Home
ಸುದ್ದಿಜಾಲ

Samsung Refrigerator: ಸ್ಯಾಮ್‌ಸಂಗ್ ಬೆಸ್ಪೋಕ್ ಡಬಲ್ ಡೋರ್ ರೆಫ್ರಿಜರೇಟರ್‌ ಲಾಂಚ್‌; ಅಬ್ಬಬ್ಬಾ... ಭಾರೀ ಫೀಚರ್ಸ್‌!

ಸ್ಯಾಮ್‌ಸಂಗ್‌ (Samsung) ಎಂದಾಕ್ಷಣ ನಿಮಗೆ ನೆನಪಾಗುವುದು ಗ್ಯಾಲಕ್ಸಿ ಫೋನ್‌ಗಳು ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಫೋಲ್ಡಬಲ್‌ ಫೋನ್‌ಗಳನ್ನು ಲಾಂಚ್‌ ಮಾಡುವ ಮೂಲಕ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ದೊಡ್ಡಣ್ಣನಂತೆ ಗುರುತಿಸಿಕೊಂಡಿದೆ. ಈ ನಡುವೆ ಭಾರತದಲ್ಲಿ ಎರಡು ವೇರಿಯಂಟ್‌ನ ರೆಫ್ರಿಜರೇಟರ್‌ಗಳನ್ನು ಬಿಡುಗಡೆ ಮಾಡಿದೆ.

ಹೌದು, ಸ್ಯಾಮ್‌ಸಂಗ್ ಭಾರತದಲ್ಲಿ ಬೆಸ್ಪೋಕ್ ಡಬಲ್ ಡೋರ್ ರೆಫ್ರಿಜರೇಟರ್‌ಗಳನ್ನು (Samsung Bespoke Double Door Refrigerators) ಲಾಂಚ್ ಮಾಡಿದೆ. ಈ ರೆಫ್ರಿಜರೇಟರ್‌ಗಳು 236L - 465L ನಡುವಿನ ಸಾಮರ್ಥ್ಯಗಳಲ್ಲಿ ಕಾಣಿಸಿಕೊಂಡಿದ್ದು, ವೈ-ಫೈ ಹಾಗೂ ಕಂಪ್ಯಾನಿಯನ್ ಆಪ್‌ಗೆ ಬೆಂಬಲ ನೀಡಲಿದ್ದು, ಅತ್ಯಂತ ಸ್ಮಾರ್ಟ್‌ ರೆಫ್ರಿಜರೇಟರ್‌ ಆಗಿ ಗುರುತಿಸಿಕೊಂಡಿವೆ. ಹಾಗಿದ್ರೆ, ಈ ರೆಫ್ರಿಜರೇಟರ್‌ನ ಪ್ರಮುಖ ಫೀಚರ್ಸ್‌ ಹಾಗೂ ಯಾವುದಕ್ಕೆ ಏನೆಲ್ಲಾ ಬೆಲೆ ನಿಗದಿ ಮಾಡಲಾಗಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್ ಬೆಸ್ಪೋಕ್ ಡಬಲ್ ಡೋರ್ ರೆಫ್ರಿಜರೇಟರ್‌ ಲಾಂಚ್‌..

ಸ್ಯಾಮ್‌ಸಂಗ್ ಬೆಸ್ಪೋಕ್ ರೆಫ್ರಿಜರೇಟರ್‌ ಫೀಚರ್ಸ್‌: ಹೊಸ ಸ್ಯಾಮ್ಸಂಗ್ ಬೆಸ್ಪೋಕ್ ರೆಫ್ರಿಜರೇಟರ್ಗಳು ಡೀಫಾಲ್ಟ್ ಆಗಿ ಡಬಲ್ ಡೋರ್ ವಿನ್ಯಾಸವನ್ನು (Double door design) ಹೊಂದಿದ್ದು, ಇವುಗಳು ಸ್ಟೀಲ್ ಹಾಗೂ ಗ್ಲಾಸ್‌ ಎಂಬ ಎರಡು ರೀತಿಯ ಫಿನಿಶ್ ಆಯ್ಕೆಗಳನ್ನು ಹೊಂದಿವೆ. ಸ್ಟೀಲ್ ಫಿನಿಶ್ (Steel finish) 236L, 256L, 301L ಮತ್ತು 322L ಸಾಮರ್ಥ್ಯಗಳಲ್ಲಿ ಕಂಡುಬಂದರೆ, ಗ್ಲಾಸ್‌ ಫಿನಿಶ್ (Glass finish) 415L ಮತ್ತು 465L ಸಾಮರ್ಥ್ಯಗಳಲ್ಲಿ ಲಭ್ಯವಿದೆ.

