Samsung: ವಿದ್ಯಾರ್ಥಿಗಳಿಗೆ ಸ್ಯಾಮ್‌ಸಂಗ್‌ನಿಂದ ಗುಡ್ ನ್ಯೂಸ್! ಫೋನ್, ಟ್ಯಾಬ್ ಮೇಲೆ ಭರ್ಜರಿ ಆಫರ್
ಸ್ಯಾಮ್‌ಸಂಗ್ (Samsung) ಆಗಾಗ್ಗೆ ವಿಶೇಷ ಸೇಲ್ ಅನ್ನು ಘೋಷಣೆ ಮಾಡುತ್ತಿರುತ್ತದೆ. ಅದರಂತೆ ಈಗ ವಿದ್ಯಾರ್ಥಿಗಳಿಗೆ ವಿಶೇಷ ಸೇಲ್ ಆಯೋಜನೆ ಮಾಡಿದ್ದು, ಈ ಮೂಲಕ ಭಾರೀ ಹಳ ಉಳಿತಾಯದೊಂದಿಗೆ ವಿದ್ಯಾರ್ಥಿಗಳು ಗ್ಯಾಲಕ್ಸಿ ಬುಕ್, ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳನ್ನು ಖರೀದಿ ಮಾಡಬಹುದಾಗಿದೆ.
ಹೌದು, ಸ್ಯಾಮ್‌ಸಂಗ್‌ನ 'ಬ್ಯಾಕ್ ಟು ಕ್ಯಾಂಪಸ್' (Back to campus) ಅಭಿಯಾನವು ವಿದ್ಯಾರ್ಥಿಗಳಿಗೆ ರಿಯಾಯಿತಿಗಳು, ನೋ ಕಾಸ್ಟ್ ಇಎಂಐ, ಬ್ಯಾಂಕ್ ಕ್ಯಾಶ್‌ಬ್ಯಾಕ್ ಮತ್ತು ಗ್ಯಾಲಕ್ಸಿ ಡಿವೈಸ್‌ಗಳಲ್ಲಿ ಅಪ್‌ಗ್ರೇಡ್ ಬೋನಸ್‌ಗಳನ್ನು ನೀಡಲಿದೆ. ಈ ಮೂಲಕ ಇತ್ತೀಚಿನ ತಂತ್ರಜ್ಞಾನದೊಂದಿಗೆ ತಮ್ಮ ಕನಸುಗಳನ್ನು ಪೂರೈಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಿದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಡಿವೈಸ್‌ಗಳಿಗೆ ಏನೆಲ್ಲಾ ಆಫರ್ ಇದೆ ನೋಡೋಣ.

ಸ್ಯಾಮ್‌ಸಂಗ್ ಬ್ಯಾಕ್ ಟು ಕ್ಯಾಂಪಸ್ ಅಭಿಯಾನ: ಸ್ಯಾಮ್‌ಸಂಗ್ ತನ್ನ 'ಬ್ಯಾಕ್ ಟು ಕ್ಯಾಂಪಸ್' ಅಭಿಯಾನದ ಭಾಗವಾಗಿ ಆಯ್ದ ಗ್ಯಾಲಕ್ಸಿ ಬುಕ್, ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್ ಸ್ಮಾರ್ಟ್‌ಫೋನ್ ಡಿವೈಸ್‌ಗಳ ಮೇಲೆ ಕೆಲವು ಕೊಡುಗೆಗಳನ್ನು ಘೋಷಣೆ ಮಾಡಿದೆ. ಈ ಅಭಿಯಾನದ ಸಮಯದಲ್ಲಿ ಕಂಪನಿಯು ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿಗಳನ್ನು ನೀಡುತ್ತದೆ.
ಸ್ಯಾಮ್‌ಸಂಗ್‌ನಿಂದ ಬ್ಯಾಕ್ ಟು ಕ್ಯಾಂಪಸ್ ಅಭಿಯಾನವು ಸ್ಯಾಮ್‌ಸಂಗ್ ಸ್ಟೂಡೆಂಟ್+ ಪ್ರೋಗ್ರಾಂ ಮೂಲಕ 24 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಜೊತೆಗೆ 10% ವರೆಗಿನ ವಿಶೇಷ ವಿದ್ಯಾರ್ಥಿ ರಿಯಾಯಿತಿಯನ್ನು ನೀಡುತ್ತದೆ.
ಈ ಕೊಡುಗೆಯು ಸ್ಯಾಮ್‌ಸಂಗ್ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಅಪ್‌ಗ್ರೇಡ್ ಬೋನಸ್ ಆಗಿ 12000ರೂ.ಗಳು ಮತ್ತು 8000 ರೂ.ಗಳ ವರೆಗಿನ ಬ್ಯಾಂಕ್ ಕ್ಯಾಶ್‌ಬ್ಯಾಕ್ ಅನ್ನು ಒಳಗೊಂಡಿದೆ. ಇನ್ನು ಈ ಆಫರ್ ಸ್ಯಾಮ್‌ಸಂಗ್ ಅಧಿಕೃತ ಸೈಟ್, ಆಯ್ದ ಚಿಲ್ಲರೆ ಸ್ಟೋರ್‌ಗಳು ಮತ್ತು ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ಪ್ರಮುಖ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯ ಇದೆ.
ಈ ಆಫರ್ ಗ್ಯಾಲಕ್ಸಿ ಬುಕ್4, ಗ್ಯಾಲಕ್ಸಿ ಬುಕ್3, ಮತ್ತು ಗ್ಯಾಲಕ್ಸಿ ಬುಕ್2 ಸರಣಿ, ಗ್ಯಾಲಕ್ಸಿ ಟ್ಯಾಬ್ S9 ಮತ್ತು ಟ್ಯಾಬ್ A9 ಸರಣಿಯಂತಹ ಡಿವೈಸ್‌ಗಳಿಗೆ ಹಾಗೂ ಸ್ಯಾಮ್‌ಸಂಗ್‌ನ A ಸರಣಿ ಮತ್ತು S ಸರಣಿಯ ಸ್ಮಾರ್ಟ್‌ಫೋನ್‌ಗಳಿಗೆ ಅನ್ವಯಿಸುತ್ತವೆ. ಗ್ಯಾಲಕ್ಸಿ ಬುಕ್ 4 ಪ್ರೊ 360 ಲ್ಯಾಪ್‌ಟಾಪ್ ಅನ್ನು 1,53,990 ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 1,69,990 ರೂ.ಗಳಾಗಿದೆ.

