Samsung: ಸ್ಯಾಮ್‌ಸಂಗ್‌ನ ಈ ಫೋನ್‌ಗೆ 27% ರಿಯಾಯಿತಿ! 48 MP ಕ್ಯಾಮೆರಾ.. 128GB ಸ್ಟೋರೇಜ್!
ಸ್ಯಾಮ್‌ಸಂಗ್ (Samsung) ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ಅದರಲ್ಲೂ ಇತ್ತೀಚಿಗೆ ಲಾಂಚ್ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳು ವಿಭಿನ್ನ ಫೀಚರ್ಸ್ ಆಯ್ಕೆಯೊಂದಿಗೆ ಕಾಣಿಸಿಕೊಳ್ಳುವ ಪರಿಣಾಮ ಗ್ರಾಹಕರು ಈ ಫೋನ್‌ಗಳನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ನಡುವೆ ಸ್ಯಾಮ್‌ಸಂಗ್‌ನ ಈ ಫೋನ್‌ಗೆ ಆಫರ್ ನೀಡಲಾಗಿದೆ.
ಹೌದು, ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಬಹುಬೇಡಿಕೆ ಇರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ಸ್ಮಾರ್ಟ್‌ಫೋನ್‌ಗೆ (Samsung Galaxy A12 smartphone) ಬೊಂಬಾಟ್ ಆಫರ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 48 MP ಮುಖ್ಯ ಕ್ಯಾಮೆರಾ ಆಯ್ಕೆ ಹಾಗೂ ಆಕ್ಟಾ-ಕೋರ್ CPU ಬಲ ಸೇರಿದಂತೆ ಇನ್ನಿತರೆ ಆಕರ್ಷಕ ಫೀಚರ್ಸ್ ಅನ್ನು ಇದು ಹೊಂದಿದೆ. ಹಾಗಿದ್ರೆ ಈ ಫೋನ್‌ನ ಇತರೆ ಪ್ರಮುಖ ಫೀಚರ್ಸ್ ಹಾಗೂ ಆಫರ್ ವಿವರವನ್ನು ನೋಡೋಣ ಬನ್ನಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ ಅನ್ನು ಆಫರ್ ಬೆಲೆಗೆ ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್ ಬಗ್ಗೆ ತಿಳಿಯುವುದು ಉತ್ತಮವಾದ ಕೆಲಸ. ಅದರಂತೆ ಈ ಫೋನ್ 6.5 ಇಂಚಿನ PLS LCD ಡಿಸ್‌ಪ್ಲೇ ಹೊಂದಿದ್ದು, ಇದು 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಉತ್ತಮ ಎನಿಸಿದೆ. ಹಾಗೆಯೇ
20:9 ಆಕಾರ ಅನುಪಾತ, 270 ppi ಸಾಂದ್ರತೆ ಪಡೆದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ಪ್ರೊಸೆಸರ್ ಮಾಹಿತಿ: ಇನ್ನು ಈ ಫೋನ್ ಮೀಡಿಯಾಟೆಕ್ MT6765 ಹಿಲಿಯೋ P35 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಲಿದ್ದು, ಈ ಸಿಪಿಯು ಆಕ್ಟಾ-ಕೋರ್ (4x2.35 GHz ಕಾರ್ಟೆಕ್ಸ್-A53 & 4x1.8 GHz ಕಾರ್ಟೆಕ್ಸ್-A53) ಬಲ ಪಡೆದಿದೆ. ಇದರೊಂದಿಗೆ ಪವರ್ ವಿಆರ್ GE8320 ಜಿಪಿಯು ಶಕ್ತಿ ಹಾಗೂ ಆಂಡ್ರಾಯ್ಡ್ 10 ಓಎಸ್ ಈ ಫೋನ್‌ನಲ್ಲಿದೆ. ಉಳಿದಂತೆ ಈ ಫೋನ್ 32GB + 2GB RAM, 32GB + 3GB RAM, 64GB + 4GB RAM, 128GB + 3GB RAM, 128GB+ 4GB RAM, 128GB + 6GB RAM ನ ವಿವಿಧ ವೇರಿಯಂಟ್ ಆಯ್ಕೆ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ಕ್ಯಾಮೆರಾ ರಚನೆ: ಈ ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 48 MP ಮುಖ್ಯ ಕ್ಯಾಮೆರಾ, 5 MP ಅಲ್ಟ್ರಾವೈಡ್, 2 MP ಮ್ಯಾಕ್ರೋ ಸೆನ್ಸರ್, 2MP ಡೆಪ್ತ್ ಸೆನ್ಸರ್ ಆಯ್ಕೆ ಪಡೆದಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 8 MP ಲೆನ್ಸ್ ಅನ್ನು ಹೊಂದಿದೆ. ಈ ಮೂಲಕ ಬಳಕೆದಾರರು ಅತ್ಯುತ್ತಮವಾದ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 15W ಅಡಾಪ್ಟಿವ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಜೊತೆಗೆ ಒಂದು ಬಾರಿ ಪೂರ್ಣ ಚಾರ್ಜಿಂಗ್ ಮಾಡಿದ್ರೆ ಒಂದು ದಿನದವರೆಗೆ ಬ್ಯಾಕಪ್ ನೀಡಲಿದೆ. ಉಳಿದಂತೆ ಈ ಫೋನ್ ವೈ-ಫೈ 802.11 b/g/n, ವೈ-ಫೈ ಡೈರೆಕ್ಟ್
ಬ್ಲೂಟೂತ್ ಆವೃತ್ತಿ 5.0, A2DP, LE, ಯುಎಸ್‌ಬಿ ಟೈಪ್ ಸಿ 2.0 ಸೇರಿದಂತೆ ಅನೇಕ ಕನೆಕ್ಟಿವಿಟಿ ಆಯ್ಕೆ ಪಡೆದುಕೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ಆಫರ್ ವಿವರ: ಇನ್ನು ಈ ಫೋನ್‌ನ ಪ್ರಮುಖ ವಿಚಾರಕ್ಕೆ ಬರೋಣ. ಇದೀಗ ಅಮೆಜಾನ್‌ನಲ್ಲಿ ಈ ಫೋನ್‌ಗೆ 27% ರಿಯಾಯಿತಿ ನೀಡಲಾಗಿದ್ದು, 17,499 ರೂ.ಗಳ ಸಾಮಾನ್ಯ ಬೆಲೆ ಬದಲಿಗೆ 12,749ರೂ.ಗಳಲ್ಲಿ ಖರೀದಿ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ವಿನಿಮಯ ವ್ಯವಹಾರದಲ್ಲಿ ನೀವು 12,000 ರೂ.ವರೆಗೆ ಉಳಿಸಬಹುದು.ಜೊತೆಗೆ ಬ್ಯಾಂಕ್ ಆಫರ್ ಹಾಗೂ ಇನ್ನಿತರೆ ಕ್ಯಾಶ್‌ಬ್ಯಾಕ್ ಆಫರ್ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.


Click it and Unblock the Notifications








