Home
ಸುದ್ದಿಜಾಲ

Samsung: ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆಯಂತೆ ಹೊಸ ಸ್ಯಾಮ್‌ಸಂಗ್‌ ಫೋಲ್ಡಬಲ್‌ ಫೋನ್‌!

ಸ್ಯಾಮ್‌ಸಂಗ್ (Samsung) ಈಗಾಗಲೇ ಸಾಕಷ್ಟು ವಿಶೇಷ ಫೀಚರ್ಸ್‌ ಇರುವ ಹಾಗೂ ಭಿನ್ನ ಶೈಲಿಯ ಫೋನ್‌ಗಳನ್ನು ಅನಾವರಣ ಮಾಡುವ ಮೂಲಕ (Smartphone) ಮಾರುಟ್ಟೆಯಲ್ಲಿ ತನ್ನ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಮಾಡಿಕೊಂಡಿದೆ. ಈ ಬೆಳವಣಿಗೆ ನಡುವೆ ಎಲ್ಲರಿಗೂ ಲಭ್ಯವಾಗುವ ಹಾಗೆ ವಿಶೇಷ ಫೋಲ್ಡ್ಬಲ್‌ ಫೋನ್‌ ಅನ್ನು ಅಗ್ಗದ ದರದಲ್ಲಿ ಲಾಂಚ್‌ ಮಾಡಲು ಸಜ್ಜಾಗಿದೆ.

ಹೌದು, ಇದೀಗ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳ (foldable smartphone) ಜಮಾನ. ಅದರಂತೆ ಎಲ್ಲಾ ಬ್ರ್ಯಾಂಡ್‌ಗಳು ಸಹ ವಿಶೇಷ ಫೀಚರ್ಸ್‌ನೊಂದಿಗೆ ಫೋಲ್ಡಬಲ್‌ ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿವೆ. ಆದರೆ, ಈ ಫೋನ್‌ಗಳು ದುಬಾರಿ ಆದ್ದರಿಂದ ಎಲ್ಲರೂ ಇವುಗಳನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಆದರೆ ಈ ಸಾಧ್ಯವಿಲ್ಲ ಅನ್ನೋ ಮಾತನ್ನೇ ತೆಗೆದುಹಾಕಲು ಸ್ಯಾಮ್‌ಸಂಗ್‌ ಮುಂದಾಗಿದೆ. ಅಂದರೆ ಕೈಗೆಟಕುವ ದರದಲ್ಲಿ ಹೊಸ ಫೋಲ್ಡಬಲ್‌ ಫೋನ್‌ ಅನ್ನು ಅನಾವರಣ ಮಾಡಲಿದೆ. ಹಾಗಿದ್ರೆ ಬನ್ನಿ ಈ ವಿಷಯದ ಬಗ್ಗೆ ಕೆಲವು ಮಾಹಿತಿ ತಿಳಿದುಬರೋಣ.

ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆಯಂತೆ ಹೊಸ ಸ್ಯಾಮ್‌ಸಂಗ್‌ ಫೋಲ್ಡಬಲ್‌ ಫೋನ್‌!

ಸ್ಯಾಮ್‌ಸಂಗ್‌ ನಿಂದ ಅಗ್ಗದ ದರದ ಫೋಲ್ಡಬಲ್‌ ಫೋನ್: ಸ್ಯಾಮ್‌ಸಂಗ್‌ ತನ್ನ ಇತ್ತೀಚಿನ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ Z ಫೋಲ್ಡ್‌ 5 ಮತ್ತು ಗ್ಯಾಲಕ್ಸಿ Z ಫ್ಲಿಪ್‌ 5 (Galaxy Z Fold 5 and Galaxy Z Flip 5) ಸ್ಮಾರ್ಟ್‌ಫೋನ್‌ಗಳನ್ನು ಆಗಸ್ಟ್ 2023 ರಲ್ಲಿ ಲಾಂಚ್‌ ಮಾಡುವ ಮೂಲಕ ದೊಡ್ಡ ಸದ್ದು ಮಾಡಿತ್ತು. ಈ ಫೋನ್‌ಗಳು ಮೂರು ವಿಭಿನ್ನ RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಕಾಣಿಸಿಕೊಂಡಿದ್ದವು. ಇವುಗಳ ಆರಂಭಿಕ ಬೆಲೆ 1,54,999 ರೂ. ಗಳಾಗಿದೆ. ಆದರೆ ಈಗ ಗ್ಯಾಲಕ್ಸಿ Z ಫೋಲ್ಡ್‌ 6 ನ (Galaxy Z Fold 6) ಕೈಗೆಟುಕುವ ಆವೃತ್ತಿಯನ್ನು 2024 ರಲ್ಲಿ ಲಾಂಚ್‌ ಮಾಡಲು ಮುಂದಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 6 ಎಂಟ್ರಿ-ಲೆವೆಲ್ ವೇರಿಯಂಟ್‌: ದಕ್ಷಿಣ ಕೊರಿಯಾದ ಪ್ರಕಟಣೆಯ ಪ್ರಕಾರ ಸ್ಯಾಮ್‌ಸಂಗ್‌ ತನ್ನ ಮುಂಬರುವ ಫೋಲ್ಡಬಲ್ ಫೋನ್, ಗ್ಯಾಲಕ್ಸಿ Z ಫೋಲ್ಡ್‌ 6 ವಿಭಾಗದಲ್ಲಿ ಎಂಟ್ರಿ-ಲೆವೆಲ್ ವೇರಿಯಂಟ್‌ ಅನ್ನು ಲಾಂಚ್‌ ಮಾಡಲಿದೆ ಎಂದು ಉಲ್ಲೇಖ ಮಾಡಲಾಗಿದೆ. ಅದರಂತೆ ಈ ಅಗ್ಗದ ಫೋಲ್ಡಬಲ್‌ ಸ್ಮಾರ್ಟ್‌ಫೋನ್ 2024 ರ ದ್ವಿತೀಯಾರ್ಧದಲ್ಲಿ ಲಾಂಚ್ ಆಗಬಹುದು ಎಂಬ ನಿರೀಕ್ಷೆಯಿದೆ.

ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆಯಂತೆ ಹೊಸ ಸ್ಯಾಮ್‌ಸಂಗ್‌ ಫೋಲ್ಡಬಲ್‌ ಫೋನ್‌!

ವರದಿಯ ಪ್ರಕಾರ, ಎಂಟ್ರಿ-ಲೆವೆಲ್ ಗ್ಯಾಲಕ್ಸಿ Z ಫೋಲ್ಡ್ 6 ಸ್ಯಾಮ್‌ಸಂಗ್‌ಗೆ ಫೋಲ್ಡಬಲ್ ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಹೆಸರನ್ನು ತಂದುಕೊಡಲಿದೆ ಎನ್ನಲಾಗಿದೆ. ಅದರಲ್ಲೂ ಚೀನಾದಲ್ಲಿ ಇದು ದೊಡ್ಡ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿದೆ. ಸ್ಯಾಮ್‌ಸಂಗ್‌ ಫೋಲ್ಡಬಲ್‌ಗಳಲ್ಲಿ ಪ್ರವರ್ತಕನಾಗಿದ್ದರೂ ಸಹ ಚೀನಾದಲ್ಲಿ ಈ ಫೋಲ್ಡಬಲ್‌ ಫೋನ್ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿದೆ.

ಇದಕ್ಕೆ ಕಾರಣ ಆಗಿರುವುದು ಶಿಯೋಮಿ, ಹಾನರ್‌ ಮತ್ತು ಹುವಾವೇ ನಂತಹ ಇತರ ಪ್ರತಿಸ್ಪರ್ಧಿಗಳು ಸ್ಯಾಮ್‌ಸಂಗ್ ಫೋನ್‌ಗಳ ದರಕ್ಕಿಂತ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಈ ಫೋಲ್ಡಬಲ್‌ ಫೋನ್‌ಗಳನ್ನು ನೀಡುತ್ತಿವೆ. ಪರಿಣಾಮ ಈ ಬ್ರ್ಯಾಂಡ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದೇ ಕಾರಣಕ್ಕೆ ಚೀನಾದಲ್ಲಿ ಸ್ಯಾಮ್‌ಸಂಗ್ ಅನ್ನು ಹಿಂದಿಕ್ಕುವಲ್ಲಿ ಇವು ಯಶಸ್ವಿಯಾಗಿವೆ ಎಂದು ಹೇಳಲಾಗುತ್ತಿದೆ.

ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆಯಂತೆ ಹೊಸ ಸ್ಯಾಮ್‌ಸಂಗ್‌ ಫೋಲ್ಡಬಲ್‌ ಫೋನ್‌!

ಗಮನಿಸಬೇಕಾದ ವಿಷಯ ಏನೆಂದರೆ ಈ ಹಿಂದೆ ಅಂದರೆ ನವೆಂಬರ್ 2023 ರಲ್ಲಿ ಕೆಲವು ವರದಿಗಳು, ಸ್ಯಾಮ್‌ಸಂಗ್‌ ಮಿಡ್‌ ರೇಂಜ್‌ನ ಫೋಲ್ಡಬಲ್ ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಲಿದೆ ಎಂದು ಉಲ್ಲೇಖಿಸಿದ್ದವು. ಆದರೆ ಕಂಪನಿಯು ಮಿಡ್‌ ರೇಂಜ್‌ನ ಫೋಲ್ಡಬಲ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ದೃಢಪಡಿಸಿತ್ತು.ಜೊತೆಗೆ ಈ ವರದಿಗಳು ಆಧಾರರಹಿತವಾಗಿವೆ ಎಂದು ಸ್ಯಾಮ್‌ಸಂಗ್‌ ವಕ್ತಾರರು ತಿಳಿಸಿದ್ದರು.

Best Mobiles in India

English summary
It is said that a cheap foldable phone will be unveiled by Samsung. Accordingly, it is known that Samsung is working on an entry-level variant of the Galaxy Z Fold 6.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+