Home
ಸುದ್ದಿಜಾಲ

Samsung: ಬಜೆಟ್‌ ಬೆಲೆಯ ಈ ಸ್ಯಾಮ್‌ಸಂಗ್‌ ಫೋನ್‌ಗೆ ರಿಯಾಯಿತಿ! 6,798ರೂ.ಗಳಲ್ಲಿ ಲಭ್ಯ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ (Samsung Galaxy) ಫೋನ್‌ಗಳಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ ಇದೆ. ಅದರಲ್ಲೂ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡುವ ಮೂಲಕ ಸ್ಯಾಮ್‌ಸಂಗ್‌ ತನ್ನೆಲ್ಲಾ ಗ್ರಾಹಕರಿಗೆ ಭಿನ್ನ ಅನುಭವ ಪಡೆದುಕೊಳ್ಳಲು ಸಹಕಾರ ಮಾಡುತ್ತಿದೆ. ಈ ನಡುವೆ ಅಗ್ಗದ ಬೆಲೆಯ ಸ್ಯಾಮ್‌ಸಂಗ್‌ ಫೋನ್‌ ಇನ್ನೂ ಕಡಿಮೆ ಬೆಲೆಗೆ ಲಭ್ಯ ಆಗುತ್ತಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಬಹಳ ಬೇಡಿಕೆ ಇರುವ ಹಾಗೂ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್ ಆಗಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ A03 ಕೋರ್‌ (Samsung Galaxy A03 Core) ಸ್ಮಾರ್ಟ್‌ಫೋನ್‌ಗೆ 22% ರಿಯಾಯಿತಿ ನೀಡಲಾಗಿದೆ. ಈ ಸ್ಮಾರ್ಟ್ ಫೋನ್ 8 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಹಾಗೂ ಪವರ್‌ ವಿಆರ್‌ GE8322 ಜಿಪಿಯು ಬಲ ಪಡೆದುಕೊಂಡಿದ್ದು, ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ಬೆಲೆ ವಿವರ ಎಷ್ಟು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಬಜೆಟ್‌ ಬೆಲೆಯ ಈ ಸ್ಯಾಮ್‌ಸಂಗ್‌ ಫೋನ್‌ಗೆ ರಿಯಾಯಿತಿ! 6,798ರೂ.ಗಳಲ್ಲಿ ಲಭ್ಯ!

ಸ್ಯಾಮ್‌ಸಂಗ್ ಗ್ಯಾಲಕ್ಸಿ A03 ಕೋರ್‌ ಆಫರ್ ವಿವರ: ಈ ಸ್ಮಾರ್ಟ್‌ಫೋನ್ 8,699 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 6,798 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ಗೆ 21% ರಷ್ಟು ರಿಯಾಯಿತಿ ನೀಡಲಾಗಿದೆ. ಆದರೂ ನೀವು ಇನ್ನೂ ಈ ಫೋನ್‌ ಖರೀದಿಯಲ್ಲಿ ಹಣ ಉಳಿತಾಯ ಮಾಡಬೇಕು ಅಂದುಕೊಂಡಿದ್ದರೆ ಬ್ಯಾಂಕ್‌ ಆಫರ್ ಬಳಕೆ ಮಾಡಿಕೊಳ್ಳಬಹುದು.

ಇನ್ನು ಬ್ಯಾಂಕ್‌ ಆಫರ್ ಕಡೆ ಗಮನಹರಿಸುವುದಾದರೆ ಈ ಫೋನ್ ಅನ್ನು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ಮೂಲಕ ಖರೀದಿ ಮಾಡಿದ್ರೆ 10% ರಿಯಾಯಿತಿ, ಫ್ಲಿಪ್‌ಕಾರ್ಟ್‌(Flipkart) ಆಕ್ಸಿಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ ಹಾಗೂ ಸಿಟಿ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೂ 10% ರಿಯಾಯಿತಿ ದೊರೆಯಲಿದೆ.

