Home
ಸುದ್ದಿಜಾಲ

Samsung Big TV Festival: ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿಗಳಿಗೆ ಅಫರ್‌ ಮೇಲೆ ಆಫರ್‌

ಸ್ಯಾಮ್‌ಸಂಗ್‌ (Samsung) ಈಗಷ್ಟೇ ಹೊಸ ಫ್ರಿಡ್ಜ್‌ ಅನಾವರಣ ಮಾಡುವ ಮೂಲಕ ಭಾರತದ ಜನರಿಗೆ ಸಂತಸದ ಸುದ್ದಿ ನೀಡಿದೆ. ಈ ವೇಳೆ ಸ್ಮಾರ್ಟ್‌ಟಿವಿ (Smart TV) ವಿಭಾಗದಲ್ಲೂ ಗ್ರಾಹಕರು ಕುಣಿದು ಕುಪ್ಪಳಿಸುವ ಸುದ್ದಿಯನ್ನು ನೀಡಲಾಗಿದೆ. ಅಂದರೆ ಸ್ಯಾಮ್‌ಸಂಗ್ ಇಂಡಿಯಾ ಬಿಗ್ ಟಿವಿ ಫೆಸ್ಟಿವಲ್ (Samsung India Big TV Festival) ಅಭಿಯಾನದ ಭಾಗವಾಗಿ ಸ್ಮಾರ್ಟ್‌ಟಿವಿಗಳಿಗೆ ಭಾರೀ ಆಫರ್‌ ನೀಡುತ್ತಿದೆ.

ಹೌದು, ಭಾರತದಲ್ಲಿ ಹಬ್ಬದ ಸೀಸನ್ ಸಮೀಪಿಸುತ್ತಿದ್ದಂತೆ ಸ್ಯಾಮ್‌ಸಂಗ್ ಇಂಡಿಯಾ ಬಿಗ್ ಟಿವಿ ಫೆಸ್ಟಿವಲ್ ಅಭಿಯಾನದ ಹಿನ್ನೆಲೆ ಸ್ಮಾರ್ಟ್‌ಟಿವಿಗಳ ಮೇಲೆ ದೊಡ್ಡ ಮಟ್ಟದ ಡೀಲ್‌ಗಳು ಮತ್ತು ಕ್ಯಾಶ್‌ಬ್ಯಾಕ್ ಆಯ್ಕೆಯನ್ನು ನೀಡುತ್ತಿದೆ. ಇದರಲ್ಲಿ ನಿಯೋ ಕ್ಯೂಎಲ್‌ಇಡಿ ಟಿವಿ, ಓಎಲ್‌ಇಡಿ ಟಿವಿ, ಕ್ರಿಸ್ಟಲ್ 4K ಐಸ್ಮಾರ್ಟ್‌ ಟಿವಿ, ಕ್ರಿಸ್ಟಲ್ ವಿಷನ್‌ 4K ಟಿವಿ , ಕ್ಯೂಎಲ್‌ಇಡಿ 4K ಟಿವಿ, ದಿ ಫ್ರೇಮ್ ಟಿವಿ ಸೇರಿದಂತೆ ಅನೇಕ ಸ್ಮಾರ್ಟ್‌ಟಿವಿಗಳ ಮೇಲೆ ದೊಡ್ಡ ಆಫರ್ ಸಿಗಲಿದೆ. ಈ ಸೇಲ್ ಈಗಾಗಲೇ ಪ್ರಾರಂಭವಾಗಿದ್ದು,ನವೆಂಬರ್ 20 ರವರೆಗೆ ಇರಲಿದೆ. ಹಾಗಿದ್ರೆ,ಯಾವ ಟಿವಿಗೆ ಏನೆಲ್ಲಾ ಬೆಲೆ?, ಫೀಚರ್ಸ್‌ ಏನು ತಿಳಿಯೋಣ ಬನ್ನಿ.

ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿಗಳಿಗೆ ಅಫರ್‌ ಮೇಲೆ ಆಫರ್‌

ನಿಯೋ ಕ್ಯೂಎಲ್‌ಇಡಿ ಸ್ಮಾರ್ಟ್‌ಟಿವಿ: ಸ್ಯಾಮ್‌ಸಂಗ್‌ನ 2023 ಶ್ರೇಣಿಯ ನಿಯೋ ಕ್ಯೂಎಲ್‌ಇಡಿ ಟಿವಿಗಳು (Neo QLED TV )ಕ್ವಾಂಟಮ್ ಮ್ಯಾಟ್ರಿಕ್ಸ್ ತಂತ್ರಜ್ಞಾನ, ಸುಧಾರಿತ ನ್ಯೂರಲ್ ಕ್ವಾಂಟಮ್ ಪ್ರೊಸೆಸರ್, ಪ್ಯಾಂಟೋನ್ ಮೌಲ್ಯೀಕರಣ, ಕ್ಯೂ ಸಿಂಫನಿ 3.0, ಡಾಲ್ಬಿ ಅಟ್ಮಾಸ್, ಕಾಮ್ ಆನ್‌ಬೋರ್ಡಿಂಗ್, ಐಒಟಿ-ಸಕ್ರಿಯಗೊಳಿಸಿದ ಸೆನ್ಸರ್‌ನೊಂದಿಗೆ ಇನ್‌ಬಿಲ್ಟ್‌ ಐಒಟಿ ಹಬ್ ಸೇರಿದಂತೆ ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಹೊಂದಿದೆ.

ಈ ವೇಳೆ ನೀವು ಆಯ್ದ ನೀಯೋ ಕ್ಯೂಎಲ್‌ಇಡಿ (Neo QLED) 8K ಮತ್ತು 4K ಸ್ಮಾರ್ಟ್‌ಟಿವಿ ಖರೀದಿ ಮಾಡಿದ್ರೆ 1,24,999 ರೂ. ಮೌಲ್ಯದ ಗ್ಯಾಲಕ್ಸಿ S23 ಅಲ್ಟ್ರಾ 5G, 50 ಇಂಚಿನ ದಿ ಸೆರಿಫ್‌ TV ಹಾಗೂ 59,990 ರೂ. ಮೌಲ್ಯದ ಫ್ರೀಸ್ಟೈಲ್ ಪ್ರೊಜೆಕ್ಟರ್ ಅಥವಾ 49, 990 ರೂ. ಮೌಲ್ಯದ ಸೌಂಡ್‌ಬಾರ್ ಸೇರಿದಂತೆ ಅತ್ಯಾಕರ್ಷಕ ಉಡುಗೊರೆಗಳನ್ನು ನೀವು ಪಡೆಯಬಹುದು. ಇಷ್ಟು ಮಾತ್ರವಲ್ಲ 3 ವರ್ಷಗಳ ಗ್ಯಾರಂಟಿ ಸೌಲಭ್ಯ ಸಹ ಇದೆ.

ಓಎಲ್‌ಇಡಿ ಸ್ಮಾರ್ಟ್‌ಟಿವಿಗಳು: ಸ್ಯಾಮ್‌ಸಂಗ್‌ನ ಓಎಲ್‌ಇಡಿ (OLED) ಟಿವಿ ಶ್ರೇಣಿಯು ಕಪ್ಪು, ಶುದ್ಧ ಬಿಳಿ ಮತ್ತು ರೋಮಾಂಚಕ ಬಣ್ಣಗಳನ್ನು ನ್ಯೂರಲ್ ಕ್ವಾಂಟಮ್ ಪ್ರೊಸೆಸರ್ 4K ನೊಂದಿಗೆ ನೀಡಲಿವೆ. ಈ ವಿಭಾಗದಲ್ಲಿ ಆಯ್ಕೆಮಾಡಿದ ಓಎಲ್‌ಇಡಿ ಟಿವಿ ಮಾದರಿಗಳ ಮೇಲೆ 49,990 ರೂ. ಮೌಲ್ಯದ ಉಚಿತ ಸೌಂಡ್‌ಬಾರ್ ಸಿಗಲಿದೆ. ಇದರೊಂದಿಗೆ 3 ವರ್ಷಗಳ ಟಿವಿ ವಾರಂಟಿಯನ್ನೂ ಸಹ ನೀಡಲಾಗುತ್ತದೆ.

