿಸ್ಟ್: ಭಾಷೆಯನ್ನು ವರ್ಧಿಸಲು ಮೆಸೇಜಿಂಗ್ ಆಪ್‌ನಲ್ಲಿಚಾಟ್ ಅಸಿಸ್ಟ್(Chat Assist) ಎಐ ಟೂಲ್ಸ್ ಅನ್ನು ಉಪಕರಣವನ್ನು ಸಂಯೋಜಿಸಲಾಗಿದೆ. ಇದರಿಂದಾಗಿ ನಿಮಗೆ ಭಾಷೆ ಸರಿಯಾಗಿ ಬಾರದೇ ಇದ್ದರೂ ಸಹ ಸೌಜನ್ಯದ ಮೆಸೆಜ್‌ಗಳು ಮತ್ತು ಶೀರ್ಷಿಕೆಗಳನ್ನು ಸುಲಭವಾಗಿ ರಚಿಸಲು ಇದು ಸಹಾಯ ಮಾಡುತ್ತದೆ. ಈ ಮೂಲಕ ಈ ಮೆಸೆಜ್ ಸ್ವೀಕಾರ ಮಾಡುವವರು ನಿಮ್ಮಿಂದ ಪ್ರಭಾವಿತರಾಗುತ್ತಾರೆ.

ನೋಟ್ ಅಸಿಸ್ಟ್: ಇನ್ನು ಗ್ಯಾಲಕ್ಸಿ ಎಐನ ಮತ್ತೊಂದು ಫೀಚರ್ಸ್ ಏನೆಂದರೆ ನೋಟ್ ಅಸಿಸ್ಟ್(Note Assist). ಇದನ್ನು ಸ್ಯಾಮ್‌ಸಂಗ್ ನೋಟ್ಸ್‌ನಲ್ಲಿ ಸಂಯೋಜಿತವಾಗಿದೆ, ಎಐ ರಚಿಸಿದ ಸಾರಾಂಶಗಳು, ಪೂರ್ವ ನಿರ್ಮಿತ ಟೆಂಪ್ಲೇಟ್‌ಗಳು ಮತ್ತು ಸಮರ್ಥ ಟಿಪ್ಪಣಿ ಪಡೆಯಲು ಅನುಕೂಲಕರ ಆಯ್ಕೆಯನ್ನು ಇದು ನೀಡುತ್ತದೆ.
ಟ್ರಾನ್ಸ್‌ಕ್ರಿಪ್ಟ್ ಅಸಿಸ್ಟ್: ಟ್ರಾನ್ಸ್‌ಕ್ರಿಪ್ಟ್ ಅಸಿಸ್ಟ್ (Transcript Asst) ಅಂತೂ ಖಂಡಿತಾ ಅಗತ್ಯ ಇರುವ ಫೀಚರ್ಸ್ ಎನ್ನಬಹುದಾಗಿದೆ. ಬಹು ಸ್ಪೀಕರ್ ಸನ್ನಿವೇಶಗಳಲ್ಲಿಯೂ ಸಹ ವಾಯ್ಸ್ ರೆಕಾರ್ಡಿಂಗ್‌ಗಳನ್ನು ಲಿಪ್ಯಂತರ, ಸಾರಾಂಶ ಮತ್ತು ಭಾಷಾಂತರಿಸಲು ಸ್ಪೀಚ್-ಟು-ಟೆಕ್ಸ್ಟ್ ಮತ್ತು ಎಐ ತಂತ್ರಜ್ಞಾನವನ್ನು ಬಳಕೆ ಮಾಡುವ ಕೆಲಸ ಮಾಡುತ್ತದೆ. ಇದರಿಂದ ನೀವು ಗೊಂದಲಕ್ಕೆ ಈಡಾಗುವುದರಿಂದ ಪಾರು ಮಾಡುತ್ತದೆ.

