Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್‌ ಪ್ರಿಯರಿಗೆ ಶಾಕ್‌! ಕಡಿಮೆ ಬೆಲೆಯಲ್ಲಿ ಈ ಫೋನ್‌ಗಳನ್ನು ಲಾಂಚ್‌ ಮಾಡೋಲ್ಲವಂತೆ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫೋನ್‌ಗಳು (Samsung Galaxy Phone) ಅಂದಾಕ್ಷಣ ಉತ್ತಮ ಕಾರ್ಯಕ್ಷಮತೆ ಹಾಗೂ ದೀರ್ಘ ಬಾಳಿಕೆ ನೆನಪಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಅನ್ವೇಷಣೆಗೂ ಸ್ಯಾಮ್‌ಸಂಗ್‌ ಹೆಸರಾಗಿದೆ. ದೈತ್ಯ ಆಪಲ್‌ ಸಹ ಮಾಡಲಾದ ಅದೆಷ್ಟೋ ಹೊಸ ಹೊಸ ಅನ್ವೇಷಣೆಗಳನ್ನು ಸ್ಯಾಮ್‌ಸಂಗ್‌ ಮಾಡಿದ ಪರಿಣಾಮ ಇಂದು ಜನರು ಫೋಲ್ಡಬಲ್‌ ಹಾಗೂ ಇನ್ನಿತರೆ ಶೈಲಿಯ ಫೋನ್‌ಗಳನ್ನು ಕಾಣುವಂತೆ ಆಗಿದೆ.

ಹೌದು, ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಸಾಕಷ್ಟು ಕಂಪೆನಿಗಳಿದ್ದರೂ ಸಹ ಸ್ಯಾಮ್‌ಸಂಗ್‌ ಅಗ್ರಸ್ಥಾನವನ್ನು ಅಂದಿನಿಂದ ಇಂದಿನ ವರೆಗೂ ಉಳಿಸಿಕೊಂಡು ಬಂದಿದೆ. ಈ ನಡುವೆ ಮೊದಲ ಬಾರಿಗೆ ಫೋಲ್ಡಬಲ್‌ ಫೋನ್‌ಗಳನ್ನು (foldable phone) ಪರಿಚಯಿಸಿದ ಕೀರ್ತಿ ಸಹ ಈ ಕಂಪೆನಿಗಿದ್ದು, ಈ ನಡುವೆ ಸ್ಯಾಮ್‌ಸಂಗ್‌ ಪ್ರಿಯರು ಬೇಸರ ಆಗುವ ಸುದ್ದಿಯೊಂದನ್ನು ಹೊರಹಾಕಿದೆ. ಅದೂ ಸಹ ಫೋಲ್ಡಬಲ್‌ ಫೋನ್‌ ವಿಚಾರದಲ್ಲಿ ಹಾಗಿದ್ರೆ, ಏನಿದು ಹೊಸ ವಿಚಾರ? ಬನ್ನಿ ನೋಡೋಣ.

ಸ್ಯಾಮ್‌ಸಂಗ್‌  ಕಡಿಮೆ ಬೆಲೆಯಲ್ಲಿ ಈ ಫೋನ್‌ಗಳನ್ನು ಲಾಂಚ್‌ ಮಾಡೋಲ್ಲವಂತೆ!