ಕ್ಯೂಎಲ್‌ಇಡಿ ಸ್ಮಾರ್ಟ್‌ಟಿವಿ: ಕ್ಯೂಎಲ್‌ಇಡಿ (QLED) ಸ್ಮಾರ್ಟ್‌ಟಿವಿ ಖರೀದಿ ಮಾಡುವ ಗ್ರಾಹಕರು 1,24,999 ರೂ. ಮೌಲ್ಯದ ಉಚಿತ ಗ್ಯಾಲಕ್ಸಿ S23 ಅಲ್ಟ್ರಾ 5G ಅಥವಾ 49,990ರೂ. ಮೌಲ್ಯದ ಸೌಂಡ್‌ಬಾರ್ ಅನ್ನು ಉಡುಗೊರೆಯಾಗಿ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಆಫರ್‌ ಬೆಲೆಗೆ ಸ್ಮಾರ್ಟ್‌ಟಿವಿ ಖರೀದಿ ಮಾಡುವುದರೊಂದಿಗೆ ಹೊಸ ಬೆಲೆ ಬಾಳುವ ಡಿವೈಸ್‌ ಅನ್ನು ಸಹ ಪಡೆದುಕೊಳ್ಳಬಹುದು.

ಕ್ರಿಸ್ಟಲ್ ಯುಹೆಚ್‌ಡಿ ಸ್ಮಾರ್ಟ್‌ಟಿವಿ: ಇನ್ನುಳಿದಂತೆ ಆಯ್ದ ಕ್ರಿಸ್ಟಲ್ ಯುಹೆಚ್‌ಡಿ ಸ್ಮಾರ್ಟ್‌ಟಿವಿ (Crystal UHD SmartTV) ಖರೀದಿದಾರರಿಗೆ 3 ವರ್ಷಗಳ ಟಿವಿ ವಾರಂಟಿಯೊಂದಿಗೆ 49,990 ರೂ. ಮೌಲ್ಯದ ಉಚಿತ ಸೌಂಡ್‌ಬಾರ್ (Soundbar) ನೀಡಲಾಗುತ್ತದೆ. ಈ ಮೂಲಕ ಮನೆಯಲ್ಲೇ ಈ ಸ್ಮಾರ್ಟ್‌ಟಿವಿ ಹಾಗೂ ಸೌಂಡ್‌ಬಾರ್‌ನಲ್ಲಿ ಸಿನಿಮಾ ಅನುಭವ ಪಡೆದುಕೊಳ್ಳಬಹುದಾಗಿದೆ.

ವಿಶೇಷ ಆನ್‌ಲೈನ್ ರಿಯಾಯಿತಿಗಳು ಮತ್ತು ಕೊಡುಗೆಗಳು: ಈ ಮೇಲೆ ತಿಳಿಸಿದ ಆಫರ್‌ಗಳು ಒಂದುಕಡೆಯಾದರೆ ಇದರೊಂದಿಗೆ ಸ್ಯಾಮ್‌ಸಂಗ್‌ನ ಪ್ರಮುಖ ನಿಯೋ ಕ್ಯೂಎಲ್‌ಇಡಿ ಟಿವಿ ಶ್ರೇಣಿಯ ಮೇಲೆ ಆನ್‌ಲೈನ್‌ನಲ್ಲಿ 15% ವರೆಗೆ ರಿಯಾಯಿತಿಯಲ್ಲಿ ಲಭ್ಯವಿದೆ. ಫ್ರೇಮ್ ಟಿವಿಗೆ 6,000 ರೂ. ವರೆಗೆ ಆಕರ್ಷಕ ಕ್ಯಾಶ್‌ಬ್ಯಾಕ್ ಸಹ ಲಭ್ಯ ಇದ್ದು, ಕ್ಯೂಎಲ್‌ಇಡಿ 4K ಟಿವಿ ಮೇಲೆ 3,500 ರೂ. ವರೆಗಿನ ಕ್ಯಾಶ್‌ಬ್ಯಾಕ್ ಕೊಡುಗೆಗಳೊಂದಿಗೆ 25% ವರೆಗೆ ರಿಯಾಯಿತಿ ಸಹ ಸಿಗಲಿದೆ.