ಇದಲ್ಲದೆ, ಗ್ಯಾಲಕ್ಸಿ ಟ್ಯಾಬ್ S9 ವೈಫೈ 128GB ಸ್ಟೋರೇಜ್ ವೇರಿಯಂಟ್ 60, 999 ರೂ.ಗಳಲ್ಲಿ ಲಭ್ಯವಿರುತ್ತದೆ. ಇದರ ನಿಯಮಿತ ಬೆಲೆಗಿಂತ 12,000 ರೂ.ಗಳ ಗಮನಾರ್ಹ ಕಡಿತವಾಗಿದೆ. ಅಲ್ಲದೆ 5,000 ರೂ.ಗಳ ಬ್ಯಾಂಕ್ ಕ್ಯಾಶ್‌ಬ್ಯಾಕ್ ಮತ್ತು 8,000 ರೂ.ಗಳ ಅಪ್‌ಗ್ರೇಡ್ ಬೋನಸ್ ಮೂಲಕ 13,000 ರೂ.ಗಳ ರಿಯಾಯಿತಿಯೊಂದಿಗೆ ಗ್ಯಾಲಕ್ಸಿ S24 (Galaxy S24) 8/128GB ವೇರಿಯಂಟ್ ಅನ್ನು 61, 999 ಗಳಿಗೆ ಖರೀದಿ ಮಾಡಬಹುದಾಗಿದೆ.
ಈ ಸಂಬಂಧ ಮಾಹಿತಿ ನೀಡಿರುವ ಸ್ಯಾಮ್‌ಸಂಗ್ ಇಂಡಿಯಾದ ಎಮ್‌ಎಕ್ಸ್ ವ್ಯಾಪಾರದ ಉಪಾಧ್ಯಕ್ಷ ಆದಿತ್ಯ ಬಬ್ಬರ್, ಇಂದಿನ ಯುವಕರು ಆತ್ಮವಿಶ್ವಾಸದಿಂದ ಹೋಗುತ್ತಿದ್ದಾರೆ. ಅವರಿಗೆ ತಂತ್ರಜ್ಞಾನದ ಅಗತ್ಯವಿರುತ್ತದೆ ಅದು ಅವರಿಗೆ ಹೆಚ್ಚು ಕಲಿಯಲು ಮಾತ್ರವಲ್ಲ, ಹೆಚ್ಚಿನದನ್ನು ಮಾಡಲು ಅನುವು ಮಾಡಿಕೊಡುತ್ತದೆ. ನಮ್ಮ ಹೊಸ 'ಬ್ಯಾಕ್ ಟು ಕ್ಯಾಂಪಸ್' ಅಭಿಯಾನದೊಂದಿಗೆ, ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ಗ್ಯಾಲಕ್ಸಿ ಪರಿಸರ ವ್ಯವಸ್ಥೆಯ ಸಂಪರ್ಕಿತ ಶಕ್ತಿಯನ್ನು ಪ್ರಜಾಪ್ರಭುತ್ವಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.ಅಲ್ಲದೆ ಹೊಸ ಪೀಳಿಗೆಯ ಗ್ಯಾಲಕ್ಸಿ ಬಳಕೆದಾರರು ತಮ್ಮ ಕನಸುಗಳನ್ನು ನನಸಾಗಿಸಲು ಮತ್ತು ಅದನ್ನು ಹೇಗೆ ಬಳಕೆ ಮಾಡಲಾಗುತ್ತದೆ ಎಂಬುದನ್ನು ಜಗತ್ತಿಗೆ ತೋರಿಸಲು ಇದು ಉತ್ತಮ ಸಮಯ ಎಂದು ಹೇಳಿದ್ದಾರೆ.
ಹಾಗಿದ್ರೆ ಮತ್ಯಾಕೆ ತಡ ನೀವು ವಿದ್ಯಾರ್ಥಿ ಆಗಿದ್ದರೆ ಅಥವಾ ನೀವು ಪೋಷಕರಾಗಿದ್ದು, ನಿಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಏನಾದರೂ ಸಹಾಯ ಮಾಡಬೇಕು ಎಂದುಕೊಂಡಿದ್ದರೆ ಈ ಆಫರ್ ಅನ್ನು ಸದುಪಯೋಗ ಮಾಡಿಕೊಳ್ಳಿ. ಈ ಮೂಲಕ ನಿಮ್ಮ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ ಅಗತ್ಯತೆಗಳನ್ನು ಪೂರೈಸಿಕೊಳ್ಳಿ.


Click it and Unblock the Notifications








