Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್‌ನ ಈ ಹೊಸ ಫೋನ್‌ಗಳನ್ನು ನಾಮುಂದು ತಾಮುಂದು ಎಂಬಂತೆ ಖರೀದಿಸುತ್ತಿದ್ದಾರೆ! ಆಫರ್ ಸಹ ಲಭ್ಯ

ಸ್ಯಾಮ್‌ಸಂಗ್‌ (Samsung) ಆಗಾಗ್ಗೆ ಹೊಸ ಹೊಸ ಫೋನ್‌ಗಳನ್ನು ಅನಾವರಣ ಮಾಡುವ ಮೂಲಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನವನ್ನೇ ಉಂಟು ಮಾಡುತ್ತಿರುತ್ತದೆ. ಅದರಂತೆ ಈಗ ಮತ್ತೆರಡು ಹೊಸ ಫೋನ್‌ಗಳನ್ನು ಕೆಲವು ದಿನಗಳ ಹಿಂದೆ ಅನಾವರಣ ಮಾಡಲಾಗಿದ್ದು, ಇಂದಿನಿಂದ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ.

ಹೌದು, ಸ್ಯಾಮ್‌ಸಂಗ್‌ನ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ A25 5G ಮತ್ತು ಗ್ಯಾಲಕ್ಸಿ A15 5G ಸ್ಮಾರ್ಟ್‌ಫೋನ್‌ಗಳನ್ನು (Samsung Galaxy A25 5G, Galaxy A15 5G smartphone) ಭಾರತದಲ್ಲಿ ಡಿಸೆಂಬರ್ 26, 2023 ರಂದು ಅನಾವರಣ ಮಾಡಲಾಗಿದ್ದು, ಇದೀಗ ಈ ಎರಡು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು ಆಫರ್ ಬೆಲೆ ಮೂಲಕ ಖರೀದಿಗೆ ಲಭ್ಯವಿವೆ. ಹಾಗಿದ್ರೆ, ಈ ಫೋನ್‌ಗಳ ಬೆಲೆ ಎಷ್ಟು, ಪ್ರಮುಖ ಫೀಚರ್ಸ್‌ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್‌ನ ಈ ಫೋನ್‌ಗಳನ್ನು ನಾಮುಂದು ತಾಮುಂದು ಎಂಬಂತೆ ಖರೀದಿಸುತ್ತಿದ್ದಾರೆ..

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A25 5G ಬೆಲೆ: ಸ್ಯಾಮ್‌ಸಂಗ್‌ ಗ್ಯಾಲಕ್ಸಿ A25 5G ಅನ್ನು 2 ಸ್ಟೋರೇಜ್ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ. ಅದರಂತೆ 8GB RAM + 128GB ಸ್ಟೋರೇಜ್ ವೇರಿಯಂಟ್‌ಗೆ 26,999 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, 8GB RAM + 256GB ವೇರಿಯಂಟ್‌ಗೆ 29,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ವಿಶೇಷ ಸ್ಮಾರ್ಟ್‌ಫೋನ್ ನೀಲಿ, ಹಳದಿ ಮತ್ತು ನೀಲಿ ಕಪ್ಪು ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಕಂಡುಬಂದಿದ್ದು, ಎಸ್‌ಬಿಐ ಕಾರ್ಡ್‌ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ 3,000 ರೂ.ಗಳ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A15 5G ಬೆಲೆ: ಈ ಸ್ಮಾರ್ಟ್‌ಫೋನ್‌ ಸಹ ಎರಡು ಸ್ಟೋರೇಜ್‌ ವೇರಿಯಂಟ್‌ನಲ್ಲಿ ಲಭ್ಯ ಇದೆ. ಅಂದರೆ ಬೇಸಿಕ್ 8GB RAM + 128GB ಸ್ಟೋರೇಜ್ ಆಯ್ಕೆಯ ಫೋನ್‌ ಬೆಲೆ 19,499 ರೂ. ಗಳಾಗಿದ್ದು, ಹೈ-ಎಂಡ್ 8GB RAM + 256GB ಸ್ಟೋರೇಜ್‌ ಆಯ್ಕೆಯ ಫೋನ್‌ಗೆ 22,499 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್‌ ಖರೀದಿ ವೇಳೆಯಲ್ಲಿ ಎಸ್‌ಬಿಐ ಬ್ಯಾಂಕ್‌ ಕಾರ್ಡ್ ಬಳಕೆ ಮಾಡಿದ್ರೆ 1,500 ರೂ.ಗಳ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಇದು ನೀಲಿ, ತಿಳಿ ನೀಲಿ ಮತ್ತು ನೀಲಿ ಕಪ್ಪು ಬಣ್ಣಗಳಲ್ಲಿ ಕಂಡುಬಂದಿದೆ.

