ಸ್ಯಾಮ್‌ಸಂಗ್ ಕ್ರಿಸ್ಟಲ್ ವಿಷನ್ ಸ್ಮಾರ್ಟ್‌ಟಿವಿಗೆ ಭರ್ಜರಿ ಡಿಸ್ಕೌಂಟ್! 54,900ರೂ.ಗಳ ಟಿವಿ ಈಗ....
ಸ್ಮಾರ್ಟ್‌ಟಿವಿ ವಿಭಾಗದಲ್ಲಿ ಅಗ್ಗದ ಬೆಲೆಯಿಂದ ಹಿಡಿದು ಲಕ್ಷಾಂತರ ಬೆಲೆ ಇರುವ ಸ್ಮಾರ್ಟ್‌ಟಿವಿಗಳು ಲಭ್ಯ ಇವೆ. ಆದರೆ ಹಲವರಿಗೆ ದುಬಾರಿ ಬೆಲೆಯ ಸ್ಮಾರ್ಟ್‌ಟಿವಿ ಖರೀದಿ ಮಾಡಲು ಸಾಧ್ಯವಿಲ್ಲ. ಈ ನಡುವೆ ಜನಪ್ರಿಯ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ಟಿವಿಗಳನ್ನು ಖರೀದಿ ಮಾಡಲು ಹಲವು ಜನರು ಇಷ್ಟ ಪಡುತ್ತಾರೆ. ಅವರು ಈಗ ಭಾರೀ ರಿಯಾಯಿತಿಯಲ್ಲಿ ಈ ಸ್ಮಾರ್ಟ್‌ಟಿವಿ ಖರೀದಿಸಬಹುದು.
ಹೌದು, ಸ್ಯಾಮ್‌ಸಂಗ್ ಕ್ರಿಸ್ಟಲ್ ವಿಷನ್ 4K UHD ಟಿವಿಗೆ (Samsung Crystal Vision (43 inch) 4K UHD TV) ಈಗ ಭಾರೀ ರಿಯಾಯಿತಿ ನೀಡಲಾಗಿದೆ. ಈ ಸ್ಮಾರ್ಟ್‌ಟಿವಿ 43 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿದೆ. 3D ಸರೌಂಡ್ ಸೌಂಡ್ ಆಯ್ಕೆ ಮೂಲಕ ನಿಮಗೆ ಸಿನಿಮಾ ಥಿಯೇಟರ್ ಅನುಭವವನ್ನು ನೀಡಲಿದೆ. ಇಷ್ಟೇ ಅಲ್ಲದೆ ಪ್ಯೂರ್‌ಕಲರ್ ತಂತ್ರಜ್ಞಾನವು ಈ ಟಿವಿ ವೀಕ್ಷಕರನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತದೆ. ಹಾಗಿದ್ರೆ, ಈ ಸ್ಮಾರ್ಟ್‌ಟಿವಿಯ ಪ್ರಮುಖ ಫೀಚರ್ಸ್ ಏನು?, ಆಫರ್ ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್ ಕ್ರಿಸ್ಟಲ್ ವಿಷನ್ 4K UHD ಟಿವಿ ಡಿಸ್‌ಪ್ಲೇ ವಿವರ: ಈ ಟಿವಿ ಏನೋ ಕಡಿಮೆ ದರದಲ್ಲಿ ಅಂದರೆ ಆಫರ್ ಬೆಲೆಗೆ ಲಭ್ಯವಾಗುತ್ತಿರುವುದೇನೋ ನಿಜ. ಆದರೆ, ಇದನ್ನು ಈ ಬೆಲೆಗೆ ಖರೀದಿ ಮಾಡುವ ಮುನ್ನ ಇದರ ಫೀಚರ್ಸ್ ಕಡೆ ಕಣ್ಣಾಯಿಸುವುದು ಅಗತ್ಯವಾಗಿದೆ. ಅದರಂತೆ ಈ ಸ್ಮಾರ್ಟ್‌ಟಿವಿ 43 ಇಂಚಿನ ಎಲ್ ಇ ಡಿ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಅಲ್ಟ್ರಾ HD (4K) ಸಾಮರ್ಥ್ಯ ಪಡೆದಿದೆ. ಜೊತೆಗೆ 3840 x 2160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 50 Hz ರಿಫ್ರೆಶ್ ರೇಟ್ ಮೂಲಕ ಉತ್ತಮ ಅನುಭವ ನೀಡಲಿದೆ.
