Home
ಸುದ್ದಿಜಾಲ

ಸ್ಯಾಮ್‌ಸಂಗ್‌ ಫೋನ್‌ ಖರೀದಿಸಬೇಕೆ?..ಹಾಗಿದ್ರೆ ಈ ಆಫರ್‌ ಮಿಸ್‌ ಮಾಡ್ಕೊಬೇಡಿ!

ಸ್ಮಾರ್ಟ್‌ಫೋನ್‌ ವಲಯದಲ್ಲಿ ಹಲವು ಚೀನಾ ಮೂಲದ ಕಂಪೆನಿಗಳು ಎಂಟ್ರಿ ಕೊಟ್ಟಿದ್ದರೂ ಸಹ ಸ್ಯಾಮ್‌ಸಂಗ್ ಕಂಪೆನಿ ಇವತ್ತಿಗೂ ತನ್ನ ಖದರ್‌ ಉಳಿಸಿಕೊಂಡಿದೆ. ಜನಪ್ರಿಯ 'ಗ್ಯಾಲ್ಯಾಕ್ಸಿ' ಸರಣಿಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತ ಮುನ್ನಡೆದಿರುವ ಸಂಸ್ಥೆಯು, ಗ್ರಾಹಕರ ಆಲ್‌ ಟೈಮ್‌ ಫೇವರೇಟ್‌ ಸಂಸ್ಥೆ ಎಂದೆನಿಸಿಕೊಂಡಿದೆ. ಕಂಪೆನಿಯು ಇದೀಗ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ್ದು, ಅದೆನೆಂದರೇ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ಈಗ ಡಿಸ್ಕೌಂಟ್‌ನಲ್ಲಿ ಲಭ್ಯ.

ಸ್ಯಾಮ್‌ಸಂಗ್‌ ಫೋನ್‌ ಖರೀದಿಸಬೇಕೆ?..ಹಾಗಿದ್ರೆ ಈ ಆಫರ್‌ ಮಿಸ್‌ ಮಾಡ್ಕೊಬೇಡಿ!

ಹೌದು, ಸ್ಯಾಮ್‌ಸಂಗ್ ಕಂಪನಿಯ 'ಸ್ಯಾಮ್‌ಸಂಗ್‌ ಬ್ಲೂ ಫೆಸ್ಟ್‌-2019' ಸೇಲ್‌ ಮೇಳವನ್ನು ಆಯೋಜಿಸಿದೆ. ಏಳು ದಿನಗಳ ಈ ಮೇಳವು ಇದೇ ಅಗಷ್ಟ್ 20ರಿಂದ ಚಾಲ್ತಿಯಲ್ಲಿದ್ದು, ಇದೇ ಅಗಷ್ಟ್ 26ರಂದು ಮುಕ್ತಾಯವಾಗಲಿದೆ. ಈ ಮೇಳದಲ್ಲಿ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ, ಆಕ್ಸಸರಿಸ್‌ ಸೇರಿದಂತೆ ಹಲವು ಹೋಮ್ ಅಪ್ಲೈಯನ್ಸ್‌ ಉತ್ಪನ್ನಗಳಿಗೆ ಅತ್ಯುತ್ತಮ ಡಿಸ್ಕೌಂಟ್‌ ನೀಡುತ್ತಿದೆ. ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಶೇ.15%ರ ವರೆಗೂ ರಿಯಾಯಿತಿ ನೀಡುತ್ತಿದೆ.

ಸ್ಯಾಮ್‌ಸಂಗ್‌ ಫೋನ್‌ ಖರೀದಿಸಬೇಕೆ?..ಹಾಗಿದ್ರೆ ಈ ಆಫರ್‌ ಮಿಸ್‌ ಮಾಡ್ಕೊಬೇಡಿ!

