ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಪ್ರೊ ಸ್ಮಾರ್ಟ್‌ಟಿವಿಗೆ 40% ರಿಯಾಯಿತಿ: ಖರೀದಿಗೆ ಉತ್ತಮ ಅವಕಾಶ!
ಸ್ಯಾಮ್‌ಸಂಗ್ ಸ್ಮಾರ್ಟ್ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಎಷ್ಟು ಬೇಡಿಕೆ ಇದೆಯೋ ಅಷ್ಟೇ ಪ್ರಮಾಣದಲ್ಲಿ ಸ್ಯಾಮ್‌ಸಂಗ್‌ನ ಇತರೆ ಸ್ಮಾರ್ಟ್ ಡಿವೈಸ್‌ಗಳಿಗೂ ಭರ್ಜರಿ ಬೇಡಿಕೆ ಇದೆ. ಅದರಂತೆ ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಟಿವಿ ಬೊಂಬಾಟ್ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಮೂಲಕ ನೀವು ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದಾಗಿದೆ.
ಹೌದು, ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಪ್ರೊ(Samsung Crystal 4K Pro) ಸ್ಮಾರ್ಟ್‌ಟಿವಿಗೆ 40% ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. ಈ ಸ್ಮಾರ್ಟ್‌ಟಿವಿ ಕ್ಯೂ ಸಿಂಫನಿ ತಂತ್ರಜ್ಞಾನ ಹೊಂದಿದ್ದು, ಈ ಮೂಲಕ ನೀವು ಹೆಚ್ಚು ವಾಸ್ತವಿಕ ಸರೌಂಡ್ ಸೌಂಡ್ ಅನುಭವವನ್ನು ಪಡೆದುಕೊಳ್ಳಬಹುದು. ಹಾಗೆಯೇ 4K ಅಪ್‌ಸ್ಕೇಲಿಂಗ್, ವಾಯ್ಸ್ ಸರ್ಚ್ ಸೇರಿದಂತೆ ಇನ್ನಿತರೆ ಪ್ರಮುಖ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹಾಗಿದ್ರೆ, ಬನ್ನಿ ಈ ಟಿವಿಯ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರವನ್ನು ತಿಳಿಯೋಣ.

ಸ್ಯಾಮ್‌ಸಂಗ್‌ನ ಕ್ರಿಸ್ಟಲ್ 4K ಪ್ರೊ ಸ್ಮಾರ್ಟ್‌ಟಿವಿ ಡಿಸ್‌ಪ್ಲೇ: ಈ ಟಿವಿಯನ್ನು ಅಗ್ಗದ ದರದಲ್ಲಿ ಖರೀದಿ ಮಾಡುವ ಮುನ್ನ ಇದರ ಫೀಚರ್ಸ್ ಬಗ್ಗೆ ತಿಳಿದುಕೊಳ್ಳೋಣ. ಅದರಂತೆ ಈ ಟಿವಿ 58 ಇಂಚಿನ ಅಲ್ಟ್ರಾ ಹೆಚ್‌ಡಿ (4K) ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, 3840 x 2160 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ 60Hz ರಿಫ್ರೆಶ್ ರೇಟ್ ಹೊಂದಿದೆ.
ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಪ್ರೊ ಸ್ಮಾರ್ಟ್‌ಟಿವಿ ಫೀಚರ್ಸ್: ಈ ಟಿವಿಯು ಹೈ ಡೈನಾಮಿಕ್ ರೇಂಜ್ (HDR) ಅನ್ನು ಹೊಂದಿದ್ದು, ಇದು ಬೆಳಕಿನ ಮಟ್ಟಗಳ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ. ಅಂದರೆ ಡಾರ್ಕ್ ದೃಶ್ಯಗಳಲ್ಲಿಯೂ ವ್ಯಾಪಕ ಶ್ರೇಣಿಯ ಬಣ್ಣಗಳನ್ನು ಹಾಗೂ ಅತ್ಯುತ್ತಮ ದೃಶ್ಯ ವಿವರಗಳನ್ನು ಕಾಣಬಹುದು. ಅದರಲ್ಲೂ ಟಿವಿಯಲ್ಲಿ ನೀವು ಯಾವುದೇ ಕಂಟೆಂಟ್ ಅನ್ನು ಸರ್ಚ್ ಮಾಡಲು ಬಯಸಿದರೆ ಇನ್‌ಬಿಲ್ಟ್ ವಾಯ್ಸ್ ಅಸಿಸ್ಟೆಂಟ್ ಸೇವೆ ಪಡೆದುಕೊಳ್ಳಬಹುದು.
ಹಾಗೆಯೇ ಈ ಟಿವಿ 4K ಅಪ್‌ಸ್ಕೇಲಿಂಗ್ ಅನ್ನು ಹೊಂದಿದ್ದು, ಇದು 4K ರೆಸಲ್ಯೂಶನ್‌ನಲ್ಲಿ ನಿಮ್ಮ ಮೆಚ್ಚಿನ ಕಂಟೆಂಟ್ ಅನ್ನು ವೀಕ್ಷಣೆ ಮಾಡಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಸುಧಾರಿತ ಬಣ್ಣದ ಮ್ಯಾಪಿಂಗ್ ತಂತ್ರಜ್ಞಾನ ಸಹ ಇದ್ದು, ಸಿನಿಮಾ ಅಥವಾ ಇನ್ನಿತರೆ ವಿಡಿಯೋಗಳನ್ನು ವೀಕ್ಷಣೆ ಮಾಡುವಾಗ ಬೇರೆಯದೇ ರೀತಿಯ ಅನುಭವ ನಿಮಗಾಗಲಿದೆ.