ಸ್ಯಾಮ್‌ಸಂಗ್ ಕ್ರಿಸ್ಟಲ್ ವಿಷನ್ 4K UHD ಟಿವಿ ಇತರೆ ಫೀಚರ್ಸ್: ಉಳಿದಂತೆ ಈ ಸ್ಮಾರ್ಟ್‌ಟಿವಿ ನಿಮ್ಮ ವೀಕ್ಷಣೆಯ ಅನುಭವವನ್ನು ಸುಧಾರಿಸಲು 3D ಸರೌಂಡ್ ಸೌಂಡ್ ಆಯ್ಕೆ, IoT ಲೈಟ್ ಸೆನ್ಸರ್ ಆಯ್ಕೆ ಮತ್ತು ವೀಕ್ಷಣೆಯ ಅನುಭವವನ್ನು ಹೆಚ್ಚಿಸಲು ಬ್ರೈಟ್‌ನೆಸ್ ಸರಿಹೊಂದಿಸುವ ಆಯ್ಕೆ ಸೇರಿದಂತೆ ಇನ್ನೂ ಹೆಚ್ಚಿನ ವಿಶೇಷ ಫೀಚರ್ಸ್ ಇದರಲ್ಲಿದೆ.
ಇದರೊಂದಿಗೆ ಇದು ಸಿಸಿಟಿವಿಯ ರೀತಿಯಲ್ಲೂ ಕೆಲಸ ಮಾಡುತ್ತದೆ. ಯಾರಾದರೂ ಒಳನುಗ್ಗಿದರೆ ಎಚ್ಚರಿಕೆಗಳನ್ನು ಸ್ವೀಕರಿಸಲು ಕ್ಯಾಮೆರಾ ಸೆನ್ಸರ್ ಸಹಾಯ ಮಾಡಲಿದೆ. ಜೊತೆಗೆ ಪ್ಯುರ್‌ಕಲರ್ ತಂತ್ರಜ್ಞಾನವು ಈ ಟಿವಿಯಲ್ಲಿ ಬರುವ ಬಣ್ಣಗಳಿಗೆ ಜೀವ ತುಂಬುವ ಕೆಲಸ ಮಾಡಲಿದೆ. ಇದು ಅತ್ಯುತ್ತಮವಾದ ಇಮೇಜ್ ಕಾರ್ಯಕ್ಷಮತೆಯನ್ನು ಒದಗಿಸುವ ಮೂಲಕ ಬಣ್ಣಗಳ ಸೌಂದರ್ಯವನ್ನು ಸುಧಾರಿಸುತ್ತದೆ. ಮೆಚ್ಚಿನ ಚಲನಚಿತ್ರಗಳು, ಕಾರ್ಯಕ್ರಮಗಳು ಮತ್ತು ಹೆಚ್ಚಿನದನ್ನು ಹೆಚ್ಚು ಇಮ್ಮರ್ಶನ್‌ನೊಂದಿಗೆ ಆನಂದಿಸಲು ಅನುವು ಮಾಡಿಕೊಡುತ್ತದೆ.