ಬಜೆಟ್‌ ಬೆಲೆಯ ಈ ಸ್ಯಾಮ್‌ಸಂಗ್‌ ಫೋನ್‌ಗೆ ರಿಯಾಯಿತಿ! 6,798ರೂ.ಗಳಲ್ಲಿ ಲಭ್ಯ!

ಸ್ಯಾಮ್‌ಸಂಗ್ ಗ್ಯಾಲಕ್ಸಿ A03 ಕೋರ್‌ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.5 ಇಂಚಿನ PLS TFT LCD ಸ್ಕ್ರೀನ್ ಆಯ್ಕೆ ಪಡೆದಿದ್ದು, ಇದು 720 x 1600 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 270ppi ಪಿಕ್ಸೆಲ್ ಸಾಂದ್ರತೆ ಮತ್ತು ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕೆ ನಾಚ್ ಶೈಲಿ ಪಡೆದಿಕೊಂಡಿದೆ. ಈ ಫೋನ್‌ನ ಅಂದಾಜು ಸ್ಕ್ರೀನ್-ಟು-ಬಾಡಿ ಅನುಪಾತವು 81.85% ಆಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A03 ಕೋರ್‌ ಪ್ರೊಸೆಸರ್‌ ಮಾಹಿತಿ: ಈ ವಿಶೇಷ ಫೋನ್ ಯೂನಿಸೋಕ್‌ SC9863A ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಪವರ್‌ ವಿಆರ್‌ GE8322 ಜಿಪಿಯು ಈ ಫೋನ್‌ನಲ್ಲಿ ಅತ್ಯುತ್ತಮ ಬಹುಕಾರ್ಯಕ್ಕೆ ಅನುವು ಮಾಡಿಕೊಡಲಿದೆ. ಇನ್ನು ಸ್ಟೋರೇಜ್‌ ವಿಚಾರಕ್ಕೆ ಬಂದರೆ 32 GB ಇಂಟರ್‌ ಸ್ಟೋರೇಜ್‌ ಆಯ್ಕೆ ಹಾಗೂ 2 GB RAM ಆಯ್ಕೆಯನ್ನು ಪಡೆದುಕೊಂಡಿದೆ. ಇದು ಕಡಿಮೆ ಎನಿಸಿದರೂ ಈ ಬೆಲೆಗೆ ಸೂಕ್ತವಾಗಿದೆ.

ಬಜೆಟ್‌ ಬೆಲೆಯ ಈ ಸ್ಯಾಮ್‌ಸಂಗ್‌ ಫೋನ್‌ಗೆ ರಿಯಾಯಿತಿ! 6,798ರೂ.ಗಳಲ್ಲಿ ಲಭ್ಯ!

ಸ್ಯಾಮ್‌ಸಂಗ್ ಗ್ಯಾಲಕ್ಸಿ A03 ಕೋರ್‌ ಕ್ಯಾಮೆರಾ ರಚನೆ : ಇನ್ನು ಸಿಂಗಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 8 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಆಯ್ಕೆ ನೀಡಲಾಗಿದ್ದು, ಇದು ಆಟೋಫೋಕಸ್ ಜೊತೆಗೆ ಎಲ್‌ಇಡಿ ಲೈಟ್ ಹೊಂದಿದೆ. ಇದು 3264 x 2448 ಪಿಕ್ಸೆಲ್‌ ರೆಕಾರ್ಡ್‌ ಮಾಡಲಿದೆ. ಜೊತೆಗೆ ,5 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದ್ದು, ವಿಡಿಯೋ ಕರೆಯಲ್ಲೂ ಅತ್ಯುತ್ತಮವಾಗಿ ತೊಡಗಿಸಿಕೊಳ್ಳಬಹುದು. ಉಳಿದಂತೆ ಈ ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.

Best Mobiles in India

English summary
22% discount has been given on the Samsung Galaxy A03 Core smartphone, which is a very popular and affordable smartphone in the category of Samsung Galaxy smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+