ಇದರೊಂದಿಗೆ ಸ್ಯಾಮ್‌ಸಂಗ್ ಕ್ರಿಸ್ಟಲ್ ವಿಷನ್ 4K ಟಿವಿಗಳು ಮತ್ತು ಕ್ರಿಸ್ಟಲ್ 4K ಐಸ್ಮಾರ್ಟ್‌ ಟಿವಿ ಶ್ರೇಣಿಗಳಿಗೆ ಪ್ರತ್ಯೇಕವಾಗಿ ಆನ್‌ಲೈನ್‌ನಲ್ಲಿ 3,500ರೂ. ವರೆಗಿನ ಕ್ಯಾಶ್‌ಬ್ಯಾಕ್‌ನೊಂದಿಗೆ 20% ವರೆಗಿನ ರಿಯಾಯಿತಿಯಲ್ಲಿ ನೀಡಲಾಗುತ್ತದೆ. ಫುಲ್‌ಹೆಚ್‌ಡಿ ಮತ್ತು ಹೆಚ್‌ಡಿ ಟಿವಿ ಸ್ಮಾರ್ಟ್ ಟಿವಿ ಶ್ರೇಣಿಗೂ ಸಹ ಆನ್‌ಲೈನ್‌ನಲ್ಲಿ 10% ವರೆಗಿನ ಕ್ಯಾಶ್‌ಬ್ಯಾಕ್ ಕೊಡುಗೆಗಳೊಂದಿಗೆ ಆಫರ್‌ ಘೋಷಣೆ ಮಾಡಲಾಗಿದೆ.

ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿಗಳಿಗೆ ಅಫರ್‌ ಮೇಲೆ ಆಫರ್‌

ಜೊತೆಗೆ ಕೇವಲ ಸ್ಯಾಮ್‌ಸಂಗ್ ಸೌಂಡ್‌ಬಾರ್ T42E ಅನ್ನು ಖರೀದಿ ಮಾಡಿದರೆ ಅದಕ್ಕೂ ಸಹ ರಿಯಾಯಿತಿ ಸಿಗಲಿದೆ. ಅಂದರೆ 20% ವರೆಗೆ ಆಕರ್ಷಕ ಡಿಸ್ಕೌಂಟ್‌ ಸಿಗಲಿದ್ದು, ಆನ್‌ಲೈನ್ ಶಾಪರ್‌ಗಳು ಎಲ್ಲಾ ಸ್ಯಾಮ್‌ಸಂಗ್ ಡಿವೈಸ್‌ಗಳ ಮೇಲೆ 4,000 ರೂ. ವರೆಗಿನ ಕ್ಯಾಶ್‌ಬ್ಯಾಕ್ ಅನ್ನು ಪಡೆದುಕೊಳ್ಳಬಹುದು ಹಾಗೂ 18 ತಿಂಗಳವರೆಗೆ ಸುಲಭ ಇಎಮ್‌ಐ ಆಯ್ಕೆಯನ್ನೂ ಸಹ ನೀಡಲಾಗಿದೆ.

Best Mobiles in India

English summary
Samsung India is offering huge deals and cashback option on smart TVs on the back of Big TV Festival campaign. In this, you will get a great offer on many smart TVs including Neo QLED TV, OLED TV, Crystal 4K iSmart TV, Crystal Vision 4K TV, QLED 4K TV, The Frame TV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+