ಅಗ್ಗದ ದರದಲ್ಲಿ ಫೋಲ್ಡಬಲ್‌ ಫೋನ್‌ಗಳು: ಕೆಲವು ದಿನಗಳ ಹಿಂದೆ ಜಾಗತಿಕವಾಗಿ ಸ್ಯಾಮ್‌ಸಂಗ್‌ ಸಂಬಂಧ ಒಂದು ವಿಷಯ ಹರಿದಾಡುತ್ತಿದ್ದಯ, ಅದುವೇ ಕೈಗೆಟಕುವ ದರದಲ್ಲಿ ಫೋಲ್ಡಬಲ್‌ ಫೋನ್‌ ಅನ್ನು ಲಾಂಚ್‌ ಮಾಡುತ್ತದೆ ಎಂದು. ಆದರೆ, ಈಗ ಸ್ಯಾಮ್‌ಸಂಗ್‌ ಈ ಮಾಹಿತಿಯನ್ನು ತಳ್ಳಿ ಹಾಕಿದೆ. ಈ ಮೂಲಕ ನಾವು ಯಾವುದೇ ಕೈಗೆಟಕುವ ದರದಲ್ಲಿ ಫೋನ್‌ಗಳನ್ನು ಲಾಂಚ್‌ ಮಾಡೋಲ್ಲ, ಮಾಡೋದಿದ್ರೆ ಪ್ರೀಮಿಯಂ ಬೆಲೆಯ ಫೋನ್‌ಗಳನ್ನೇ ಲಾಂಚ್‌ ಮಾಡುತ್ತೇವೆ ಎಂದು ಪರೋಕ್ಷವಾಗಿ ತಿಳಿಸಿದೆ.

ಸ್ಯಾಮ್‌ಸಂಗ್ 2024 ಶ್ರೇಣಿಯಲ್ಲಿ ಈ ಫೋನ್‌ಗಳನ್ನು ಲಾಂಚ್ ಮಾಡುತ್ತದೆ ಹಾಗೆ ಹೀಗೆ ಎಂಬೆಲ್ಲಾ ಮಾಹಿತಿ ಎಲ್ಲಾ ಕಡೆ ಹರಿದಾಡಿದ್ದವು. ಅಷ್ಟೇ ಅಲ್ಲದೆ ಬಜೆಟ್ ಬೆಲೆಯ ಫೋಲ್ಡಬಲ್ ಡಿವೈಸ್‌ಗಳು ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಎ ಸರಣಿಯ ಮಧ್ಯಮ-ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಬೆಲೆಗೆ ಸಮಾನವಾಗಿರಲಿವೆ ಎಂದೂ ಸಹ ಹೇಳಲಾಗುತ್ತಿತ್ತು. ಆದರೆ, ಇದಕ್ಕೆಲ್ಲಾ ಈಗ ಸ್ಯಾಮ್‌ಸಂಗ್‌ ತಿಲಾಂಜಲಿ ಇಟ್ಟಿದೆ. ಜೊತೆಗೆ ಮಧ್ಯ ಶ್ರೇಣಿಯ ಫೋಲ್ಡಬಲ್‌ ಫೋನ್‌ಗಳನ್ನು ಬಿಡುಗಡೆ ಮಾಡುವ ಯಾವುದೇ ಯೋಜನೆಯನ್ನು ಸ್ಯಾಮ್‌ಸಂಗ್‌ ಹೊಂದಿಲ್ಲ ಎಂದು ಉಲ್ಲೇಖಿಸಿದೆ.

ಸ್ಯಾಮ್‌ಸಂಗ್‌  ಕಡಿಮೆ ಬೆಲೆಯಲ್ಲಿ ಈ ಫೋನ್‌ಗಳನ್ನು ಲಾಂಚ್‌ ಮಾಡೋಲ್ಲವಂತೆ!

ಸ್ಯಾಮ್‌ಸಂಗ್‌ನ ವಕ್ತಾರರು ಈ ಬಗ್ಗೆ ಮಾಹಿತಿ ನೀಡಿದ್ದು, ಮಧ್ಯ ಶ್ರೇಣಿಯ ಬೆಲೆಯಲ್ಲಿ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳನ್ನು (mid-range foldable smartphone ) ತಯಾರಿಸಲು ನಾವು ಯೋಜಿಸುವುದಿಲ್ಲ ಮತ್ತು ಇತ್ತೀಚಿನ ವದಂತಿಗಳು ಆಧಾರ ರಹಿತವಾಗಿವೆ ಎಂದು ತಿಳಿಸಿದ್ದಾರೆ. ಹಾಗೆಯೇ ಗ್ಯಾಲಕ್ಸಿ Z ಫೋಲ್ಡ್ 6 ಮತ್ತು ಗ್ಯಾಲಕ್ಸಿ Z ಫ್ಲಿಪ್‌ 6 (Galaxy Z Fold 6 , Galaxy Z Flip 6) ಬಿಡುಗಡೆಯಾದ ನಂತರ ಗ್ಯಾಲಕ್ಸಿ Z FE (ಫ್ಯಾನ್ ಆವೃತ್ತಿ) ಎಂದು ಉಲ್ಲೇಖಿಸಲಾದ ಫೋಲ್ಡಬಲ್ ಫೋನ್‌ನ ಬಿಡುಗಡೆಯ ಬಗ್ಗೆಯೂ ಸಹ ವಕ್ತಾರರು ವದಂತಿಗಳನ್ನು ತಳ್ಳಿಹಾಕಿದ್ದಾರೆ.