ಈ ಫಿನಿಶ್ ವಿಚಾರ ಹೊರತುಪಡಿಸಿ ಬೆಸ್ಪೋಕ್ ರೆಫ್ರಿಜರೇಟರ್‌ಗಳು ಒಂದೇ ರೀತಿಯ ಫೀಚರ್ಸ್‌ ಅನ್ನು ಹೊಂದಿವೆ. ಈ ಹೊಸ ರೆಫ್ರಿಜರೇಟರ್‌ಗಳ ಪ್ರಮುಖ ವೈಶಿಷ್ಟ್ಯವೆಂದರೆ ಕನ್ವರ್ಟಿಬಲ್ ಕಾರ್ಯ. ಬಳಕೆದಾರರು ಫ್ರೀಜರ್ ಅನ್ನು ನಿಷ್ಕ್ರಿಯಗೊಳಿಸುವ ಸೀಸನಲ್ ಮೋಡ್(Seasonal mode) ಅನ್ನು ಇಲ್ಲಿ ನೀಡಲಾಗಿದೆ. ಇದರೊಂದಿಗೆ ಫ್ರಿಜ್ ಕಂಪಾರ್ಟ್‌ಮೆಂಟ್ ಅನ್ನು ಮಾತ್ರ ಬಳಕೆ ಮಾಡುವ ಹಾಗೆಯೂ ಇದನ್ನು ನಿರ್ಮಾಣ ಮಾಡಲಾಗಿದೆ.

ಫ್ರೀಜರ್ ಅನ್ನು ಎಕ್ಸ್ಟ್ರಾ ಫ್ರಿಜ್ ಮೋಡ್ (Extra Freeze Mode) ಮೂಲಕ ಸಾಮಾನ್ಯ ಫ್ರಿಜ್ ಆಗಿಯೂ ಪರಿವರ್ತಿಸಬಹುದಾಗಿದ್ದು, ಇದು ಫ್ರಿಜ್ ಕಂಪಾರ್ಟ್‌ಮೆಂಟ್ ಅನ್ನು ನಿಷ್ಕ್ರಿಯಗೊಳಿಸುತ್ತದೆ ಹಾಗೂ ಫ್ರೀಜರ್ ಅನ್ನು ಮಾತ್ರ ಸಕ್ರಿಯವಾಗಿರಿಸುವ ವೆಕೇಶನ್ ಮೋಡ್ ನೊಂದಿಗೆ ಕೆಲಸ ಮಾಡುತ್ತದೆ. ಈ ಮೂಲಕ ಬಳಕೆದಾರರಿಗೆ ಹಲವಾರು ಅನುಕೂಲಗಳನ್ನು ನೀಡುತ್ತದೆ.

ಇದರೊಂದಿಗೆ ಈ ಎಲ್ಲಾ ರೆಫ್ರಿಜರೇಟರ್‌ಗಳು ಸ್ಯಾಮ್‌ಸಂಗ್‌ನ ಇತ್ತೀಚಿನ ಇನ್ವರ್ಟರ್ ಕಂಪ್ರೆಸರ್‌ಗಳನ್ನು (Inverter compressor) ಹೊಂದಿದ್ದು, ಸ್ಯಾಮ್‌ಸಂಗ್ ಕಂಪ್ರೆಸರ್‌ನಲ್ಲಿ 20 ವರ್ಷಗಳ ವಾರಂಟಿ ಮತ್ತು ಮುಖ್ಯ ರೆಫ್ರಿಜರೇಟರ್ ಘಟಕದಲ್ಲಿ 1 ವರ್ಷದ ವಾರಂಟಿಯನ್ನು ನೀಡುತ್ತಿರುವುದು ಗಮನಿಸಬೇಕಾದ ವಿಷಯವಾಗಿದೆ. ಉಳಿದಂತೆ ಈ ರೆಫ್ರಿಜರೇಟರ್‌ಗಳು ಪ್ರತ್ಯೇಕ ಕೂಲಿಂಗ್ ವ್ಯವಸ್ಥೆಯನ್ನು ಸಹ ಹೊಂದಿದ್ದು, ಆಹಾರ ಪದಾರ್ಥಗಳ ವಾಸನೆಯು ಒಂದು ವಿಭಾಗದಿಂದ ಇನ್ನೊಂದಕ್ಕೆ ಹರಡುವುದಿಲ್ಲ.

