ಸ್ಯಾಮ್‌ಸಂಗ್‌ನಿಂದ ಮತ್ತೊಂದು ಹೊಸ ಫೋನ್ ಲಾಂಚ್; ಬೆಲೆಯೂ ಅಗ್ಗ!
ಜನಪ್ರಿಯ ಸ್ಯಾಮ್‌ಸಂಗ್ ಕಂಪೆನಿ ಇತ್ತೀಚಿಗಷ್ಟೆ ತನ್ನ ಗ್ಯಾಲಕ್ಸಿ A ಸರಣಿಯಲ್ಲಿ ಬಿಡುಗಡೆ ಮಾಡಿರುವ ಗ್ಯಾಲಕ್ಸಿ A12 ಫೋನ್ ಭಾರೀ ಜನಪ್ರಿಯ ಪಡೆದಿದೆ. ಅದರ ಬೆನ್ನಲ್ಲೆ ಈಗ ಕಂಪನಿಯು ಅದೇ ಸರಣಿಯಲ್ಲಿ ಮತ್ತೊಂದು ಫೋನ್ ಅನ್ನು ಅನಾವರಣ ಮಾಡಿದೆ. ಅದುವೇ ಗ್ಯಾಲಕ್ಸಿ A12 ನ್ಯಾಚೊ (Nacho). ಈ ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್ ಮಾಡೆಲ್ ಆಗಿದ್ದು, ಆಕ್ಟಾ ಕೋರ್ Exynos 850 ಪ್ರೊಸೆಸರ್ ಅನ್ನು ಒಳಗೊಂಡಿದೆ.

ಹೌದು, ಸ್ಯಾಮ್‌ಸಂಗ್ ಕಂಪೆನಿ ತನ್ನ ಹೊಸ ಗ್ಯಾಲಕ್ಸಿ A12 ನ್ಯಾಚೊ ಸ್ಮಾರ್ಟ್‌ಫೋನ್ ಅನ್ನು ರಷ್ಯಾದಲ್ಲಿ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ 6.5 ಇಂಚಿನ ಡಿಸ್‌ಪ್ಲೇ ಹೊಂದಿದ್ದು, TFT ಇನ್ಫಿನಿಟಿ-ವಿ-ಡಿಸ್‌ಪ್ಲೇ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 3GB + 32GB ಮತ್ತು 4GB + 64GB ಆಂರೀಕ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇನ್ನುಳಿದಂತೆ ಗ್ಯಾಲಕ್ಸಿ A12 ನ್ಯಾಚೊ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ನ್ಯಾಚೊ ಸ್ಮಾರ್ಟ್‌ಫೋನ್ 720x1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು TFT ಇನ್ಫಿನಿಟಿ-ವಿ ಡಿಸ್‌ಪ್ಲೇ ಆಗಿದ್ದು, 20:9 ರಚನೆಯ ಅನುಪಾತವನ್ನು ಹೊಂದಿದೆ.

ಪ್ರೊಸೆಸರ್ ಯಾವುದು
ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ನ್ಯಾಚೊ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ Exynos 850 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ನಲ್ಲಿ ಒಂದು ಯುಐ ಕೋರ್ 3.1 ರೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ 3GB + 32GB ಮತ್ತು 4GB + 64GB ಆಂರೀಕ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಸೆನ್ಸಾರ್ ವಿಶೇಷ
ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ನ್ಯಾಚೊ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ನ್ಯಾಚೊ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ 4G LTE, ವೈ-ಫೈ, ಬ್ಲೂಟೂತ್, USB ಟೈಪ್-ಸಿ, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ. ಹಾಗೆಯೇ ಇದು 164.0x75.8x8.9mm ಸುತ್ತಳತೆಯನ್ನು ಪಡೆದಿದೆ.

ಬೆಲೆ ಮತ್ತು ಲಭ್ಯತೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ನ್ಯಾಚೊ ಸ್ಮಾರ್ಟ್‌ಫೋನ್ 3GB + 32GB ವೇರಿಯಂಟ್‌ಗೆ RUB 11,990 (ಭಾರತದಲ್ಲಿ ಅಂದಾಜು 12,100ರೂ) ಮತ್ತು 4GB + 64GB ವೇರಿಯಂಟ್ ಬೆಲೆಯು RUB 13,990 (ಭಾರತದಲ್ಲಿ ಅಂದಾಜು 14,100ರೂ) ಆಗಿದೆ. ಇನ್ನು ಈ ಫೊನ್ ಬ್ಲ್ಯಾಕ್, ಬ್ಲೂ ಮತ್ತು ರೆಡ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ.


Click it and Unblock the Notifications








