Home
ಸುದ್ದಿಜಾಲ

ದುಬಾರಿ ಫೋನ್ ಖರೀದಿಸಲು ಇನ್ನು ಚಿಂತಿಸಲೇಬೇಡಿ!.ಸ್ಯಾಮ್‌ಸಂಗ್ ಫೈನಾನ್ಸ್‌ ಇದೆ!

ಪ್ರಸ್ತುತ ಸ್ಮಾರ್ಟ್‌ಫೋನ್‌ ಪ್ರತಿಯೊಬ್ಬರಿಗೂ ಅತೀ ಅಗತ್ಯವಾಗ ಗ್ಯಾಜೆಟ್‌ ಉತ್ಪನ್ನವಾಗಿದ್ದು, ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರ ಸಂಖ್ಯೆಯು ಸಹ ಏರಿಕೆಯಾಗುತ್ತಲೆ ಇದೆ. ಈ ನಿಟ್ಟಿನಲ್ಲಿ ಬಹುತೇಕ ಸ್ಮಾರ್ಟ್‌ಫೋನ್‌ ಕಂಪನಿಗಳು ಬಜೆಟ್‌ ಬೆಲೆಯಲ್ಲಿಯೇ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿವೆ. ಇದಲ್ಲದೇ ಹಲವು ಫೈನಾನ್ಸ್‌ ಕಂಪನಿಗಳು ಸಹ ಸ್ಮಾರ್ಟ್‌ಫೋನ್‌ ಖರೀದಿಸಲು ಹಣಕಾಸಿನ ನೆರವು ನೀಡುತ್ತಿದ್ದು, ಸದ್ಯ ಸ್ಮಾರ್ಟ್‌ಫೋನ್ ಖರೀದಿ ಸುಲಭವಾಗಿದೆ.

ಸ್ಯಾಮ್‌ಸಂಗ್ ಫೈನಾನ್ಸ್‌ ಪ್ಲಸ್‌

ಹೌದು, ಗ್ರಾಹಕರು ಸ್ಮಾರ್ಟ್‌ಫೋನ್‌ ಖರೀದಿಸಲು ಮುಂದಾದರೇ ಸಾಕು ಹಲವು ಫೈನಾನ್ಸ್‌ ಸಂಸ್ಥೆ ಆಯ್ಕೆ ಗ್ರಾಹಕರಿಗೆ ಲಭ್ಯ ಇವೆ. ಆದ್ರೆ, ಈಗ ಹೊಸ ವಿಷಯವೆನೆಂದರೇ ಸ್ಮಾರ್ಟ್‌ಫೋನ್ ದಿಗ್ಗಜ ಸ್ಯಾಮ್‌ಸಂಗ್ ಕಂಪನಿ ಹೊಸದಾಗಿ 'ಸ್ಯಾಮ್‌ಸಂಗ್ ಫೈನಾನ್ಸ್‌ ಪ್ಲಸ್‌' ಸೇವೆಯನ್ನು ಶುರುಮಾಡಿದ್ದು, ತನ್ನ ಗ್ಯಾಲ್ಯಾಕ್ಸಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಫೈನಾನ್ಸ್‌ ನೆರವು ನೀಡಲಿದೆ. ಹಾಗಾದರೇ ಸ್ಯಾಮ್‌ಸಂಗ್‌ ಫೈನಾನ್ಸ್‌ ಪ್ಲಸ್‌ ಸೇವೆಯ ಕುರಿತಾಗಿ ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿರಿ.

ಸ್ಯಾಮ್‌ಸಂಗ್ ಫೈನಾನ್ಸ್‌ ಪ್ಲಸ್‌

ಸ್ಯಾಮ್‌ಸಂಗ್ ಫೈನಾನ್ಸ್‌ ಪ್ಲಸ್‌

ಸ್ಯಾಮ್‌ಸಂಗ್ ಕಂಪನಿಯು 'ಸ್ಯಾಮ್‌ಸಂಗ್ ಫೈನಾನ್ಸ್‌ ಪ್ಲಸ್‌' (Samsung Finance+) ಸೇವೆಯನ್ನು ಆರಂಭಿಸಿದ್ದು, ಈ ಯೋಜನೆಯಲ್ಲಿ ಕಂಪನಿಯ ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರಿಗೆ ಫೈನಾನ್ಸ್ ಆಯ್ಕೆ ನೀಡಲಿದೆ. ಈ ಸೇವೆ ಸಂಪೂರ್ಣ ಡಿಜಿಟಲ್‌ ಆಗಿರಲಿದ್ದು, ಪೇಪರ್‌ಲೆಸ್‌ ಆಗಿ ನಡೆಯಲಿದೆ. ಹಾಗೆಯೇ ಈ ಡಿಜಿಟಲ್ ಸೇವೆಯು ಮೇಕ್‌ ಫಾರ್‌ ಇಂಡಿಯಾ ಪರಿಕಲ್ಪನೆಯ ಭಾಗವಾಗಿದೆ.