ರೆಫ್ರಿಜರೇಟರ್‌ನೊಳಗೆ ಗರಿಷ್ಠ ಆರ್ದ್ರತೆಯ ಮಟ್ಟವನ್ನು ಕಾಪಾಡಿಕೊಳ್ಳಲು ಅವು ಎರಡು ಪ್ರತ್ಯೇಕ ಆವಿಯಾಗುವಿಕೆಗಳನ್ನು ಹೊಂದಿರುತ್ತವೆ. ಇಷ್ಟೇ ಅಲ್ಲದೆ ಹೊಸ ಸ್ಯಾಮ್‌ಸಂಗ್ ಬೆಸ್ಪೋಕ್ ರೆಫ್ರಿಜರೇಟರ್‌ಗಳಲ್ಲಿ ವೈಫೈ-ಸಕ್ರಿಯಗೊಳಿಸಲಾಗಿದೆ. ಬಳಕೆದಾರರು ತಮ್ಮ ಆಂಡ್ರಾಯ್ಡ್‌ ಮತ್ತು ಐಓಎಸ್‌ ಡಿವೈಸ್‌ಗಳಲ್ಲಿ ಸ್ಯಾಮ್‌ಸಂಗ್ ಕಂಪ್ಯಾನಿಯನ್ ಆಪ್ (Samsung Companion App) ಅನ್ನು ಬಳಕೆ ಮಾಡಿಕೊಂಡು ಫ್ರಿಡ್ಜ್‌ನ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಬಹುದಾಗಿದೆ. ಇದರೊಂದಿಗೆ ರಿಮೋಟ್‌ನಿಂದ ಅದರ ಕಾರ್ಯಗಳನ್ನು ಸಹ ಕಂಟ್ರೋಲ್‌ ಮಾಡಬಹುದಾಗಿದೆ.

ಇದರೊಂದಿಗೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ಥಿಂಗ್ಸ್‌ ಎಐ (Samsung SmartThings AI) ಎನರ್ಜಿ ಮೋಡ್‌ನೊಂದಿಗೆ ಇದು ಕಾಣಿಸಿಕೊಂಡಿದ್ದು, ಇದು ನಿಮ್ಮ ರೆಫ್ರಿಜರೇಟರ್‌ನ ಬಳಕೆಯ ಮಾದರಿಯನ್ನು ದಾಖಲಿಸುತ್ತದೆ. ಪ್ರಮುಖವಾಗಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ತಂಪಾಗಿಸುವ ತಾಪಮಾನವನ್ನು ಆಟೋಮ್ಯಾಟಿಕ್‌ ಆಗಿ ಸರಿಹೊಂದಿಸಿಕೊಳ್ಳುತ್ತದೆ. ಇದಕ್ಕಾಗಿ ಸೇವಿಂಗ್ ಮೋಡ್‌ ಆಯ್ಕೆಯನ್ನು ನೀಡಲಾಗಿದೆ.

ಸ್ಯಾಮ್‌ಸಂಗ್ ಬೆಸ್ಪೋಕ್ ರೆಫ್ರಿಜರೇಟರ್ ಬೆಲೆ ಮತ್ತು ಲಭ್ಯತೆ: ಸ್ಯಾಮ್‌ಸಂಗ್ ಬೆಸ್ಪೋಕ್ ಪ್ರೀಮಿಯಂ ಸ್ಟೀಲ್ ಫಿನಿಶ್ ರೆಫ್ರಿಜರೇಟರ್‌ಗಳ ವಿಭಾಗದಲ್ಲಿ 236 ಲೀಟರ್ ಸಾಮರ್ಥ್ಯದ ರೆಫ್ರಿಜರೇಟರ್‌ಗೆ 30,500 ರೂ,256 ಲೀಟರ್ ರೆಫ್ರಿಜರೇಟರ್‌ಗೆ 31,500 ರೂ, 301 ಲೀಟರ್ ರೆಫ್ರಿಜರೇಟರ್‌ಗೆ 39,500 ರೂ ಹಾಗೂ 322 ಲೀಟರ್ ರೆಫ್ರಿಜರೇಟರ್‌ಗೆ 42,500 ರೂ.ಗಳನ್ನು ನಿಗದಿ ಮಾಡಲಾಗಿದೆ.