ಸ್ಯಾಮ್‌ಸಂಗ್‌ನ ಈ ಫೋನ್‌ಗಳನ್ನು ನಾಮುಂದು ತಾಮುಂದು ಎಂಬಂತೆ ಖರೀದಿಸುತ್ತಿದ್ದಾರೆ..

ಈ ಎರಡೂ ಫೋನ್‌ಗಳನ್ನು ಜನವರಿ 2, 2024 ರಿಂದ ಅಂದರೆ ಇಂದಿನಿಂದ ಸ್ಯಾಮ್‌ಸಂಗ್ ಇಂಡಿಯಾ ಇ-ಸ್ಟೋರ್ (Samsung India E-Store) ಮತ್ತು ದೇಶದ ಅಧಿಕೃತ ಆಫ್‌ಲೈನ್ ಚಿಲ್ಲರೆ ಸ್ಟೋರ್‌ಗಳ ಮೂಲಕ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಈ ಫೋನ್‌ಗಳ ಕೆಲವು ಫೀಚರ್ಸ್‌ ಏನು ಅನ್ನೋದನ್ನು ಈ ವೇಳೆ ತಿಳಿಯೋಣ ಬನ್ನಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A22 5G ಸ್ಮಾರ್ಟ್‌ಫೋನ್‌ 6.5 ಇಂಚಿನ FHD + ಸೂಪರ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಉತ್ತಮ ಕ್ಯಾಮೆರಾ, 25W ವೇಗದ ಚಾರ್ಜಿಂಗ್ ಮತ್ತು 5000mAh ಬ್ಯಾಟರಿ ಸಾಮರ್ಥ್ಯ ಈ ಫೋನ್‌ನಲ್ಲಿದೆ. ಹಾಗೆಯೇ A15 5G ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ಪ್ರೊಸೆಸರ್‌, 90Hz ರಿಫ್ರೆಶ್ ರೇಟ್‌ ನೊಂದಿಗೆ 6.5 ಇಂಚಿನ FHD+ ಡಿಸ್‌ಪ್ಲೇ ಹೊಂದಿದೆ. ಜೊತೆಗೆ ಟ್ರಿಪಲ್‌ ಕ್ಯಾಮೆರಾ ರಚನೆಯನ್ನು ಈ ಫೋನ್‌ ಪಡೆದಿದೆ.

ಸ್ಯಾಮ್‌ಸಂಗ್‌ನ ಈ ಫೋನ್‌ಗಳನ್ನು ನಾಮುಂದು ತಾಮುಂದು ಎಂಬಂತೆ ಖರೀದಿಸುತ್ತಿದ್ದಾರೆ..

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಫೋನ್‌ಗೆ ದಿನಾಂಕ ನಿಗದಿ: ಈಗಾಗಲೇ ಲಾಂಚ್‌ ಆಗಿರುವ ಈ ಫೋನ್‌ಗಳು ಭರ್ಜರಿಯಾಗಿ ಸೇಲ್‌ ಆಗುತ್ತಿರುವ ನಡುವೆಯೇ ಸ್ಯಾಮ್‌ಸಂಗ್‌ ಬಹು ನಿರೀಕ್ಷಿತ ಹೊಸ ಫೋನ್‌ ಲಾಂಚ್‌ಗೆ ದಿನಾಂಕ ನಿಗದಿ ಮಾಡಿದೆ. ಅಂದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ (Samsung Galaxy S24 series) ಫೋನ್‌ ಅನ್ನು ಜನವರಿ 17 ರಂದು ಲಾಂಚ್‌ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಈ ಸರಣಿಯಲ್ಲಿ ಗ್ಯಾಲಕ್ಸಿ S24, ಗ್ಯಾಲಕ್ಸಿ S24 ಪ್ಲಸ್‌ ಮತ್ತು ಗ್ಯಾಲಕ್ಸಿ S24 ಅಲ್ಟ್ರಾ ಎಂಬ ಮೂರು ವೇರಿಯಂಟ್‌ ಅನ್ನು ನೋಡಬಹುದು.

Best Mobiles in India

English summary
Samsung's latest smartphone Samsung Galaxy A25 5G and Galaxy A15 5G smartphone were unveiled in India on December 26, 2023 and the sale of these phones has started from today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+