ಫೈನಾನ್ಸ್ ಪ್ರಕ್ರಿಯೆ

ಫೈನಾನ್ಸ್ ಪ್ರಕ್ರಿಯೆ

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಸರಣಿಯಲ್ಲಿ ಯಾವುದಾರೂ ಸ್ಮಾರ್ಟ್‌ಫೋನ್‌ ಖರೀದಿಸುವಾಗ ಗ್ರಾಹಕರಿಗೆ ಫೈನಾನ್ಸ್‌ ಅಗತ್ಯವಿದ್ದರೇ ಆಗ ಸ್ಯಾಮ್‌ಸಂಗ್ ಫೈನಾನ್ಸ್‌ ಪ್ಲಸ್‌ ಸೇವೆ ಪಡೆಯಬಹುದು. ಸ್ಟೋರ್‌ನಲ್ಲಿಯೇ ಕಂಪನಿಯ ಸಿಬ್ಬಂದಿ ಗ್ರಾಹಕರ ವೈಯಕ್ತಿಕ ಮಾಹಿತಿ, ಕ್ರೆಡಿಟ್ ಸ್ಕೋರ್ ಮತ್ತು ಕೆವೈಸಿ ದಾಖಲೆಗಳ ಪರೀಶಿಲನೆ ಮಾಡಿ, ಆ ಆಧಾರದ ಮೇಲೆ ಫೈನಾನ್ಸ್‌ ನೆರವು ನೀಡುತ್ತಾರೆ.

ಈ ಸೇವೆ ಎಲ್ಲೆಲ್ಲಿ ಲಭ್ಯ

ಈ ಸೇವೆ ಎಲ್ಲೆಲ್ಲಿ ಲಭ್ಯ

ಸ್ಯಾಮ್‌ಸಂಗ್ ಫೈನಾನ್ಸ್‌ ಪ್ಲಸ್‌ ಸೇವೆಯು ಆರಂಭದಲ್ಲಿ ಸುಮಾರು 30 ನಗರ ಪ್ರದೇಶಗಳ ಸುಮಾರು 5000 ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ. ಹಾಗೂ 2019ರ ಅಂತ್ಯದೊಳಗೆ ಸುಮಾರು 100 ನಗರ ಪ್ರದೇಶಗಳಲ್ಲಿ ಸುಮಾರು 10,000 ಸ್ಟೋರ್‌ಗಳಗೆ ಈ ಸೇವೆಯ ಲಭ್ಯವಾಗುವಂತೆ ಮಾಡುವ ಯೋಜನೆಯನ್ನು ದಕ್ಷಿಣ ಕೋರಿಯಾದ ಸ್ಯಾಮ್‌ಸಂಗ್ ಕಂಪನಿ ಹಾಕಿಕೊಂಡಿದೆ.

ಫೈನಾನ್ಸ್‌ ಪಾರ್ಟನರ್

ಫೈನಾನ್ಸ್‌ ಪಾರ್ಟನರ್

ಸ್ಯಾಮ್‌ಸಂಗ್ ಕಂಪನಿಯು ಭಾರತದ 'ಡಿಎಮ್‌ಐ ಫೈನಾನ್ಸ್‌' ಸಂಸ್ಥೆ ಸಹಯೋಗದಲ್ಲಿ ಈ ಯೋಜನೆಯನ್ನು ಜಾರಿಮಾಡಲಿದೆ. ಸ್ಯಾಮ್‌ಸಂಗ್ ಫೈನಾನ್ಸ್‌ ಪ್ಲಸ್‌ ಸೇವೆಯು ಭಾರತದಲ್ಲಿ ಬಹುಬೇಗನೆ ಜನಪ್ರಿಯತೆಗಳಿಸಲಿದೆ ಎನ್ನುವ ವಿಶ್ವಾಸವನ್ನು ಕಂಪನಿಯ ಹೊಂದಿದೆ ಎಂದು ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಮೋಹನದೀಪ ಸಿಂಗ್ ತಿಳಿಸಿದ್ದಾರೆ.

Best Mobiles in India

English summary
Samsung has launched Samsung Finance+, a digital lending platform in India. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+