ಇನ್ನುಳಿದಂತೆ ಕ್ಯೂ ಸಿಂಫನಿ ತಂತ್ರಜ್ಞಾನ ಇದ್ದು, ಈ ಮೂಲಕ ವಾಸ್ತವಿಕ ಸರೌಂಡ್ ಸೌಂಡ್ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಅಂದರೆ ಟಿವಿ ಮತ್ತು ಸೌಂಡ್‌ಬಾರ್ ಸ್ಪೀಕರ್‌ಗಳು ಏಕಕಾಲದಲ್ಲಿ ಕೆಲಸ ಮಾಡುತ್ತವೆ. ಪರಿಣಾಮ ನೀವು ಸರೌಂಡ್ ಸೌಂಡ್ ಎಫೆಕ್ಟ್‌ಗಳನ್ನು ಪಡೆದುಕೊಳ್ಳಲು ಟಿವಿ ಸ್ಪೀಕರ್‌ಗಳನ್ನು ಆಫ್ ಮಾಡಬೇಕಾದ ಅನಿವಾರ್ಯತೆ ಇರುವುದಿಲ್ಲ.ಇದರಲ್ಲಿನ ಎರಡು ಸ್ಪೀಕರ್‌ಗಳು 20W ಸೌಂಡ್ ಅನ್ನು ನೀಡುತ್ತವೆ.
ಈ ಸ್ಮಾರ್ಟ್‌ಟಿವಿಯ ಕನೆಕ್ಟಿವಿಟಿ ವಿಚಾರಕ್ಕೆ ಬರುವುದಾದರೆ ಮೂರು ಹೆಚ್‌ಡಿಎಮ್‌ಐ ಪೋರ್ಟ್‌ಗಳು ಹಾಗೂ ಒಂದು ಯುಎಸ್‌ಬಿ ಪೋರ್ಟ್ ಆಯ್ಕೆ ನೀಡಲಾಗಿದೆ. ಇದರೊಂದಿಗೆ ನೀವು ಯೂಟ್ಯೂಬ್, ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಝೀ5, ವೂಟ್, ಹಾಟ್‌ಸ್ಟಾರ್ ಸೇರಿದಂತೆ ವಿವಿಧ ಓಟಿಟಿ ಫ್ಲಾಟ್‌ಫಾರ್ಮ್‌ಗಳಿಗೆ ಸುಲಭ ಪ್ರವೇಶ ಪಡೆದುಕೊಳ್ಳಬಹುದಾಗಿದೆ.
ಸ್ಯಾಮ್‌ಸಂಗ್ ಕ್ರಿಸ್ಟಲ್ 4K ಪ್ರೊ ಸ್ಮಾರ್ಟ್‌ಟಿವಿ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಟಿವಿ 80,900ರೂ. ಗಳ ಸಾಮಾನ್ಯ ದರ ಹೊಂದಿದೆ. ಆದರೆ ನೀವು ಈಗ ಇದನ್ನು ಕೇವಲ 48,490ರೂ. ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಈ ಸ್ಮಾರ್ಟ್‌ಟಿವಿಗೆ 40% ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. ಇದರಿಂದಾಗಿ ನೀವು ಭಾರೀ ಹಣ ಉಳಿತಾಯದೊಂದಿಗೆ ಈ ಬಹುಬೇಡಿಕೆಯ ಟಿವಿಯನ್ನು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿ ಮಾಡಬಹುದಾಗಿದೆ.


Click it and Unblock the Notifications