ಇನ್ನು ಸ್ಯಾಮ್‌ಸಂಗ್‌ ಈಗಾಗಲೇ ತನ್ನ ಗ್ಯಾಲಕ್ಸಿ Z ಫೋಲ್ಡಬಲ್ ಪ್ರಮುಖ ಡಿವೈಸ್‌ಗಳ ಐದು ಪುನರಾವರ್ತನೆಗಳನ್ನು ಪರಿಚಯಿಸಿದೆ. ಅದರಲ್ಲಿ ಗ್ಯಾಲಕ್ಸಿ Z ಫ್ಲಿಪ್‌ 5 ಮತ್ತು ಗ್ಯಾಲಕ್ಸಿ Z ಫೋಲ್ಡ್‌5 (Galaxy Z Flip5 and Galaxy Z Fold 5) ಇತ್ತೀಚಿನ ಸೇರ್ಪಡೆಯಾದ ಡಿವೈಸ್‌ಗಳಾಗಿವೆ. ಗ್ಯಾಲಕ್ಸಿ Z ಫ್ಲಿಪ್‌ 5 ಸುಮಾರು 83,000ರೂ.ಗಳ ಆರಂಭಿಕ ಬೆಲೆ ಹೊಂದಿದ್ದರೆ ಗ್ಯಾಲಕ್ಸಿ Z ಫೋಲ್ಡ್ 5 ಫೋನ್‌ 1,50,000ರೂ.ಗಳ ಆರಂಭಿಕ ಬೆಲೆ ಹೊಂದಿದೆ. ಭಾರತದಲ್ಲಿ ಇದರ ಬೆಲೆ ಭಿನ್ನವಾಗಿದೆ.

ಸ್ಯಾಮ್‌ಸಂಗ್‌  ಕಡಿಮೆ ಬೆಲೆಯಲ್ಲಿ ಈ ಫೋನ್‌ಗಳನ್ನು ಲಾಂಚ್‌ ಮಾಡೋಲ್ಲವಂತೆ!

ಈ ಗ್ಯಾಲಕ್ಸಿ Z ಫೋಲ್ಡ್‌ 5 ಮತ್ತು ಗ್ಯಾಲಕ್ಸಿ Z ಫ್ಲಿಪ್‌5 ಎರಡೂ ಫೋನ್‌ಗಳು ಸಹ ಕ್ವಾಲ್ಕಾಮ್ ನ ಕಸ್ಟಮ್ ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್‌ ಬಲ ಪಡೆದುಕೊಂಡಿವೆ. ಇದರೊಂದಿಗೆ ಹೊಸ ಫ್ಲೆಕ್ಸ್ ಹಿಂಜ್ ಸೌಲಭ್ಯ, ಆಂಡ್ರಾಯ್ಡ್‌ 13 ಆಧಾರಿತ ಒನ್‌ UI 5.1.1 ನಲ್ಲಿ ರನ್ ಆಗಲಿದ್ದು ನೀರಿನ ಪ್ರತಿರೋಧಕ್ಕಾಗಿ IPX8 ರೇಟಿಂಗ್‌ನೊಂದಿಗೆ ಈ ಫೋನ್‌ಗಳು ಪ್ಯಾಕ್‌ ಆಗಿವೆ.

Best Mobiles in India

English summary
Reports have leaked that Samsung will launch foldable phones at this budget price in the 2024 range. But this has been denied by Samsung.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+