ಸ್ಯಾಮ್‌ಸಂಗ್‌ ಬೆಸ್ಪೋಕ್ ಗ್ಲಾಸ್ ರೆಫ್ರಿಜರೇಟರ್ ವಿಭಾಗದಲ್ಲಿ ಎರಡು ಡಿವೈಸ್‌ಗಳಿವೆ. ಅದರಲ್ಲಿ 415 ಲೀಟರ್ ರೆಫ್ರಿಜರೇಟರ್‌ಗೆ 54,000 ರೂ.ಗಳು ಹಾಗೂ 465 ಲೀಟರ್ ರೆಫ್ರಿಜರೇಟರ್‌ಗೆ 57,800 ರೂ.ಗಳನ್ನು ನಿಗದು ಮಾಡಲಾಗಿದೆ. ಇದು ಅತ್ಯಂತ ಪ್ರೀಮಿಯಂ ನೋಟವನ್ನು ಪಡೆದುಕೊಂಡಿದೆ. ಇವುಗಳನ್ನು ನೀವು ಭಾರತದಲ್ಲಿನ ಎಲ್ಲಾ ಆಫ್‌ಲೈನ್ ಚಿಲ್ಲರೆ ಸ್ಟೋರ್‌ಗಳನ್ನು ಖರೀದಿ ಮಾಡಬಹುದು. ಇದರೊಂದಿಗೆ ಸ್ಯಾಮ್‌ಸಂಗ್ ಆನ್‌ಲೈನ್ ಸ್ಟೋರ್‌(Samsung Online Store) ನಿಂದಲೂ ಖರೀದಿಸಬಹುದು.

ಸ್ಯಾಮ್‌ಸಂಗ್ ಎಕ್ಸ್‌ಚೇಂಜ್ ಪ್ರೋಗ್ರಾಂ ಅನ್ನು ಈ ವೇಳೆ ನೀಡಿದೆ. ಬಳಕೆದಾರರು ತಮ್ಮ ಹಳೆಯ ಫ್ರಿಜ್ ಅನ್ನು ಬದಲಾಯಿಸಿಕೊಳ್ಳಬಹುದು. ಈ ಮೂಲಕ 15,000 ವರೆಗೆ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಸ್ಯಾಮ್‌ಸಂಗ್‌ನ ಆನ್‌ಲೈನ್ ಸ್ಟೋರ್ ಐಸಿಐಸಿಐ ಮತ್ತು ಇತರ ಪಾಲುದಾರ ಬ್ಯಾಂಕ್‌ಗಳ ಇಎಮ್‌ಐ ವಹಿವಾಟುಗಳ ಮೇಲೆ 4000 ರೂ. ವರೆಗೆ ಅಥವಾ 7.5% ತ್ವರಿತ ರಿಯಾಯಿತಿಯನ್ನು ನೀಡುತ್ತದೆ.

ಉಳಿದಂತೆ ಇದು ವಿವಿಧ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ. ಅಂದರೆ ಸ್ಯಾಮ್‌ಸಂಗ್ ಬೆಸ್ಪೋಕ್ ಪ್ರೀಮಿಯಂ ಕೋಟಾ (ಸ್ಟೀಲ್) ಪ್ರಿಡ್ಜ್‌ ಡ್ಯುಯಲ್-ಟೋನ್‌ನಲ್ಲಿ ಬೀಜ್ ಮತ್ತು ಇದ್ದಿಲು ಬಣ್ಣ ಹಾಗೂ ಸಿಂಗಲ್-ಟೋನ್‌ನಲ್ಲಿ ಚಾರ್ಕೋಲ್ ಫಿನಿಶ್ ಬಣ್ಣ ಹೊಂದಿದೆ. ಇದರೊಂದಿಗೆ, ಬೆಸ್ಪೋಕ್ ಗ್ಲಾಸ್ ಪ್ರಿಡ್ಜ್‌ ಡ್ಯುಯಲ್-ಟೋನ್ ನಲ್ಲಿ ಬಿಳಿ ಮತ್ತು ಗುಲಾಬಿ ಬಣ್ಣ ಹಾಗೂಸಿಂಗಲ್ ಟೋನ್‌ನಲ್ಲಿ ಕಪ್ಪು ಬಣ್ಣದ ಆಯ್ಕೆ ಪಡೆದುಕೊಂಡಿದೆ.

Best Mobiles in India

English summary
Samsung has launched Bespoke Double Door Refrigerators in India. These refrigerators are featured in capacities between 236L - 465L.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+