ಕ್ರಿಸ್ಟಲ್ 4K ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಟಿವಿ ನೆಟ್‌ಫ್ಲಿಕ್ಸ್, ಯೂಟ್ಯೂಬ್, ಡಿಸ್ನಿ+ಹಾಟ್‌ಸ್ಟಾರ್, ಜಿಯೋ ಸಿನಿಮಾ, ಆಪಲ್ ಟಿವಿ, ಸೋನಿಲಿವ್, ವೂಟ್, ಎರೋಸ್‌ನೌ, ಆಲ್ಟ್ ಬಾಲಾಜಿ, ಯುಪ್‌ಟಿವಿ, ಪ್ರೈಮ್ ವಿಡಿಯೋ ಸೇರಿದಂತೆ ಅನೇಕ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಬೆಂಬಲ ನೀಡುವ ಸಾಮರ್ಥ್ಯ ಪಡೆದಿದೆ. ಇಷ್ಟೇ ಅಲ್ಲದೆ ಸ್ಕ್ರೀನ್ ಮಿರರಿಂಗ್, ಪೂರ್ವ ಸ್ಥಾಪಿತ ಬ್ರೌಸರ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಇದು ಹೊಂದಿದೆ.
ಸ್ಯಾಮ್‌ಸಂಗ್ ಕ್ರಿಸ್ಟಲ್ ವಿಷನ್ 4K UHD ಟಿವಿ ಆಫರ್ ವಿವರ: ಈ ಟಿವಿಯ ಪ್ರಮುಖ ವಿಚಾರಕ್ಕೆ ಬರೋಣ. ಇದು ಈಗ ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್ ನಲ್ಲಿ 36% ರಿಯಾಯಿತಿ ಪಡೆದುಕೊಂಡಿದ್ದು, 54,900ರೂ.ಗಳಿಂದ 34,990ರೂ.ಗಳಿಗೆ ಬೆಲೆ ಇಳಿದಿದೆ. ಈ ಮೂಲಕ ನೀವು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಇನ್ನೂ ಕಡಿಮೆ ಬೆಲೆಗೆ ಈ ಟಿವಿ ಖರೀದಿ ಮಾಡಬೇಕು ಎಂದರೆ ಕೆಲವು ಕಾರ್ಡ್‌ಗಳನ್ನು ಬಳಕೆ ಮಾಡಿ ಖರೀದಿ ಮಾಡಿ.
ಕೆಲವು ಬ್ಯಾಂಕ್ ಆಫರ್ ವಿವರ ನೋಡೋದಾದರೆ, ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 10% ತ್ವರಿತ ರಿಯಾಯಿತಿ ಸಿಗಲಿದ್ದು, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 1250 ರೂ. ವರೆಗೆ ಆಫರ್ ಸಿಗಲಿದೆ ಹಾಗೂ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 5,000ರೂ. ಮತ್ತು ಹೆಚ್ಚಿನ ಬೆಲೆಗೆ ಆರ್ಡರ್‌ಗಳ ಮೇಲೆ 625 ವರೆಗೆ ಬ್ಯಾಂಕ್ ಆಫರ್ ಸಿಗಲಿದೆ. ಇದರೊಂದಿಗೆ ನಂತರ ಪಾವತಿಸಿ ಆಯ್ಕೆಯ ಮೂಲಕ ಖರೀದಿ ಮಾಡಿದರೆ 20,000 ರೂ. ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ಪಡೆಯಬಹುದು.

ಇದಿಷ್ಟೇ ಅಲ್ಲದೆ ಯಾವುದೇ ವೆಚ್ಚದ EMI ಆಯ್ಕೆ ಸಹ ಇದೆ. ಅಂದರೆ ಪ್ರತಿ ತಿಂಗಳು 2,916ರೂ.ಗಳನ್ನು ಕಟ್ಟಿದರೆ ಸಾಕು. ಹಾಗೂ 5,000 ರೂ. ಮತ್ತು ಹೆಚ್ಚಿನ ಆರ್ಡರ್‌ಗಳಲ್ಲಿ ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 10% ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಕೋಟಾಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿಯೂ ಸಹ 10% ತ್ವರಿತ ರಿಯಾಯಿತಿ ಸಿಗಲಿದೆ. ಇಷ್ಟೆ ಅಲ್ಲದೆ ಇನ್ನೂ ಹೆಚ್ಚಿನ ಬ್ಯಾಂಕ್ ಆಫರ್ ಅನ್ನು ಈ ಟಿವಿ ಮೇಲೆ ನೀಡಲಾಗಿದೆ.


Click it and Unblock the Notifications








