ಈ ಅಗ್ಗದ ಸ್ಮಾರ್ಟ್‌ಫೋನ್ ವಿಶ್ವದಲ್ಲೇ ಹೆಚ್ಚು ಮಾರಾಟ ಕಂಡಿದೆ!
ಮೊಬೈಲ್ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಡುತ್ತಲೇ ಇರುತ್ತವೆ. ಅವುಗಳಲ್ಲಿ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ಗಳತ್ತ ಗ್ರಾಹಕರು ಹೆಚ್ಚು ಆಕರ್ಷಿತರಾಗುತ್ತಾರೆ. ಈ ನಿಟ್ಟಿನಲ್ಲಿ ಬಹುತೇಕ ಕಂಪನಿಗಳು ಕಡಿಮೆ ಬೆಲೆಗೆ ಅಗತ್ಯ ಫೀಚರ್ಸ್‌ಗಳಿರುವ ಫೋನ್‌ಗಳನ್ನು ಲಾಂಚ್ ಮಾಡುತ್ತವೆ. ಆದರೆ ಕಡಿಮೆ ದರ ಒಂದೇ ಅಂಶವನ್ನು ಗ್ರಾಹಕರು ಎಂದಿಗೂ ಗಮನಿಸುವುದಿಲ್ಲ. ಬ್ರ್ಯಾಂಡ್ ಕೂಡಾ ಮುಖ್ಯವಾಗುತ್ತದೆ. ಹೀಗಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A10 ಫೋನ್ ಅತೀ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಫೋನ್ ಆಗಿ ಗುರುತಿಸಿಕೊಂಡಿದೆ.

ಹೌದು, ಸ್ಯಾಮ್‌ಸಂಗ್ ಇತ್ತೀಚಿಗೆ ಗ್ಯಾಲಕ್ಸಿ A ಸರಣಿಯಲ್ಲಿ ಬಿಡುಗಡೆ ಮಾಡಿರುವ ಗ್ಯಾಲಕ್ಸಿ A10 ಸ್ಮಾರ್ಟ್‌ಫೋನ್ 2019ರಲ್ಲಿ ವಿರ್ಶವದಲ್ಲಿಯೇ ಹೆಚ್ಚು ಮಾರಾಟ ಕಂಡ ಅತ್ಯುತ್ತಮ ಅಂಡ್ರಾಯ್ಡ್ ಸ್ಮಾರ್ಟ್‌ಫೋನ್ ಆಗಿದೆ ಎಂದು ವಿಶ್ಲೇಷಕ ಕಂಪನಿ ಓಮಿಡಾ ಹೇಳಿದೆ. 2019 ರಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A-ಸರಣಿಯು ಫೋನ್‌ಗಳು ಅತ್ಯುತ್ತಮ ಮಾರಾಟ ಕಂಡಿವೆ. ಅವುಗಳಲ್ಲಿ ಗ್ಯಾಲಕ್ಸಿ A10 ಫೋನ್ ಒಟ್ಟು ಒಟ್ಟು 30.3 ಮಿಲಿಯನ್‌ಷ್ಟು ಶೀಪಿಂಗ್ ಕಂಡು ಹೆಚ್ಚು ಮಾರಾಟವಾದ ಆಂಡ್ರಾಯ್ಡ್ ಸಾಧನವಾಗಿ ಹೊರಹೊಮ್ಮಿದೆ ಎಂದಿದೆ. ಇನ್ನು ಈ ಫೋನಿನ ಫೀಚರ್ಸ್‌ಗಳ ಬಗ್ಗೆ ಮುಂದಿನ ಸ್ಲೈಡರ್‌ಗಳನ್ನು ನೋಡಿರಿ.

ಡಿಸ್‌ಪ್ಲೇ ರಚನೆ
ಗ್ಯಾಲಕ್ಸಿ A10 ಸ್ಮಾರ್ಟ್‌ಫೋನ್ 720 x 1560 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡ 6.2 ಇಂಚಿನ ಫುಲ್ ಹೆಚ್‌ಡಿ ಸೂಪರ್ LCD ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 271 ppi ಆಗಿದ್ದು, ಹಾಗೆಯೇ ಡಿಸ್‌ಪ್ಲೇಯು 155.6 x 75.6 x 7.9 mm ಸುತ್ತಳತೆಯನ್ನು ಹೊಂದಿದೆ.

ಪ್ರೊಸೆಸರ್ ಕಾರ್ಯ
ಗ್ಯಾಲಕ್ಸಿ A10 ಸ್ಮಾರ್ಟ್‌ಫೋನ್ ಆಕ್ಟಾಕೋರ್ Exynos 7884 SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 9 ಪೈ ಓಎಸ್ ಬೆಂಬಲ ಪಡೆದಿದೆ. 2GB RAM ಸಾಮರ್ಥ್ಯದೊಂದಿಗೆ 32GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿದೆ. ಇದರೊಂದಿಗೆ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ಹೆಚ್ಚಿಸುವ ಅವಕಾಶ ಇದೆ.

ಕ್ಯಾಮೆರಾ
ಗ್ಯಾಲಕ್ಸಿ A10 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಅದು 13 ಮೆಗಾಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿಗಾಗಿ 5ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ. ಉತ್ತಮ ಗುಣಮಟ್ಟ ವಿಡಿಯೊ ರೆಕಾರ್ಡಿಂಗ್ ಆಯ್ಕೆಯು ಇದೆ.

ಬ್ಯಾಟರಿ
ಗ್ಯಾಲಕ್ಸಿ A10 ಸ್ಮಾರ್ಟ್‌ಫೋನ್ 3400mAh ಸಾಮರ್ಥ್ಯದ ದೀರ್ಘಕಾಲದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದರೊಂದಿಗೆ ವೈಫೈ, ಬ್ಲೂಟೂತ್, ಜಿಪಿಎಸ್, ಯುಎಸ್‌ಬಿ 2.0, ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