ಕಂಪನಿಯ ಇತ್ತೀಚಿನ ಗ್ಯಾಲ್ಯಾಕ್ಸಿ ಎಂ10, ಗ್ಯಾಲ್ಯಾಕ್ಸಿ ಎಂ20 ಮತ್ತು ಗ್ಯಾಲ್ಯಾಕ್ಸಿ ಎಂ30 ಸ್ಮಾರ್ಟ್‌ಫೋನ್‌ಗಳಿಗೆ ಮೇಳದಲ್ಲಿ ಭರ್ಜರಿ ಡಿಸ್ಕೌಂಟ್‌ ಲಭ್ಯವಾಗಲಿದ್ದು, ಹಾಗೆಯೇ ಎಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್‌ ಗ್ರಾಹಕರಿಗೆ ಶೇ.5% ವಿಶೇಷ ಡಿಸ್ಕೌಂಟ್‌ ಸಹ ದೊರೆಯಲಿದೆ. ಹಾಗಾದರೇ ಸ್ಯಾಮ್‌ಸಂಗ್‌ ಬ್ಲೂ ಫೆಸ್ಟ್‌ ಮೇಳದಲ್ಲಿ ಡಿಸ್ಕೌಂಟ್‌ ಪಡೆದಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಗ್ಯಾಲ್ಯಾಕ್ಸಿ ಎಂ30 ಸ್ಮಾರ್ಟ್‌ಫೋನ್

ಗ್ಯಾಲ್ಯಾಕ್ಸಿ ಎಂ30 ಸ್ಮಾರ್ಟ್‌ಫೋನ್

ಫಾಸ್ಟ್‌ ಚಾರ್ಜಿಂಗ್ ನೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿರುವ 'ಗ್ಯಾಲ್ಯಾಕ್ಸಿ ಎಂ30' ಫೋನ್‌ ಹಿಂಬದಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, 4GB RAM ಮತ್ತು 6GB RAM ವೇರಿಯಂಟ್‌ ಮಾದರಿಯ ಎರಡು ಆಯ್ಕೆಗಳನ್ನು ಹೊಂದಿದೆ. 4GB RAM ವೇರಿಯಂಟ್ 13,990ರೂ.ಗಳಿಗೆ ದೊರೆಯಲಿದ್ದು, ಹಾಗೆಯೇ 16,990ರೂ.ಗಳಿಗೆ 6GB RAM ವೇರಿಯಂಟ್‌ ಲಭ್ಯವಾಗಲಿದೆ.

ಗ್ಯಾಲ್ಯಾಕ್ಸಿ ಎಂ20 ಸ್ಮಾರ್ಟ್‌ಫೋನ್

ಗ್ಯಾಲ್ಯಾಕ್ಸಿ ಎಂ20 ಸ್ಮಾರ್ಟ್‌ಫೋನ್

6.3 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಇನ್‌ಫಿನಿಟಿ V ಡಿಸ್‌ಪ್ಲೇ ಮಾದರಿಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಅಲ್ಟ್ರಾ ವೈಲ್ಡ್‌ ಲೆನ್ಸ್‌ ಜೊತೆಗೆ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಆಯ್ಕೆಯನ್ನು ಪಡೆದಿದೆ. ಹಾಗೆಯೇ 5000mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಒಳಗೊಂಡಿದೆ. ಮೇಳದಲ್ಲಿ 4GB RAM ವೇರಿಯಂಟ್‌ ಫೋನ್‌ 11,990ರೂ.ಗಳಿಗೆ ದೊರೆಯಲಿದೆ ಹಾಗೂ 3GB RAM ವೇರಿಯಂಟ್‌ ಫೋನ್‌ 9,990ರೂ.ಗಳಿಗೆ ಲಭ್ಯ.