ಸರ್ಕಲ್ ಟು ಸರ್ಚ್:
ಗ್ಯಾಲಕ್ಸಿ S24 ಸರಣಿಯಲ್ಲಿ ಗೂಗಲ್ ನಿಂದ ರನ್ ಆಗುವ ಹೊಸ ಫೀಚರ್ಸ್ ಸರ್ಕಲ್ ಟು ಸರ್ಚ್ (Circle to search)ಅನ್ನು ಪಡೆದಿದೆ. ಬಳಕೆದಾರರು ತಮ್ಮ ಡಿವೈಸ್‌ಗಳಲ್ಲಿ ಸರಳ ಸನ್ನೆಗಳ ಮೂಲಕ ಹೊಸ ಕಂಟೆಂಟ್ ಅನ್ನು ಅನ್ವೇಷಿಸಬಹುದು. ಇದಕ್ಕಾಗಿ ಹೋಮ್ ಬಟನ್ ಅನ್ನು ಒತ್ತಿ ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಿದ್ರೆ ಸಾಕು. ಇದಾದ ನಂತರದಲ್ಲಿ ವಿವಿಧ ರೀತಿಯ ಮಾಹಿತಿಯನ್ನು ಭಿನ್ನ ರೀತಿಯಲ್ಲಿ ಪಡೆಯಬಹುದಾಗಿದೆ.
ಏಳು ವರ್ಷಗಳ ಸಾಫ್ಟ್‌ವೇರ್ ನವೀಕರಣ:
ಇದಂತೂ ಸ್ಮಾರ್ಟ್‌ಫೋನ್ ಪ್ರಿಯರು ಕುಣಿದು ಕುಪ್ಪಳಿಸುವ ವಿಷಯವಾಗಿದೆ. ಯಾಕೆಂದರೆ ಗ್ಯಾಲಕ್ಸಿ S24 ಸ್ಮಾರ್ಟ್‌ಫೋನ್ ಸರಣಿಗೆ ಏಳು ವರ್ಷಗಳ ಭದ್ರತಾ ನವೀಕರಣಗಳು ಮತ್ತು ಏಳು ಜನ್‌ನ ಓಎಸ್ ನವೀಕರಣಗಳನ್ನು ನೀಡುವ ಬಗ್ಗೆಯೂ ಘೋಷಣೆ ಮಾಡಲಾಗಿದೆ. ಈ ಮೂಲಕ ತನ್ನ ಫೋನ್ ಬಳಕೆದಾರರಿಗೆ ಹಿಂದೆಂದೂ ನೀಡದ ವಿಶೇಷ ಸೇವೆ ನೀಡುವ ಕೆಲಸ ಮಾಡಲಿದೆ.

ಗ್ಯಾಲಕ್ಸಿ ರಿಂಗ್:
ಇನ್ನು ಈ ವಿಶೇಷ ಸಮಾರಂಭದಲ್ಲಿ ಸ್ಯಾಮ್‌ಸಂಗ್ ಮುಂಬರುವ ಗ್ಯಾಲಕ್ಸಿ ರಿಂಗ್ (Galaxy Ring) ಬಗ್ಗೆಯೂ ಒಂದು ಟೀಸರ್ ಬಿಡುಗಡೆ ಮಾಡಿದೆ. ಇದು ಸುಧಾರಿತ ಬಳಕೆದಾರ ಅನುಭವಕ್ಕಾಗಿ ಎಐ ಯೊಂದಿಗೆ ಧರಿಸಬಹುದಾದ ಆರೋಗ್ಯ ಟ್ರ್ಯಾಕಿಂಗ್ ಡಿವೈಸ್ ಆಗಿರಲಿದೆ. ಈ ಡಿವೈಸ್ ಬಗ್ಗೆ ನಿರ್ದಿಷ್ಟ ವಿವರಗಳು ಲಭ್ಯ ಇರದಿದ್ದರೂ ಸಹ ಈ ಘೋಷಣೆ ಗಮನಾರ್ಹವಾದ ಊಹಾಪೋಹಗಳಿಗೆ ಅಂತ್ಯವಾಡಿದೆ. ಅಲ್ಲದೆ ಸ್ಯಾಮ್‌ಸಂಗ್ ಈ ನವೀನ ಡಿವೈಸ್ ಅನ್ನು ಸಕ್ರಿಯವಾಗಿ ಅಭಿವೃದ್ಧಿಪಡಿಸುತ್ತಿದೆ ಎಂದು ಅಧಿಕೃತವಾಗಿ ಮಾಹಿತಿ ನೀಡಿದೆ.


Click it and Unblock the Notifications