ಗ್ಯಾಲ್ಯಾಕ್ಸಿ ಎಂ10 ಸ್ಮಾರ್ಟ್‌ಫೋನ್

ಗ್ಯಾಲ್ಯಾಕ್ಸಿ ಎಂ10 ಸ್ಮಾರ್ಟ್‌ಫೋನ್

ಈ ಸ್ಮಾರ್ಟ್‌ಫೋನ್ 6.2 ಇಂಚಿನ ಇನ್‌ಫಿನಿಟಿ V ಡಿಸ್‌ಪ್ಲೇ ಮಾದರಿಯನ್ನು ಹೊಂದಿದ್ದು, ಜೊತೆಗೆ ಅಲ್ಟ್ರಾ ವೈಲ್ಡ್‌ ಲೆನ್ಸ್‌ ಬೆಂಬಲದ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಆಯ್ಕೆಯನ್ನು ಪಡೆದಿದೆ. ಹಾಗೆಯೇ ಇದು ಸಹ 5000mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಒಳಗೊಂಡಿದ್ದು, ಇದರೊಂದಿಗೆ 7.7mm ಸ್ಲಿಕ್‌ ಡಿಸೈನ್‌ ರಚನೆಯನ್ನು ಹೊಂದಿದೆ. 3GB RAM ಸಾಮರ್ಥ್ಯದ ಈ ಸ್ಮಾರ್ಟ್‌ಫೋನ್ 7,990ರೂ.ಗಳಿಗೆ ಲಭ್ಯ ಇದೆ.

ಗ್ಯಾಲ್ಯಾಕ್ಸಿ ಎ30 ಸ್ಮಾರ್ಟ್‌ಫೋನ್

ಗ್ಯಾಲ್ಯಾಕ್ಸಿ ಎ30 ಸ್ಮಾರ್ಟ್‌ಫೋನ್

ಈ ಸ್ಮಾರ್ಟ್‌ಫೋನ್ 6.4 ಇಂಚಿನ ಹೆಚ್‌ಡಿ ಪ್ಲಸ್‌ ಸೂಪರ್‌ AMOLED ಇನ್‌ಫಿನಿಟಿ V ಡಿಸ್‌ಪ್ಲೇಯನ್ನು ಹೊಂದಿದೆ. 4000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಜೊತೆಗೆ 15w ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಸಹ ಪಡೆದುಕೊಂಡಿದೆ. ಸ್ಯಾಮ್‌ಸಂಗ್‌ ಬ್ಲೂ ಫೆಸ್ಟ್‌ ಮೇಳದಲ್ಲಿ 4GB RAM ವೇರಿಯಂಟ್‌ ಫೋನ್‌ಗೆ ಶೇ.14% ಡಿಸ್ಕೌಂಟ್‌ ಇದ್ದು, 15,490ರೂ.ಗಳಿಗೆ ಗ್ರಾಹಕರು ಖರೀದಿಸಬಹುದಾಗಿದೆ.

ಗ್ಯಾಲ್ಯಾಕ್ಸಿ ಎ20 ಸ್ಮಾರ್ಟ್‌ಫೋನ್

ಗ್ಯಾಲ್ಯಾಕ್ಸಿ ಎ20 ಸ್ಮಾರ್ಟ್‌ಫೋನ್

ಗ್ಯಾಲ್ಯಾಕ್ಸಿ ಎ20 ಸ್ಮಾರ್ಟ್‌ಫೋನ್, ಗ್ಯಾಲ್ಯಾಕ್ಸಿ ಎ30 ಯಂತೆ 6.4 ಇಂಚಿನ ಹೆಚ್‌ಡಿ ಪ್ಲಸ್‌ ಸೂಪರ್‌ AMOLED ಇನ್‌ಫಿನಿಟಿ V ಡಿಸ್‌ಪ್ಲೇಯನ್ನು ಹೊಂದಿದೆ. 4000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಜೊತೆಗೆ 15w ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಸಹ ಪಡೆದುಕೊಂಡಿದೆ. ಸ್ಯಾಮ್‌ಸಂಗ್‌ ಬ್ಲೂ ಫೆಸ್ಟ್‌ ಮೇಳದಲ್ಲಿ 3GB RAM ವೇರಿಯಂಟ್‌ ಫೋನ್‌ 11,490ರೂ.ಗಳಿಗೆ ಲಭ್ಯ.

Best Mobiles in India

English summary
Samsung 'Blue Fest 2019' Sale is live on Samsung's online store, lasts until Monday, August 26. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+